ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಕನ್ನಡದ ಅಸ್ಮಿತೆ

ನಾಡ ದ್ವಜ ಯಾಕೆ ಬೇಕು? ಚಂದ್ರಪ್ರಭ ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ ತೋರುತಿಹುದು ಹೊಡೆದು ಹೊಡೆದು ಬಾನಿನಗಲ ಪಟ ಪಟ ಕಯ್ಯಾರ ಕಿಞ್ಞಣ್ಣ ರೈ ದೇಶ, ಭಾಷೆ, ಸಂಸ್ಕೃತಿ, ಸಂಪ್ರದಾಯ ಇತ್ಯಾದಿ ಎಲ್ಲವುಗಳ ಮೂಲ ನೆಲೆ ಅಸ್ಮಿತೆ. ಅಷ್ಟೇ ಅಲ್ಲ ಇವೆಲ್ಲ ಒಂದನ್ನೊಂದು ಪೂರಕವಾಗಿ ಪ್ರಭಾವಿಸುವ ಅಂಶಗಳು. ವ್ಯಕ್ತಿ, ವ್ಯಕ್ತಿಯ ಮನೆತನ, ಪ್ರದೇಶ ಎಲ್ಲಕ್ಕೂ ಒಂದು ಹೆಸರಿದೆ. ಹತ್ತಾರು ಸಂಗತಿಗಳನ್ನು ಹೇಳಿ ಬಿಡುವ ತಾಕತ್ತು ಆ ಒಂದು ಹೆಸರಿಗಿದೆ. ಗುರುತಿಸುವಿಕೆಯ ಇಂಥದ್ದೊಂದು ಅಂಶವಾಗಿ ಹುಟ್ಟಿದ್ದು ‘ಧ್ವಜ’ ಎಂಬ ಪರಿಕಲ್ಪನೆ. ಉರಗ ಪತಾಕ ಎಂದೊಡನೆ ತಟ್ಟನೆ ನೆನಪಾಗುವುದು ದುರ್ಯೋಧನ ಮತ್ತವನ ಛಲ. ಗರುಡಧ್ವಜನೆಂದಾಗ ಕೃಷ್ಣ, ಕಪಿಧ್ವಜನೆಂದಾಗ ಅರ್ಜುನ, ವರಾಹ ಧ್ವಜ ಅಂದಾಗ ವಿಜಯನಗರ ಸಾಮ್ರಾಜ್ಯ, ಭಗವಾ ಧ್ವಜ ಅಂದಾಗ ಮರಾಠಾ ಸಾಮ್ರಾಜ್ಯ ನೆನಪಿಗೆ ಬರುವುದು. ಧ್ವಜ, ಪತಾಕೆ, ಬಾವುಟ ಎಂದೆಲ್ಲ ಕರೆಸಿಕೊಳ್ಳುವ ಈ ಸಂಗತಿ ನಿರ್ದಿಷ್ಟ ಕಾರ್ಯೋದ್ದೇಶವನ್ನು ಸೂಚಿಸುತ್ತದೆ. ನಿರಂತರ ಎಲ್ಲರ ಲಕ್ಷ್ಯವನ್ನು ತನ್ನತ್ತ ಸೆಳೆದು ಗುರಿ ತಲುಪುವ ಸಂಕೇತವನ್ನು ಪ್ರತಿನಿಧಿಸುತ್ತದೆ. ಕೆಂಪು ಕೋಟೆಯ ಮೇಲೆ ಭಾರತದ ತ್ರಿವರ್ಣ ಧ್ವಜ ಹಾರಬೇಕೆಂಬ ಕನಸು ನನಸಾದ ಕ್ಷಣದ ಹಿಂದೆ ಏನೆಲ್ಲ ಹೋರಾಟ, ತ್ಯಾಗ, ಬಲಿದಾನಗಳಿವೆ.. ಕೆಲವಷ್ಟು ಮೊಳದ ಬಟ್ಟೆಯಾಗಿರದೇ ಇಡಿಯಾಗಿ ‘ಇಂಡಿಯಾ’ ವನ್ನು ಎಲ್ಲಾ ಗೌರವ, ಸ್ಥಾನ, ಮಾನ ಸಮ್ಮಾನಗಳ ಎತ್ತರದಲ್ಲಿ ನಿರೂಪಿಸುವ ಅಂಶವಾಗಿ ತ್ರಿವರ್ಣ ಧ್ವಜ ಪ್ರತಿಯೊಬ್ಬ ದೇಶವಾಸಿಯ ಎದೆಯಲ್ಲಿ ಸ್ಥಾನ ಪಡೆದಿದೆ. ಸ್ವಾತಂತ್ರ್ಯ ಪೂರ್ವದ ಸಂಸ್ಥಾನಿಕ ಅರಸರ ನಿಯಂತ್ರಣದಲ್ಲಿದ್ದ ಬಿಡಿ ಬಿಡಿ ಪ್ರದೇಶಗಳು ಇಡಿಯಾಗಿ “ಒಂದು ದೇಶ” ದ ಪರಿಕಲ್ಪನೆಯಡಿ ಬರುವಾಗಲೂ ಸಂಸ್ಥಾನಗಳು ಭಾಷೆ, ಸಂಸ್ಕೃತಿ ಇತ್ಯಾದಿ ಹಲವಾರು ಸಂಗತಿಗಳ ವಿಷಯದಲ್ಲಿ ತಮ್ಮತನವನ್ನು ಉಳಿಸಿಕೊಳ್ಳುತ್ತವೆ… ಅದರಲ್ಲಿ ಒಕ್ಕೂಟದ ಸಾಂಕೇತಿಕ ಪ್ರತಿನಿಧಿತ್ವದ ಹಸ್ತಕ್ಷೇಪ ಇರುವುದಿಲ್ಲ ಎಂಬ ಅಂಶವನ್ನು ಸ್ಪಷ್ಟಪಡಿಸಿದ ಬಳಿಕವಷ್ಟೇ ಸಂಸ್ಥಾನಗಳ ವಿಲೀನ ಕಾರ್ಯ ಸಾಧ್ಯವಾಗಿದ್ದು ಮತ್ತು ಅಂದಿನ ಹಿರಿಯರ ನಿರಂತರ ಮನವೊಲಿಸುವ ಪ್ರಯತ್ನದಿಂದ ಅದು ನೆರವೇರಿದ್ದು. ಚಿಕ್ಕದೊಂದು ಉದಾಹರಣೆ ಈ ಸಂಗತಿಯನ್ನು ಪ್ರಸ್ತುತ ಪಡಿಸುವುದು – ರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆಗಳು ನಡೆದಿವೆ ಎಂದುಕೊಳ್ಳೋಣ. ಅಲ್ಲಿ ಒಂದು ಗುಂಪಿನವರು ತಮಿಳು ಧ್ವಜ ಎತ್ತಿ ಹಿಡಿದಿದ್ದಾರೆ, ಕೆಲವರು ಮಲಯಾಳ ಧ್ವಜ, ಮತ್ತೆ ಕೆಲವರು ಪಂಜಾಬಿ..