ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹಾಯ್ಕುಗಳು

ಜಯಶ್ರೀ ಭ.ಭಂಡಾರಿ

Radha Krishna Love Stock Photo (Edit Now) 1256144146

ಬಂದರೆ ನೀನು
ಬಾಳಿಗೆ ಬೆಳಕಾಗಿ
ಬಾಳುವೆನು ನಾ.

ದೂರಾಗಿ ಹೋದೆ.
ನಡುನೀರಲಿ ಬಿಟ್ಟು.
ಪ್ರಿಯತಮೆಯ.

ಅಲೆಗಳಲ್ಲಿ
ಸಾಗರದಿ‌ ನಲಿವು
ತೀರದ ಮೋಹ.

ಕಾಡಬೇಡ ‌ನೀ
ಈ ಹೃದಯ ನಿನ್ನದು
ತೋರು ಕರುಣೆ.

ಮುಂಗಾರು ಮಳೆ
ನಿಲ್ಲದೇ ಸುರಿತಿಹೆ
ಕಾಡುತಿಹೆ ನೀ.

ರಾಧೆಯ ನೋವು
ಕೊಳಲ ನಾದದಿಂದ
ದೂರವಾಯಿತು.

ಕೃಷ್ಣ ಸನಿಹ
ಇದ್ದರೆ ಮರೆವಳು
ರಾಧೆ ತನ್ನ ‌‌‌‌ತಾ

ಗೋಪಾಲನಿಗೆ
ಗೋಪಿಕೆಯರ ಆಟ
ಯಮುನೆಯಲಿ

******************

About The Author

Leave a Reply

You cannot copy content of this page

Scroll to Top