ಗಝಲ್


ರತ್ನರಾಯ ಮಲ್ಲ
ಮನಸು ಮರುಗುತಿದೆ ಗಾಲಿಬ್
ಕನಸು ಬಳಲುತಿದೆ ಗಾಲಿಬ್
ಒಂಟಿತನವು ಮನೆ ಮಾಡಿದೆ
ತನುವು ಸೊರಗುತಿದೆ ಗಾಲಿಬ್
ಖಿನ್ನತೆಯು ಗೂಡು ಕಟ್ಟಿದೆ
ಹೃದಯ ನರಳುತಿದೆ ಗಾಲಿಬ್
ಬುದ್ಧಿ ಮಂಕಾಗಿದೆ ಇಂದು
ಮನವು ಎಡವುತಿದೆ ಗಾಲಿಬ್
ಇರುಳಲಿ ಕುಳಿತಿಹನು ‘ಮಲ್ಲಿ’
ಬದುಕು ಕರಗುತಿದೆ ಗಾಲಿಬ್
********
ಗಝಲ್


ರತ್ನರಾಯ ಮಲ್ಲ
ಮನಸು ಮರುಗುತಿದೆ ಗಾಲಿಬ್
ಕನಸು ಬಳಲುತಿದೆ ಗಾಲಿಬ್
ಒಂಟಿತನವು ಮನೆ ಮಾಡಿದೆ
ತನುವು ಸೊರಗುತಿದೆ ಗಾಲಿಬ್
ಖಿನ್ನತೆಯು ಗೂಡು ಕಟ್ಟಿದೆ
ಹೃದಯ ನರಳುತಿದೆ ಗಾಲಿಬ್
ಬುದ್ಧಿ ಮಂಕಾಗಿದೆ ಇಂದು
ಮನವು ಎಡವುತಿದೆ ಗಾಲಿಬ್
ಇರುಳಲಿ ಕುಳಿತಿಹನು ‘ಮಲ್ಲಿ’
ಬದುಕು ಕರಗುತಿದೆ ಗಾಲಿಬ್
********
You cannot copy content of this page