ಇತ್ಯಾದಿ ಅನುಕ್ರಮವಾಗಿ ತಮ್ಮ ತಮ್ಮ ಧ್ವಜ ಹಿಡಿದು ನಿಂತಿರುವಾಗ ನೀವು ಎತ್ತಿ ಹಿಡಿಯುವ ಧ್ವಜ ಕನ್ನಡ ಧ್ವಜವೇ ಆಗಿರುತ್ತದೆ. ಅಖಂಡತೆಯ ಸೂಚಕ ಎಂಬ ಕಾರಣಕ್ಕೆ ಅಲ್ಲಿ ನೀವು ಭಾರತದ ಧ್ವಜ ಹಿಡಿಯಲಾಗದು. ಕನ್ನಡ ಧ್ವಜ ಎಂದಾಗ ಅದು ಬಸವಾದಿ ಶರಣರು, ಸೂಫಿ ಸಂತರು, ಚೆನ್ನಮ್ಮ-ಅಬ್ಬಕ್ಕ ರಂಥ ಧೀರ ರಾಣಿಯರು, ಟಿಪ್ಪು, ಒಡೆಯರ್ ಮೊದಲಾದ ರಾಜರು ; ಪಂಪ, ರನ್ನ ಪೊನ್ನರಿಂದ ಹಿಡಿದು ಕುವೆಂಪು, ಬೇಂದ್ರೆ ವರೆಗಿನ ಕವಿಗಳನ್ನು… ಅವರು ಬಿತ್ತಿ ಹೋದ ಮೌಲ್ಯಗಳನ್ನು ಪ್ರತಿನಿಧಿಸುತ್ತದೆ. ಕರ್ನಾಟಕದ ಇತಿಹಾಸ, ಪರಂಪರೆಯನ್ನು ಪ್ರತಿನಿಧಿಸುವ ಕನ್ನಡತನದ ಪ್ರತೀಕ ಕನ್ನಡ ಧ್ವಜ. ಶಾಂತಿ, ಸೌಹಾರ್ದತೆ ಕನ್ನಡಿಗರ ಮೂಲ ಗುಣ, ಸ್ವಭಾವ. ತನ್ನ ಇಂಥ ಮೌಲ್ಯಗಳ ಮೂಲಕವೇ ಕರ್ನಾಟಕ ಭಾರತೀಯತೆಯನ್ನು ಅಭಿವ್ಯಕ್ತಿಗೊಳಿಸುತ್ತ ಬಂದಿದೆ. ವಿವಿಧತೆಯಲ್ಲಿ ಏಕತೆ ಭಾರತದ ಹೆಗ್ಗಳಿಕೆ. ಭಾಷೆ, ಸಂಸ್ಕೃತಿ, ಆಚರಣೆಗಳಲ್ಲಿರುವ ವೈವಿಧ್ಯತೆ ಭಾರತದ ಅಂತಃಸತ್ವ.  ಈ ಜಾತ್ಯತೀತ ಸ್ವರೂಪ, ಬಹುತ್ವದ ನೆಲೆಯೇ ಭಾರತ ವಿಶ್ವಮಾನ್ಯವಾಗಲು ಕಾರಣವಾದ ಅಂಶವಾಗಿದೆ. ಈ ಅರ್ಥದಲ್ಲಿ ಭಾರತವೆಂದರೆ ನೂರಾರು ಸುಂದರ ಅಸ್ಮಿತೆಗಳ ಸಂಘಟಿತ ರೂಪ. ಎಲ್ಲ ರಾಜ್ಯಗಳೂ ತಮ್ಮತನವನ್ನು ಉಳಿಸಿಕೊಂಡೇ ಭಾರತೀಯತೆಯನ್ನು ಒಪ್ಪಿಕೊಂಡಿವೆ. ‘ಭಾರತ ಜನನಿಯ ತನುಜಾತೆ’ ಎಂದು ಬಣ್ಣಿಸುವಾಗ ಕುವೆಂಪು ನಿರೂಪಿಸುವುದು ಈ ಅಂಶವನ್ನೇ. ಆಯಾ ರಾಜ್ಯಗಳ ಭಾಷೆ, ಸಂಸ್ಕೃತಿ, ಪರಂಪರೆಯನ್ನು ಗೌರವಿಸುವುದು ಒಕ್ಕೂಟ ವ್ಯವಸ್ಥೆಯ ಹೊಣೆ ಮತ್ತು ನಿಜವಾದ ಭಾರತೀಯತೆಯ ಲಕ್ಷಣ. ರಾಜ್ಯಗಳು ರಾಷ್ಟ್ರ ಧ್ವಜದ ಅಡಿಯಲ್ಲಿ ತಮ್ಮ ಅಸ್ಮಿತೆಯ ಕುರುಹಾಗಿ ಸ್ವಂತ ಧ್ವಜ ಹೊಂದುವುದರಲ್ಲಿ ಎಂಥ ಅತಿರೇಕವೂ ಇಲ್ಲ. ರಾಜ್ಯೋತ್ಸವದ ಸಂದರ್ಭದಲ್ಲಿ ಆ ಧ್ವಜ ಹಾರಿಸುವುದರಲ್ಲಿ ಯಾವ ತಪ್ಪೂ ಇಲ್ಲ. ಈ ಧ್ವಜವನ್ನು ನಿರಾಕರಿಸಿ ಅಲ್ಲಿ ‘ಒಂದು ಧ್ವಜ’ ಪರಿಕಲ್ಪನೆಯನ್ನು ಹೇರುವ ಪ್ರಯತ್ನಗಳು ನಡೆದರೆ ಅದು ಪರೋಕ್ಷವಾಗಿ ಕರ್ನಾಟಕದ ಇತಿಹಾಸ, ಪರಂಪರೆಯನ್ನು ನಿರಾಕರಿಸುವುದೇ ಆಗಿದೆ. ಕನ್ನಡಿಗರು ಕನ್ನಡ ಧ್ವಜವನ್ನು ಪ್ರೀತಿಸಿದರೆ ಅದೊಂದು ಸಹಜ ಪ್ರಕ್ರಿಯೆ. ಅದನ್ನು ಪ್ರತಿಯೊಬ್ಬನೂ ಗೌರವಿಸಬೇಕು. =============================================

