ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬೋಧಿ ಭಾವ

ರೇಮಾಸಂ

ಕರವ ಕೊಡವಿ ಕುಳಿತ ಮನಕೆ
ಹಸಿರು ಹಾಸುವ ತವಕದಲಿ
ಮುಗಿಲಿಗೆ ನೋಟವ ಚೆಲ್ಲಿ
ಕೆಚ್ಚನು ತೋರಿದಿ ನೀನಲ್ಲಿ //

ಬೊಗಸೆ ಬೆಳಕು ಹಿಡಿದು
ಕಲ್ಲ ಮುಳ್ಳ ಬೇಲಿಯ ಹಾರಿ
ಭರವಸೆಯ ಬಂಡೆ ಹೊದ್ದು
ಸಂದಿನಲಿ ಬಿತ್ತು ಬೀಜ ಹಾರಿ//

ವಜ್ರದೇಹಿ ಕಲ್ಲೆದೆಯ ಸೀಳಿ
ಮೆದು ಮೇಣವಾಗಿಸಿ ಅರಳಿ
ಪ್ರಯತ್ನಿಸಿದೆ ಮರಳಿ ಮರಳಿ
ನೋಡುವಂತಾದೆಲ್ಲ ಹೊರಳಿ//

ಬುದ್ಧನ ಬೋಧಿ ಭಾವವಾಗಿ
ತಪವ ಗೈಯುತ ಮರೆಯಲಿ
ಸರಿದಾರಿ ದೋರಿದೆ ಸರೀಕರಿಗೆ
ಗೆಲುವಿದೆ ಛಲದ ಬಲದಲಿ//

***********

About The Author

1 thought on “ಕಾವ್ಯಯಾನ”

  1. ಅಧ್ಬುತ…ಸಾಧಿಸುವ ಛಲ ಎದೆಯಲಿ ಗಟ್ಟಿಯಾಗಬೇಕು…ಸುಂದರವಾಗಿದೆ ಕವನ…

Leave a Reply

You cannot copy content of this page

Scroll to Top