ಕಸಾಪಗೆ ಮಹಿಳಾ ಅಧ್ಯಕ್ಷರು
ಕನ್ನಡ ಸಾರಸ್ವತ ಲೋಕಕ್ಕೆ ವಿದ್ಯಾ ದೇವಿ ಸರಸ್ವತಿಯ ಪಾತ್ರ ಬಹುಮುಖ್ಯವಾದುದು.ಧನ ಕನಕಗಳಿಗೆ ಲಕ್ಷ್ಮಿ ಅಧಿದೇವತೆಯಾದಂತೆ ಎಲ್ಲ ದೇವತಾ ಕಾರ್ಯಗಳು ಸಮಾನತೆಯಲಿ ಬೇಧ ಭಾವವಿಲ್ಲದೆ ನಡೆಯುವುದು. ಪೂಜೆಗಷ್ಟೇ ಸಿಮೀತ. ಅದು ದೇವರ ರೂಪದಲ್ಲಿರುವ ಸ್ತ್ರೀ ಮೂರ್ತಿಗಳಿಗೆ ಮಾತ್ರ.ಆದರೆ ವಾಸ್ತವದಲ್ಲಿ ಅವೆಲ್ಲ ಸ್ಥಾನ ಗಳು ನಿಲುಕಲು ಸಾಧ್ಯವೇ. ಅವು ಶೋಕಿಸಿನಲ್ಲಿಡುವ ಮೂರ್ತಿಗಳು.ಇವೇ ನಮಗೆ ಉತ್ತರ ನೀಡಬಲ್ಲ ಮಾನ ದಂಡಗಳು. ಮಹಿಳಾ ಸಂಘಟನೆಗಳಿಗೇನು ಬರವಿಲ್ಲ.ಆದರೆ ಮುಂದೆ ನಿಂತು ನಿಭಾಯಿಸುವ ಜವಾಬ್ದಾರಿ ಬೇಕಲ್ಲ.ಪುರುಷರಂತೆ ಮೂರು ಹೊತ್ತು ಆ ಕೆಲಸ ಮಾಡಲು ಆತ್ಮ ನಿರ್ಭರತೆಯಿ ರುವ ಮಹಿಳೆಯರಿಗೇನು ಕೊರತೆಯಿಲ್ಲ. ಆದರೆ ಆ ಮಹಿ ಳೆಯ ಮನೋಬಲ ಕುಗ್ಗಿಸುವ ಪಿತೂರಿಗಳಿಗೇನು ಬರವೇ ನಾವು ನಿಮ್ಮ ಜೊತೆ ಎಂದು ಧೈರ್ಯ ತುಂಬಿ ಬೆಳೆಸುವವ ರು ಬೆರಳೆಣಿಕೆಯಷ್ಟು. ಸಮಾನತೆ ಡಂಗುರ ಸಾರಿ ಕೂಗಿದ್ದೆ ಬಂತು.ಸಮಾನತೆ ಮಾತ್ರ ಮಂಗ ತಕ್ಕಡಿಯಿಂದ ಬೆಣ್ಣೆ ಹಂಚಿದಂತೆ.ತೊಟ್ಟಿಲ ತೂಗುವ ಕೈ ಜಗತ್ತನ್ನೇ ತೂಗಬಲ್ಲ ದು ಆತ್ಮವಿಶ್ವಾಸಕ್ಕೆ ಹೆಸರೆ ಸ್ತ್ರೀ.. ಅಬಲೆಯೆಂಬ ಪಟ್ಟ ಇಂದು ನಿನ್ನೆಯದಲ್ಲ,ಅದು ಶತಮಾನಗಳಿಂದ ಬಂದರೂ ಆ ಪಟ್ಟವನ್ನು ಅಲ್ಲಗಳೆದು, ಎಲ್ಲ ಕ್ಷೇತ್ರಗಳಲ್ಲೂ ಧೈರ್ಯ ಗುಂದದೇ ದಿಟ್ಟ ನಡಿಗೆಯ ಛಾಪು ಮೂಡಿಸಿದರೂ,ನಂಬಿ ಕೆ ಮೇಲ್ನೊಟಕೆ ಸಬಲೆಯಪಟ್ಟ. ಪಟ್ಟು ಹಿಡಿದು ಪಡೆಯ ಲು ಧೈರ್ಯ ಸಾತಿಲ್ಲ. ಇದೊಂದು ಅವಕಾಶ.ಪ್ರಯತ್ನದ ಹಾದಿಯ ಮುನ್ನುಡಿ ಬರೆಯಲು ಅವಕಾಶ.ಕನ್ನಡವೇ ಸತ್ಯ ಕನ್ನಡವೇ ನಿತ್ಯ… ಕನ್ನಡ ಸಾಹಿತ್ಯ ಪರಿಷತ್ತಿಗೆ ನೂರರ ಸಂಭ್ರಮ.ಹೇಳಿಕೊಳ್ಳ ಲು ಹೆಮ್ಮೆಪಡುವಂತ ವಿಚಾರ.ಆದರೆ ಆ ಸಂಭ್ರಮ ವನ್ನು ಪ್ರಶ್ನಿಸುವವರು ಯ್ಯಾರು? ಬೆಕ್ಕಿಗೆ ಗಂಟೆ ಕಟ್ಟಿದಂತೆ.