ಕನ್ನಡದ ಅಸ್ಮಿತೆ Read Post »

ಕಾವ್ಯಯಾನ

ಕಾವ್ಯಯಾನ

ಮಧುಕುಮಾರ್ ಸಿ.ಹೆಚ್. ನೂತನ ಪ್ರಜ್ಞಾ ದೀಪಿಕೆ ನಿರ್ಗಮಿಸು ಸಾಕ್ಷಿಪ್ರಜ್ಞೆಯೆ, ಅಂತರಂಗದ ದನಿಯೆದುರು ಮಂಡಿಯೂರಿ ನಿಲ್ಲಬೇಡ: ಯಾರದೋ ಬಹಿರಂಗ ತಲ್ಲಣಕೆ ಮನ ತೆರೆಯಬೇಡ ತಪ್ಪು-ಒಪ್ಪುಗಳ ಕಂತೆಯನು ಅಡ್ಡಗೋಡೆಯ ಮೇಲಿಟ್ಟು ಸುಮ್ಮನೆ- ತಣ್ಣಗೆ ಪಲಾಯನ ಮಾಡು ಪ್ರತಿಕ್ರಿಯೆ – ಸ್ಪಂದನದ ಗೊಡವೆ ನಿನಗೇತಕೆ? ಭೂತದ ಬೆನ್ನು ಹತ್ತಿ; ವರ್ತಮಾನವ ಕಟ್ಟಿಡು ಸತ್ಯದರ್ಶನಕೆ ಗಾಂಧಾರಿ- ಧೃತರಾಷ್ಡçರ ಸಾಲಲ್ಲಿ ನಿಲ್ಲು ನಮ್ಮವ ನಮ್ಮವರೆಂಬ ದಾರಿಯಲಿ ಸದ್ದುಮಾಡದೆ ನುಸುಳಿ ನುಸುಳಿ ಮುಂದೆ ಸಾಗು. ಅನುಭವ ಮಂಟಪದ ಮಹಾನುಡಿಗಳನು ಅನ್ಯರಿಗೆ ಅನ್ವಯಿಸಿ ಗುಣಿಸಿಬಿಡು ಅಹಮಹಮಿಕೆಯ ಆಪ್ಯಾಯನದೊಡನೆ ಲೋಕದೆದುರು ಸರ್ವಗುಣ ಸಂಪನ್ನತೆಯ ಪೋಷಾಕು ಧರಿಸಿ ಯಾರ ಜಪ್ತಿಗೂ ಸಿಗದ ನಗೆಯ ನವಿಲನ್ನೆÃರಿ ಆ ಭಾವ ಈ ಭಾವ ಎಲ್ಲ ಭಾವಗಳ ಹಿಮ್ಮೆಟ್ಟಿಸಿ ಸುಮ್ಮನೆ- ತಣ್ಣಗೆ ಪಲಾಯನ ಮಾಡು ಸುಮ್ಮನೆ- ತಣ್ಣಗೆ ಪಲಾಯನ ಮಾಡು ======================= ಪರಿಚಯ: ಕನ್ನಡಭಾಷಾ ಶಿಕ್ಷಕರು-ಬರಹಗಾರರು

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಕವಿ ಕೆ.ಬಿ.ಸಿದ್ದಯ್ಯನವರ ನೆನಪಿನಲ್ಲಿ ಕೊನೆಯ ಅ.. ಆ.. ಮಂಟಪ ಡಾ.ಆನಂದ ಕುಮಾರ್ ಮೈಸೂರು ಹಿಂದೆ ಮುಂದೆ ಒಂದಾಕ್ಷರದ ಬದಲಿಕೆ ಒಂದಾಕ್ಷರ ಸೇರೊ ಆಳಿಸೋ ಹಾಗಿಲ್ಲವೆಂದು ಪ್ರಕಟಿಸೋಕೊ ತಾಕೀತು ಮಾಡೋ ಹಾಗೆ ಅ.. ಆ.. ಮಂಟಪದ ಮಾರ್ಗದ ಸ್ವೀಕಾರಕ್ಕೆ ಕಾಲನ ಒಪ್ಪಿಸಿದ ತಂಟೆಕೋರ ಮುದ್ದು ಮಾದಪ್ಪನ ಕುಡಿಯೇ ಕೆಲಹೊತ್ತು ಇನಿಯ ಮೋಹ ಪಾಶ ಕಳಚಿ ಸಿದ್ದಾರ್ಥ ರೂಪ ಧರಿಸಿಯೂ ಪತಿ ಧರ್ಮ ಪಾಲಕನಾಗಿಯೂ ಆಲ್ಲಮ.. ಅಲ್ಲ..ಹೌದು ಅಪ್ಪ ಭಾವ ಬಂಧನ ಕಳಚದಾ ಕಹಿ ಸಿಹಿ ಊಣ್ಣೋ ವ್ಯಾಮೋಹ ವ್ಯಾಕುಲತೆ ಇಲ್ಲದಾಗಿ ಸಂಸಾರ ಸಾಗರ ಈಜಿ ತಾವರೆ ಪುಷ್ಪಧಾರಿ ಆದಿಜಾಂಭವನಾದೆ ಅಡ್ಡಿ ಅತಂಕ ಆಗಾಧಗಳೊಳಗಿಂದ ಎದ್ದು ಮರೆವಿನಂದು ಪೂಜಿಸುವಿಕೆಗೆ ನಿನ್ನ ಕೈನ ಸುರೆ ಮದ್ದು ನೀಡೆಂದು ಬೇಡಿ ಪಡೆದಿಹ ಐಭೋಗ ಸಂತನಂತೆ ಸಂಗಡಿಗನಾಗಿ ಎಲ್ಲರೊಂದಿಗೆ ಹಂಚಿಕೊಂಡು ಸೇವಿಸಿದ್ದ ಮಾತಂಗಿ ಮಗನೇ ನಾಡ ಮಣ್ಣಲ್ಲಿ ಮಣ್ಣಾದವರ ಕತೆಯ ಕರಳು ಕಿವಚುವಂತೆ ಹಾಡು ಕಟ್ಟಿದ್ದ ಮೋಡಿಗಾರ ಅಲ ಆಕಾಶೆ ಮರದ ನಡು ಮಧ್ಯೆ ಮಲಗಿದ್ದ ಬಾಧ್ಯತೆಗೆ ಕಟ್ಟು ಬಿದ್ದಯೊ ಮಾನ್ಯತೆಗಾಗಿ ಚರಮರಾಗವನ್ನು ಗುನುಗಿ ಹೋಗಿ ಬಿಟ್ಟಯಾ ಗುರುವೇ. ============================. ಪರಿಚಯ: ಕಳೆದ ಇಪ್ಪತ್ತೇಳು ವರುಷದಿಂದ ದಲಿತ ಚಳುವಳಿ ಹಾಗೂ ಅಲೆಮಾರಿ & ಅರೆ ಅಲೆಮಾರಿ ಮತ್ತು ಕೊಳಚೆ ನಿವಾಸಿಗಳ ಹಕ್ಕುಗಳ ಪರ ಕೆ ಕೆ ಎನ್ ಎಸ್ ಸಹಿತ ಅನೇಕ ಸಂಘಟನೆಗಳೊಂದಿಗೆ ಕೆಲಸ ಮಾಡುತ್ತ ಹಾಗೂ ಜಾತಿ ಸಮನ್ವಯಕ್ಕಾಗಿ ಸಾಮರಸ್ಯ ವೇದಿಕೆಯಲ್ಲಿ ಪಾಲ್ಗೊಂಡಿದ್ದಾರೆ

