ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ರಾಘವೇಂದ್ರ ದೇಶಪಾಂಡೆ

ಗುನುಗುತಿದೆ ಹೆಸರೊಂದು ಹೃದಯ ಶಹನಾಯಿಯೊಳಗೆ
ಬೆಸೆದಾಗಿದೆ ಆ ಹೆಸರಲ್ಲಿ ನನ್ನ ಬಾಳಉಸಿರು
ರೂಪಿಸಿಹನು ಭಗವಂತ ಪ್ರೀತಿ ಭರಿತ ಸಂಬಂಧವನು
ಒಳಗೊಂಡಿದೆ ನಮ್ಮೀ ಸಂಬಂಧವು
ಸೃಷ್ಟಿಕರ್ತನ ಫಲದೊಳಗೆ…

ಹೇಳಿಕೊಳ್ಳಲಾಗದ ಏಕಾಂಗಿತನವಿದೆ ಪ್ರೀತಿ ತಿರುವಿನಲಿ
ಒಂಟಿಯಾಗುವೆ…ಕೆಲವೊಮ್ಮೆ ನಾನು ಒಂಟಿತನದಲಿ
ಇಚ್ಛೆಪಟ್ಟಿರುವನೊ ಕರ್ತೃ ಹೀಗೆಯೇ ಇರಬೇಕೆಂದು
ಆಗುವುದೊಮ್ಮೆ ನಿರ್ಜನ…ಮತ್ತೊಮ್ಮೆ ಸ್ವರ್ಗಲೋಕ
ಆಳವಾದ ಪ್ರೀತಿ ಇದೆಯೆನೋ…

ದುಖಃದಲಿ ದುಖಿಃಯಾಗಿರುವೆ ಸುಖಃದಲಿ ಸುಖಿಃ
ನೀಗಿಸಿಕೊಂಡಿರುವೆ ಸಂತಸದ ಹಸಿವನು ನಿನ್ನ ಹಸನ್ಮುಖತೆಯಲಿ
ಎದೆಬಡಿತ ನಿಲ್ಲುವುದು ವ್ಯಾಕುಲತೆಯಲಿ ನೀನಿರುವಾಗ
ಹಂಚಿಕೊಳ್ಳುವ ಪ್ರಣಯಾಮೃತವನು ಜುಮ್ಮೆನ್ನುವ ಮಿಂಚಿನಲಿ
ದಾಂಪತ್ಯ ದೀವಿಗೆಯ ಬೆಳಕಿನಲಿ…

ಸುವರ್ಣ ಲೇಖನಗಳಾಗಿವೆ ಚೈತನ್ಯಭರಿತ ಹೆಜ್ಜೆಗಳು
ಕಥೆಯಾಗಿರುವೆವು ಬದುಕೆಂಬ ಲೇಖನದ ಹೊಳಪಿನಲಿ
ವಿರಹಿಸೋಣ ಭರವಸೆಯ ಭಾವಲೋಕದಲಿ
ಸಾಗೋಣ ಒಲವಿನ ಅಲೆಯಲಿ ನಾಳೆಂಬ ನಿರೀಕ್ಷೆಯಲಿ
ಚುಂಬಿಸೋಣ ಆಗಸವ ಸ್ವಚ್ಛಂದದಿ ಹಾರಾಡುವ ಹಕ್ಕಿಗಳಾಗಿ

ಹೆಸರೊಂದು ಕೊರೆದಾಗಿದೆ ಹೃದಯಾಂತರಾಳದಲಿ
ತಳುಕುಹಾಕಿಕೊಂಡಿದೆ ಮೈ ಮನಸುಗಳಲಿ ನನ್ನ ಹೆಸರು
ಸೃಷ್ಟಿಯಾಗಿದೆ ಸಂಬಂಧವೊಂದು ಅದ್ಭುತ ಪರಿಕಲ್ಪನೆಯಲಿ
ಜೊತೆಯಾಗಿರೋಣ ಜೀವಂತಿಕೆಯ ಕಾಲಚಕ್ರದೊಳಗೆ
ಸಾಧಿಸಿ ತೋರಿಸೋಣ ಹೌದೆನ್ನುವ ಹಾಗೆ…

**************

About The Author

5 thoughts on “ಆಹ್ಲಾದಕರ ಭಾವನೆಯಲಿ ನಾವು”

    1. ಸರ್ ನಿಮ್ಮ ಭಾವನೆ ಮತ್ತು ಕಲ್ಪನೆ ಲಹರಿಗಳು ಅದ್ಭುತವಾಗಿವೆ ….ಗುಡ್ ಲಕ್ ಸರ್

Leave a Reply

You cannot copy content of this page

Scroll to Top