ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಅನುವಾದ ಸಂಗಾತಿ

ಚೇಳು ಕಡಿದ ರಾತ್ರಿ ಇಂಗ್ಲೀಷ್ ಮೂಲ:ನಿಸ್ಸಿಮ್ ಏಜೇಕಿಲ್ ಕನ್ನಡಕ್ಕೆ: ಕಮಲಾಕರ ಕಡವೆ ನೆನಪಾಗುತ್ತದೆ ನನಗೆ ಒಂದು ಚೇಳುನನ್ನ ಅಮ್ಮನ ಕಡಿದ ರಾತ್ರಿ. ಹತ್ತು ತಾಸುಗಳಕಾಲ ಜಡಿದ ಸುರಿಮಳೆ ಆ ಚೇಳನ್ನುಅಕ್ಕಿ ಮೂಟೆಯಡಿ ಓಡಿಸಿತ್ತು.ವಿಷ ಕಾರಿ ಅದು – ಅಂಧಕಾರ ತುಂಬಿದಕೋಣೆಯಲ್ಲಿ ಫಕ್ಕನೆ ಕುಣಿದ ಕುಟಿಲ ಬಾಲ –ಮತ್ತೆ ಮಳೆಯಲ್ಲಿ ಮರೆಯಾಯಿತು. ನೊಣಗಳ ಹಿಂಡಿನಂತೆ ಬಂದರು ರೈತರುಮಣಮಣಿಸುತ್ತ ನೂರು ಸಲ ದೇವರ ನಾಮಕೇಡು ಕಳೆಯಲಿ ಎಂದು ಕೇಳಿಕೊಳ್ಳುತ್ತ. ಮೊಂಬತ್ತಿ, ಲಾಟೀನುಗಳ ಹಿಡಿದುಮಣ್ಣ ಗೋಡೆಗಳ ಮೇಲೆದೈತ್ಯ ಜೇಡನಂತ ನೆರಳುಗಳ ಮೂಡಿಸುತ್ತಅವರು ಹುಡುಕಿದರು ಅದರ. ಕಾಣಲಿಲ್ಲ ಎಲ್ಲಿಯೂ.ಲೊಚಗುಟ್ಟಿದರು ಅವರು.ಚೇಳಿನ ಪ್ರತಿ ಚಲನೆಯ ಜೊತೆಅಮ್ಮನ ದೇಹದಲ್ಲಿ ವಿಷ ಹರಿಯುತ್ತದೆ, ಅವರೆಂದರುಅದು ಸುಮ್ಮನೆ ಕೂರುವಂತಾಗಲಿ, ಅವರೆಂದರುಹಿಂದಿನ ಜನ್ಮದ ಪಾಪಗಳೆಲ್ಲ ಈ ರಾತ್ರಿಉರಿದು ಹೋಗಲಿ, ಅವರೆಂದರುನಿನ್ನ ಈ ಸಂಕಟ ಮುಂದಿನ ಜನ್ಮದ ದುರ್ಭಾಗ್ಯಗಳನ್ನುಕಡಿಮೆಯಾಗಿಸಲಿ, ಅವರೆಂದರುಈ ಕ್ಷಣಿಕ ಜಗತ್ತಿನ ಎಲ್ಲ ಕೆಡುಕುಗಳ ಮೊತ್ತಒಳಿತುಗಳ ಮೊತ್ತಕ್ಕೆ ಸರಿಹೊಂದಿಸಿನಿನ್ನ ನೋವನ್ನು ಕ್ಷೀಣಿಸಲಿ.ವಿಷವು ನಿನ್ನ ದೈಹಿಕ ಬಯಕೆಗಳನ್ನುಮತ್ತು ನಿನ್ನ ಮಹತ್ವಾಕಾಂಕ್ಷೆಗಳನ್ನು ಶುದ್ಧೀಕರಿಸಲಿಅವರೆಂದರು, ಮತ್ತೂ ನನ್ನ ಅಮ್ಮನ ಸುತ್ತಲೂಅವರು ನೆಲದ ಮೇಲೆ ಕುಳಿತುಕೊಂಡರುಮುಖದಲ್ಲಿ ಪೂರ್ಣ ಅರಿವಿನ ಶಾಂತಿ ಹೊತ್ತು.ಮತ್ತಷ್ಟು ಮೊಂಬತ್ತಿಗಳು, ಮತ್ತಷ್ಟು ಲಾಟೀನುಗಳು, ಮತ್ತಷ್ಟು ನೆರೆಯವರುಮತ್ತಷ್ಟು ಕೀಟಗಳು, ಮತ್ತೂ ಕೊನೆಯಿರದ ಮಳೆ.ನನ್ನ ಅಮ್ಮ ಚಾಪೆಯ ಮೇಲೆಉರುಳುತ್ತ ನರಳುತ್ತ ಸಂಕಟ ಪಟ್ಟಳು.ಅಪ್ಪ, ಸಂದೇಹಿ, ತರ್ಕವಾದಿ,ವರ, ಶಾಪ, ಪುಡಿ, ಮಿಶ್ರಣ, ನಾರುಬೇರುಎಲ್ಲವನ್ನೂ ಪ್ರಯತ್ನಿಸುತ್ತಿದ್ದಚೇಳು ಕಚ್ಚಿದ ಜಾಗಕ್ಕೆ ಸ್ವಲ್ಪ ಪೇರಫಿನ್ ಸುರಿದುಕಡ್ಡಿಯನ್ನೂ ಗೀರಿದ.ಅದರ ಬೆಂಕಿಯಲ್ಲಿ ಅಮ್ಮ ಜ್ವಲಿಸುವುದ ನೋಡಿದೆ.ಪೂಜಾರಿಯೊಬ್ಬ ಮಂತ್ರ ಪಠಿಸಿ ವಿಷವ ತಡೆಯಲು ಮಾಡುತ್ತಿದ್ದ ಆಚರಣೆ ನೋಡಿದೆ.ಇಪ್ಪತ್ತು ತಾಸುಗಳ ನಂತರಕಡಿತದ ವಿಷ ಹೋಯಿತು. ಅಮ್ಮ ಮಾತ್ರ ಇಷ್ಟೇ ಹೇಳಿದಳುದೇವರ ದಯದಿಂದ ಚೇಳು ನನ್ನ ಕಡಿಯಿತುಮಕ್ಕಳನ್ನಲ್ಲ. ******* The Night of the Scorpion” I remember the night my motherwas stung by a scorpion. Ten hoursof steady rain had driven himto crawl beneath a sack of rice. Parting with his poison – flashof diabolic tail in the dark room –he risked the rain again. The peasants came like swarms of fliesand buzzed the name of God a hundred timesto paralyse the Evil One. With candles and with lanternsthrowing giant scorpion shadowson the mud-baked wallsthey searched for him: he was not found.They clicked their tongues.With every movement that the scorpion made his poison moved in Mother’s blood, they said. May he sit still, they saidMay the sins of your previous birthbe burned away tonight, they said.May your suffering decreasethe misfortunes of your next birth, they said.May the sum of all evilbalanced in this unreal world against the sum of goodbecome diminished by your pain.May the poison purify your flesh of desire, and your spirit of ambition,they said, and they sat aroundon the floor with my mother in the centre,the peace of understanding on each face.More candles, more lanterns, more neighbours,more insects, and the endless rain.My mother twisted through and through,groaning on a mat.My father, sceptic, rationalist,trying every curse and blessing,powder, mixture, herb and hybrid.He even poured a little paraffinupon the bitten toe and put a match to it.I watched the flame feeding on my mother.I watched the holy man perform his rites to tame the poison with an incantation.After twenty hoursit lost its sting. My mother only saidThank God the scorpion picked on meAnd spared my children. — Nissim Ezekiel *********

ಅನುವಾದ ಸಂಗಾತಿ Read Post »

ಕಾವ್ಯಯಾನ

ನಿನ್ನ ಮೌನಕೆ ಮಾತ…

ನಿನ್ನ ಮೌನಕೆ ಮಾತ….…… ಜಯಕವಿ ಡಾ.ಜಯಪ್ಪ ಹೊನ್ನಾಳಿ ನಿನ್ನ ಮೌನಕೆ ಮಾತ ತೊಡಿಸಬಲ್ಲೆನು ನಾನು ನೀ ಹೇಳದಿರೆ ಮುಗುಳು ತುಟಿಯ ತೆರೆದು..! ಹೂಗನಸುಗಳ ಬರೆದು ನಿನ್ನ ಕಣ್ಣಲೆ ಒರೆದು ಚೈತ್ರ ಚಿಗಿದಿದೆ ತಾನು; ಚಿಗರೆ ನೆರೆದು..! ಕಡಿದ ಬುಡದಲೆ ನೆನಪು ಹೊಂಬಾಳೆಯಾಗುತಿವೆ ಕತ್ತರಿಸಿದೆಡೆಯೆ; ತತ್ತರಿಸುತೆದ್ದು..! ವಿಧಿಯು ಮರೆತಿದೆ ಜಿದ್ದು ನೋವು ಸೇರಿದೆ ಗುದ್ದು ಆನಂದ ಬಾಷ್ಪಕಿದೆ ಬೆರಗ ಮುದ್ದು..! ಹೊಸ ಹಾದಿ ಹಾರೈಸಿ ಹೊಸ ಬೆಳಕು ಕೋರೈಸಿ ಹೊಸ ಜೀವ ಭಾವದಲಿ ಯುಗಳ ವಾಣಿ..! ಬೀಸಿದೆಲರಲೆ ಯಾನ ತಾರೆಗಳೆ ಬಹುಮಾನ ಕಡಲೊಡಲಿನಲಿ ಒಲವ ಚಂದ್ರ ದೋಣಿ..! ************

ನಿನ್ನ ಮೌನಕೆ ಮಾತ… Read Post »

ಕಾವ್ಯಯಾನ

ಜಾತಿ ಬೇಡ

ನಿರ್ಮಲಾ ಆರ್. ಜಾತಿ ಬೇಡ” ಮಡಿ ಮಡಿ ಅಂತ ಮೂರು ಮಾರು ಸರಿಯುವಿರಲ್ಲ ಮೈಲಿಗೆಯಲ್ಲೆ ಬಂತು ಈ ಜೀವ ಎನ್ನುವುದ ಮರೆತಿರಲ್ಲ ಜಾತಿ ಬೇಡ,ಜಾತಿ ಬೇಡ ಎಂದು ಬೊಬ್ಬೆ ಹೊಡೆಯುವಿರಲ್ಲ ಜಾತಿ ಬೇಡ ಎಂದ ಮಹಾತ್ಮರನ್ನೆ ಜಾತಿಗೆ ಸೇರಿಸಿ ಮೆರೆಸುತಿರುವಿರಲ್ಲ ಪವಿತ್ರವಾದ ಜ್ಞಾನ ದೇಗುಲಗಳಲ್ಲಿ ಜಾತಿ ರಾಜಕೀಯ ಮೀಲಾಯಿಸುವಿರಲ್ಲ ಜಾತಿ ಕಾರ್ಯಗಳಿಗೆ ಮುಗ್ದ ಮನಸುಗಳ ಬಳಸಿ ಜಾತಿಯ ವಿಷಬೀಜ ಬಿತ್ತುತಿರುವಿರಲ್ಲ. ಜಾತಿ ಬೇಡ ಜಾತಿ ಬೇಡ ಎಂದು ಜಾತಿ ಗಣನೆ ಮಾಡಿಸಿ ಧರ್ಮದ ಹೆಸರಲಿ ವೋಟ್ ಬ್ಯಾಂಕಿನ ಬೇಳೆ ಬೇಯಿಸಿಕೊಳ್ಳುವಿರಲ್ಲ ಜಾತ್ಯಾತೀತ ರಾಷ್ಟ್ರದ ಕಲ್ಪನೆಯ ಬಗೆಗೆ ಗಂಟೆಗಟ್ಟಲೆ ಭಾಷಣ ಬಿಗಿಯುವಿರಲ್ಲ ಬಾಪೂ ಅಂದು ಗುಂಡಿಕ್ಕಿ ಮಾಡಿದರು ನಿನ್ನ ಹತ್ಯೆ ಇಂದು ಮಾಡುತಿಹರು ನಿನ್ನ ರಾಮರಾಜ್ಯದ ಕಲ್ಪನೆಯ ಹತ್ಯೆ ಕ್ಷಮಿಸಿಬಿಡು ಮಹಾತ್ಮ ಬಹುಶಃ ನೊಂದು ಕೊಳ್ಳುತ್ತಿರಬಹುದು ನಿನ್ನಾತ್ಮ. *******

ಜಾತಿ ಬೇಡ Read Post »