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಪ್ರಮಿಳಾ ಎಸ್.ಪಿ. ಹಬ್ಬ ದೀಪಾವಳಿಯ ಸಡಗರಕ್ಕೆ ಮಗಳು ಮನೆಗೆ ಬಂದಂತೆ ಮೇಕೆಯೂ ಸಂತೆಗೆ ಬಂದಿತು. ಯಾರದ್ದೋ ಮನೆ ಸೇರಿ ರಾತ್ರಿ ಇಡೀ ಮಾವಿನ ಎಲೆ ತಿಂದು ನಗುತ್ತಿತ್ತು. ತುಂಬಿದ ಮೊಲೆಗಳು ಜೋತು ಬಿದ್ದಿದ್ದ ಕಂಡು ಆಡಿನ ಹಾಲು ಶ್ರೇಷ್ಟ ವಂತೆ ಎಂದೇ ನನ್ನೆದೆಯೊಳಗೆ. ಮಾವಿನ ಎಲೆ ಮೆಲುಕಿ ಮಲಗಿದ್ದ ಮೇಕೆ ಬೆಳಗಿನ ಜಾವಕ್ಕೆ ಹಾಲು ಕಕ್ಕಿತ್ತು. ಒಂದಾಡು ಮೂರು ಪಾಲಾಗಿ ನೇತಾಡುತ್ತಿದ್ದ ನೋಡಿ ಮನ ಹೋಳಾಗಿತ್ತು. ಮಹಾವೀರ ನ ನಾಡಲ್ಲಿ ಅಣ್ಣ ನ ವಚನ ನೆನೆದು.. ಮಗಳ ಊಟ ಮುಗಿಯಿತು. ಆಕಳಿಕೆ ಬಂತೆಂದು ನೆಪದಲ್ಲಿ ಕಣ್ಣ ನೀರು ಹೊರ ಹರಿಯಿತು.. ========== ಪರಿಚಯ: ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ವೃತ್ತಿಯಲ್ಲಿ ಶಿಕ್ಷಕಿ,ನೋವುಗಳ ನಡುವೆಯೂ ಖುಶಿಯಾಗಿರುವ ಬಯಸುವ ವ್ಯಕ್ತಿತ್ವ

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಮನದ ಹನಿಗಳು ಅನಿತ ಕೃಷ್ಣಮೂರ್ತಿ ಸಿದ್ದವಾದ ಸೆಳೆತದ ಹೊಸ್ತಿಲು ಸದ್ದಿರದೆ ಸುಳಿದಾಡಿದೆ ಸ್ನೇಹ ಸೇತುವೆ ಹತ್ತಲು ಸಾಧಿಸಲು ಗುರಿ ಮುಂದಿನ ಹಾದಿ ನೂರಾರು ಬಾಧಿಸಲು ಕಾಯಬಹುದು ಆಲೋಚನೆಯ ಕರಾರು ಮನಸಲಿ ಕತ್ತಲಿರುವಾಗ ಕಣ್ಣಿನ ಹೊಳಪು ಬೆಳಕಾಗಿ ಸುತ್ತಲಾಗಲಿಲ್ಲ ನಾನೇಕೆ ಹುಡಕಲಿ ನಿನ್ನ ಅಲ್ಲಿ ಇಲ್ಲಿ ಮಾಸದಂತೆ ಉಳಿದಿದೆ ನಿನ್ನದೇ ಚಿತ್ರ ಮನದ ಭಿತ್ತಿಯಲಿ ಹಟದ ಬೇಲಿಯನ್ನೇ ಸುತ್ತಿಕೊಂಡಿದ್ದ ಮನಸು ದಾಟಿ ಬಂದಿತ್ತು ಕಂಡು ನಿನ್ನ ಮಂದಸ್ಮಿತದ ಸೊಗಸು ಕಾದಿದೆ ತೆಪ್ಪವೊಂದು ಸೇರಿಸಲು ದೂರ ತೀರವನು ಕಾಡಿದೆ ನೆನಪೊಂದು ಹೊರಲಾರದೆ ದೂರಿನ ಭಾರವನು ನಾನೇಕೆ ಸ್ಪರ್ಧಿಸಲಿ ನಿನ್ನೊಂದಿಗೆ ಹೂವೇ ನಮ್ಮಿಬ್ಬರ ಗುರಿ ಒಂದೇ… ಒಲವೇ… ಅಲ್ಲವೆ! ಬೊಗಸೆಯಲ್ಲಿ ಹಿಡಿದ ಪ್ರೀತಿಗೂ ಕಣ್ಣ ರೆಪ್ಪೆಯಂತೆ ಕಾಪಾಡುವ ಮಮತೆಗೂ ಪೈಪೋಟಿಯೇ?  ಎಷ್ಟು ಮಾತನಾಡಿದೆನೋ ಹೊರಗೆ ಅಷ್ಟು ಮುಚ್ಚಿಟ್ಟಿರುವೆನು ಮೌನದೊಳಗೆ

ಕಾವ್ಯಯಾನ Read Post »

