ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಶ್ರೀದೇವಿಗೆ ಶ್ರೀ ವಿಜಯ ಪ್ರಶಸ್ತಿ

‘ಸಂಗಾತಿ’ಯ ಮೂರನೇ ಆಯಾಮ ಅಂಕಣಬರೆಯುತ್ತಿರುವ ಶ್ರೀದೇವಿ ಕೆರೆಮನೆಯವರಿಗೆ

ಶ್ರೀ ವಿಜಯ ಪ್ರಶಸ್ತಿ ದೊರಕಿದ್ದು ಪತ್ರಿಕೆಅವರನ್ನು ಅಭಿನಂದಿಸುತ್ತದೆ

ಶ್ರೀದೇವಿ ಕೆರೆಮನೆಗೆ ಶ್ರೀವಿಜಯ ಪ್ರಶಸ್ತಿ

ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ ನಾಡಿನ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ‌ ಶ್ರೀ ವಿಜಯ ಪ್ರಶಸ್ತಿಗೆ ಜಿಲ್ಲೆಯ ಕವಿಯತ್ರಿ, ಕಥೆಗಾರ್ತಿ, ಅಂಕಣಗಾರ್ತಿ ಶ್ರೀದೇವಿ ಕೆರೆಮನೆ ಭಾಜನರಾಗಿದ್ದಾರೆ. ಈಗಾಗಲೇ ತಮ್ಮ ಕಥೆ ಕವನ ಅಂಕಣಗಳಿಂದ ಮನೆಮಾತಾಗಿರುವ ಶ್ರೀದೇವಿ ಕೆರೆಮನೆಯವರು ಐದು ಕವನ ಸಂಕಲನ, ಐದು ಅಂಕಣ ಬರಹ ಸಂಕಲನ, ಎರಡು ಗಜಲ್ ಸಂಕಲನ ಒಂದು ಕಥಾ ಸಂಕಲನ ಹಾಗೇಯೇ ಒಂದು ವಿಮರ್ಶಾ ಸಂಕಲನ‌ ಹೀಗೆ ಒಟ್ಟೂ ಹದಿನಾಲ್ಕು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಇನ್ನೂ ನಾಲ್ಕು ಪುಸ್ತಕಗಳು ಅಚ್ಚಿನ ಮನೆಯಲ್ಲಿವೆ. (ಎರಡು ಕವನ ಸಂಕಲನಗಳು, ಒಂದು ಕಥಾ ಸಂಕಲನ ಒಂದು ಇಂಗ್ಲಿಷ್ ಲೇಖಕರ ವಿಮರ್ಶಾ ಕೃತಿ)

೪೫ ವರ್ಷದ ಒಳಗಿನ ಹಾಗೂ ಸಾಹಿತ್ಯದಲ್ಲಿ ಗಣನೀಯ ಸಾಧನೆ ಮಾಡಿರುವ ಸಾಹಿತಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಒಂದು ಲಕ್ಷ ಇಪ್ಪತ್ತು ಸಾವಿರ ರೂಪಾಯಿಗಳ ಮೊತ್ತದ ಈ ಪ್ರಶಸ್ತಿಯನ್ನು ಈ ವರ್ಷ ಇಬ್ಬರಿಗೆ ನೀಡಲಾಗುತ್ತಿದ್ದು ಇನ್ನೊಬ್ಬರು ರಾಯಚೂರಿನ ಕವಿ ಚಿದಾನಂದ ಸಾಲಿಯವರಾಗಿದ್ದು ಇಬ್ಬರಿಗೂ ಪ್ರಶಸ್ತಿಯ ಮೊತ್ತವನ್ನು ತಲಾ ಅರವತ್ತು ಸಾವಿರ ರೂಪಾಯಿಯಂತೆ ನೀಡಲಾಗುವುದು ಎಂದು ಕಸಾಪ ಅಧ್ಯಕ್ಷರು, ಇಬ್ಬರು ಕಾರ್ಯದರ್ಶಿಗಳು ಹಾಗೂ ಕಸಾಪದ ಮಾಧ್ಯಮ ವಕ್ತಾರರಾಗಿರುವ ಪದ್ಮರಾಜ ದಂಡಾವತಿಯವರನ್ನು ಒಳಗೊಂಡ ಸಮಿತಿ ತೀರ್ಮಾನಿಸಿದೆ ಎಂದು ಕಸಾಪ ಅಧ್ಯಕ್ಷರಾದ ಶ್ರೀ ಮನು ಬಳಿಗಾರರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ನಾಡಿನ ಹಲವಾರು ಪತ್ರಿಕೆಗಳಲ್ಲಿ ತಾವು ಬರೆಯುತ್ತಿರುವ ಅಂಕಣಗಳ ಮೂಲಕ ಜನಸಾಮಾನ್ಯರಲ್ಲಿ ಮನೆಮಾತಾಗಿದ್ದಾರೆ. ಇತ್ತೀಚೆಗೆ ಹಲವಾರು ವೆಬ್ ಪತ್ರಿಕೆಗಳಲ್ಲಿ ಪುಸ್ತಕ ವಿಮರ್ಶೆಯನ್ನು ಬರೆಯುತ್ತಿರುವ ಶ್ರೀದೇವಿ ಕೆರೆಮನೆಯವರಿಗೆ ಈಗಾಗಲೇ ನಾಡಿನ ಹತ್ತಾರು ಪ್ರಶಸ್ತಿಗಳು ಸಂದಿದ್ದು ಈ ಪ್ರತಿಷ್ಟಿತ ಪ್ರಶಸ್ತಿಯು ಇನ್ನೊಂದು ಹೆಮ್ಮೆಯ ಗರಿಯನ್ನು ಮೂಡಿಸಿದೆ.

*******************************************

About The Author

5 thoughts on “ಶ್ರೀದೇವಿಗೆ ಶ್ರೀ ವಿಜಯ ಪ್ರಶಸ್ತಿ”

    1. ಶ್ರೀದೇವಿ ಕೆರೆಮನೆ ಕ್ರಿಯಾಶೀಲ ಕವಯಿತ್ರಿ. ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ಪ್ರಶಸ್ತಿ ಬಂದಿದ್ದು ಸಂತೋಷ. ಅಭಿನಂದನೆ.

  1. ಹಾರ್ದಿಕ ಅಭಿನಂದನೆಗಳು. ನಿಮ್ಮ ಕಿರೀಟಕ್ಕೆ ಮತ್ತೊಂದು ಹೆಮ್ಮೆಯ ಗರಿ, ನವಿಲುಗರಿ

Leave a Reply

You cannot copy content of this page

Scroll to Top