ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ರೇಶ್ಮಾಗುಳೇದಗುಡ್ಡಾಕರ್

ಅರಳುತ್ತಿದೆ ಹೃದಯದ
ಹೂ ಬನ ನಿನ್ನ
ನೆನೆನಾದಕ್ಷಣ …..

ಎಣಿಸಲಾಗದ ಕನಸುಗಳ
ದಿಬ್ಬಣ ಹೊರಟಿದೆ
ಮನದೂರಿನ ಹೆದ್ದಾರಿಯಲಿ
ನೆನಪಿನ ಬಿಡಿ ಹೂಗಳ
ಸ್ವಾಗತದೊಂದಿಗೆ ….

ನಿನ್ನ ಎದೆಯ ಗೂಡಿನಲ್ಲಿ
ಬಚ್ಚಿಟ್ಟ ನನ್ನ ಚಹರೆಯ
ಪಟವ ಮತ್ತೆ ನೋಡುವಾಸೆ
ಈ ಸಂಜೆಯ ತಂಪು ಕಂಪಿನ
ಸುಸಮಯದಲ್ಲಿ …..

ಬಯಕೆಯ ಕುಡಿನೋಟವೊಂದು
ಸದ್ದಿಲ್ಲದೆ ನಿನ್ನ ಬಳಿಸಾರಿದೆ
ಸ್ವೀಕರಿಸಿ ಒಪ್ಪಿಗೆಯ ಮುದ್ರೆಯಾ
ರವಾನಿಸುವೆಯಾ ನಿನ್ನ ಬೊಗಸೆ
ಕಂಗಳ ಬೆಳಕಿನಲ್ಲಿ…‌‌‌‌..

***********

About The Author

2 thoughts on “ಒಲವಿನ ಪಹರೆ”

Leave a Reply

You cannot copy content of this page

Scroll to Top