ಇತರೆ

ಅಲೆಮಾರಿ ಬದುಕು

ಇಲ್ಲಗಳ ನಡುವಿನ ಅಲೆಮಾರಿ ಬದುಕು ಕೆ.ಶಿವು ಲಕ್ಕಣ್ಣವರ ಸ್ವಾತಂತ್ರ ‌ಭಾರತದಲ್ಲಿ ಇಲ್ಲಗಳ ನಡುವೆಯೇ ಅಲೆಮಾರಿ ಬದುಕು ಬದುಕುತ್ತಿರುವ ಬಸವಳಿದ ಜನ..! ವಾಸಿಸಲು ಮನೆ ಇಲ್ಲ, ವಿದ್ಯುತ್‌ ಇಲ್ಲ, ಕುಡಿಯಲು ನೀರಿಲ್ಲ, ಓಡಾಡಲು ರಸ್ತೆ ಇಲ್ಲ, ಇತರೆ ಸರ್ಕಾರದ ಸೌಲಭ್ಯಗಳು ಇಲ್ಲವೇ ಇಲ್ಲ. ಹೀಗೆ ಇಲ್ಲಗಳ ನಡುವೆಯೇ ಅಲೆಮಾರಿ ಕುಟುಂಬಗಳು ಬದುಕು ಸಾಗಿಸುತ್ತಿವೆ… ಊರಿನ ಹೊರ ವಲಯದಲ್ಲಿ ಬದುಕು ಸಾಗಿಸುವ ನೂರಾರು ಅಲೆಮಾರಿ ಕುಟುಂಬಗಳು ಸೇರಿದಂತೆ ಇತರೆ ಕುಟುಂಬಗಳು ವಾಸಿಸುತ್ತವೆ. ಊರೂರು ಅಲೆಯುವ ಈ ಕುಟುಂಬಗಳು ಅಲೆಮಾರಿ ಜೀವನ‌ ನಡೆಸುತ್ತವೆ… ಸುಡುಗಾಡಸಿದ್ಧರು, ಬುಡ್ಗಜಂಗಮ್ಮ, ಸಿಂದೋಳು, ಹಕ್ಕಿಪಿಕ್ಕಿ, ಸಿಳ್ಳೆಕ್ಯಾತ ಸೇರಿದಂತೆ ಕೊರಚರು ಸಮಾಜದ ಕುಟುಂಬಗಳು, ಹಾಗೂ ನಗರದಲ್ಲಿ ರಸ್ತೆ ಅಗಲಿಕರಣದ ವೇಳೆ ನಿರಾಶ್ರಿತರಾದ ದಲಿತರು, ಅಲ್ಪಸಂಖ್ಯಾತ ಸಮುದಾಯದ ಹೀಗೆಯೇ ನೂರಾರು ಕುಟುಂಬಗಳು ಈಗ ಎದುರಿಸುತ್ತಿರುವ ಸಮಸ್ಯೆಗಳು ಅವರಿಗಲ್ಲದೇ ಮತ್ಯಾರಿಗೂ ಅರ್ಥವಾಗುತ್ತಿಲ್ಲ… ದೇವರೇ ಭೂಮಿಗಿಳಿದು ಬಂದು ಸರಿ ಮಾಡಿದರೂ ಸರಿಯಾಗದಷ್ಟು ಘೋರ ಸಮಸ್ಯೆಗಳನ್ನು ಈ ಅಲೆಮಾರಿಗಳು ಎದುರಿಸುತ್ತಿದ್ದಾರೆ. ಯಾವೂರಿಂದ ಬಂದಿದ್ದಾರೋ ಇವರಿಗೂ ಗೊತ್ತಿಲ್ಲ. ಹೊಟ್ಟೆ ಪಾಡಿಗಾಗಿ ಅಲೆಯುತ್ತಾ, ಅಲೆಯುತ್ತಾ ನಗರ, ಹೀಗೆಯೇ ಗ್ರಾಮಗಳಿಗೆ ಬಂದು ನೆಲೆ ನಿಂತಿದ್ದೇವೆ ನೆಲೆ ನಿಂತಿದ್ದೇವೆ ಅನ್ನುವ ಈ ಕಡುಬಡವ ಬದುಕು ಬಾಳುತ್ತಿರುವ ಈ ಜನಾಂಗಗಳು ಬಂದಲ್ಲಿ, ಹೋದಲ್ಲಿ ಹರಕು-ಮುರುಕು ಟೆಂಟ್‌ ಹಾಕಿಕೊಂಡು ಭಯದ ವಾತಾವರಣದಲ್ಲಿ ವಾಸಿಸುತ್ತಿದ್ದೇವೆ ಎನ್ನುವುದೇ ಇವರ ಸಮುದಾಯದ ಹಿರಿಯರ‌ ಪರಿಪಾಟವಾಗಿದೆ… ಹೀಗೆಯೇ ಬದುಕುವ ಈ ಕುಟುಂಬಗಳಿಗೆ ಅವರ ಹೆಸರಿನ ಪಟ್ಟಾ ಇದೆ. ಇನ್ನೂ ಕೆಲವು ಕುಟುಂಬಗಳಿಗೆ ವಾಸಿಸುವ ನೆಲದ ಪಟ್ಟಾ ಇಲ್ಲವೇ ಇಲ್ಲಾ. ನಗರಗಳಲ್ಲಿ ವಾಸಿಸುವ ಕೆಲವರಿಗೆ ನಗರಸಭೆಯಿಂದ ವಿವಿಧ ವಸತಿ ಯೋಜನೆಯಡಿ ಮನೆಗಳು ದೊರೆತಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ‌ವಾಸಿಸುವ ಜನರೂ ಸೇರಿದಂತೆ ಈ ಎಲ್ಲ ಸಮುದಾಯಕ್ಕೆ ಇನ್ನೂ ಸೂರಿನಭಾಗ್ಯ ಇಲ್ಲದಂತಾಗಿದೆ… ಊರೂರು ಅಲೆಯುತ್ತ ಬಂದಿರುವ ಇವರ ಪೂರ್ವಜರಾಗಲಿ ಈಗಿರುವ ಸಮುದಾಯದ ಜನರಾಗಲಿ ಯಾರೂ ಶಾಲೆಗೆ ಹೋಗಿಲ್ಲ! ಎಲ್ಲರೂ ಅವಿದ್ಯಾವಂತರೇ. ಕೆಲವೇ ಆಶ್ರಯ ಕಾಲೋನಿಯಲ್ಲಿ ತಾತ್ಕಾಲಿವಾಗಿ ನಿರ್ಮಿಸಿರುವ ಸರ್ಕಾರಿ ಟೆಂಟ್‌ ಶಾಲೆಗೆ ಹೋಗುತ್ತಿದ್ದಾರೆ. ಇನ್ನೂ ಕೆಲವು ಮಕ್ಕಳು ಶಾಲೆಯಿಂದ ದೂರವೇ ಉಳಿದಿದ್ದಾರೆ… 310 ಕುಟುಂಬಗಳು: ಸುಡುಗಾಡಸಿದ್ಧರು, ಬುಡ್ಗಜಂಗಮ್ಮ, ಸಿಂದೋಳು, ಸಿಳ್ಳೆಕ್ಯಾತ ಸೇರಿದಂತೆ ಕೊರಚರು ಸಮಾಜದ 180 ಕುಟುಂಬಗಳು ಸೇರಿದಂತೆ ದಲಿತರು, ಅಲ್ಪಸಂಖ್ಯಾತ ಸಮುದಾಯದ ಸುಮಾರು 130 ಕುಟುಂಬಗಳು ಕುಟುಂಬಗಳು ಟೆಂಟ್‌ಗಳಲ್ಲಿ ವಾಸವಾಗಿವೆ. ನಗರದ ಗುಡಿಗುಂಡಾರಗಳಲ್ಲಿ ಇರುವ ಈ ಕುಟುಂಬಗಳಿಗೆ 8 ವರ್ಷಗಳ ಹಿಂದೆ ಕೆಲವಂದಿಷ್ಟು ಅನ್ನುವುದಿಕ್ಕಿಂತ ಯಾವ ಕುಟುಂಬಗಳಿಗೂ ಪಟ್ಟಾ ದೊರೆತಿದೆ. ಇನ್ನು ಸುಮಾರು 214 ಕುಟುಂಬಗಳಿಗೆ ಪಟ್ಟಾ ದೊರೆತಿರುವುದು ಕನಸಿನ ಮಾತಾಗಿದೆ. ಪಟ್ಟಾ ದೊರೆತಿರುವ ಕೆಲ ಕುಟುಂಬಗಳಿಗೆ ಸ್ವಂತ ಮನೆ ಕಟ್ಟಿಕೊಳ್ಳುವ ಭಾಗ್ಯವೇ ಇದುವರೆಗೂ ದೊರೆತಿಲ್ಲ… ಕೆಲವರಿಗೆ ಮನೆ ಬಂದರೂ ಪೂರ್ಣಗೊಳ್ಳದೇ ಅರ್ಧಕ್ಕೆ ನಿಂತಿವೆ ಆಶ್ರಯ ಮನೆಗಳು. ನಿಮಗೆ ಮನೆ ಬಂದಿವೆ ಎಂದು ಯಾರೋ ಹೇಳಿದ್ದರಿಂದ ಕೆಲವೇ ಈ ಜನರು ಮನೆ ಕಟ್ಟಲು ಬೇಕಾಗುವ ಹೆಂಚು, ಇಟ್ಟಿಗೆಗಳನ್ನು ತಂದಿಟ್ಟುಕೊಂಡಿದ್ದರು. ಐದು ವರ್ಷಗಳಾದರೂ ನಿವೇಶನ ಮಂಜೂರಾಗದೇ ಮನೆ ಕಟ್ಟುವ ಸಾಮಗ್ರಿಗಳು ಹಾಳಾಗಿ ಹೋದವು ಎನ್ನುತ್ತಾರೆ ಕುಟುಂಬದ ಹಿರಿಯರು… ಇದೀಗ ವಾಸಿಸುವ ಜಾಗದಲ್ಲಿ ಹಾವು, ಚೇಳು ಓಡಾಡುತ್ತವೆ. ರಸ್ತೆ, ಚರಂಡಿಗಳಿಲ್ಲ. ಯಾರೂ ಇವರಿಗೆ ಸೌಲಭ್ಯ ಒದಗಿಸಲು ಮುಂದಾಗಿಲ್ಲ. ಮುಂದಾಗುವುದೂ ಇಲ್ಲ… ಆಶ್ರಯ ಕಾಲೋನಿಯು ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕಗಳಲ್ಲಿ ವಾಸಿಸುವ ಈ ಜನರು ಹೊಸಪೇಟೆ ಹಾಗೂ ಬಳ್ಳಾರಿಗೆ ಸಂರ್ಪಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡುವ ಮೈನಿಂಗ್‌ ಲಾರಿಗಳು ಹಾಗೂ ಭಾರಿ ವಾಹನದಿಂದ ಕಾಲೋನಿಯಲ್ಲಿ ಸುಮಾರು ಕೆಲವಾರು ಜನರಿಗೆ ಆಸ್ತಮ ಕಾಯಿಲೆಯಿಂದ ಬಳಲಿದರೆ, ಕೆಲವರು ಮೃತಪಟ್ಟಿದ್ದಾರೆ… ನಗರ ಸಭೆ ಅಥವಾ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಈ ಜನರು ಜನ ಪ್ರತಿನಿಧಿಗಳಿಗೆ ಹೇಳಿದರೆ ಯಾವುದೇ ಪ್ರಯೋಜನವಾಗಿಲ್ಲ. ಕೇವಲ ಚುನಾವಣೆಯಲ್ಲಿ ಭರವಸೆ ನೀಡಿ, ನಂತರ ನಮ್ಮ ಪಾಡು ಕೇಳುವರು ಇರಲ್ಲ ಎಂದು ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಈ ಜನ ಹಿಡಿಶಾಪ ಹಾಕುತ್ತಿದ್ದಾರೆ… ಅಲೆಮಾರಿಗಳ ಸ್ವತಂತ್ರ ಭಾರತದ ಬದುಕು– ಹೀಗೆಯೇ ಅಲೆಮಾರಿಗಳ ಜೀವನ ಸ್ವತಂತ್ರ ಭಾರತದ 76ಕ್ಕೂ ಹೆಚ್ಚು ವರ್ಷಗಳು ಕಳೆದರೂ, ದೇಶದಲ್ಲಿ ಇನ್ನೂ ವರೆಗೂ ಹಲವಾರು ಜಾತಿಗಳು ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಮತ್ತು ಶ್ಯೆಕ್ಷಣಿಕವಾಗಿ ತೀರಾ ಹಿಂದುಳಿದಿವೆ! ಅಭಿವೃದ್ಧಿ ವಂಚಿತ ಸಮಾಜದವರಿಗೆ ಮೀಸಲಾತಿ ಏನ್ನುವುದು ಕೇವಲ ಮೂಗಿನ ಮೇಲೆ ತುಪ್ಪ ಸವರಿದಂತಾಗಿದೆ… ಈ ಕಾಲಘಟ್ಟದಲ್ಲಿ ವಂಚಿತ ಸಮಾಜದ ಪರ ದ್ವನಿ ಎತ್ತುವವರನ್ನು ಗೇಲಿಮಾಡುವ ಜನರೇ ಹೆಚ್ಚು! ವಾಸ್ತವಂಶವೆಂದರೆ ನಮ್ಮ ದೇಶದಲ್ಲಿ ಇಂದಿಗೂ ಯಾರ ಲೆಕ್ಕಕ್ಕೂ ಸಿಗದ ನೂರಾರು ಅಲೆಮಾರಿ, ಬುಡಕಟ್ಟು, ಪಶುಪಾಲಕ ಈ ಸಮುದಾಯಗಳಿವೆ. ಅವರ ಪಾಲಿಗೆ ನ್ಯಾಯ, ಸರ್ಕಾರಿ ಸೌಲಭ್ಯಗಳು ಮರೀಚಿಕೆಯಾಗಿಯೇ ಉಳಿದಿವೆ… ಜಗತ್ತಿನಾದ್ಯಂತ 90 ದೇಶಗಳಲ್ಲಿ 37 ಕೋಟಿ ಮೂಲನಿವಾಸಿ, ಅಲೆಮಾರಿಗಳು ವಾಸಿಸುತ್ತಿದ್ದಾರೆ. ಸುಮಾರು 7,000 ಭಾಷೆಗಳಲ್ಲಿ ಮಾತನಾಡುವ ಇವರು, 5,000 ವಿಭಿನ್ನ, ಅನನ್ಯ ಸಂಸ್ಕೃತಿಗಳನ್ನು ಪ್ರತಿನಿಧಿಸುತ್ತಾರೆ. ನಮ್ಮರಾಜ್ಯದಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ 51, ಪರಿಶಿಷ್ಟ ಪಂಗಡದಲ್ಲಿ 23, ಒಬಿಸಿ ಪಟ್ಟಿಯಲ್ಲಿ 46 ಅಲೆಮಾರಿ ಸಮುದಾಯಗಳಿವೆ… ಇದರಲ್ಲಿ ಸೂಕ್ಷ್ಮ ಜಾತಿಗಳು, ಅತಿಸೂಕ್ಷ್ಮ ಮೂಲ ನಿವಾಸಿಗಳು ಹಾಗೂ ಅಸ್ಮಿತೆಯೇ ಇಲ್ಲದ ಈ ಜನ ಸಮುದಾಯಗಳೂ ಸಹ ಸೇರಿವೆ… ಅಲೆಮಾರಿಗಳ ಶೋಚನಿಯ ಸ್ಥಿತಿ ನೋಡಿದಾಗ ವೈವಿಧ್ಯಮಯ ಭಾರತದ ಶ್ರೀಮಂತ ಸಂಸ್ಕೃತಿಯ ಬೇರುಗಳು ಬುಡಸಮೇತ ಕಳಚಿ ಹೋಗುತ್ತಿವೆಯೇ ಎನಿಸುತ್ತದೆ. ಗೋಂಧಳಿ, ಬುಡಬುಡಕಿ, ಗೌಳಿ, ಕಾಡುಗೊಲ್ಲ, ಶಿಕ್ಕಲಿಗಾರನಂತಹ ಅಲೆಮಾರಿಗಳು, ಕೊರಗ, ಜೇನುಕುರುಬ, ಆದಿಮ ಬುಡಕಟ್ಟುಗಳ ದುಸ್ತರ ಬದುಕೇ ಇದಕ್ಕೆ ಸಾಕ್ಷಿಯಾಗಿದೆ… ಮಾಂಗ್ ಗಾರುಡಿ, ಫಾರ್ದಿ, ಚಪ್ಪರ್‌ಬಂದ್, ಗಂಟಿಚೋರ್, ಡುಂಗ್ರಿ ಗರಾಸಿಯಾ, ಹಕ್ಕಿಪಿಕ್ಕಿ ಮುಂತಾದ ಬುಡಕಟ್ಟುಗಳು