ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಡಾ.ಪ್ರತಿಭಾ

ಅಬ್ಬರಿಸುವ ಕಡಲಿಗೆ
ಯಾವತ್ತೂ ಶಾಂತವಾಗಿ
ಹರಿಯುವ ನದಿಗಳು ಸಾಕ್ಷಿ

ಖಾಲಿಯಾಯಿತೆ ಸಿಹಿ
ನೀರಿನ ಒರತೆ
ಹಾಕಿಕೊಂಡು ತನಗೆ
ತಾನೇ ಪ್ರಶ್ನೆಗಳ

ಸ್ವಂತಿಕೆಯ ಕಳೆದುಕೊಳ್ಳುವ
ಅಪಾಯ ಇದ್ದರೂ
ಒಂದು ನೆಮ್ಮದಿ ಯ ಭಾವ.

ಅಬ್ಬರದ ಅಲೆಗಳು
ಸದ್ದು ಮಾಡಿ ಸುಮ್ಮನಾಗಲು
ಮೂಡಿತು ನೆಮ್ಮದಿಯ
ಭಾವ

ಶಾಶ್ವತವೇನಲ್ಕ ಈ ಬದುಕು
ನೋವು, ನಲಿವು
ಸುಖ,ದುಃಖಗಳ ಸಂಮ್ಮಿಶ್ರಣ

********

About The Author

Leave a Reply

You cannot copy content of this page

Scroll to Top