ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮಳೆಯಾಗುತಿದೆ,

Women's Gray Dress

ಭಾರವಾದ

ಮೋಡದ ಮನಸು

ಹಗುರಾಗುವುದು

ಹೀಗೆ ತಾನೇ,

ಒಡಲು ತುಂಬಿದ

ರಾಶಿ ಹನಿಗಳನೆಲ್ಲ

ಹೊರ ಚೆಲ್ಲಿ

ಹಗುರಾಗುವ ಮೊದಲು

ಭಾರವಾಗಲೇ ಬೇಕು,

ಮನ ಕಟ್ಟಬೇಕು

ದಟ್ಟೈಸಬೇಕು

ತೀವ್ರತೆಯ ದಾಟಿ

ಒಮ್ಮೆಗೆ ಸ್ಪೋಟಗೊಳ್ಳಬೇಕು,

ಹನಿಯೊಸರಿದರೆ ತಾನೇ

ಚಿಗುರ ಕನಸು,

ಹನಿಯಬೇಕು

ಹನಿದು

ಹಗುರಾಗುವ ಮುನ್ನ

ಮೋಡ ಕಟ್ಟಬೇಕು

ಭಾರವಾಗಬೇಕು,

ಮಳೆಯಾಗಿ ಇಳೆಗಿಳಿದು

ಹಗುರಾಗುತಲೆ

ಹಸಿರ ಕನಸಿಗೆ

ಜೀವ ತುಂಬಬೇಕು,

ಭುವಿಗಿಳಿದ ಗುರುತಿಗೆ

ಸಹಿಯ ಒತ್ತಬೇಕು…

************

Image may contain: Arpana Murthy, close-up

ಅರ್ಪಣಾ ಮೂರ್ತಿ

About The Author

6 thoughts on “”

  1. ತುಂಬಾ ಅದ್ಭುತವಾಗಿದೆ, ಪದಗಳ ಗುಚ್ಛ….
    ಒಳ್ಳೆಯದಾಗಲಿ ಅರ್ಪಣಾ… ಹೀಗೆ ಮುಂದುವರಿಯಲಿ ನಿಮ್ಮ ಪದಗಳ ಹೂಗುಚ್ಛ….

  2. ಅರ್ಪಣಾ…
    ಭಾರವಾಗಿರೋ ಜೀವ ಹನಿಗಳ ಪರದೆಯನ್ನ
    ನಿನ್ನ ಪ್ರೀತಿಯ ಲೇಖನಿಯಿಂದ ಇರಿದು
    ಅದರ ಭಾರವನ್ನೂ ಇಳಿಸಿ, ವಸುಂಧರೆಗೂ
    ಹಸಿರು ಸೀರೆಯುಡುಗೊರೆ ನೀಡಿದ್ದೀಯ ಮಾ..

Leave a Reply

You cannot copy content of this page

Scroll to Top