ತುಂ ಬಾ ಮಹಿಳೆಯರು ಆಕಾಂಕ್ಷಿಗಳಾದರೂ ಅವರ ಬೆಂಬಲಕ್ಕೆ ನಿಲ್ಲುವವರಾರು? ಸಣ್ಣ ಪುಟ್ಟ ಹುದ್ದೆ ನೀಡಿ ಸಮಾಧಾನ ಪಡಿಸಲು ಮೊದಲೇ ಸಿದ್ದತೆ ನಡೆದಿರುವುದು ಗೊತ್ತಿಲ್ಲದ ವಿಚಾರವೇನಲ್ಲ.ತಾಲೂಕಿನ ಕ.ಸಾ.ಪ ಅಧ್ಯಕ್ಷರ ನೇಮಕಕ್ಕೆ ಆಕಾಂಕ್ಷಿಗಳಾರು ಎಂದು ಕೇಳುವ ಸಭೆ.ನಾನು ಕ.ಸಾ.ಪ. ಸದಸ್ಯೆಯಾಗಿದ್ದಕ್ಕೆ ಆ ಸಭೆಗೆ ನಾನು ಭಾಗವಹಿಸಿ ದ್ದೆ.ಎಲ್ಲ ಪುರುಷರು ತಾವುಗಳು ಆಕಾಂಕ್ಷಿಗಳೆಂದು ಹೇಳುವಾಗ, ಅಲ್ಲಿ ಯಾವ ಒಬ್ಬ ಮಹಿಳೆಯು ಉಪಸ್ಥಿತರಿರಲಿಲ್ಲ, ಇದ್ದವಳು ನಾನೊಬ್ಬಳೇ..ಅವರೆಲ್ಲ ಕೇಳುವಾಗ ನಾನು ಯ್ಯಾಕೆ ಕೇಳಬಾರದೆಂದು ಧೈರ್ಯ ಮಾಡಿ ನಿಂತು ನಾನು ಆಕಾಂಕ್ಷಿಯೆಂದು ಹೇಳಿದ್ದೆ ತಡ ಎಲ್ಲರ ಕಣ್ಣುಗಳು ನನ್ನೆ ನೋಡುತ್ತಿದ್ದವು ಅಷ್ಟೇ.ನಾನು ತಪ್ಪು ಕೇಳಿದೆನಾ ಎಂಬ ಭಾವ.ಅಂದರೆ ನಾವುಗಳು ಬಯಸಬಾರದು.ಆ ಹುದ್ದೆಗ ಳು ಅವರಿಗೆ ಮಾತ್ರ ಮೀಸಲು.ಅದು ಸಿಗದಂತೆ ಮಾಡುವ ರಾಜಕೀಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲೂ ನಡಿಯತ್ತೆ ಅ ನ್ನುವ ವಾಸ್ತವ ಅರಿವಾಗಲು ಬಹಳ ಸಮಯ ಬೇಕಾಗಲಿ ಲ್ಲ. ಮಹಿಳಾ ಸಂಘಟನೆಗಳು ಮನೋಬಲದಿಂದ ಒಗ್ಗೂಡ ಬೇಕು ಅದು ಅನಿವಾರ್ಯ.ಅಲ್ಲದೇ ಕನ್ನಡ ಸಾಹಿತ್ಯ ಪರಂ ಪರೆಗೆ ದಕ್ಕೆಯಾಗದಂತೆ ನಡೆಸಿಕೊಂಡು ಹೋಗುವ,ರಾಜ ಕೀಯ ತಂತ್ರದಿಂದ ಹೊರಬಂದು ಮನೆಬಾಗಿಲಿಗೆ ಕನ್ನಡದ ಕಂಪನ್ನು ಪಸರಿಸುವ ಮನಸ್ಸು ಮಹಿಳೆಯರಿಗೆ ಇದೆ. ಸಂ ಸಾರವನ್ನು ಅಚ್ಚುಕಟ್ಟಾಗಿ ನಡೆಸುವ,ಮಕ್ಕಳಿಗೆ ಸಂಸ್ಕಾರ ಬಿತ್ತುವ ಸಂಸ್ಕೃತಿ ನೆಲೆಯಾಗಿರಿವುದು ಮಹಿಳೆಯರಲ್ಲಿ ಎಂಬುದನ್ನು ಅಲ್ಲಗಳೆಯುವಂತಿಲ್ಲ.ಎಲ್ಲೋ ಅಪವಾದ ವೆಂಬಂತೆ ಕಳಂಕಿತರು ಪುರುಷರಲ್ಲಿಯು,ಮಹಿಳೆಯರಲ್ಲಿ ಯು ಇಲ್ಲವೆಂದು ಹೇಳಲು ಸಾಧ್ಯವೇ? ಹಾಗಂತ ದೊರಕುವವರಿಗೂ ದೊರಕದೇ ವಂಚಿತರಾಗಿರುವುದು ನ್ಯಾಯವೇ? ಪ್ರಕೃತಿ ಸಮಾನತೆಯನ್ನು ಕಾಯ್ದು ಕೊಳ್ಳುವಂತೆ,ನಾವು ಕಾಯ್ದು ಕೊಳ್ಳುವುದು ಮುಖ್ಯ. ಇಲ್ಲವಾದರೆ ಸುನಾಮಿ, ಭೂಕಂಪ ಆಗುವುದೆಂಬ ನಿರೀಕ್ಷೆ.ಇದು ಕೇವಲ ಪರಿಸರ ಕ್ಕೊಂದೇ ಇರುವ ಮಾನದಂಡ.ನಾವುಗಳು ಮುಂದಾಗುವ ಅನಾಹುತ ಮನೆಯಿಂದಲೇ ಎಂದು ನೆನೆದು.ಮೌನವಾಗು ತ್ತೆವೆ.ಅದರ ಸರಿಯಾದ ಉಪಯೋಗ ಹಾಗೂ ಉತ್ತರ ನಮ್ಮ ಮುಂದಿದೆ.ನೂರು ವರುಷ ಅದರೂ ಅಧ್ಯಕ್ಷ ಸ್ಥಾನ ಕ್ಕೆ ಯಾವ ಮಹಿಳೆಗೂ ಅವಕಾಶ ದೊರಕದಿರುವುದು. ಇನ್ನಾದರೂ ಎಚ್ಚರಗೊಂಡು ಆಂತರಂಗಿಕವಾಗಿ ಚಳುವಳಿ ನಡೆಸುವುದು ಅವಶ್ಯಕತೆಯಿದೆ. ಹೆಸರಿಗೆ ಮಹಿಳಾ ಸಂಘಟನೆಗಳು ಎಂಬ ಹಣೆಪಟ್ಟಿ ಕಿತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಗದ್ದುಗೆಯ ಏರುವ ಮನಸ್ಸು ಮಾಡಬೇಕು.ಇಷ್ಟು ವರುಷ ಬೆಂಬಲ ನೀಡುತ್ತ ಕೆಲಸ ಮಾಡಿದ್ದೆವೆ.ಮುಂದೆಯು ಮಾಡುವ ತಾಕತ್ತು ಇದೆ. ನಾವು ಕೊಟ್ಟ ಬೆಂಬಲಕ್ಕೆ ಪ್ರತಿಯಾಗಿ ಮಹಿಳೆಯರಿಗೆ ಅಧ್ಯಕ್ಷ ಸ್ತಾನ ಸಿಗುವಲ್ಲಿ ಧ್ಬನಿಯತ್ತಬೇಕು…ಕಾಗದ ಪತ್ರಗಳಲ್ಲಿಇದ್ದುದು ವಾಸ್ತವವಾಗಿ ಕೈಗೆಟುಕುವಂತೆ ಮಾಡಬೇಕು.ಧ್ವನಿ ಎತ್ತುವವರ ಧ್ವನಿ ನಿಲ್ಲುವಂತಾಗದಿದ್ದರೆ ಸಾಕು. ಆಪಾದನೆ,ನಿಂದನೆ,ಚಾರಿತ್ರ್ಯಿಕ ಹಾನಿಯ ಹುನ್ನಾರಗಳು ಮಹಿಳೆಯ ಆತ್ಮಾಭಿಮಾನ ಕುಗ್ಗಿದರೆ ಅವಳೆಂದೆಂದಿಗೂ ನಾಲ್ಕು ಗೋಡೆಯ ಬಿಟ್ಟು ಬರಲಾರಳು. ಕನ್ನಡ ಸಾಹಿತ್ಯ ಪರಿಷತ್ತು ಎಲ್ಲರ ಸೊತ್ತು.ಕನ್ನಡ ಸಾಹಿತ್ಯ ಅನೇಕ ಅನರ್ಘ್ಯ ರತ್ನಗಳು ನೀಡಿದ ಆಸ್ತಿ.ಅದನ್ನು ಉಳಿಸಿ,ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ. ಅದರ ಸೇವೆ ಮಾಡುವ ಭಾಗ್ಯ ಎಲ್ಲರಿಗೂ ದೊರೆಯಬೇಕು. ಮಹಿಳೆಯರಿಗೆ ಮೊದಲು.ಈ ಸಲವಾದರೂ ಶುಕ್ರದೆಸೆ ಪ್ರಾರಂಭವಾಗಲಿ ಎಂಬ ಆಶಯ.ಬದಲಾವಣೆಯತ್ತ ಹೆಜ್ಜೆ ಹಾಕೋಣ…..ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ. **************************************************** ಶಿವಲೀಲಾ ಹುಣಸಗಿ
ಕಸಾಪಗೆ ಮಹಿಳಾ ಅಧ್ಯಕ್ಷರು Read Post »