ಚಿಂತಾಜನಕ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿವೆ. ಅಲೆಮಾರಿಗಳ ಜಗತ್ತಿನ ಒಳಹೊಕ್ಕು ನೋಡದ ಹೊರತು ಈ ಸಮುದಾಯದವರ ಬವಣೆ ಅರ್ಥವಾಗದು… ಪ್ರಾದೇಶಿಕ ಮಿತಿ ಹೊಂದಿರುವ ಕಮ್ಮಾರ, ಕಣಿಯನ್, ಸಿದ್ಧಿಯಂಥ ಪರಿಶಿಷ್ಟ ಪಂಗಡಗಳು ಅಭದ್ರತೆಯ ಬದುಕು ಸವೆಸುತ್ತಿವೆ. ಉತ್ತರ ಕನ್ನಡ ಮತ್ತು ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ವಾಸವಿರುವ ಈ ಸಿದ್ಧಿಗಳು ಎಸ್‍ಟಿ ಪಟ್ಟಿಯಲ್ಲಿದ್ದಾರೆ. ಪಕ್ಕದ ಧಾರವಾಡ, ಬೆಳಗಾವಿಯಲ್ಲಿನ ಸಿದ್ಧಿ ಕುಟುಂಬಗಳಿಗೆ ಎಸ್‍ಟಿ ಸೌಲಭ್ಯ ಸಿಗುವುದಿಲ್ಲ. ಪ್ರತ್ಯೇಕ ಜಾತಿ ಅಸ್ಮಿತೆ ಹಾಗೂ ಸಂವಿಧಾನಬದ್ಧವಾದ ವರ್ಗೀಕೃತ ಸ್ಥಾನಮಾನ ಪಡೆಯಲಾಗದ ಧನಗರ ಗೌಳಿ, ಶಿಕ್ಕಲಿಗಾರ, ಕಾಡುಗೊಲ್ಲದಂತಹ ಅತಂತ್ರ ಸಮುದಾಯಗಳೂ ಇವೆ… ಇನ್ನೂ ಗೋಂಧಳಿ, ಜೋಷಿ, ಬುಡಬುಡಕಿ ಮತ್ತು ವಾಸುದೇವ ಜಾತಿಗಳ ಜನರ ಸಮಸ್ಯೆ ಕೇಳತೀರದು! ಮೂಲತಃ ಶಿವಾಜಿ ಮಹಾರಾಜರ ಆಸ್ಥಾನದಲ್ಲಿ ಗುಪ್ತಚರರಾಗಿ ಶ್ರದ್ಧೆಯಿಂದ ಕಾರ್ಯ ನಿರ್ವಹಿಸುತ್ತಿದ್ದ ಈ ಸಮಾಜ, ವ್ಯೆರಿ ರಾಜರೂಗಳ ರಾಜ್ಯದಲ್ಲಿ ನಡೆಯುವ ಪ್ರತಿಯೊಂದು ಮಾಹಿತಿಯನ್ನು ಕಲೆ ಹಾಕಿ ನೇರವಾಗಿ ಶಿವಾಜಿ ಮಹಾರಾಜರಿಗೆ ಹೇಳುತ್ತಿದ್ದರು. ವ್ಯೆರಿ ರಾಜ್ಯದ ಸ್ಯೆನಿಕರಿಗೆ ಸಂಶಯ ಬರಬಾರದು ಎನ್ನುವ ಅಲೋಚನೆಯಿಂದ ದೇವರ ಹಾಡುಗಳನ್ನು ಹಾಡುತ್ತ ಅಲೆಯುತ್ತಿದ್ದರು… ಶಿವಾಜಿ ಮಹಾರಾಜರ ಸಂಸ್ಥಾನದ ಅವನತಿ ನಂತರ ಈ ಸಮಾಜದ ಜನರು ಅನಾಥರಾದರು. ಆಗಲೇ ತಮ್ಮ ಮೂಲ ಸ್ಥಾನ ಬಿಟ್ಟು ಬೇರೆ ಬೇರೆ ರಾಜ್ಯಗಳಲ್ಲಿ ಗುಡಚರ್ಯೆ ಮಾಡುತ್ತಿದ್ದವರು, ಮರಾಠಾ ಸಾಮ್ರಾಜ್ಯ ಅವನತಿ ನಂತರ ಅಲೆಮಾರಿಗಳಾಗಿ ತಮ್ಮ ಹೊಟ್ಟೆ ಪಾಡಿಗಾಗಿ ದೇವಿಯ ಆರಾಧನೆ ಮಾಡಿ ಗೋಂಧಳ ಹಾಕುವುದು, ಜ್ಯೋತಿಷ್ಯ ವೃತ್ತಿ, ಪಾತ್ರೆ ವ್ಯಾಪಾರ, ಮತ್ತು ಕೌದಿ ಹೋಲೇವುದನ್ನು ತಮ್ಮ ಕಾಯಕನ್ನಾಗಿಸಿಕೊಂಡರು… ಮಹಾರಾಷ್ರ, ಕರ್ನಾಟಕ ಮತ್ತು ಗೋವಾ ರಾಜ್ಯಗಳಲ್ಲಿ ಹೆಚ್ಚಾಗಿ ಕಂಡು ಬರುವ ಈ ಸಮುದಾಯಕ್ಕೆ ಕರ್ನಾಟಕದಲ್ಲಿ ಪ್ರವರ್ಗ -1 ರ ಮೀಸಲಾತಿಯನ್ನು ರಾಜ್ಯ ಸರ್ಕಾರ ಕಲ್ಪಿಸಿದೆ. ನಿಜ ಅರ್ಥದಲ್ಲಿ ಅಲೆಮಾರಿಯಾದ ಈ ಸಮುದಾಯವನ್ನು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಅನೇಕ ಆಯೋಗಗಳು ಸರ್ಕಾರಕ್ಕೆ ತಮ್ಮ ವರದಿಗಳನ್ನು ಸಲ್ಲಿಸಿದ್ದಾರಾದರೂ ಇನ್ನೂ ಪ್ರಯೋಜನವಾಗಿಲ್ಲ… ಪಶುಪಾಲನೆ ಕಸುಬಿನ ಧನಗರ ಗೌಳಿ ಸಮುದಾಯವು ರಾಜ್ಯದಲ್ಲಿ ಗೌಳಿ, ಹಿಂದೂ ಧನಗರ, ಧನಕರ ಗೌಳಿ, ಕಾಡು ಗೌಳಿ, ಧನಗರ ಮರಾಠಿ, ಕೃಷ್ಣ ಮರಾಠಿ, ಕಚ್ಚೆ ಗೌಳಿ ಮುಂತಾದ ಹಲವು ಹೆಸರುಗಳಲ್ಲಿ ಜಾತಿ ಪ್ರಮಾಣ ಪತ್ರಗಳನ್ನು ಪಡೆಯುತ್ತಿವೆ. ಅಲ್ಲದೇ ಪ್ರವರ್ಗ 1, ಪ್ರವರ್ಗ 2, ಪ್ರವರ್ಗ 3ಬಿ ಇತ್ಯಾದಿ ಕೆಟಗರಿಗಳಲ್ಲಿ ಗುರುತಿಸಿಕೊಂಡಿವೆ. ಈ ವರ್ಗಕ್ಕೆ ಸಂವಿಧಾನಬದ್ಧವಾದ ವರ್ಗಿಕೃತ ಸ್ಥಾನಮಾನವು ಇನ್ನೂ ಇಲ್ಲದಂತಾಗಿದೆ… ಶಿಕ್ಕಲಿಗಾರ ಕೂಡ ಶಿಕ್ಕಲಿಗ, ಶಿಕ್ಲಿಗ, ಶಿಕ್ಕಲಿಗರ, ಚಿಕ್ಕಲಿಗೆರ್ ಹೆಸರುಗಳೊಂದಿಗೆ ಅಸ್ಮಿತೆಗಾಗಿ ತಡಕಾಡುತ್ತಿವೆ. ಹೀಗೆ ಹಲವಾರು ಅಲೆಮಾರಿಗಳನ್ನು ಹತ್ತಾರು ಹೆಸರುಗಳಲ್ಲಿ ಗುರುತಿಸುವುದರಿಂದ ಜಾತಿ ಪ್ರಮಾಣಪತ್ರ ಮತ್ತು ಸರ್ಕಾರದ ಸೌಲಭ್ಯಗಳನ್ನು ಪಡೆಯುವುದೇ ಸವಾಲಾಗಿದೆ. ಇಂಥ ಸಮುದಾಯಗಳಿಗೆ ಪ್ರಬಲ ಜಾತಿಯವರೊಂದಿಗೆ ಹೋರಾಡುವ ಶಕ್ತಿಯೂ ಇಲ್ಲ. ವೋಟ್ ಬ್ಯಾಂಕ್ ಲೆಕ್ಕಾಚಾರ ಮಾಡುವ ರಾಜಕಾರಣಿಗಳಿಗೆ ಇಂಥ ಸಣ್ಣಸಮುದಾಯಗಳು ಮುಖ್ಯ ಎನಿಸುವೂದು ಇಲ್ಲ… ಹೀಗಿರುವಾಗ ಈ ಡಿಜಿಟಲ್ ಕಾಲಘಟ್ಟದಲ್ಲಿ ಭಾರತವು ನಿಜವಾಗಿಯೂ ಪ್ರಗತಿ ಕಂಡಿವೆಯೇ ಈ‌ ಜನ ಸಮುದಾಯ ಎಂಬ ಪ್ರಶ್ನೆ ಕಾಡದಿರದು… ಪ್ರಕೃತಿ ಸಹಜ ಜೀವನ ನಡೆಸುವ ಅಲೆಮಾರಿಗಳು ಮೂಲತಃ ಕಾಡಿನ ಮಕ್ಕಳು. ಆಧುನಿಕತೆಯ ಕೆನ್ನಾಲಗೆ, ಜಾಗತೀಕರಣದ ಹೊಟ್ಟೆಬಾಕತನದಲ್ಲೂ ದೇಶೀಯ ಗಟ್ಟಿತನ, ತಮ್ಮತನ ಸಾರುವ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಉಳಿಸಿಕೊಂಡಿದ್ದಾರೆ. ಪ್ರಾದೇಶಿಕ ಅಸ್ಮಿತೆಗೆಕೊಡಲಿ ಪೆಟ್ಟು ಬಿದ್ದರೆ ಅಲೆಮಾರಿಗಳಿಗೆ ಉಳಿಗಾಲವಿಲ್ಲ. ದೇಶದ ಉದ್ದಗಲಕ್ಕೂ ತಿರುಗಾಡಿ ಭಾರತದ ನಾಡಿಮಿಡಿತ ಅರಿತಿದ್ದ ಗಾಂಧೀಜಿ ಇವೆಲ್ಲವನ್ನೂ ಗಮನಿಸಿಯೇ ‘ಗ್ರಾಮ ಸ್ವರಾಜ್ಯ’ದ ಚಿಂತನೆ ಬಿತ್ತಿರಬಹುದು… ಸೆಟ್ಲಮೆಂಟ್ (ವಸಾಹತು) ಕುರಿತು ಹೇಳದಿದ್ದರೆ ಕರ್ನಾಟಕದ ಅಲೆಮಾರಿಗಳ ಚರಿತ್ರೆ ಅಪೂರ್ಣವಾಗುದು. ಇಲ್ಲಿ ಪ್ರತಿನಿತ್ಯ ಬದುಕಿ ಸಾಯುತ್ತಿರುವ ನೂರಾರು, ಸಾವಿರಾರು ಜೀವಗಳ ಬದುಕು-ಬವಣೆಗಳ ಬಂಧನವಿದೆ. ಸೆಟ್ಲಮೆಂಟ್ ಎಂಬುದು ಬ್ರಿಟಿಷರ ಒಡೆದು ಆಳುವ ನೀತಿಯ ಫಲ. ಈ ಸಮುದಾಯದವರನ್ನು ಸಮಾಜಘಾತುಕರು, ಕಳ್ಳರು, ಅಪರಾಧಿಗಳು, ದೇಶದ್ರೋಹಿಗಳು ಎಂಬ ಹಣೆಪಟ್ಟಿ ಕಟ್ಟಿ ತಂತಿಬೇಲಿಯೊಳಗೆ ಒಂದು ವ್ಯವಸ್ಥೆ ಸೃಷ್ಟಿಸಿ ಅದರೊಳಗೆ ಬ್ರಿಟಿಷರು ಬಂಧಿಸಿದರು. 1871ರಲ್ಲಿ ಹುಟ್ಟುಪಡೆದ ‘ಕ್ರಿಮಿನಲ್ ಟ್ರೈಬ್ಸ್’ ಚರಿತ್ರೆ, ಸ್ವತಂತ್ರ ಭಾರತದಲ್ಲಿ ಇಂದಿಗೂ ಪ್ರಶ್ನೆಯಾಗಿಯೇ ಉಳಿದಿದೆ! ಬ್ರಿಟಿಷರು ಕೊಟ್ಟ ‘ಕ್ರಿಮಿನಲ್ಸ್’ ಎಂಬ ಲೇಬಲ್‍ನಿಂದಾಗಿ ಈ ಸಮುದಾಯದವರು ಇಂದಿಗೂ ನಮ್ಮ ನಡುವೆ ಕಳಂಕಿತರಾಗಿಯೇ ಬದುಕುತ್ತಿದ್ದಾರೆ… ಕರ್ನಾಟಕದಲ್ಲಿರುವ ಸೆಟ್ಲಮೆಂಟ್‍ಗಳಲ್ಲಿ ಹುಬ್ಬಳ್ಳಿ ಸೆಟ್ಲಮೆಂಟ್ ದೊಡ್ಡದು. ಈ ಸೆಟ್ಲಮೆಂಟ್‌ನಲ್ಲಿ ಕೊರಮ, ಗಂಟಿಚೋರ್, ಭೋವಿ, ಹರಣ್ ಪಾದ್ರಿ, ಕಂಜರಭಾಟ್‌, ಚಪ್ಪರಬಂದ್ ಸಮುದಾಯದವರು ನೆಲೆಸಿದ್ದಾರೆ… ಗದಗ-ಬೆಟಗೇರಿಯ ಸೆಟ್ಲಮೆಂಟ್, ಈ ಸೆಟ್ಲಮೆಂಟ್‌ನಲ್ಲಿ ಕೊರಮ, ,ಚಪ್ಪರಬಂದ್, ಕಂಜರಭಾಟ್, ಪಾರ್ಧಿ ಸಮುದಾಯದವರು ಇದ್ದಾರೆ… ವಿಜಯಪುರದ ಸೆಟ್ಲಮೆಂಟ್‌ನಲ್ಲಿ ಹರಣಶಿಕಾರಿ, ಗಂಟಿಚೋರ, ಚಪ್ಪರಬಂದ್‌ ಸಮುದಾಯಗಳು ಕಂಡುಬರುತ್ತವೆ. ಕಂಜರಭಾಟ್‌, ಕೊರಮ ಮತ್ತು ಮಾಂಗ್ಗಾರುಡಿಗಳು ಮೊದಲಿಗೆ ಇಲ್ಲಿದ್ದು, ತರುವಾಯ ಬೇರೆ ಕಡೆ ಹೋಗಿ ನೆಲೆಸಿದರು… ಬಾಗಲಕೋಟೆಯ ಸೆಟ್ಲಮೆಂಟ್‌ನಲ್ಲಿ ಕೊರಮ, ಗಂಟಿಚೋರ್, ಚಪ್ಪರಬಂದ್, ಪಾರ್ಧಿಗಳು ಕಂಡುಬರುತ್ತಾರೆ… ಗೋಕಾಕ್ ಫಾಲ್ಸ್ ಸೆಟ್ಲಮೆಂಟ್‌ನಲ್ಲಿ ಕೊರಮ ಮತ್ತು ಗಂಟಿಚೋರ್ ಸಮುದಾಯಗಳಿವೆ… ದಾಂಡೇಲಿಯಲ್ಲಿ ಗಂಟಿಚೋರ್ ಸಮುದಾಯವಿದೆ. ಹಿಂದೆ ಕಂಜರಭಾಟ್ ಇದ್ದಿತ್ತೆನ್ನಲಾದರೂ, ಅವರು ಇಂದು ಸೆಟ್ಲಮೆಂಟ್ ಹೊರಗೆ ಹಳೆ ದಾಂಡೇಲಿಯಲ್ಲಿ ಕಂಜರ್ ಭಾಟ್ ಕಾಲೊನಿಯಲ್ಲಿ ನೆಲೆ ನಿಂತಿದ್ದಾರೆ… 2021ರ ವೇಳೆಗೆ ಎಲ್ಲರಿಗೂ ಸ್ವಂತ ಸೂರು ಕಲ್ಪಿಸುವುದು ಸರ್ಕಾರಗಳ ಗುರಿ. ಈ ಅಲೆಮಾರಿಗಳು ಸರ್ಕಾರದ ಲೆಕ್ಕದಲ್ಲಿದ್ದಾರೆಯೇ? ಇವರ ಬಳಿ ಯಾವುದೇ ದಾಖಲಾತಿಗಳಿಲ್ಲ, ಸ್ವಂತ ನೆಲೆಯಿಲ್ಲ, ಅಧಿಕೃತ ಪಟ್ಟಿಯಲ್ಲಿ ಸ್ಥಾನವಿಲ್ಲ, ರಾಜ್ಯದಲ್ಲಿ ನೆಲೆಸಿದ್ದಾರೆ ಎಂಬುದಕ್ಕೆ ಸಾಕ್ಷ್ಯಾಧಾರಗಳಿಲ್ಲ. ಹೀಗೆಯೇ ‘ಇಲ್ಲ’ಗಳ ನಡುವೆಯೇ ಇವರ ಬಾಳು ಕರಗುತ್ತಿದೆ. ಹೀಗಿರುವಾಗ ಎಲ್ಲಿಯ ಮನೆ? ಎಲ್ಲಿಯ ಸೌಕರ್ಯ? ಎಲ್ಲಿದೆ ಆರೋಗ್ಯ ಸೌಲಭ್ಯ? ಎಲ್ಲಿದೆ ಶಿಕ್ಷಣ…?! ಒಬ್ಬ ಅಲೆಮಾರಿ ಹಿರಿಯಜ್ಜ