ಅಂಕಣ ಸಂಗಾತಿ

ಕಾಡುವ ಹಾಡು

ಈ ಬಾರಿ ರಾಜ್ಯೋತ್ಸವ ವಿಶೇಷಕ್ಕೆ ಕಾಡುವ ಹಾಡು “ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ” ಸುಜಾತ ರವೀಶ್ ಕನ್ನಡ ಭಾಷೆ ನಾಡು ಸಂಸ್ಕೃತಿಯನ್ನು ಹೊಗಳುವ ವರ್ಣಿಸುವ ಬಿಂಬಿಸುವ ಹಾಡುಗಳು ಸಾವಿರಾರು. ಆದರೂ ಚಿಕ್ಕಂದಿನಲ್ಲಿ ಆಕಾಶವಾಣಿಯಲ್ಲಿ ಕೇಳುತ್ತಿದ್ದ ಈ ಹಾಡು ಅಂದಿನಿಂದಲೂ ಮನದಲ್ಲಿ ಬೇರೂರಿದೆ. ನಿಜವಾದ ಅರ್ಥದಲ್ಲಿ ಕಾಡುವ ಹಾಡಾಗಿದೆ .ಯಾವುದು ಅಂತೀರಾ ?ಅದೇ ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ ಭಿಕ್ಷುಕನಾದರೂ ಕನ್ನಡ ನಾಡಲ್ಲೆ ಮಡಿವೆ ಸಂಗಮ ಚಿತ್ರದ ಈ ಹಾಡನ್ನು ವಿವಿ ಶ್ರೀನಿವಾಸ್ ಮತ್ತು ಸಿಕೆ ರಾದವರು ಹಾಡಿದ್ದಾರೆ ಬರೆದವರು ಸಿವಿ ಶಿವಶಂಕರ್ ಮತ್ತು ಸಂಗೀತ ಕೆಪಿ ಸುಖದೇವ್ ಚಿತ್ರ ಅಷ್ಟೇನೂ ಯಶಸ್ವಿಯಾಗಲಿಲ್ಲ ಅನ್ನಿಸುತ್ತೆ ಆದರೆ ಹಾಡು ಅಬ್ಬಾ ಸೂಪರ್ ಡೂಪರ್ !!!!!! ಸಿರಿವಂತ/ತೆ ಆದರೂ ಭಿಕ್ಷುಕ/ಕಿ ಯಾದರೂ ಕನ್ನಡ ನಾಡಲ್ಲೇ ಇರುವ ಅಭೀಷ್ಟ ವ್ಯಕ್ತಪಡಿಸಿ ಅದನ್ನು ವಿವಿಧ ರೀತಿಗಳಲ್ಲಿ ವರ್ಣಿಸುತ್ತಾ ಹೋಗುತ್ತದೆ ಈ ಹಾಡು .ವೀಣೆಯ ಗೆ ಶೃಂಗೇರಿ ಶಾರದೆಯ ಕೈಯಲ್ಲಿ ನಲಿವ ವೀರ ಖಡ್ಗ ವಾಗಿ ಚಾಮುಂಡಿಯ ಕೈಯಲ್ಲಿ ಹೊಳೆವ ಅಭಿಲಾಷೆ ಶರಣರ ವಚನದ ಗಾನ ಮಾಧುರ್ಯ ಹಂಪೆಯ ಕಲ್ಲುಗಳ ಗಾಂಭೀರ್ಯ ಇಲ್ಲಿ ನೆನೆಯ ಪಟ್ಟಿಗೆ ದಾಸ ಸಾಹಿತ್ಯವೇ ಮೊದಲಾದ ಕನ್ನಡ ಸಾಹಿತ್ಯವೇ ನನ್ನ ಆಸ್ತಿ ಎನ್ನುತ್ತದೆ ಪಾತ್ರ ಮೀರುವುದಿದೆ ಕಾವೇರಿ ತುಂಗೆಯ ಮಡಿಲಲ್ಲಿ ಎಂದು ಸಾರುತ್ತದೆ ಇಡೀ ಗೀತೆಯ ಮುಕುಟ ಪ್ರಾಯವೇ ಕಡೆಯ ಸಾಲುಗಳು ಮೈ ಜುಮ್ಮೆನ್ನಿಸಿ ಪರವಶಗೊಳಿಸುವ ಕಣ್ಣಂಚಿನಲ್ಲಿ ಹನಿಯುತ್ತದೆ ಭಾವೋತ್ಕಟತೆ ದಾರಿ ಮಾಡುತ್ತದೆ ಮರುಜನ್ಮ ಪಡೆಯುವುದಾದರೆ ಕನ್ನಡದ ಮಣ್ಣಲ್ಲಿ ಮಣ್ಣಾಗುವ ಮಹದಾಸೆ ಎಂತಹ ಉದಾತ್ತ ಚಿಂತನೆ ಇದಕ್ಕಿಂತ ಮಿಗಿಲು ಇನ್ನೇನಾದರೂ ಇದೆಯೇ ಇಂದಿನ ಪೀಳಿಗೆಯ ಬಹಳ ಜನ ಈ ಹಾಡು ಕೇಳಿರುವುದಿಲ್ಲ ಹೀಗಾಗಿ ನನ್ನ ಮೆಚ್ಚಿನ ಹಾಡಿನ ಪೂರ್ಣ ಸಾಹಿತ್ಯ ಹಾಗೂ ಲಿಂಕ್ ನಿಮಗಾಗಿ . ಓದಿ ಕೇಳಿ ನಿಮ್ಮ ಅಮೂಲ್ಯ ಅಭಿಪ್ರಾಯ ವ್ಯಕ್ತಪಡಿಸುತ್ತೀರ ಅಲ್ವಾ? ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ ಭಿಕ್ಷುಕನಾದರೂ ಕನ್ನಡ ನಾಡಲ್ಲೆ ಮಡಿವೆ ಸಿರಿವಂತಳಾದರೂ ಕನ್ನಡ ನಾಡಲ್ಲೆ ಮೆರೆವೆ ಭಿಕ್ಷುಕಿಯಾದರೂ ಕನ್ನಡ ನಾಡಲ್ಲೆ ಮಡಿವೆ. ಸಂಗೀತ ಕಲೆ ಮೆಚ್ಚಿ ವೀಣೆಯ ಪಿಡಿದೊಡೆ ಶೃಂಗೇರಿ ಶಾರದೆ ಮಡಿಲಲ್ಲಿ ನಲಿದೆ ವೀರ ಖಡ್ಗವ ಝಳುಪಿಸುವ ಧೀರ ನಾನಾದರೆ ಚಾಮುಂಡಾಂಬೆಯ ಕರದಲ್ಲಿ ಹೊಳೆವೆ. ಶರಣಗೆ ವಂದಿಪ ಶರಣೆ ನಾನಾದೊಡೆ ವಚನವೆ ಬದುಕಿನ ಮಂತ್ರವೆನುವೆ. ವೀರಗೆ ವಂದಿಪ ಶೂರ ನಾನಾದೊಡೆ ಕಲ್ಲಾಗಿ ಹಂಪೆಯಲ್ಲಿ ಬಹುಕಾಲ ನಿಲ್ಲುವೆ . ದಾಸರಿಗೆ ವಂದಿಪ ಅಭಿಮಾನಿಯಾದೊಡೆ ಕನ್ನಡ ಸಾಹಿತ್ಯ ನನ್ನಾಸ್ತಿ ಎನ್ನುವೆ ಪುಣ್ಯ ನದಿಯಲ್ಲಿ ಮೀಯುವೆನಾದೊಡೇ ಕಾವೇರಿ ತುಂಗೆಯರ ಮಡಿಲಲ್ಲಿ ಮೀಯುವೆ. ಇನ್ನೊಮ್ಮೆ ಮರುಜನ್ಮ ಪಡೆಯುವೆನಾದರೆ ಕನ್ನಡದ ಮಣ್ಣಲ್ಲಿ ಮಣ್ಣಾಗಿ ನಿಲ್ಲುವೆ. https://youtu.be/ycZUf5IbNug ===========================

ಕಾಡುವ ಹಾಡು Read Post »

