ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಝಲ್

Heart shaped cutouts on pink background

ತೇಜಾವತಿ ಹೆಚ್.ಡಿ.

ಅಸಲಿಗೆ ನಕಲಿಯ ಲೇಪನ ಬಳಿದಿರಬಹುದು ನೋಡು
ಕಂಗಳಿಗೆ ಆವರಿಸಿರುವ ಪೊರೆಯ ಸರಿಸಿ ಅರಿಯಬಹುದು ನೋಡು

ಭಿತ್ತಿಯ ಮೇಲೆ ಬಿದ್ದ ಛಾಯೆಯು ಮಿಥ್ಯವಿರಬಹುದು ಒಮೊಮ್ಮೆ
ಅಂತಃಕರಣದ ಅಕ್ಷಿಯರಳಿಸಿ ದಿಟವ ತಿಳಿಯಬಹುದು ನೋಡು

ತಳವಿಲ್ಲದ ಬಾವಿ ಅನಂತ ಆಳವ ತೋರಿರಬಹುದು ಅಲ್ಲಿ
ಭ್ರಮೆಯಿಂದ ಹೊರಬಂದು ನೈಜತೆಯ ಕಾಣಬಹುದು ನೋಡು

ದಿಗಂತವು ಇಳೆ ಆಗಸವು ಸಂಧಿಸಿದಂತೆ ಭಾಸವಾಗುವುದು
ವಿಶ್ವವನ್ನೊಮ್ಮೆ ಪರ್ಯಟಿಸಿ ಅವಲೋಕಿಸಬಹುದು ನೋಡು

ಅಖಂಡ ಆಗಸವು ನೀಲವರ್ಣದಿ ಗೋಚರಿಸುವುದು ಮೇಲೆ
ಬೆಳಕಿನ ಮೂಲದ ಸತ್ಯಾಸತ್ಯತೆಯನ್ನು ಪರಾಮರ್ಶಿಸಬಹುದು ನೋಡು

********

About The Author

Leave a Reply

You cannot copy content of this page

Scroll to Top