ಅಲೆಮಾರಿ ಬದುಕು Read Post »

ಕಾವ್ಯಯಾನ

ಕನ್ನಡಿಗೊಂದು ಕನ್ನಡಿ

ಡಾ.ಗೋವಿಂದ ಹೆಗಡೆ ಕನ್ನಡಿಗೊಂದು ಕನ್ನಡಿ ಕನ್ನಡಿಯೆದುರು ನಿಂತೆ ಬುದ್ದಿ ಕಲಿಸಲೆಂದೇ ಬಿಂಬಕ್ಕೆ- ಹೊಡೆದೆ ಈಗ ಕೆನ್ನೆಯೂದಿದೆ ! •• ಕೋಪದಲ್ಲಿ ಹೋಗಿ ನಿಂತೆ ಕನ್ನಡಿಯೆದುರು ಉರಿದೆ, ಕೂಗಾಡಿದೆ. ಸರಿ- ಬಿಂಬಕ್ಕೆ ಕೋಪ ಬಂದರೆ ಏನು ಮಾಡುತ್ತದೆ ಹೇಗೆ ಇದಿರು ನಿಲ್ಲುತ್ತದೆ ?! **********

ಕನ್ನಡಿಗೊಂದು ಕನ್ನಡಿ Read Post »

ಇತರೆ

ಸಮಾಜಾರ್ಥಿಕ ಘಟಕಗಳು

ಪ್ರಗತಿಗಾಗಿ ಸ್ವಯಂ ಸ್ವಾವಲಂಬಿ ಸಮಾಜಾರ್ಥಿಕ ಘಟಕಗಳು ಗಣೇಶಭಟ್ ಶಿರಸಿ ಭಾರತದ ಆರ್ಥಿಕ ಸ್ಥಿತಿ ಆತಂಕಕಾರಿಯಾಗಿದೆಯೆಂಬುದನ್ನು ಸರ್ಕಾರ ಮತ್ತು ಅದರ ಹಿಂಬಾಲಕರು ಒಪ್ಪಲು ಸಿದ್ಧರಿಲ್ಲ.ಆದರೆ, ಕುಸಿಯುತ್ತಿರುವ ಉದ್ಯೋಗಾವಕಾಶಗಳು, ಕ್ಷೀಣಿಸುತ್ತಿರುವ ಖರೀದಿ ಶಕ್ತಿ, ಜನರನ್ನುಕಾಡುತ್ತಿರುವ ಅಭದ್ರತಾಭಾವ,ಏರುತ್ತಿರುವ ಬೆಲೆಗಳು, ಎಗ್ಗಿಲ್ಲದೇ ನಡೆಯುತ್ತಿರುವ ಬ್ಯಾಂಕ್ ವಂಚನೆಗಳು, ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಗಳಿಂದ ದೇಶ ಬಾಧಿತವಾಗಿರುವುದನ್ನು ದೇಶ, ವಿದೇಶಗಳ ಸಾಮಾಜಿಕ-ಆರ್ಥಿಕ ತಜ್ಞರು ಗಮನಿಸುತ್ತಿದ್ದಾರೆ.ರಾಜಕಾರಣಿಗಳ ಪೊಳ್ಳು ಭರವಸೆಗಳನ್ನೇ ನಂಬಿರುವ ದೇಶದ ನಾಗರಿಕರು ಸಮಸ್ಯೆಗಳ ಪರಿಹಾರದ ನಿರೀಕ್ಷೆಯಲ್ಲಿ ದಿನದೂಡುತ್ತಿದ್ದಾರೆ. ಇಂದಿನ ಸಮಸ್ಯೆಗಳಿಗೆ ರಾಜಕೀಯ ಪಕ್ಷಗಳ ಬಳಿ ಯಾವುದೇ ಪರಿಹಾರವಿಲ್ಲ. ಪರಸ್ಪರರನ್ನು ದೂಷಿಸುವುದೇ ಸಮಸ್ಯೆಗೆ ಪರಿಹಾರವಲ್ಲವೆಂಬುದು ರಾಜಕೀಯ ಪಕ್ಷಗಳ ಧುರೀಣರಿಗೆ ತಿಳಿಯದ ವಿಷಯವಲ್ಲ; ಆದರೆ ಜನರಿಗೆ ಮಂಕುಬೂದಿ ಎರಚಲು ಇತರರನ್ನು ದೂರುವುದೇ ಅವರ ಬಳಿ ಇರುವ ಅಸ್ತ್ರ. ದೇಶದ ಆರ್ಥಿಕ ಸಮಸ್ಯೆಗಳನ್ನು ಪರಿಹರಿಸುವ ಸಾಮಥ್ರ್ಯ ಮತ್ತು ಚಿಂತನೆಗಳು ಬಿಜೆಪಿಯ ಬಳಿ ಇಲ್ಲವೆಂಬುದನ್ನು ಆ ಪಕ್ಷದ ನಡೆಯೇ ಸಿದ್ಧಪಡಿಸುತ್ತದೆ. ಆರ್ಥಿಕ ಸಮಸ್ಯೆಗಳ ಕುರಿತು ಚರ್ಚಿಸುವ, ಸಲಹೆ ಪಡೆಯುವ ಬದಲಿಗೆ ಅನಗತ್ಯ ವಿಚಾರಗಳನ್ನು ಮುನ್ನೆಲೆಗೆ ತರುತ್ತಿರುವ ಬಿಜೆಪಿಯ ನಡೆ, ಅವರ ಚಿಂತನೆಗಳ ಮಿತಿಯನ್ನು ಹಾಗೂ ಸಮಸ್ಯೆಯನ್ನು ಎದುರಿಸಲಾಗದೇ ಓಡಿ ಹೋಗುವ ಮನಃಸ್ಥಿತಿಯನ್ನು ಪ್ರದರ್ಶಿಸುತ್ತಿದ್ದೆ. ಕಾಂಗ್ರೆಸ್ ಸೇರಿದಂತೆ ಇತರ ವಿರೋಧ ಪಕ್ಷಗಳ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ತೊಂಬತ್ತರ ದಶಕದಲ್ಲಿ ಕಾಂಗ್ರೆಸ್ ಬಿತ್ತಿದ ಖಾಸಗೀಕರಣ, ಉದಾರೀಕರಣ, ಜಾಗತೀಕರಣಗಳೆಂಬ ವಿಷ ಬೀಜಗಳು ಇಂದು ಬಲಿತು, ಇಡೀ ಸಮಾಜವನ್ನೇ ಕಾಡಿಸುತ್ತಿವೆ. ಪ್ರತಿಯೊಂದು ಸಮಸ್ಯೆಗೂ ಕಾಂಗ್ರೆಸ್‍ನ್ನೇ ದೂಷಿಸುವ ಬಿಜೆಪಿ ಕಾಂಗ್ರೆಸ್ ಬಿತ್ತಿದ ವಿಷ ಬೀಜಗಳನ್ನೇ ನೀರು, ಗೊಬ್ಬರ ನೀಡಿ ಬೆಳೆಸುತ್ತಿದೆ. ಇವು ಕೇವಲ ಭಾರತಕ್ಕೆ ಮಾತ್ರವಲ್ಲ; ಇಡೀ ಜಗತ್ತಿನ ಆರ್ಥಿಕ ಪ್ರಗತಿಗೆ ಮಾರಕವಾಗಿವೆ. ಜಗತ್ತಿನಲ್ಲಿ ಆರ್ಥಿಕ ತಜ್ಞರಿಗೆ ಕೊರತೆಯಿಲ್ಲ. ಆದರೂ ಸಮಸ್ಯೆಗಳಿಗೆ ಪರಿಹಾರ ಕಾಣುತ್ತಿರಲಿಲ್ಲವೇಕೆ ಎಂಬುದೇ ಯಕ್ಷಪ್ರಶ್ನೆ. ಇದರ ಉತ್ತರ ತುಂಬಾ ಸರಳವಾದರೂ ಒಪ್ಪುವ ಮನಃಸ್ಥಿತಿಯನ್ನು ನಾವಿಂದು ಹೊಂದಿಲ್ಲ. ಕೆಲವೇ ವ್ಯಕ್ತಿ ಮತ್ತು ಸಂಸ್ಥೆಗಳ ಕೈಯಲ್ಲಿಯೇ ಸಂಪನ್ಮೂಗಳ ಹತೋಟಿ ಇರುವುದರಿಂದಲೇ ಸಂಪತ್ತಿನ ಕೇಂದ್ರೀಕರಣವಾಗುತ್ತಿದೆ ಹಾಗೂ ಅದರಿಂದಲೇ ಆರ್ಥಿಕ ಸಮಸ್ಯೆಗಳು ಪಾರಂಭವಾಗಿ ಮುಂದುವರಿಯುತ್ತದೆಯೆಂದು ಬಂಡವಾಳವಾದಿ ಚಿಂತಕರು ಒಪುತ್ತಿಲ್ಲ. ಭೂಮಿ ಮತ್ತು ನೈಸರ್ಗಿಕ ಸಂಪನ್ಮೂಲಗಳು, ಮಾನವ ಸಂಪನ್ಮೂಲ ಹಾಗೂ ಬಂಡವಾಳವನ್ನು ಬಳಸಿ ಉದ್ಯಮಿಗಳು ನಡೆಸುವ ಆರ್ಥಿಕ ಚಟುವಟಿಕೆಗಳಿಂದಾಗಿ ಆರ್ಥಿಕ ಪ್ರಗತಿಯಾಗುತ್ತದೆ ಎಂಬುದು ಬಂಡವಾಳವಾದಿ ಚಿಂತನೆ. ಸಂಪನ್ಮೂಲಗಳನ್ನು ಬಳಸುವ ಸಾಮಥ್ರ್ಯ ಎಲ್ಲರಿಗೂ ಇರುವುದಿಲ್ಲ, ಅದು ಕೆಲವರಿಗೆ ಮಾತ್ರ ಇರುತ್ತದೆಂದು ನಂಬಲಾಗುತ್ತದೆ. ಆದ್ದರಿಂದ ಸಂಪನ್ಮೂಲಗಳ ನಿಯಂತ್ರಣ ಮತ್ತು ಬಳಸುವ ಹಕ್ಕನ್ನು ಕೆಲವರಿಗೆ ಮಾತ್ರ ಮೀಸಲಿಡಲಾಗುತ್ತದೆ. ಇದರ ಪರಿಣಾಮವೆಂದರೆ ಲಾಭ ಗಳಿಕೆಯನ್ನು ಹೆಚ್ಚಿಸುವ ಉದ್ದೇಶ ಹೊಂದಿರುವ ಉದ್ಯಮಿಗಳು, ಕೇಂದೀಕೃತÀ ಉತ್ಪಾದನೆಗೆ ಪ್ರಾಶಸ್ತ್ಯ ನೀಡಿ, ಉತ್ಪಾದನಾ ವೆಚ್ಚ ತಗ್ಗಿಸಲು ಬಯಸುತ್ತಾರೆ.. ಇಂತಹ ಸನ್ನಿವೇಶಗಳಲ್ಲಿ ಸ್ಥಳೀಯ ಸಂಪನ್ಮೂಲಗಳ ಬಳಕೆ ಮೂಲೆಗುಂಪಾಗಿ , ಕಚ್ಚಾವಸ್ತುಗಳೇ ಸಾವಿರಾರು ಕಿ.ಮೀಟರ್ ಪ್ರಯಾಣಿಸುವ ಪ್ರಸಂಗ ಎದುರಾಗುತ್ತದೆ. ಜಗತ್ತಿನ ಎಲ್ಲೆಡೆಯೂ ಸಂಪನ್ಮೂಲಗಳಿವೆ. ಅವುಗಳನ್ನು ಬಳಸುವ ಸಾಮಥ್ರ್ಯವು ಮಾನವರಿಗಿದೆ ಎಂದು ಬಂಡವಾಳವಾದಿ ಚಿಂತನೆ ನಂಬುವುದಿಲ್ಲ. ಇದರ ಪರಿಣಾಮವೆಂದರೆ ಕಚ್ಚಾ ವಸ್ತುಗಳನ್ನು, ಗುರ್ತಿಸುವಲ್ಲಿನ ವೈಫಲ್ಯ ಹಾಗೂ ಗುರ್ತಿಸಿದ ಸಂಪನ್ಮೂಲಗಳ ಅತಿಯಾದ ಬಳಕೆ. ಇಂತಹ ಸನ್ನಿವೇಶದ ಪರಿಣಾಮವೇ ಕೇಂದ್ರೀಕೃತ ಅರ್ಥವ್ಯವಸ್ಥೆ. ಮೇಲ್ಮಟ್ಟದಲ್ಲಿ ರೂಪುಗೊಂಡ ಯೋಜನೆಗಳು ತಳಮಟ್ಟಕ್ಕೆ ಹೇರಲ್ಪಡುತ್ತವೆ. ಕೇಂದ್ರೀಕೃತ ಅರ್ಥವ್ಯವಸ್ಥೆಯಲ್ಲಿ ಲಾಭ ಗಳಿಕೆಯ ಹೆಚ್ಚಳವೇ ಪ್ರಮುಖ ಉದ್ದೇಶವಾಗಿರುವದರಿಂದ,ಉತ್ಪಾದನೆಯೂ ಕೇಂದ್ರೀಕೃತಗೊಳ್ಳುತ್ತದೆ. ಇದರಿಂದಾಗಿ ನಗರೀಕರಣದ ಸಮಸ್ಯೆಗಳು, ಪರಿಸರ ಮಾಲಿನ್ಯ, ಸಾಮಾಜಿಕ ಸಂಘರ್ಷ, ಸಂಪನ್ಮೂಲಲಗಳ ಶೋಷಣೆ, ದುರುಪಯೋಗ ನಿರಂತರವಾಗಿ ನಡೆಯುತ್ತದೆ. ಇದಕ್ಕೆ ಆರ್ಥಿಕ ವಿಕೇಂದ್ರೀಕರಣವೇ ಪರಿಹಾರ. ಆರ್ಥಿಕ ಅಸಮಾನತೆಯ ವಿಷಯದಲ್ಲಿ ಭಾರತಕ್ಕೆ ಎರಡನೇ ಸ್ಥಾನವಿದೆ. ಮೊದಲ ಸ್ಥಾನ ರಷಿಯಾಕ್ಕೆ. ಉಳ್ಳವರು ಮತ್ತು ಇಲ್ಲದವರ ನಡುವಿನ ಕಂದಕದ ಆಳ ಮತ್ತು ಅಗಲ ಹೆಚ್ಚಾಗುತ್ತಲೇ ಇದೆ. ಇದು ಬಂಡವಾಳವಾದಿ ವ್ಯವಸ್ಥೆಯ ಪ್ರಮುಖ ದೋಷವೂ ಹೌದು. ನಮ್ಮ ಆರ್ಥಿಕ ವ್ಯವಸ್ಥೆಯಲ್ಲಿ ಮೂಲಭೂತ ಬದಲಾವಣೆಗಳನ್ನು ಅಳವಡಿಸಿಕೊಳ್ಳದಿದ್ದರೆ, ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಯೊಂದಿಗೆ ಹಲವು ಭಿನ್ನ ಆಯಾಮಗಳ ಅಸಮಾನತೆಯೂ ಜೋಡಣೆಯಾಗಿ ಸಾಮಾಜಿಕ ಸಂಘರ್ಷ, ಅಶಾಂತಿಗೆ ಕಾರಣವಾಗುತ್ತದೆ. ಯಾವುದೇ ದೇಶ, ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕೆಂದರೆ, ದೇಶದ ಮೂಲೆ, ಮೂಲೆಯಲ್ಲೂ ಪ್ರಯೋಜನಕಾರಿ ಆರ್ಥಿಕ ಚಟುವಟಿಕೆ ಗರಿಗೆದರಬೇಕು. ಅಂದರೆ ಸ್ಥಳೀಯ ಸಂಪನ್ಮೂಲಗಳ ಲಭ್ಯತೆಯನ್ನು ಆಧರಿಸಿ ಕೃಷಿ, ಉದ್ಯಮ, ಸೇವಾಕ್ಷೇತ್ರಗಳು ರೂಪುಗೊಳ್ಳಬೇಕು. ಜಗತ್ತಿನ ಪ್ರತಿಯೊಂದು ಪ್ರದೇಶವೂ ಒಂದಿಲ್ಲೊಂದು ವಿಧದ ಸಂಪನ್ಮೂಲವನ್ನು ಹೊಂದಿದೆ. ಅದನ್ನು ಗುರ್ತಿಸುವ ಸಾಮಥ್ರ್ಯ ಮಾನವನಿಗಿದೆ. ಸಮರ್ಪಕವಾಗಿ ಬಳಸುವ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ. ಆರ್ಥಿಕವಾಗಿ ಭಾರತ ಸ್ವಾವಲಂಬಿಯಾಗಿರಬೇಕೆಂದು ಎಲ್ಲಾ ದೇಶಾಭಿಮಾನಿಗಳೂ ಬಯಸುತ್ತಾರೆ. ಘೋಷಣೆಗಳಿಂದ ಪಕ್ಕದ ದೇಶಗಳ ಕುರಿತು ದ್ವೇಷ ಬಿತ್ತನೆಯಿಂದ ಆರ್ಥಿಕ ಸ್ವಾವಲಂಬನೆ ಸಾಧ್ಯವಾಗುವುದಿಲ್ಲ. ಅದು ಕಾರ್ಯಸಾಧ್ಯವಾಗಲು ವ್ಯವಹಾರಿಕ ಯೋಜನೆಗಳು ಬೇಕು. ಹಲವು ವೈವಿದ್ಯತೆಗಳನ್ನು ಹೊಂದಿರುವ ಭಾರತದಲ್ಲಿ ಏಕರೂಪದ ಯೋಜನೆಯಿಂದ ಅಭಿವೃದ್ಧಿ ಮತ್ತು ಸ್ವಾವಲಂಬನೆ ಎರಡೂ ಸಾಧ್ಯವಿಲ್ಲ. ಪ್ರಾದೇಶಿಕ ಭಿನ್ನತೆ , ಪ್ರಾಕೃತಿಕ , ಭೌಗೋಳಿಕ ವೈಶಿಷ್ಟ್ಯತೆಗಳು ಹಾಗೂ ಸಾಮಾಜಿಕ ಅಂಶಗಳನ್ನು ಪರಿಗಣಿಸಿ ಆರ್ಥಿಕವಾಗಿ ಸ್ವಾವಲಂಬಿಯಾಗಬಲ್ಲ ಸಮಾಜಾರ್ಥಿಕ ಘಟಕಗಳನ್ನು ಗುರುತಿಸುವುದು ಅನಿವಾರ್ಯ. ಆರ್ಥಿಕ ಸ್ವಾವಲಂಬನೆ ಎಂದರೆ, ಯಾವುದೇ ಒಂದು ಪ್ರದೇಶದಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿ, ಆ ಪ್ರದೇಶದಲ್ಲಿ ವಾಸಿಸುವ ಪ್ರತಿಯೋರ್ವ ವ್ಯಕ್ತಿಗೂ ಫಲಪ್ರದವಾದ ಉದ್ಯೋಗ ಸೃಷ್ಟಿಸುವುದು. ದುಡಿಮೆಯ ಪ್ರತಿಫಲದಿಂದ ದುಡಿಮೆಗಾರ ಮತ್ತು ಅವರ ಅವಲಂಬಿತರ ಜೀವನದ ಕನಿಷ್ಠ ಅವಶ್ಯಕತೆಗಳಾದ ಆಹಾರ, ಬಟ್ಟೆ, ವಸತಿ, ಶಿಕ್ಷಣ ಮತ್ತು ಔಷದೋಪಚಾರ ಪಡೆಯುವ ಸಾಮಥ್ರ್ಯ ಇರುವಂತಾಗುವುದು ಹಾಗೂ ಜನರ ಜೀವನಮಟ್ಟ ನಿರಂತರವಾಗಿ ಏರುತ್ತಿರುವುದು. ಆ ಪ್ರದೇಶದ ಜನರ ದೈನಂದಿನ ಅವಶ್ಯಕತೆಗಳ ಪೂರೈಕೆ ಅಲ್ಲಿಯ ಸಂಪನ್ಮೂಲಗಳ ಬಳಕೆಯಿಂದಾಗಿಯೇ ಆಗಬೇಕಾದ ಸ್ಥಿತಿ. ಕೆಲವರು ಸ್ವಾವಲಂಬಿ ಗ್ರಾಮಗಳ ವ್ಯವಸ್ಥೆಯ ಕುರಿತು ಹೇಳುತ್ತಾರೆ. ಆದರೆ ಆಧುನಿಕ ಬದುಕಿನ ಅಗತ್ಯತೆಗಳನ್ನು ಹಾಗೂ ಗ್ರಾಮ ಮಟ್ಟದಲ್ಲಿ ಲಭ್ಯವಾಗುವ ಸಂಪನ್ಮೂಲಗಳ ಸೀಮಿತತೆಯ ಹಿನ್ನೆಲೆಯಲ್ಲಿ ಪ್ರತಿಯೊಂದು ಗ್ರಾಮವನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿಸಲು ಸಾಧ್ಯವಿಲ್ಲ. ಲಭ್ಯ ಇರುವಷ್ಟನ್ನೇ ಉಂಡು, ಸಿಕ್ಕಿದ್ದನ್ನೇ ತೊಟ್ಟು, ಹೇಗಾದರೂ ಬದುಕುವುದನ್ನು ನಾಗರಿಕ ಸಮಾಜ ಒಪ್ಪುವುದಿಲ್ಲ. ಗ್ರಾಮಗಳ ಮುಂದಿನ ಹಂತವೆಂದರೆ ತಾಲೂಕುಗಳು. ಇಂದು ಅಸ್ತಿತ್ವದಲ್ಲಿರುವ ತಾಲೂಕುಗಳು ರಾಜಕೀಯ ಘಟಕಗಳು. ಹೆಚ್ಚಿನ ತಾಲೂಕುಗಳÀಲ್ಲಿ ಲಭ್ಯವಿರುವ ಸಂಪನ್ಮೂಲಗಳಲ್ಲಿ ಸಾಮ್ಯತೆ ಇಲ್ಲ. ಆರ್ಥಿಕ ಸಮಸ್ಯೆಗಳು ಮತ್ತು ಅವಕಾಶಗಳಲ್ಲಿ ಏಕರೂಪತೆ ಇಲ್ಲದಿರುವುದರಿಂದ ವೈಜ್ಞಾನಿಕವಾಗಿ ಯೋಜನಾ ನಿರೂಪಣೆ ಸಾಧ್ಯವಾಗದು. ಇದಕ್ಕಾಗಿ ಇಂದಿನ ತಾಲೂಕುಗಳನ್ನು ಯೋಜನಾ ಬ್ಲಾಕ್‍ಗಳಾಗಿ ಮರುರೂಪಿಸುವ ಅಗತ್ಯವಿದೆ. ಭೌಗೋಳಿಕ ಅಂಶಗಳು, ಸಂಪನ್ಮೂಲಗಳ ಲಭ್ಯತೆ, ನದಿ, ಹಳ್ಳ, ಕೊಳ್ಳ , ಕೆರೆ, ಸಮಾನ ಆರ್ಥಿಕ ಸಮಸ್ಯೆಗಳು ಅವಕಾಶಗಳು ಮತ್ತು ಸಾಧ್ಯತೆಗಳನ್ನು ಆಧರಿಸಿ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿದಾಗ, ಪ್ರತಿ ಬ್ಲಾಕ್‍ನ ಶೇಕಡಾ 80 ರಷ್ಟು ಜನರಿಗೆ ಸ್ಥಳೀಯವಾಗಿಯೇ ಉದ್ಯೋಗ ಸೃಷ್ಟಿಸಬಹುದಾಗಿದೆ. ಜಿಲ್ಲಾ ಮಟ್ಟದಲ್ಲಿ ಕೂಡಾ ಇದೇ ರೀತಿಯ ಸಮಸ್ಯೆಗಳು ಇರುವುದರಿಂದ, ಅವು ಕೂಡಾ 100% ಸ್ವಾವಲಂಬಿ ಆರ್ಥಿಕ ಘಟಕಗಳಾಗಲಾರವು. ಆದರೆ, ವಿವಿಧ ಬ್ಲಾಕ್‍ಗಳ ನಡುವೆ ಸಮನ್ವಯತೆ ಸಾಧಿಸಲು ಜಿಲ್ಲಾಮಟ್ಟದಲ್ಲಿ ಯೋಜನೆಗಳು ಕ್ರೋಢೀಕೃತಗೊಳ್ಳಲೇಬೇಕು. ನಮ್ಮ ದೇಶದ ರಾಜ್ಯಗಳು ಭಾಷೆ ಮತ್ತು ರಾಜಕೀಯ ಅಂಶಗಳ ಆಧಾರದ ಮೇಲೆ ರೂಪುಗೊಂಡ ಆಡಳಿತ ಘಟಕಗಳು.