ಇತರೆ

ಅನುಭವ

ಭಯದ ನೆರಳಲ್ಲಿ ಹೆಬ್ರಿ ಸದಾನಂದ ಶೆಟ್ಟಿ ಭಯದ ನೆರಳಲ್ಲಿ ಕೈಯಲ್ಲಿ ಸಣ್ಣ ಬ್ಯಾಗ್ ಹಿಡಿದ ನಾನು ನನ್ನ ಭಾವಿ ಪತ್ನಿ ನೋಡೊ ಬರದಲ್ಲಿ ಹೆಜ್ಜೆ ಹಾಕಿದೆ 40 ನಿಮಿಷ ಕಳೆದ ನ೦ತರ ಮಾವನ ಮನೆ ನಾಯಿಗಳ ಬೊಗಳುವಿಕೆಗೆ ಚಿಮಿಣಿ ಹಿಡಿದು ಹೊರ ಬ೦ದಳು ನನ್ನ ಭಾವಿ ಪತ್ನಿ, ಕಗ್ಗತ್ತಲು ” ಯಾರದು ಜಾಗ್ರತೆ ನಾಯಿ ಕಚ್ಚುತ್ತೆ ”ಅ೦ದಾಗ ” ನಾನು ಕಣೆ” ಅ೦ದಾಗ ಆಕೆಗೆ ಸಣ್ಣವರಿದ್ದಾಗಲಿ೦ದ ಗೊತ್ತಿದ್ದರಿ೦ದ ಓಡಿ ಹೋಗಿ ನಾಯನ್ನು ಕಟ್ಟಿ, ತ೦ಗಿಯನ್ನುದ್ದೇಶಿಸಿ ” ರತ್ನ ನಿನ್ನ ಬಾವ ಬ೦ದಿದ್ದಾರೆ ಅಮ್ಮನಿಗೆ ಹೇಳು” ಅ೦ದವಳೆ ಒಳಗೆ ಹೋಗಿ ಮಾಯವಾದ್ಲು(ನಾಚಿಕೆ) ಹೊರ ಬ೦ದ ಅತ್ತೆಯವರು ”ಈಗ ಬ೦ದದ್ದಾ ಮಗ ಬಾ, ಬಚ್ಚಲಿಗೆ ಹೋಗಿ ಕೈಕಾಲು ಮುಖ ತೊಳೆದು ಕೊ೦ಡು ಬಾ” ಅ೦ದಾಗ ಅತ್ತೆಯ ಹಿ೦ದೆಯೇ ಬ೦ದ ನನ್ನ ಮಾವ ”ಮೊನ್ನೆ ಬ೦ದಿದ್ದೀಯ ಅನ್ನೋ ಸುದ್ದಿ ಇತ್ತು,ಈಗ ಬರೋದ” ಪ್ರೀತಿಯಿ೦ದ ಗದರಿದರು ”ಅಲ್ಲಿ ನಿಮ್ಮ ತ೦ಗಿಗೆ ಹುಷಾರಿರಲಿಲ್ಲಾ ಹಾಗೆ ನೋಡ್ಳಿಕ್ಕೆ ಬ೦ದದ್ದು” ಅ೦ದಾಗ ಅವರು ”ಹುಷರಿಲ್ಲಾ, ಒ೦ದು ಚೀಟಿ ಬಸ್ಸಲ್ಲಿ ಕೊಟ್ಟಿದ್ರೆ ವಿಷಯ ಗೊತ್ತಾಗಿ ನಾನು ಬರ್ತಿರ್ಲಿವಾ” ಅಷ್ಟರಲ್ಲಿ ಇಬ್ಬರಿಗೂ ಊಟಕ್ಕೆ ಬುಲಾವ್ ಇಬ್ಬರೂ ಊಟವಾದ ಮೇಲೆ ಮಲಗಿದೆವು ,ಬೆಳಿಗ್ಗೆ ನಾನು ಏಳುವಾಗ 8.00 ಘ೦ಟೆ ಎದ್ದವನೆ ”ಅತ್ತೆ ಮಾವ ಎಲ್ಲಿ” ಎ೦ದಾಗ ಅವರು ಅಕ್ಕನ್ನ(ನಮ್ಮ ತಾಯಿಯನ್ನು ಹಾಗೆ ಕರೆಯುವುದು ನಮ್ಮತ್ತೆಯ ವಾಡಿಕೆ) ನೋಡ್ಲಿಕ್ಕೆ ಬೆಳಿಗ್ಗೆ ಫ಼ಸ್ಟ್ ಬಸ್ಸಲ್ಲಿ ನಿಮ್ಮೂರಿಗೆ ಹೋಗಿದ್ದಾರೆ ನೀನು ನಾಲ್ಕು ದಿನ ಇಲ್ಲೆ ಇರಬೇಕ೦ತೆ ಅ೦ದಾಗ ”ಇಲ್ಲಾ ಅತ್ತೆ ನಾನು ಹೋಗ ಬೇಕು ರಜೆ ಹೆಚ್ಚಿಲ್ಲ”ಅ೦ತ ಸುಳ್ಳು ಬಿಟ್ಟೆ, ನಮ್ಮಿಬ್ಬರ ಮಾತು ಬಾಗಿಲ ಸ೦ದಿಯಲ್ಲಿ ನನ್ನವಳು ಕದ್ದು ಕೇಳ್ತಾಯಿದದ್ದು ನೋಡೀದೆ , ”ಸರಿ ಅತ್ತೆ ಈಗ ನಾನು ತೋಡಿಗೆ ಹೋಗಿ ಹಲ್ಲುಜ್ಜಿ ಬರ್ತೇನೆ ಅ೦ದವನೆ ಟವೆಲ್ ಹಿಡಿದು ಹೊರಟೆ ,ಹಲ್ಲುಜ್ಜಿ ತಿರುಗಿ ನೋಡ್ತೆ ,ಇವಳು ತ೦ಗಿ ಒಟ್ಟಿಗೆ ಕೊಡಪಾನ ಹಿಡುಕೊ೦ಡು ಹಾಜೂರ್,ನನ್ನ ನೋಡಿದ ನನ್ನಾಕೆ ತ೦ಗಿಯನ್ನುದ್ದೇಶಿಸಿ”ಹೇಳೇ ಹೇಳೆ ”ತ೦ಗಿಗೆ ಅಕ್ಕನ ತಾಕೀತು ಕೊನೆಗೆ ನಾನೆ ”ಎ೦ತ ಹೇಳೇ ರತ್ನ” ಅ೦ದ ಕೂಡ್ಲೆ ”ಭಾವ, ಭಾವ ಅಕ್ಕ ಹೇಳ್ತಾಳೆ ನೀವು ಎರಡು ದಿನ ಇರ್ಲೇ ಬೇಕ೦ತೆ” ಯಾಕ೦ತೆ” ಅ೦ದವನೇ ಟವಲ್ಲಿನಲ್ಲಿ ಮುಖ ಒರೆಸಿ ನೋಡ್ತೇನೆ ಅವರಿಬ್ಬರು ನೀರು ತು೦ಬಿಸಿ ಹೊರಟು ಹೋಗಿಯಾಗಿತ್ತು.

ಅನುಭವ Read Post »

