ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನನ್ನೊಳಗೂ ಮಳೆ

Silhouette Of Woman Under Rain

ವರುಣ ನೀಡಿದ ಸಿಹಿ ಚುಂಬನದ ಮಳೆ,ನನ್ನೆದೆಯ ಅಂಗಳದಲಿ ನಾಚಿವೆ
ತನುಮನದ ಹೂಗಳು
ನನ್ನೊಳಗೂ ಮುಂಗಾರು,

ಮೌನದ ಪರದೆಯೊಳಗೆ
ಅವಿತ ಮಾತುಗಳು
ಎದೆಯ ನೆಲದಲಿ ಒಣಗಿದ ನೆನಪುಗಳಿಗೆ,ಕತ್ತಲೆಯ ಬೇಲಿ ದಾಟಿ ಹರಿದು ಬಂದಳು
ನನ್ನೊಳಗೂ ಮುಂಗಾರು

ಮೊಗೆ ಮೊಗೆದು ಸುರಿದಳು ವಿರಹದ ಕಣ್ಣೀರು,ಬಚ್ಚಿಟ್ಟುಕೊಂಡ ಮಾತು ಬಿಚ್ಚಿಡುವ ಸಂತಸ
ನನ್ನೊಳಗೂ ಮುಂಗಾರು

ಋತುಗಳ ಕನವರಿಕೆಯಲಿ
ಮಿಲನದ ಲವಲವಿಕೆ
ಮತ್ತೆ ಮೌನವೇ ನಾಚಿತು
ಬಾಚಿ ತಬ್ಬಿತು,ವಸಂತನ
ಕುಂಚದಲಿ ಮತ್ತೆ ಬಣ್ಣ ಬಣ್ಣದ ಚಿತ್ತಾರಗಳು
ನನ್ನೊಳಗೂ ಮುಂಗಾರು

ಕನಸುಗಳು ಗೂಡು ಕಟ್ಟಿವೆ
ಮನದ ಕೂಜನದಲಿ ಇನಿದನಿ ಕೇಳಿಸುತಿದೆ
ಎಳೆಬಿಸಿಲ ರಂಗು ಕಾಡಿದೆ
ಕಾಮನಬಿಲ್ಲಿನ ವರ್ಣಗಳಲಿ ನನ್ನೊಳಗೂ
ಮುಂಗಾರು ಸುರಿದಿದೆ

ನನ್ನೊಳಗೂ ಕವಿತೆ ಓಡಾಡಿದೆ,
ಪ್ರೇಮ ಗೀತೆಗಳೆಲ್ಲ ಹರಯ ಕಂಡಿದೆ
ನನ್ನೊಳಗೂ ಹೊರಗೂ ಮಳೆಯಾಗಿದೆ

***********

ವೀಣಾ ರಮೇಶ್

About The Author

Leave a Reply

You cannot copy content of this page

Scroll to Top