ಕೆಲವೊಂದು ರಾಜ್ಯಗಳು ಬಹಳಷ್ಟು ದೊಡ್ಡದಾಗಿಯೂ , ವೈವಿದ್ಯಮಯವಾಗಿಯೂ ಇರುವುದರಿಂದ ಅಲ್ಲಿ ಕೂಡಾ ಆರ್ಥಿಕ ಸ್ವಾವಲಂಬನೆ ಸಾಧಿಸಲು ತೊಡಕುಗಳು ಬರುತ್ತವೆ. ಆಳವಾದ ಅಭ್ಯಾಸ, ಅಧ್ಯಯನ ಹಾಗೂ ವಿಶ್ಲೇಷಣೆಗಳಿಂದ ಭಾರತದಲ್ಲಿ 44 ಆರ್ಥಿಕವಾಗಿ ಸ್ವಾವಲಂಬಿಯಾಗಬಲ್ಲ ಪ್ರದೇಶಗಳನ್ನು ಅಂದರೆ ಸಮಾಜಾರ್ಥಿಕ ಘಟಕಗಳನ್ನು ಅರ್ಥಶಾಸ್ತ್ರಜ್ಞ ಶ್ರೀ ಪ್ರಭಾತ್ ರಂಜನ್ ಸರ್ಕಾರರು ಗುರ್ತಿಸಿದ್ದಾರೆ. ಇವುಗಳ ಕ್ಷೇತ್ರ ವ್ಯಾಪ್ತಿ ಕೆಲವೊಮ್ಮೆ ತೀರಾ ಚಿಕ್ಕದು ಅಥವಾ ದೊಡ್ಡದೂ ಆಗಿರಬಹುದು. ಕೆಲವು ಘಟಕಗಳು ಇಂದಿನ ರಾಜ್ಯದ ವ್ಯಾಪ್ತಿಯನ್ನು ಮೀರಿ ಪಕ್ಕದ ರಾಜ್ಯಕ್ಕೂ, ವಿಸ್ತರಿಸಿದರೆ ಕೆಲವು ರಾಜ್ಯಗಳಲ್ಲಿ ಒಂದಕ್ಕಿಂತ ಹೆಚ್ಚು ಅಂತಹ ಘಟಕಗಳಿವೆ. ಉದಾಹರಣೆಗಾಗಿಕರ್ನಾಟಕದಲ್ಲಿ ಮೂರು ಸಮಾಜಾರ್ಥಿಕ ಘಟಕಗಳನ್ನು ಗುರ್ತಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಜಿಲ್ಲೆಯ ಹೆಚ್ಚಿನ ಭಾಗ ಮತ್ತು ಪಕ್ಕದ ಕೊಡಗು ಜಿಲ್ಲೆಗಳನ್ನು ಸೇರಿಸಿ, ಸೂಕ್ತವಾದ ಅಭಿವೃದ್ಧಿಯ ಯೋಜನೆಯನ್ನು ರೂಪಿಸಿದಾಗ, ಇಷ್ಟೊಂದು ಚಿಕ್ಕ ಕ್ಷೇತ್ರ ( ಅದನ್ನು ತುಳುನಾಡು ಎನ್ನೋಣ) ಆರ್ಥಿಕವಾಗಿ ಸ್ವಯಂ ಸ್ವಾವಲಂಬಿಯಾಗಲು ಸಾಧ್ಯವಿದೆ. ಉತ್ತರ ಕನ್ನಡದ ಕರಾವಳಿ ತಾಲೂಕುಗಳು , ಇಡೀ ಗೋವಾ ರಾಜ್ಯ ಮತ್ತು ಮಹಾರಾಷ್ಟ್ರದ ಕೊಂಕಣ ಪ್ರದೇಶಗಳಿಗಾಗಿ ಒಂದೇ ವಿಧದ ಅಭಿವೃದ್ಧಿ ಯೋಜನೆಯನ್ನು ರೂಪಿಸಿದರೆ, ಆ ಪ್ರದೇಶವೂ ಸ್ವಯಂ ಸ್ವಾವಲಂಬಿ ಆರ್ಥಿಕ ಘಟಕವಾಗಿ ರೂಪುಗೊಳ್ಳಬಲ್ಲದು. ಉಳಿದಂತೆ ಇಡೀ ಕರ್ನಾಟಕ ಸ್ವಯಂ-ಸ್ವಾವಲಂಬಿ ಸಮಾಜಾರ್ಥಿಕ ಘಟಕವಾಗುವ ಸಾಮಥ್ರ್ಯ ಹೊಂದಿದೆ. ಸಮಾಜಾರ್ಥಿಕಘಟಕಗಳ ಅಸ್ತಿತ್ವವನ್ನು ಒಪ್ಪಿಕೊಳ್ಳುವುದೆಂದರೆ ರಾಜ್ಯಗಳ ಪುನರ್ವಿಂಗಡಣೆ ಮಾಡುವುದು ಅಥವಾ ಪ್ರತ್ಯೇಕತಾವಾದವನ್ನು ಪ್ರೇರೇಪಿಸುವುದು ಎಂಬುದಲ್ಲ; ಬದಲಿಗೆ ಇರುವ ವ್ಯವಸ್ಥೆಯಲ್ಲೇ ಪ್ರಾದೇಶಿಕ ವೈಶಿಷ್ಟ್ಯ ಆಧಾರಿತ ಯೋಜನಾ ನಿರೂಪಣಾ ವಿಧಾನವನ್ನು ಅಳವಡಿಸುವುದು. ಈಗ ಅನುಸರಿಸುತ್ತಿರುವ ಯೋಜನೆಗಳು ಕೇಂದ್ರೀಕೃತ ಮಾದರಿಯವು. ದೇಶ ಅಥವಾ ರಾಜ್ಯಮಟ್ಟದಲ್ಲಿ ರೂಪುಗೊಂಡು ಗ್ರಾಮಮಟ್ಟಕ್ಕೆ ಇಳಿದು ಬರುವಂತಹವು. ಶತಪ್ರತಿಶತ (100%) ಉದ್ಯೋಗಾವಕಾಶ ಸೃಷ್ಟಿಸುವ ಯೋಜನೆಯಾಗಲೀ, ಸ್ಥಳೀಯ ಸಂಪನ್ಮೂಲಗಳ ಬಳಕೆಯಿಂದ ಸ್ಥಳೀಯರಿಗೆ ಉದ್ಯೋಗ ಸೃಷ್ಟಿಸುವ ಚಿಂತನೆಗಳಿಗಾಗಲೀ ಇಲ್ಲಿ ಆಸ್ಪದÀವೇ ಇಲ್ಲ. ತಳಮಟ್ಟದಲ್ಲಿ ಅಂದರೆ ಬ್ಲಾಕ್ ಮಟ್ಟದಲ್ಲಿ ರೂಪುಗೊಂಡು ಜಿಲ್ಲಾ ಮತ್ತು ಸಮಾಜಾರ್ಥಿಕ ಮಟ್ಟದಲ್ಲಿ ಕ್ರೋಢೀಕೃತಗೊಳ್ಳುವ ವಿಕೇಂದ್ರೀಕೃತ ಯೋಜನಾ ನಿರೂಪಣಾ ವಿಧಾನವನ್ನು ಅಳವಡಿಸಿದಾಗ ಆರ್ಥಿಕ ಪ್ರಗತಿಯ ವೇಗ ಹೆಚ್ಚುವುದು ಮಾತ್ರವಲ್ಲ, ಅದು ಎಲ್ಲರನ್ನೂ ಒಳಗೊಳ್ಳುತ್ತದೆ. ಸಮಾಜಾರ್ಥಿಕ ಘಟಕಗಳ ಸೀಮೆಯು ಶಾಶ್ವತವಲ್ಲ. ಅಕ್ಕಪಕ್ಕದ ಘಟಕಗಳು ಸ್ವಯಂ ಸ್ವಾವಲಂಬಿಗಳಾದ ನಂತರ ಅವು ಪರಸ್ಪರ ವಿಲೀನವಾಗಿ ತಮ್ಮ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳಬಹುದು.ಗ್ರಾಮದಲ್ಲಿರುವ ಪ್ರತಿಯೊಂದು ಕುಟುಂಬವೂ ಆರ್ಥಿಕವಾಗಿ ಸ್ವಾವಲಂಬಿ, ಸದೃಢವಾದಾಗ ಇಡೀ ಗ್ರಾಮ ಆರ್ಥಿಕವಾಗಿ ಪ್ರಗತಿ ಹೊಂದುವಂತೆ, ದೇಶದ ಎಲ್ಲಾ ಸಮಾಜಾರ್ಥಿಕ ಘಟಕಗಳೂ ಸ್ವಯಂಸ್ವಾವಲಂಬಿಯಾದಾಗÀ ಇಡೀ ದೇಶ ಆರ್ಥಿಕವಾಗಿ ಸ್ವಾವಲಂಬಿ ಹಾಗೂ ಬಲಿಷ್ಠವಾಗುತ್ತದೆ. ಲಾಭ ಗಳಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಯೋಜನೆಗಳನ್ನು ರೂಪಿಸುವ ಇಂದಿನ ಪದ್ಧತಿಗೆ ವಿದಾಯ ಹೇಳಿ, ಸ್ಥಳೀಯ ಸಂಪನ್ಮೂಲಗಳನ್ನು ಬಳಸಿ, ಸ್ಥಳಿಯರೆಲ್ಲರಿಗೆ (100%) ಉದ್ಯೋಗ ಸೃಷ್ಟಿಸುವ ರೀತಿಯಲ್ಲಿ ಅಭಿವೃದ್ಧಿ ಯೋಜನೆಗಳನ್ನು ರೂಪಿಸಬೇಕಾಗಿದೆ. ಆರ್ಥಿಕವಾಗಿ ಸ್ವಯಂ ಸ್ವಾವಲಂಬಿಯಾಗಬಲ್ಲ ಪ್ರದೇಶದಲ್ಲಿ ವಾಸಿಸುವವರನ್ನು ಸ್ಥಳೀಯರೆಂದು ಗುರ್ತಿಸಬೇಕು. ಉದಾಹರಣೆಗಾಗಿ ತುಳುನಾಡು, ಕನ್ನಡ ನಾಡು, ಆಂದ್ರಪ್ರದೇಶದ ರಾಯಲಸೀಮಾ ಪ್ರದೇಶ, ಮಹಾರಾಷ್ಟ್ರದ ವಿದರ್ಭ ಪ್ರದೇಶ, ತೆಲಂಗಾಣ ರಾಜ್ಯಗಳಿಗೂ ಸ್ವಯಂ ಸ್ವಾವಲಂಬಿ ಆರ್ಥಿಕ ಘಟಕವಾಗುವ ಸಾಮಥ್ರ್ಯವಿದೆ. ಕೃಷಿ, ಉದ್ದಿಮೆ, ವಿವಿಧ ಸೇವಾ ಕ್ಷೇತ್ರಗಳ ಮೇಲೆ ಅವಲಂಬಿತರಾಗಿರಬೇಕಾದ ಜನಸಂಖ್ಯೆಯ ಸ್ಥೂಲ ಪ್ರಮಾಣವನ್ನು ನಿರ್ಧರಿಸಿ, ಸಹಕಾರಿ ಕ್ಷೇತ್ರದಲ್ಲಿ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾÀಗೊಳಿಸಿದಾಗ ಆರ್ಥಿಕ ಪ್ರಗತಿ ನಿಶ್ಚಿತ. ಪ್ರಾದೇಶಿಕ ಭಿನ್ನತೆಯನ್ನು ಗುರ್ತಿಸಿ ಸಂಪನ್ಮೂಲಗಳ ಲಭ್ಯತೆಯನ್ನು ಆಧರಿಸಿ, ವಿಕೇಂದ್ರೀಕೃತ ಯೋಜನಾ ನಿರೂಪಣೆಯಿಂದಲೇ ಇಂದಿನ ಸಮಸ್ಯೆಗಳ ಪರಿಹಾರ ಸಾಧ್ಯ. ಟಾಂಗಾ ಕುದುರೆಯ ಕಣ್ಣಿಗೆ ಕಟ್ಟುವ ಅಡ್ಡಪಟ್ಟಿಯ ರೀತಿಯಲ್ಲೇ ಇಂದಿನ ಆರ್ಥಿಕ ತಜ್ಞರು, ತಮ್ಮ ಚಿಂತನೆಗಳನ್ನು ಬಂಡವಾಳವಾದದ ಚೌಕಟ್ಟಿಗೆ ಸೀಮಿತಗೊಳಿಸಿಕೊಂಡಿದ್ದಾರೆ. ಈ ಸಂಕುಚಿತತೆಯನ್ನು ಮೀರಿ ಯೋಚಿಸಿದಾಗ, ಇಂದಿನ ಗಂಭೀರ ಸಮಸ್ಯೆಗೆ ಅತಿ ಸರಳ ಪರಿಹಾರವಾದ ‘ವಿಶ್ವೈಕ್ಯ ದೃಷ್ಟಿಕೋನದ ಪ್ರಾದೇಶಿಕ ಅನ್ವಯಿಕತೆ’ ಅರ್ಥಾತ್ ‘ಜಾಗತಿಕವಾಗಿ ಯೋಚಿಸಿ, ಸ್ಥಳೀಯವಾಗಿಕಾರ್ಯನಿರ್ವಹಿಸುವ ವಿಧಾನಗಳು ಗೋಚರಿಸುತ್ತವೆ. ಸ್ಥಳೀಯ ಸಂಪನ್ಮೂಲಗಳ ಸಮರ್ಪಕ ಬಳಕೆಗಾಗಿ ಭಾಷೆ, ಸಂಸ್ಕøತಿ ಆಧಾರಿತ ಪ್ರಾದೇಶಿಕ ರಾಷ್ಟ್ರೀಯವಾದವೇ ಈ ಮಿಥ್ಯಾ ರಾಷ್ಟ್ರೀಯತೆಯನ್ನು ಹಿಮ್ಮೆಟ್ಟಿಸುವ ವಿಧಾನ. ಶಿಸ್ತುಬದ್ಧವಲ್ಲದ, ಗೊತ್ತುಗುರಿಯಿಲ್ಲದ ರೀತಿಯಲ್ಲಿ ಬಲಿಯುತ್ತಿರುವ ಪ್ರಾದೇಶಿಕತೆಯ ಭಾವವನ್ನು ಸ್ವಯಂ ಸಮೃದ್ಧ ಸಾಮಾಜಾರ್ಥಿಕ ಘಟಕಗಳನ್ನಾಗಿ ರೂಪಿಸುವಂತೆ ಪರಿವರ್ತಿಸುವುದೇ ಇಂದಿನ ಸಮಸ್ಯೆಗಳಿಗೆ ಪರಿಹಾರ. ಇದು ಅನಿವಾರ್ಯ ಕೂಡಾ. *******