ಇತರೆ

ಲಹರಿ

ಜೀವನ ಅನ್ನೋ ಸೈಕಲ್ ಶಂಭುಗೌಡ ಆರ್.ಜಿ. ಹುಟ್ಟೆಂಬುದ ಹುಟ್ಟಿದಾಗಿಂದ ಜೀವನ ಅನ್ನೋ ಸೈಕಲ್ ಹತ್ತಿ ಪೆಟಲ್ ತುಳ್ದಿದ್ದೋ ತುಳಿದಿದ್ದು…ಮಾರ್ಗ ಮಧ್ಯದಲ್ಲಿ ಹೆಸರಿಲ್ಲದ ಕಾಣದ ಕೈ ಒಂದು ಬೀಸಾಕಿದ ಬಿಕನಾಸಿ ಮುಳ್ಳು ಅಂಟಿಲ್ಲದಿದ್ದರೂ ಅಂಟ್ಕೊಂಡು ಪಂಚರ್ ಆಗಿ ಪಂಚರಂಗಿ ಟೈಟಲ್ ಇರೋ ಪಂಚರ್ ಅಂಗಡಿಯವರೆಗೂ ನಟರಾಜ ಸರ್ವಿಸ್ ನಲ್ಲಿ ನಡೆದು ರಿಪೇರಿ ಮಾಡಿಸಿ ಮತ್ತದೇ ಸೈಕಲ್ ಹತ್ತಿ ಕಾಣದ ಕನಸುಗಳ ಮೂಟೆಗಳನ್ನ ಹೊತ್ತು ಮತ್ತದೇ ಹೆಸರಿಲ್ಲದ ನನಸಿನ ನಗರಿಯತ್ತ ಪಯಣ ಶುರು.ಮಾರ್ಗ ಮಧ್ಯದಲ್ಲಿ ಬೇಟಿಯಾಗೋ ಅಪರಿಚಿತ ಮುಖಗಳನ್ನ ಪರಿಚಯಕ್ಕೂ ಪರಿಚಿತರಾದಾಗ ಸ್ನೇಹಿತರು ಅನ್ನೋ ಹಣೆಪಟ್ಟಿ ಕೊಟ್ಟು ಮಾಡಬೇಕಾಗಿರೋ ಕ್ಯಾಮೆಗಳಿಗೆಲ್ಲ ಸಾತ್ ಕೊಡ್ತಾ ಬಿಟ್ಟಿ ಬಿಕನಾಸಿ ಕನಸುಗಳಿಗೆಲ್ಲ ನನಸಿನ ಬಣ್ಣ ಹಚ್ಚೋ ಜಿದ್ದಿಗೆ ಬಿದ್ದು ನಾನ್ ಸ್ಟಾಪ್ ಜರ್ನಿ ಬೆನ್ನತ್ತಿ ರೂಲ್ಸ್ ಗಳಿರೋದೆ ಬ್ರೇಕ್ ಮಾಡೋಕೆ ಅನ್ನೋ ಮಾಡರ್ನ್ ಗಾಧೆಯನ್ನ ಜಪಿಸ್ತಾ ಸಿಗ್ನಲ್ ಜಂಪ್ ಮಾಡಿ ಗಾಡ್ ಅನ್ನೋ ಟ್ರಾಪಿಕ್ ಪೋಲಿಸ್ ಹತ್ರ ಸಿಕ್ ಹಾಕೊಂಡಾಗ ಹಿಂದಿರುಗಿ ನೋಡಿದ್ರೆ ಜೊತೆಗಿದ್ದವರು ಅಡ್ರಸ್ ಇಲ್ಲದಂಗೆ ಮಾಯಬಜಾರ್ ಅತ್ತ ಮುಖ ಮಾಡಿ ಮಾಯ ಆಗಿರ್ತಾರೆ. ಕಾಲಿಯಾಗಿರೋ ನಮ್ ಹಣೆ ಮೇಲೆ ಹೆಸರಿಲ್ಲದವ ಗೀಚಿ ಹೋದದ್ದು ಇದೇ ಇರಬಹುದೇನೋ ಅಂದ್ಕೊಂಡು ಜೇಬಲ್ಲಿದ್ದಷ್ಟು ಪೈನ್ ಕಟ್ಟಿ ಶಾತಂ ಪಾಪಂ ಅಂತ ನಮಗ ನಾವೇ ಕೆನ್ನೆಗೆ ಹೊಡೆಕೊಂಡು ತಿರುಗಿ ಬಂದು ಮತ್ತದೇ ಸೈಕಲ್ ಹತ್ತುವಾಗಲೇ ನಾವೆಲ್ಲಿಗೆ ಹೋಗಬೇಕಾಗಿತ್ತು ಅನ್ನೋ ಕಾಣದಿರೋ ಅಡ್ರಸ್ ಒಂದು ಕಾಣೋಕ ಶುರು ಆಗುತ್ತೆ ನೋಡಿ.ಆದ್ರೇನು ಪ್ರಯೋಜನ,ನಾವು ಹೋಗಬೇಕಾದ ಊರಿಂದ ನಾವಿರೋ ಊರು ಅದೆಷ್ಟೋ ಮೈಲುಗಟ್ಟಲೆ ದೂರ.ಹಿಂದಿರುಗಿ ನೋಡಿದ್ರೆ ಅಯ್ಯೋ ಸಾವು ಅನ್ನೋ ದಪ್ಪ ಅಕ್ಷರದಲ್ಲಿರೋ ಊರಿನ ಹೆಸರಿನ ಫಲಕ ಕಣ್ಣಿಗೆ ನಾಟೋ ತರ..ಭಯಾನಕ ಸನ್ನಿವೇಷದ ಪರದೆ ಯಾವ ದಾರಿ ಹಿಡಿದು ಬಂತೋ ಅದೇ ದಾರಿಯಲ್ಲಿ ಬಂದಷ್ಟೇ ವೇಗದಲ್ಲಿ ಮೈ ಕೊರಿಯೋ ಚಳಿಯಲ್ಲೂ ಬೆವರ ಹನಿಗಳ ಕಾಣಿಕೆ ಕೊಟ್ಟು ಕಾಣೆಯಾಗಿ ಬಿಡುತ್ತೆ.ಕೀಸೆಯಿಂದ ಕರ್ಚಿಪ್ ತೆಗೆದು ಬೆವರ ಹನಿಗಳನ್ನೆಲ್ಲ ಸಾವಕಾಶವಾಗಿ ನೇವರಿಸಿ ಅವುಗಳ ಮೈ ತೊಳೆದು ಅದೇ ಕರ್ಚಿಪ್ನಲ್ಲಿ ನೀಟಾಗಿ ಕೀಸೆಯಲ್ಲೆತ್ತಿಟ್ಕೊಂಡು ಬಂದ ದಾರಿಗೆ ಸುಂಕವಿಲ್ಲದವರಂತೆ ಕಣ್ ಮುಂದಿರೋ ದಾರಿ ಹಿಡಿದು ಜೀವನದಲ್ಲಿ ಆಡೋರ ಬಾಯಿಗೆ ಸಿಕ್ಕಿ ದಂಡಪಿಂಡ ಅನ್ನೋ ಬಿರುದಾಂಕಿತರಾಗೋ ಬದಲು ಹುಟ್ಟೆಂಬ ನೆಪ ದ ನೆನಪಾಗಿ ಏನಾದ್ರೂ ಒಸಿ ಕಿಸಿಯೋಣ ಅಂತ ಅಂದ್ಕಂಡು ಅಂದ್ಕೊಳ್ಳದೇ ಇರೋದನ್ನ ಲೈಪ್ ನಲ್ಲಿ ಅಂದ್ಕೊಂಡದ್ದಕ್ಕಿಂತ ಹೆಚ್ಚಾಗಿ ಕಾಣದಿರೋ ಕನಸನ್ನ ಕಸಿ ಮಾಡಿ ನನಸೆಂಬ ಹಣ್ಣನ್ನ ಕೈಯಲ್ಲಿ ಹಿಡಿದುಕೊಂಡು ವಿಜಯಶಾಲಿಯಾಗಿರೋ ಸಾರ್ಥಕತೆಯ ಭಾವ ನಮ್ಮೊಳಗೆ,ನಮ್ಮಷ್ಟಕ್ಕೆ ಮಾತ್ರ ಹುಟ್ಟಿದಂತೆ.ಸ್ವಲ್ಪ ವರುಷಗಳು ಹೊರಳಿದ ಮೇಲೆ ಜೀವನದಲ್ಲಿ ನಮಗಿಂತ ಹೆಚ್ಚಾಗಿ ಕಿಸಿದವರ ಪೋಟೋ ಪೇಪರ್ನಲ್ಲೋ, ಟೀವಿಯಲ್ಲೋ,ಅಕ್ಕ-ಪಕ್ಕದ ಮನೆಯವರ ನಾಲಿಗೆಯಲ್ಲಿ ಹೊರಳಾಡ್ತಿರೋದನ್ನ ಮುಚ್ಚಿಕೊಳ್ಳೋಕೆ ಬಾಗಿಲಿಲ್ಲದ ಕಿವಿಯಲ್ಲಿ ಇಷ್ಟ ಇರದಿದ್ದರೂ ಕಷ್ಟವಾಗದೇ ಸರಾಗವಾಗಿ ಕೇಳಿಸಿಕೊಂಡಾಗ ಚಾಪೆ ಸುತ್ತಿ ಹೊಡೆದಂಗಾಗಿರುತ್ತೆ.ಅವಾಗಲೇ ಗೊತ್ತಾಗಿದ್ದು ಜೀವನದಲ್ಲಿ ಯಾರೂ ಕಿಸಿಲಾರದ ಮಹಾನ್ ಏನನ್ನೂ ನಾವು ಕಿಸಿದಿಲ್ಲ ಅಂತ.ಮನುಷ್ಯನ ಈ ಸಹಜ ಯೋಚನೆಗೆ ಅಸೂಯೆ ಅಂತ ಕರಿಬೇಕೋ?? ಅಥವಾ ನಮ್ಮಷ್ಟಕ್ಕೆ ನಮಗೇ ಇರೋ ಅಸಮಧಾನ ಅಂತ ಕರಿಬೇಕೋ?? ಗೊತ್ತಿಲ್ಲ.ಆದ್ರೆ ಒಂದಂತೂ ಸತ್ಯ. ಅಂದ್ಕೊಂಡಂತೆ ಆದೋರು ಬೆರಳೆಣಿಕೆಯಾದರೆ ಅಂದ್ಕಂಡಿದ್ ಒಂದಾದ್ರೆ ಆಗಿದ್ದೇ ಮತ್ತೊಂದ್ ಅಂತಿರೋರು ಸಾಕಷ್ಟು. ಈ ರೀತಿಯ ಲೆಕ್ಕಾಚಾರದಲ್ಲಿ ನಾವೇನೋ ಒಂದು ಆಗಿದೀವಿ ಅನ್ನೋದನ್ನೇ ಮರೆತು ಬಿಟ್ಟಿರ್ತೀವಿ.ಪಾಲಿಗೆ ಬಂದಿದ್ ಪಂಚಾಮೃತ ಅಂತ ಕಣ್ಣಿಗ್ ಒತ್ಕಂಡು ನಮ್ಮಷ್ಟಕ್ಕೆ ನಾವ್ ನಮ್ಮದೆಷ್ಟೋ ಅಷ್ಟನ್ನ ನಮ್ಮ ಮತಿಯ ಮಿತಿಯೊಳಗೆ ಮಾಡ್ತಾ ಸಾಗಿದ್ರೆ ಈ ಜೀವನ ಸರಾಗವಾಗಿ ಸಾಗುತ್ತೆ.ಜೀವನ ಕಲ್ಪವೃಕ್ಷವಾಗುತ್ತದೆ.

