ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಿರಾಕಾರ ಶಕ್ತಿ

ನಾ ಮೆಚ್ಚಿದ ನಾಟಕ

ಮಾಲಾ.ಮ.ಅಕ್ಕಿಶೆಟ್ಟಿ.

sunset over the horizon

ವಿಘ್ನಗಳ ನಾಶ,ಸುಖ ದುಃಖ ಕೊಡುವ
ಪರೀಕ್ಷೆ ನಡೆಸುವ, ಸಕಲ ಪೊರೆವ
ಶ್ರೇಷ್ಠ ದೇವ ದೇವತೆಗಳು ಅನಂತದಲಿ

ಹುಲುಮಾನವನ ಬುದ್ಧಿ ನಿನ್ನ ಸೃಷ್ಟಿ
ಕೈಚಳಕ ನಿಮಗೊಂದು ಆಕಾರದ ಕೊಡುಗೆ
ಬಿಂಕದಲಿ ಬೀಗುವ ನಿಮ್ಮನ್ನು ನೋಡಿ

ಅಭಯ ಹಸ್ತ ಸದಾ ನಮಗೆ
ಹಣೆ ಪಟ್ಟಿ ಮೂರ್ಖರು
ಬಟ್ಟೆ ಬರೆಗಳಿಂದ,ಬಂ‌ಗಾರ ಬೆಳ್ಳಿಯಿಂದ
ವಿಶಾಲ ಎಕರೆಯಲ್ಲಿ ದೊಡ್ಡ ಗುಡಿ ಕಟ್ಟಿಸಿ
ಭಾರೀ ವಜ್ಜನಿನ ಕೀಲಿ ಹಾಕಿ, ಕಾವಲುಗಾರ ನೇಮಿಸಿ
ನಾವೇ ನಿನ್ನನ್ನು ರಕ್ಷಿಸಿದ್ದೇವೆಂದರೆ

ದೇವರು ದಿನ್ನರುಗಳು ಕಪೋಲಕಲ್ಪಿತ
ವಾದಗಳು ಹೆಚ್ಚು
ಇರಲಿ, ಕಾಣದ ಶಕ್ತಿ ಜಗತ್ತಿನಲ್ಲಿ
ನಿನ್ನ ರೂಪದಲ್ಲಿ ಇರಬಾರದೇಕೆ? ರಕ್ಷಿಸು
ಸದಾ ನಮ್ಮನ್ನು ಹೀಗೆಯೇ
ನಿರಾಕಾರ ಶಕ್ತಿಗೆ ಆಕಾರವುಂಟೆ?

About The Author

Leave a Reply

You cannot copy content of this page

Scroll to Top