ಸಮಾಜಾರ್ಥಿಕ ಘಟಕಗಳು Read Post »

ಕಾವ್ಯಯಾನ

ಕಾವ್ಯಯಾನ

ಇನ್ನೇನು ಬೇಕಿದೆ. ಪ್ರಮಿಳಾ ಎಸ್.ಪಿ. ಇನ್ನೇನು ಬೇಕಿದೆ. ಒಡೆದ ಹಿಮ್ಮಡಿಯೂರಿ ನಿಂತು ಎನ್ನ ಹೆಗಲಮೇಲಿರಿಸಿ ತಾನು ಕಾಣದ ಪರಪಂಚವ ನನಗೆ ತೋರಿಸಿದವ ನನ್ನಪ್ಪ. ಕುದಿಯುವ ಸಾರಿನೊಂದಿಗೆ  ಕುಳಿತ ಹೆಂಡತಿಯನು ತಣ್ಣೀರಿನೊಂದಿಗಾಡುವ ಮಕ್ಕಳನು ಮುದ್ದಾಡಿ ಬೆಳೆಸಿದ್ದ ನನ್ನಪ್ಪ. ಮಕ್ಕಳನು ಓದಿಸಲೇಬೇಕೆಂದು ಹಠಹಿಡಿದವಳು ….ನಾವು ಓದಿಕೊಂಡದ್ದು ಏನೆಂದು ತಿಳಿಯದವಳು ನನ್ನವ್ವ. ಕವಿತೆ ಬರೆಯಲು ಬಾರದವಳು ಮಕ್ಕಳ ಬದುಕನ್ನೇ ಸುಂದರ ಕವಿತೆಯಾಗಿಸಲು  ಭಾವವಾದವಳು ನನ್ನವ್ವ. ಹೀಗೆಲ್ಲಾ ಹೊಗಳಿ ಬರೆದ ನನ್ನ ಪ್ರಾಸವಿರದ ಕವಿತೆಗಳು ಬೇಕಿಲ್ಲಾ ಈಗ ಅವರಿಗೆ…! ಪಿಂಚಣಿ ಬಂದಿತೆ ಮಧುಮೇಹ ಮರೆಯಾಯಿತೆ ರಕ್ತದೊತ್ತಡ ಹೇಗಿದೆ ಎಂದೆಲ್ಲಾ  ಜಂಗಮ ಗಂಟೆ ಭಾರಿಸುವದು ಬೇಕಿಲ್ಲ ಅವರಿಗೆ…! ಇಳಿ ವಯಸ್ಸಿನವರ ಸನಿಹ  ಕುಳಿತು ಒಡಲಾಳದ ಮಾತನಾಡಿ ಮೊಮ್ಮಕ್ಕಳ ನಗುವಿಗೆ ನಗುವ ಬೆರೆಸಲು ನನ್ನುಪಸ್ಥಿತಿ ಬೇಕಿದೆ ಅವರಿಗೆ. ಕಾಣಬೇಕಿದೆ ನಾನು ಅವರಿಗೆ ಬೇಕಾಗಿದ್ದಾದರೂ ಇನ್ನೇನು!? ********

ಕಾವ್ಯಯಾನ Read Post »

ಇತರೆ

ನನಗೆ ಹೀಗನಿಸುತ್ತದೆ

ಕವಿತೆ ನನಗಿಷ್ಟ ಚಂದ್ರಪ್ರಭ ನನಗೆ ಹೀಗನಿಸುತ್ತದೆ…. ಕವಿತೆ ಬಗೆಗಿನ ಎಲ್ಲ ಆರಾಧನಾ ಭಾವಗಳಾಚೆ ಕವಿತೆ ಪುಸ್ತಕಗಳು ಅವಗಣನೆಗೆ ಒಳಗಾಗುವ ಸತ್ಯ ಬಹುಶಃ ಒಂದು ಕಾಲದ್ದಾಗಿಲ್ಲದಿರಬಹುದು. ಕವಿತೆ ಮೂಲತಃ ಒಂದು ಸಶಕ್ತ ಅಭಿವ್ಯಕ್ತಿ ಮಾಧ್ಯಮ. ಅದರ ಹರಿವಿನಗುಂಟ ಸಾಗುವಾಗ ಕೇಳಿಸುವ ಮೊರೆತವೂ ವಿಭಿನ್ನ. ಕವಿತೆ ನನಗೇಕೆ ಇಷ್ಟ ಎಂದೆನ್ನಿಸಿದ ಕ್ಷಣ ನನಗೆ ಹೀಗೆಲ್ಲ ತೋರಿತು… ಬಿಡುಗಡೆ ಗಾಗಿನ ಮನುಷ್ಯನ ಪ್ರಯತ್ನ ನಿರಂತರದ್ದು. ಒಂದಿಲ್ಲೊಂದು ಸಂಗತಿಯಿಂದ ಬಿಡುಗಡೆ ಹೊಂದುತ್ತ ಆಯುಷ್ಯವೇ ಕಳೆದು ಹೋಗುವುದು. ಯಾವುದರಿಂದ ಬಿಡುಗಡೆ, ಯಾರಿಂದ ಬಿಡುಗಡೆ, ಉಳಿದದ್ದು ಏನು, ಕಳಚಿಕೊಂಡದ್ದು ಏನನ್ನು ಎಂಬುದೆಲ್ಲ ಅಳವಿಗೆ ಸಿಗದೇ ಶೂನ್ಯತೆಯೊಂದು ಎದೆಯನ್ನು ಇರಿಯುವಾಗ.. ಎದೆಯಲ್ಲಿ ಉರಿಯುವಾಗ ಹನಿ ಹನಿ ಸಿಂಚನಗೈದು ಒಳಗಿನ ಆರ್ದ್ರತೆಯನ್ನು ಕಾಪಿಡುವ ಜೀವದಾಯಿನಿ ಕವಿತೆ. ಬದುಕಿನ ಬಗೆಗೆ ಭರವಸೆ ಉಳಿಯಲು ಇಷ್ಟು ಸಾಕಲ್ಲವೆ.. ಎಂಬ ಭಾವ ಮೂಡಿಸುವ ಸಂಗಾತಿ ಕವಿತೆ. ಹಿಂದೆಲ್ಲಾ ಎಷ್ಟು ನಿಧಾನವಾಗಿ ಬೆಳಗು ಆಗ್ತಿತ್ತು. ರಾತ್ರಿ ಕಳೆದು ಬೆಳಕಾಗುವಾಗ ಯುಗವೊಂದು ಸರಿದು ಹೋದ ಭಾವ ಮೂಡುವಷ್ಟು ನಿಧಾನ. ಬೆಳಕು ಹರಿದು ಮತ್ತೆ ಸಂಜೆಗತ್ತಲು ಕವಿಯುವಾಗಲೂ ಅಷ್ಟೇ, ಅಂದುಕೊಂಡ ಕೆಲಸಗಳೆಲ್ಲ ನೆರವೇರಿರುತ್ತಿದ್ದವು. ಈಗ ಹಾಗಿಲ್ಲ. ಓಡುತ್ತಿರುವುದು ಕಾಲುಗಳೊ ಕಾಲವೊ ಗೊತ್ತೇ ಆಗದ ವಿಚಿತ್ರ ಸನ್ನಿವೇಶ. ಸದಾ ಕಾಲವೂ ಮನಸ್ಸನ್ನು ಸತಾಯಿಸುವ ಎಂಥದೊ ಒಂದು ಪೀಡೆ, ಉದ್ವಿಗ್ನತೆ, ಅಶಾಂತಿ. ಯಾರಿಗೆ ಹೇಳಲಿ, ಏನು ಮಾಡಲಿ, ಹೊರಟುದೆಲ್ಲಿಗೆ, ದಾರಿ ಯಾವುದು ಎಂಬೆಲ್ಲ ಅಗಣಿತ ತುಂಡು ತುಂಡು ವಾಕ್ಯಗಳು. ಸಂತೆಯ ಸದ್ದಡಗಿ ಮೌನದೊಳು ಜಾರಿದ ಹೊತ್ತು ಸದ್ದೇ ಇಲ್ಲದೆ ಅರಳುವ ಪರಿಮಳ ಹೊತ್ತ ಮೊಗ್ಗು ಕವಿತೆ.. ಅಕ್ಷರಗಳು ಪದಗಳಾಗಿ ಪದಗಳು ಸಾಲುಗಳಾಗುವ ತಾಂತ್ರಿಕತೆಯೆಲ್ಲ ಮುಗಿವಾಗ ಆಂತರ್ಯದ‌ ಬೇಗುದಿ ಆವಿಯಾಗಿಯೊ ತೇವವಾಗಿಯೊ ಕರಗಿ ಹೋಗುವುದಿದೆಯಲ್ಲ ಅದು ಕವಿತೆಯ ಮೃದುವಾದ ಅಪ್ಪುಗೆ. ಹೀಗೆ ಹುಟ್ಟಿದ ಕವಿತೆ ಯಾರನ್ನೂ ಸೆಳೆಯಲಿಕ್ಕಿಲ್ಲ , ಅದನ್ನಾಲಿಸುವ ಕಿವಿಗಳು ಸಿಗಲಿಕ್ಕಿಲ್ಲ. ಆದರೆ‌ ತನ್ನೊಡನೆ ಏಕಾಂತವನ್ನು ಹಂಚಿಕೊಂಡ ಜೀವದ ಮೊರೆಯನ್ನು ನಿಶ್ಶಬ್ದವಾಗಿ ಆಲಿಸುತ್ತದೆ ಈ ಕವಿತೆ. ಬದುಕಿಗೆ ಬಣ್ಣ ತುಂಬದಿದ್ದರೂ ಬಣ್ಣ ಬಣ್ಣದ ಲೋಕದಲ್ಲಿ ಬದುಕು ಸಹ್ಯವಾಗುವಂತೆ ಮಾಡುತ್ತದೆ ಇದೇ ಕವಿತೆ. ಚೌಕಟ್ಟುಗಳನ್ನು ದಾಟುವುದನ್ನು, ಎಲ್ಲೆಗಳನ್ನು ಮೀರುವುದನ್ನು ಕಲಿಸುತ್ತದೆ ಈ ಕವಿತೆ. ನಾನು ಕರಗಿದಂತೆಲ್ಲ ಹುಟ್ಟುವ ವಿನಯದಿಂದ ಎಲ್ಲರೂ ನನ್ನವರು, ಎಲ್ಲವೂ ನನ್ನದು ಎಂಬ ಸರಳ ಸತ್ಯವನ್ನು ನುಡಿಯದೇ ನುಡಿದು ಬಿಡುತ್ತದೆ ಈ ಕವಿತೆ. ಮನುಷ್ಯರನ್ನು ಪರಿಚಯಿಸಿ ಮನುಷ್ಯನಾಗುವ ದಾರಿ ತೆರೆಯುತ್ತದೆ ಈ ಕವಿತೆ. ಯಾರಿಗೂ ಬೇಡವಾಗಿ ಪುಸ್ತಕದಲ್ಲೇ ಉಳಿದು ಬಿಡುವಾಗಲೂ ಕರೆದಾಕ್ಷಣ ಬಂದು ಬಿಡುವ, ಒದ್ದೆ ರೆಪ್ಪೆಗಳ ತೇವ ಸವರುವ ಸಖ/ಸಖಿ ಈ ಕವಿತೆ. ಮೌನವಾಗಿ ಎಲ್ಲವನ್ನೂ ಕೇಳಿಸಿಕೊಳ್ಳುತ್ತಲೇ ಸಾಗುವ ಸಹಪಥಿಕ ಕವಿತೆ. ಏನೊಂದನ್ನೂ ಮರು ನುಡಿಯದೆ ಬೆಳಗಿನ ಅರಿವಿನೆದುರು ಒಯ್ದು ನಿಲ್ಲಿಸಿ ಬಿಡುವ ಕವಿತೆ. ಮೌನ ಒಂದು ರಾಗವಾಗಿ, ಮೌನವೊಂದು ಗೀತೆಯಾಗಿ, ಮೌನ ಆಲಾಪವಾಗಿ ಮೌನವಾಗಿ ಬಿಡುವ ಆತ್ಮದ ಬೆಳಕು ಕವಿತೆ. ಆದ್ದರಿಂದ ಕವಿತೆ ನನಗಿಷ್ಟ…. *********

ನನಗೆ ಹೀಗನಿಸುತ್ತದೆ Read Post »

