ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಏನು ಬರೆಯಲಿ ……!

ಅಕ್ಷತಾ ಜಗದೀಶ.

gray and black bird on brown wooden fence

ಬರೆಯೆಂದೊಡನೆ‌ ಏನು
ಬರೆಯಲಿ ನಾನು
ಕವನದ ಸಾಲುಗಳಿವು
ತಾವಾಗಿ‌ ಸಾಗುತಿಹವು…

ಎಂದೂ ಕಾಣದ ಮೊಗವ
ಜೊತೆಯಲಿ ಕಳೆಯದ ದಿನವ
ಆ ಕ್ಷಣಗಳ ಕುರಿತು….
ಏನೆಂದು‌ ಬರೆಯಲಿ ನಾನು…

ದೂರದ ಕಾನನದೊಳಿರುವ
ತೊರೆಯ‌ ಮೇಲಿನ ಬುಗ್ಗೆ
ನಾ ಕಾಣ ಹೊರಟಾಗ…
ಮಾಯವಾಗಿ‌ ಹೋದಾಗ….
ಆ ಬುಗ್ಗೆಯ ಕುರಿತು‌ ನುಡಿಯೆಂದರೆ
ಏನು‌ ನುಡಿಯಲಿ ನಾನು….

ಬಾನಲಿ ಮೂಡಿದ‌ ಮಿಂಚೊಂದು
ಕ್ಷಣದಲಿ ಮೂಡಿ ಮಾಯವಾಗಿ
ಇರುಳ ದಾಟಿ ನಾ ಬಂದಾಗ
ಹಗಲಲಿ ಏನು‌ ಹೆಳಲಿ ನಾನು..

ಬರೆಯೆಂದೊಡನೆ ಏನು‌
ಬರೆಯಲಿ ನಾ‌ನು…….
***

About The Author

Leave a Reply

You cannot copy content of this page

Scroll to Top