ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಮೇರಿಕಾ

ಬೊಗಸೆಯಲ್ಲಿ ಕಂಡಷ್ಟು ನೆನಪಿನಲ್ಲಿ ಉಳಿದಷ್ಟು

ಪುಸ್ತಕದ ಹೆಸರು – ಅಮೇರಿಕಾ – ಬೊಗಸೆಯಲ್ಲಿ ಕಂಡಷ್ಟು ನೆನಪಿನಲ್ಲಿ ಉಳಿದಷ್ಟು

ಪುಸ್ತಕದ ಬೆಲೆ ನೂರು ರೂಪಾಯಿ. ಹತ್ತು ಪರ್ಸೆಂಟ್ ರಿಯಾಯಿತಿಯಲ್ಲಿ ತೊಂಭತ್ತು ರೂಪಾಯಿಗಳು. ಸ್ಪೀಡ್ ಪೋಸ್ಟ್ ಅಥವಾ ಕೊರಿಯರ್ ನಲ್ಲಿ ಕಳಿಸುವುದಕ್ಕೆ ಸರಿಸುಮಾರು ಮೂವತ್ತೈದು ರೂಪಾಯಿಗೂ ಮೇಲ್ಪಟ್ಟು ಆಗುತ್ತದೆ. ಹಾಗಾಗಿ ಒಟ್ಟು 90+35 ನೂರಾ ಇಪ್ಪತ್ತೈದು ಆಗುತ್ತದೆ. ಬ್ಯಾಂಕ್ ಟ್ರಾನ್ಸ್ಫರ್ ಮಾಡುವುದಾದರೆ ಎಸ್. ಬಿ. ಐ. ಖಾತೆ ಸಂಖ್ಯೆ 10386457906. ಜಯನಗರ ಎರಡನೇ ಬ್ಲಾಕ್ ಶಾಖೆ IFSC Code SBIN0003286. ನನ್ನ ಮೊಬೈಲ್ ಸಂಖ್ಯೆ 9886723505/8310506843 – ಇವೆರಡು ಸಂಖ್ಯೆಯಲ್ಲಿ ಯಾವುದಕ್ಕಾದರೂ ವಿಳಾಸವನ್ನು ಕಳುಹಿಸಬಹುದು. ಗೂಗಲ್ ಪೇ ಮುಖಾಂತರವೂ 9886723505 ಈ ಸಂಖ್ಯೆಗೆ ಕಳುಹಿಸಬಹುದು.

ನಾವು ಮಾಡಿದ್ದು ಒಟ್ಟು 92 ದಿನದ ಪ್ರವಾಸ. ಅಮೇರಿಕಾ ಪಶ್ಚಿಮ ತೀರದಲ್ಲಿರುವ ಕ್ಯಾಲಿಫೋರ್ನಿಯಾ ಹಾಗೂ ನೆವಾಡಾ ಮತ್ತು ಆರಿಜ಼ೋನಾ ರಾಜ್ಯಗಳು ಅಂತೆಯೇ ಮಧ್ಯ ಅಮೇರಿಕಾದ ಕ್ಯಾನ್ಸಸ್ ಮತ್ತು ವಿಚಿಟಾ ನಗರಗಳು. ನಾನೇ ಸ್ವಂತ ಮುದ್ರಣ ಮಾಡಿಸಿರುವೆ.

ಇದು ಪ್ರವಾಸ ಕಥನಕ್ಕಿಂತ ಹೆಚ್ಚಾಗಿ ನಡೆಯಲು ಸಾಧ್ಯವಿಲ್ಲದೆ ಗಾಲಿಕುರ್ಚಿಯ ಮೇಲೆ ಆ ಪ್ರದೇಶಗಳನ್ನು ನೋಡಿಬಂದ ಅನುಭವ ಕಥನ/ಸಾಹಸಗಾತೆ