ಕಾವ್ಯಯಾನ

ಕಾವ್ಯಯಾನ

ಭರವಸೆ ನಾಗಶ್ರೀ ಸಾವಿರ ಬಾರಿ ಸೋತರು ಭರವಸೆಯೊಂದಿದೆ ಕಾಯುವ ಕನವರಿಕೆಯಲು ನಿನ್ನದು ಬರೀ ಹುಂಬತನ ಅರಿವಾಗುವುದು ಅಂತರ ಕಾಯ್ದುಕೊಳ್ಳಲು ಅದೆಷ್ಟು ಚಡಪಡಿಕೆಯೆಂದು ಅರಿಯಬೇಕಿತ್ತು ಅಂತರಾತ್ಮವ ಕಾದು ಕಾದು ಬೆಂಡಾದ ಭಾವನೆಗಳಿಗೆ ಸಮಯವೂ ಸೊಪ್ಪಾಕುತಿದೆ ನನ್ನ ನಾ ಅರಿಯದ ಇರಾದೆಗೆ ಅರ್ಥೈಸಲು ನೂರು ಬಾರಿ ಹೇಳುವ ಅವಶ್ಯಕತೆಯಾದರೂ ಇಲ್ಲವಲ್ಲ ಅರ್ಥಮಾಡಿಕೊಳ್ಳಲು ಒಂದು ಘಳಿಗೆ ಸಾಕಲ್ಲ ನಂಬಿಕೆಯ ಕವಲೊಳಗೆ ಅಪನಂಬಿಕೆಯ ಟಿಸಿಲುಗಳು ಮತ್ತೆದೆ ಹುಸಿಯ ನಂಬುವ ಹಂಬಲದತ್ತ ವಾಲುವ ಮನ ಕರುಳಿನ ನೋವು ಕಣ್ಣವರೆಗೂ ತಲುಪಿ ಕಣ್ಣರೆಪ್ಪೆಗೂ ನೋವಂತೆ ಕಣ್ತೆರೆಯಲಾಗದ ಮೋಸದ ಪ್ರಪಂಚಾವ ನೋಡಲು….. *******

ಕಾವ್ಯಯಾನ Read Post »

ಇತರೆ

ಜೀವನ್ಮುಖಿ

ಹೊಸ ವರ್ಷ ಹೊಸ ಹರ್ಷ ಜಯಲಕ್ಷ್ಮಿ ಕೆ. ಹೊಸ ವರ್ಷ -ತರಲಿ ಹರ್ಷ . “ಆದದ್ದು ಆಗಿ ಹೋಯ್ತು, ಮಣ್ಣಾಗಿ ಹೋದ ನನ್ನವರು ತಿರುಗಿ ಬರಲಾರರು. ಇರುವವನು ಇರುವಷ್ಟು ದಿನ ಬದುಕಬೇಕಲ್ಲ? ನನ್ನ ಗಾಡಿ, ನನ್ನ ಎತ್ತುಗಳೂ ಭೂಕಂಪದ ಅಂತರoಗ ಸೇರಿದ್ದರೆ ನನಗೆ ಕಷ್ಟವಾಗುತ್ತಿತ್ತು. ಪುಣ್ಯಕ್ಕೆ ಸ್ವಲ್ಪ ಹೊಲವೂ ಉಳಿದಿದೆ. ಬದುಕಬೇಕಾದ ನನ್ನ ಬದುಕಿಗೆ ಇಷ್ಟು ಸಾಕಲ್ಲ ….ಉಳಲು, ಬಿತ್ತಲು, ಮನೆಕಟ್ಟಲು …..” 1993 ರಲ್ಲಿ ಮಹಾರಾಷ್ಟ್ರದಲ್ಲಿ ಸಂಭವಿಸಿದ್ದ ಭಾರೀ ಭೂಕಂಪದಲ್ಲಿ ತನ್ನವರನ್ನೆಲ್ಲ ಕಳೆದುಕೊoಡಿದ್ದ ವೃದ್ದನೊಬ್ಬ ಪತ್ರಕರ್ತನ ಪ್ರಶ್ನೇಯೊoದಕ್ಕೆ ನೀಡಿದ ಉತ್ತರವಿದು. ಪ್ರಕೃತಿಯ ವಿಕೋಪಕ್ಕೆ ಬಲಿಯಾಗಿ ತತ್ತರಿಸಿ ಹೋಗಿದ್ದ ಲಾತೂರ್-ಉಸ್ಮಾನಾಬಾದ್ಗಳಲ್ಲಿ ಅಳಿದುಳಿದ ಜನರ ಸ್ಥಿತಿ -ಗತಿ ತಿಳಿದುಕೊಳ್ಳಲು ಹೋದ ಪತ್ರಕರ್ತನಿಗೆ ಎತ್ತಿನಗಾಡಿಯಲ್ಲಿ ಹೊಲದತ್ತ ಹೊರಟ ವೃದ್ದನೋರ್ವ ಕಣ್ಣಿಗೆ ಬಿದ್ದ. ತನ್ನ ಪ್ರಶ್ನೆಗಳಿಗೆ ಹತಾಶೆಯ ಶಿಖರದಿoದ ದುಃಖದ ಬುಗ್ಗೆಯನ್ನೇ ಚಿಮ್ಮಿಸಬಹುದು ಎಂಬ ನಿರೀಕ್ಷೆಯಲ್ಲಿದ್ದ ಆತನಿಗೆ ಅಚ್ಚರಿಯಾಗಿತ್ತು! ಭೂತಕಾಲದ ನಶ್ವರತೆ -ಭವಿಷ್ಯದ ಬಗೆಗಿನ ವ್ಯರ್ಥ ಕಾಳಜಿ ಇವೆರಡನ್ನೂ ತೊರೆದು ವರ್ತಮಾನದಲ್ಲಿ ಬದುಕು ಸಾಗಿಸಬೇಕೆoಬ ಸತ್ವವನ್ನರುಹಿದ ಆ ವೃದ್ದ ಅವನಿಗೆ ತತ್ವಜ್ಞಾನಿಯoತೆ ಕಂಡಿದ್ದ. ” ನೆಲ ಕಚ್ಚಿ ನಿಲ್ಲು “ಎನ್ನುವ ಅಡಿಗರ ಸಾಲಿನ ಸಾರ ಇದುವೇ ಇರಬೇಕು. ಅದುವೇ ಜೀವನೋತ್ಸಾಹ. ಜೀವನ ಪ್ರೀತಿ ಅನ್ನೋದು ಒಂದು ಅಪರಾಜಿತ ಶಕ್ತಿ. ತನಗಾಗಿ ತಾನು ಬದುಕಬೇಕು ಎನ್ನುವ ವ್ಯಕ್ತಿಗೆ ಇರಲೇಬೇಕಾದ ಅಮೂಲ್ಯ ಆಸ್ತಿಯದು. ಈ ಉತ್ಸಾಹ-ಉಲ್ಲಾಸ ಅನ್ನೋದು ಎಲ್ಲಿoದಲೋ , ಯಾರಿಂದಲೋ ಪಡೆಯತಕ್ಕoತಹ ಅoಶವಲ್ಲ .ನಮ್ಮೊಳಗೇ ಸುಪ್ತವಾಗಿರುವ ಚೈತನ್ಯ. ಕೆಲವರು ಸದಾ ಕಾಲ ನಗುತ್ತಲೇ ಇರುತ್ತಾರೆ. ಹಾಗೆoದು ಅವರಿಗೆ ಸಮಸ್ಯೆಗಳೇ ಇಲ್ಲವೆoದಲ್ಲ ; ಸಮಸ್ಯೆಗಳನ್ನು ಮೆಟ್ಟಿ ನಿಲ್ಲುವ ಆಂತರಿಕ ಶಕ್ತಿ ಅವರಲ್ಲಿದೆ ಎಂದರ್ಥ. ಇನ್ನೈದು ನಿಮಿಷಗಳಲ್ಲಿ ಆಕಾಶವೇ ಕಳಚಿ ಬೀಳುತ್ತೆ ಎಂದರೆ ಆ ಐದು ನಿಮಿಷಗಳಲ್ಲಿ ಒಂದು ಕಪ್ ಕಾಫಿ ಹೀರಬಾರದೇಕೆ ..? ಎನ್ನುವ ಮನೋಭಾವದವರಿವರು. ಮಸಣದಲ್ಲೂ ಸಂತಸದ ಅಲೆಯನ್ನು ಹರಡಿದ “ನಗುವ ಬುದ್ಧ” ಅಥವಾ ಪು -ಟ್ಸೆ ಯ ವ್ಯಕ್ತಿತ್ವವನ್ನು ನಾವಿಲ್ಲಿ ನೆನೆಯಲೇಬೇಕು. ಝೆನ್ ಪದ್ಧತಿಯ ಶವ ಸಂಸ್ಕಾರಕ್ಕೆ ವಿರುದ್ಧವಾಗಿ “ನನ್ನ ಮೃತದೇಹವನ್ನು ಸುಡಬೇಕು ” ಎಂದು ಹೇಳಿದ್ದ ಈ “ನಗುವ ಬುದ್ಧ “ನ ಮಾತಿನಲ್ಲಿ ಒಂದು ವಿನೋದವಿತ್ತು. ಅದೇನೆoದರೆ, ಅವನು ತನ್ನ ಬಟ್ಟೆಯೊಳಗೆ ಪಟಾಕಿಗಳನ್ನು ತುoಬಿಕೊoಡಿದ್ದ. ಅವನ ದೇಹಕ್ಕೆ ಅಗ್ನಿ ಸ್ಪರ್ಶವಾಗುತ್ತಿದ್ದoತೆ ಸಿಡಿ ಮದ್ದು ಸಿಡಿಯಲಾರಂಭಿಸಿ ಸ್ಮಶಾನದಲ್ಲೂ ಹಬ್ಬದ ವಾತಾವಾರಣ ಸೃಷ್ಟಿಯಾಗಿತ್ತು. ಚಿಂದಿ ಬಟ್ಟೆಯ ಚೀಲ ಎನ್ನುವ ಅರ್ಥವನ್ನು ತನ್ನ ಹೆಸರಿನಲ್ಲಿ ಹುದುಗಿಸಿಕೊoಡಿದ್ದ ಪು -ಟ್ಸೆ ತಾನು ಹೋಗುವೆಡೆಗಳಿಗೆಲ್ಲ ಚೀಲ ತುoಬಾ ಸಿಹಿ ತಿoಡಿ ಒಯ್ದು, ಅವನ್ನೆಲ್ಲ ಮಕ್ಕಳಿಗೆ ಹಂಚಿ, ಚೀಲವನ್ನು ಆಗಸದೆತ್ತರಕ್ಕೆ ಎಸೆಯುತ್ತಾ ಜೋರಾಗಿ ನಗುತ್ತಿದ್ದ. ಅವನ ನಗುವಿನಲ್ಲಿ ಇತರರು ಪಾಲ್ಗೊಳ್ಳುವಷ್ಟರಲ್ಲಿ ತನ್ನ ಡೊಳ್ಳು ಹೊಟ್ಟೆಯ ಮೇಲೊಮ್ಮೆ ಕೈಯಾಡಿಸುತ್ತಾ ..ಸದ್ದಿಲ್ಲದೆ ನಗುತ್ತಾ ತನ್ನ ಚೀಲದೊoದಿಗೆ ಮತ್ತೊoದೂರಿಗೆ ಸಾಗುತ್ತಿದ್ದ. ಸಮಸ್ಯೆ ಎಂಬ ಚೀಲವನ್ನು ದೂರಕ್ಕೆಸೆದು ಸದಾ ನಗುತ್ತಿರಬೇಕು ಎನ್ನುವ ಆಶಯ ಅವನದಾಗಿತ್ತು.ತನ್ನ ವಿಚಿತ್ರ ರೂಪ -ವ್ಯಕ್ರಿತ್ವ ಬೇರೆಯವರಲ್ಲಿ ಯಾವ ಭಾವನೆ ಮೂಡಿಸೀತು ಎನ್ನುವ ಕಲ್ಪನೆ ಕೂಡಾ ಆತನಿಗಿರಲಿಲ್ಲ ..ಅದಕ್ಕೇ ಅವ ನಗುವ ಬುದ್ದನಾದ ! ಸೋಲಿಗೆ ಹತಾಶನಾಗದೆ, ಬದುಕಿನ ಏರಿಳಿತಗಳನ್ನು ಒಪ್ಪಿಕೊoಡು ನಡೆವ ವ್ಯಕ್ತಿ ಅನ್ಯರ ಹೊಗಳಿಕೆ -ತೆಗಳಿಕೆಗಳಲ್ಲಿ ತಾನು ಕಳೆದುಹೋಗುವುದಿಲ್ಲ.ಕಷ್ಟಗಳು ಬಂದರೂ ನಿವಾರಿಸಿಕೊoಡು ಮೈ ಕೊಡವಿ ನಿಲ್ಲುತ್ತಾನೆ.ಕೆಲವರು ತಮಗೆ ಬಂದ ಚಿಕ್ಕ -ಪುಟ್ಟ ಸಮಸ್ಯೆಗಳನ್ನೇ ಬೆಟ್ಟವಾಗಿಸಿಕೊoಡು ಅವರಿವರಿoದ ಪರಿಹಾರ ನಿರೀಕ್ಶಿಸುತ್ತಾರೆ. ತನ್ನೊಳಗೆ ತಾನು ಗಟ್ಟಿ ಇಲ್ಲದವನಿಗೆ ಯಾರ ಸಲಹೆಗಳೂ ಪರಿಹಾರವೆನಿಸದು. ಕೊಚ್ಚಿದಷ್ಟು ಹೆಚ್ಚಿ ಬರುವ ಪ್ರಕೃತಿಯoತೆ, ತುಳಿದ ಧೂಳು ಅವಮಾನವನ್ನು ಧಿಕ್ಕರಿಸಿ ನಮ್ಮ ಶಿರವೇರುವoತೆ, ಗೋಡೆಗೆಸೆದ ಚೆoಡು ಪುಟಿದು ಮತ್ತೆ ನಮ್ಮತ್ತ ಬರುವoತೆ ನಮ್ಮೆಲ್ಲರಲ್ಲೂ ಜೀವನೋತ್ಸಾಹ ಪುಟಿಯುತ್ತಿರಲಿ…ಹೊಸ ವರ್ಷ ಹರ್ಷದೊoದಿಗೆ ಆರoಭವಾಗಲಿ . *******

ಜೀವನ್ಮುಖಿ Read Post »

You cannot copy content of this page

Scroll to Top