ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ದೇಶಪ್ರೇಮ

Pin on No! Child labour

ಗೋಪಾಲತ್ರಾಸಿ

ದೇಶಎಂದರೆ
ಸೀಮೆಯೊಳಗಿನಬರೇ
ಭೂಭಾಗವಲ್ಲ

ದೇಶಪ್ರೇಮ
ಕೋಟೆಯೇರಿಊದುವ
ತುತ್ತೂರಿಯೇನಲ್ಲ

ದೇಶಪ್ರೇಮ,
ವ್ವವಹಾರ, ರಾಜಕೀಯ
ಧರ್ಮ-ರೀತಿ-ರಿವಾಜು
ಪೊರೆಕಳಚುವ
ಸಹಜಮಾನವಪಥ

ನಮ್ಮಷ್ಟೇ, ನಮ್ಮಂತಹ
ಸಹಜೀವದಕುರಿತಷ್ಟು
ಕಾಳಜಿ

ಸಕಲಜೀವಜಂತುಗಳ
ತೆಕ್ಕೆಯೊಳಗೆಆಹ್ವಾನಿಸಿಕೊಳ್ಳುವ
ಕಾರುಣ್ಯ

ದೇಶಪ್ರೇಮಎಂದರೆ
ದೇಶದಕೊನೇಯನಿರ್ಗತಿಕನ
ಯೋಗಕ್ಷೇಮ.

******************

About The Author

4 thoughts on “ಕಾವ್ಯಯಾನ”

Leave a Reply

You cannot copy content of this page

Scroll to Top