=========================================

ಬದುಕು ಪುಕ್ಸಟ್ಟೆ ಅಲ್ಲ

ಪುಸ್ತಕದ ಹೆಸರು: ಬದುಕು ಪುಕ್ಸಟ್ಟೆ ಅಲ್ಲ (ವ್ಯಕ್ತಿತ್ವ ವಿಕಸನ) ಲೇಖಕರ ಹೆಸರು: ರಾಘವೇಂದ್ರ ಈ ಹೊರಬೈಲು ಪುಟಗಳು: 120. ಬೆಲೆ: 100/- ಪ್ರಕಾಶಕರ ಹೆಸರು ಮತ್ತು ವಿಳಾಸ: ಗೋಮಿನಿ ಪ್ರಕಾಶನ, ಶಾಂತಿನಗರ, ತುಮಕೂರು- 572102 ಪುಸ್ತಕ ದೊರೆಯುವ ವಿಳಾಸ: ಗುಬ್ಬಚ್ಚಿ ಸತೀಶ್, ತುಮಕೂರು ಮೊಬೈಲ್ ಸಂಖ್ಯೆ: 9986692342 / 9538242068.

ಲೇಖಕ ಸದಾಶಿವ ಸೊರಟೂರು ಬರೆದ ಬೆನ್ನುಡಿಯಿಂದ: ಜಗತ್ತಿನ ಕಡೆ ಮುಖ ಮಾಡಿ ಕೂತು, ಅದರೊಂದಿಗೆ ತನ್ನ ಬದುಕಿನೊಳಗಿನ ಅನುಭವದ ಸರಕುಗಳನ್ನು ತಾಳೆ ಹಾಕಿಕೊಳ್ಳುವ ಹೊತ್ತಿಗೆ ಕಳೆದ ಒಂದೊಂದು ಕ್ಷಣವು ಕೂಡಾ ನನಗೊಂದು ಪಾಠವಾಗಿಬಿಟ್ಟಿತಲ್ಲ ಅನಿಸಿಬಿಡುತ್ತದೆ. ಯಾರಿಗೇ ಆಗಲಿ ಆ ಕ್ಷಣಕ್ಕೆ ಬದುಕು ಪುಕ್ಸಟ್ಟೆ ಅಲ್ಲ ಅನ್ನೋದು ಅರ್ಥವಾಗಿಬಿಡುತ್ತದೆ. ಬಿಡಿ, ಅದು ನೀಡುವ ಬೇಡಿಕೆಗಳ ಪಟ್ಟಿ ದೊಡ್ಡದು. ಬದುಕಿನ ಅಂತಹ ಹತ್ತಾರು ಹಸಿಹಸಿ ಅನುಭವಗಳೊಂದಿಗೆ ರಾಘವೇಂದ್ರ ಈ ಹೊರಬೈಲು ಅವರು ಈ ಪುಸ್ತಕದಲ್ಲಿ ನಿಮ್ಮೊಂದಿಗೆ ಮುಖಾಮುಖಿಯಾಗಿದ್ದಾರೆ. ಅನುಭವಗಳು ಕೊಟ್ಟು ಹೋದ ಬದುಕಿನ ಪಾಠವನ್ನು ಪಕ್ಕದಲ್ಲಿ ಕೂತು, ಆತ್ಮೀಯವಾಗಿ ಹೇಳುವಂತೆ ನಿರೂಪಿಸಿದ್ದಾರೆ. ಅರೆ, ಇದು ನನ್ನದು ಕೂಡಾ ಅನ್ನಿಸುವಂತೆ ಬರೆದಿದ್ದಾರಲ್ಲ ಅನಿಸಿಬಿಡುತ್ತದೆ. ಅದು ಅವರ ಶಕ್ತಿ. ಓದುತ್ತಾ ಹೋದಂತೆ ಅನುಭವಗಳು ಪಾಠದಂತೆ ಆವರಿಸಿಕೊಳ್ಳುವ ಪರಿ ಅದ್ಭುತವಾಗಿದೆ. ಮೇಷ್ಟ್ರು ಕೂಡಾ ಆಗಿರುವ ರಾಘವೇಂದ್ರ ಅವರಿಗೆ ಅಂಥದೊಂದು ಕಲೆ ಸೊಗಸಾಗಿ ಸಿದ್ಧಿಸಿದೆ

.

About The Author

1 thought on “ಪುಸ್ತಕ ಪರಿಚಯ”

Leave a Reply

You cannot copy content of this page

Scroll to Top