ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ದೀಪಾವಳಿ

ವಿದ್ಯಾಶ್ರೀ ಅಡೂರ್

divali lights 2007 trafalgar sq | annwitbrock | Flickr

ಮನಗಳ ನಡುವಿನ ತಮಗಳ ಕಳೆಯಲಿ
ಬೆಳಕಿನ ಹಬ್ಬ ದೀಪಾವಳಿ
ನೀಗದ ಬೆಳಕು ತುಂಬುತ ಬದುಕಲಿ
ಕಳೆಯಲಿ ಕತ್ತಲ ಅಸುರನ ಧಾಳಿ

ಬಗೆಬಗೆ ಖಾದ್ಯದ ಚಪಲವ ಮನದಲಿ
ಹುಟ್ಟಿಸುವಂತ ಖಾನಾವಳಿ
ಸುಡುಮದ್ದಿನಲಿ ಪರಿಸರ ಕೆಡಿಸದೆ
ಮಾಡದೆ ಇರೋಣ ಹಾವಳಿ

ಹಿಂದಿನ ದಿನಗಳ ಹಬ್ಬದ ನೆನಪು
ಬಿಟ್ಟಿದೆ ಮನದಲಿ ಕಚಗುಳಿ
ಹಿಂದೆಗೂ ಮುಂದೆಗೂ ಕೊಂಡಿಗಳಾಗುತ
ಹರಡುವ ಹಬ್ಬದ ಬಳುವಳಿ.

****************************

About The Author

Leave a Reply

You cannot copy content of this page

Scroll to Top