ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ವಿದ್ಯಾ ಕುಂದರಗಿ

ನಿರ್ಬಂಧಗಳ ಜಡಿದು ಬಂಧಿಸಲಾಗಿದೆ ಇಲ್ಲಿ
ರೆಕ್ಕೆ ಬಡಿದು ಬಾನಿಗೆ ಹಾರಬೇಕಿದೆ ನನಗೆ

ಕಣ್ಕಟ್ಟಿದ ಖುರಪುಟಕೆ ಒಂದೇ ಗುರಿಯು
ದೆಸೆದೆಸೆಗೆ ಕಣ್ಣಗಲಿಸಿ ನೋಡಬೇಕಿದೆ ನನಗೆ

ಗೊರಕೆಯ ಸದ್ದಿಗೆ ಗೋಡೆಯಾಗುತ್ತಿದೆ ಪಟಲ
ಗಾಳಿಪಟವಾಗಿ ಆಕಾಶ ಚುಂಬಿಸಬೇಕಿದೆ ನನಗೆ

ರಾತ್ರಿಕನಸು, ಭಾವಗಳಿಗೆ ಕೊಡಲಾಗದ ಕಾವು
ಸಂಜೆ ಮುಂಜಾವಿಗೆ ಚಿಂವ್‌ಗುಟ್ಟಬೇಕಿದೆ ನನಗೆ

ಚಿವುಟಿ ಚಿಮ್ಮಿದರೂ ಟಿಸಿಲೊಡೆಯುವ ಪಸೆ
ಹಬ್ಬಿ ಆಕಾಶದೆತ್ತರಕೆ ಕೈ ಚಾಚಬೇಕಿದೆ ನನಗೆ

‘ಸಖಿ’ ನಿಸ್ಸಂಗವಾಗಿ ಕಳೆದ ಮಾಸಗಳೇಷ್ಟೋ
ಒಮ್ಮೆ ಚಿತ್ತಪೌರ್ಣಿಮೆ ಆಗಬೇಕಿದೆ ನನಗೆ

*******************

About The Author

5 thoughts on “ಒಮ್ಮೆ ಪೌರ್ಣಿಮೆಯಾಗಬೇಕಿದೆ ನನಗೆ”

  1. Nagaraj Harapanahalli

    ಆಹಾ, ಸ್ವಾತಂತ್ರ್ಯ ,ಮುಕ್ತತೆಯ‌ ಹಂಬಲ….ಗಟ್ಟಿಬಂಧದ ಕವಿತೆ

  2. ಚೆನ್ನಾಗಿದೆ.
    ಮೊದಲ ಸಾಲನ್ನು ಕೊಂಚ ಬದಲಿಸಿದರೆ ಒಳ್ಳೆಯದೊಂದು ಗಜ಼ಲ್ ಆಗುತ್ತದೆ.

  3. ವಿದ್ಯಾ ಶ್ರೀ ಎಸ್ ಅಡೂರ್

    ಎಷ್ಟೇ ಸ್ವಾತಂತ್ರ್ಯ ವಿದ್ದರೂ….ಕಾಲಿಗೆ ಕಟ್ಟಿಕೊಂಡ ಚಿನ್ನದ ಬೇಡಿಯಂತೆ ….ಸುತ್ತ ಮುತ್ತ ಲಿನ ವ್ಯವಸ್ಥೆ ಹೆಣ್ಣಿಗೆ ಕಾಡುತ್ತದೆ. ಅದರಿಂದ ಪಾರಾಗಬೇಕೆಂಬ ತುಡಿತ ಎದ್ದು ಕಾಣುತ್ತದೆ. ಪದಗಳ ಜೋಡಣೆ ತುಂಬಾ ಚೆನ್ನಾಗಿದೆ.

Leave a Reply

You cannot copy content of this page

Scroll to Top