ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಣ್ಣೀರು

Why does sweat sting our eyes, but tears do not

ಜಗದೀಶ್ ಬನವಾಸಿ

ಕಣ್ಣೀರು ಬರುವಷ್ಟು ಬರಲಿ
ಎದೆಯ ನೋವು ತೊಳೆದು
ನೆನಪುಗಳ ಪುಟ ಓದ್ದೆಯಾಗುವಂತೆ
ಮತ್ತೆಂದು ಅವು ತಿರುಗಿ ಬಾರದಂತೆ

ಅಳು ಬರುವಷ್ಟು ಅತ್ತು ಬಿಡು
ನೆನಪುಗಳು ನೇಪಥ್ಯಕ್ಕೆ ಮರಳಿ
ಮರೆಯಾದ ಕನಸೊಂದು ರೆಕ್ಕೆಬಿಚ್ಚದಂತೆ
ಮತ್ತೆಂದು ಅವು ತಿರುಗಿ ಬಾರದಂತೆ

ಅಳುವ ಹರಿವಿಗೆ ತಡೆಯಾಗುವ
ಗೊಡ್ಡು ನೆಪಗಳ ಒಡ್ಡದಿರು
ಒಡೆದ ಕಟ್ಟೆ ಬರಿದಾಗಲಿ ಬಿಡು
ಮತ್ತೆಂದು ಅವು ತಿರುಗಿ ಬಾರದಂತೆ.

*******

About The Author

2 thoughts on “ಕಾವ್ಯಯಾನ”

Leave a Reply

You cannot copy content of this page

Scroll to Top