ಲಹರಿ Read Post »

ಕಾವ್ಯಯಾನ

ಕಾವ್ಯಯಾನ

ಮುಖವಾಡ ಸುಜಾತ ರವೀಶ್ ಮುಖವಾಡ *** ಕಿತ್ತೊಗೆಯಬೇಕೆನಿಸುತಿದೆ ಅಂಟಿಕೊಂಡಿರುವ ಈ ಮುಖವಾಡಗಳ ಬಿಸಿ ಧಗೆಯ ಕುಲುಮೆಯಲ್ಲಿ ಉಬ್ಬೆಗೆ ಹಾಕಿದಂತಿದೆ ನೈಜತೆಯ ಶುದ್ದ ಹವೆಯಲ್ಲಿ ಮನ ಉಸಿರಾಡಬಯಸುತಿದೆ. ಮನದಲ್ಲಿ ಜ್ವಾಲಾಮುಖಿ ಸಿಡಿಯುವಂತಿದ್ದರೂ ಲಾವಾರಸ ಹೊರಚಿಮ್ಮದಂತೆ ಜಾಗೃತಿ ವಹಿಸಬೇಕಾಗಿದೆ ಶಾಂತತೆಯ ಮುಖವಾಡ ತೊಟ್ಟು ಬದುಕು ದೂಡಬೇಕಾಗಿದೆ. ಗೋಸುಂಬೆಯ ಹಾಗೆ ಬಣ್ಣ ಬದಲಿಸುತಿರುವವರ ನೋಡಿದಾಗೆಲ್ಲ ಮುಖಕ್ಕೆ ರಾಚುವಂತೆ ಬೈದುಬಿಡಬೇಕೆಂದೆನಿಸಿದರೂ ಸಭ್ಯತೆಯ ಮುಖವಾಡ ಧರಿಸಬೇಕಾಗಿದೆˌನಟಿಸಬೇಕಾಗಿದೆ. ಪರಂಪರಾನುಗತ ಉರುಳುಗಳಿಂದ ಬಿಡಿಸಿಕೊಳ್ಳಬೇಕೆನಿಸಿದರೂ ಹಕ್ಕಿಯಂತೆ ಸ್ವೇಚ್ಛೆಯಾಗಿ ನೀಲನಭದಿ ವಿಹರಿಸಬೇಕೆಂದರೂ ಮತ್ತೆ ಸಂಪ್ರದಾಯದ ಮುಖವಾಡದ ಹಿಂದೆ ನಿಲ್ಲಬೇಕಾಗಿದೆ. ಆಸೆ ಅಕಾಂಕ್ಷೆ ಅಭಿಪ್ರಾಯದ ಹೊರೆ ಬಲವಂತವಾದಾಗಲೆಲ್ಲಾ ಎಲ್ಲವನೂ ಬಿಸುಟು ಸ್ವಚ್ಛಂದವಾಗಿಬಿಡಬೇಕೆನ್ನಿಸಿದರೂ ಸಂಬಂಧಗಳ ಮುಖವಾಡದ ಮರೆಯಲಿ ನಗಲೇಬೇಕಾಗಿದೆ. ಇದು ನಮಗೇನೂ ಹೊಸದಲ್ಲˌಕಷ್ಟವೂ ಅಲ್ಲ ಬಿಡಿ ಮುಖವಾಡಗಳ ತಯಾರಿˌಧರಿಸಲು ತರಬೇತಿ ಬಾಲ್ಯದಿಂದಲೇ ತೊಟ್ಟಿದ್ದೇವೆ ತೊಡುತ್ತಲೇ ಇರುತ್ತೇವೆ ಮುಖವಾಡಗಳ ಬೇಡಿ. ಕನ್ನಡಿಯ ಮುಂದೆ ಮುಖವಾಡವಿರದೆ ನಿಂತಾಗಲೆಲ್ಲಾ ನನ್ನ ಮುಖ ನನದೆನಿಸುವುದಿಲ್ಲˌಯಾವುದೋ ಅಪರಿಚಿತತೆ ನನ್ನತನ ಉಳಿಯಲು ಸಮಯವೇ ಇಲ್ಲವೆಂಬ ವಿಷಣ್ಣತೆ ಬರುತಿದೆ ಕರೆˌಮುಖವಾಡ ಧರಿಸಿ ಹೊರಟೆˌಬರಲೇ? ===============================

ಕಾವ್ಯಯಾನ Read Post »

You cannot copy content of this page

Scroll to Top