ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಸಾವಿರದ ಸಾವಿರ ಕವಿತೆ ರವಿ ರಾಯಚೂರಕರ್ ಬಳಲಿ ಬೇಕೆಂದು ಬಿಕ್ಕಳಿಸಿ ಅತ್ತವನು ಎದೆಗಂಟಿ ನುಡಿ ನುಡಿದು ಆಸೆಯ ಗೋಪುರಕೆ ಹೊಸ ಕನಸುಗಳ ತುಂಬಿ ನೆಲಕಳಚಿ ಬಿದ್ದವನು ನೀನಲ್ಲವೇ ಹಸಿದು ಕುಳಿತಾಗ ಕುಟುಕಿ ಕಾಳನಿಟ್ಟು ನಿಟ್ಟುಸುರ ಹೆಜ್ಜೆಯಲಿ ಊರ ತಿರುಗಿದ ಬಿಕ್ಕು ಪ್ರಾಯದ ಪೊರೆ ಹರಿದು ಹದಿಹರೆಯದ ಒಲವನೆರದವನು ನೀನಲ್ಲವೇ ಬರಿ ಅರ್ಥಗಳನೆ ಈ ಮೌನಕೆ ತುಂಬಿ ಹಾಗೆ ತುಳುಕುವ ಸಾವಿರದ ಸಾವಿರ ಕವಿತೆಗಳ ಹಣತೆ ಹಚ್ಚಿ ಬೆಳಗಾಗುವವರೆಗೆ ಉರಿದು,ಸುಟ್ಟು, ಬೂದಿಯಾಗಿ ಈ ಕಣ್ಣ ಕಾಡಿಗೆಯಾದವನು ನೀನಲ್ಲವೇ ಶತಮಾನದ ನೋವಿಗೆ ಪ್ರೀತಿ ಒಂದೇ ಮದ್ದೆಂದು ಬಂಡಾಯವ ನನ್ನಲಿ ಬಿತ್ತಿ ದುಡಿದು,ತಡೆದು,ಮಣಿದು ರಮಿಸಿ,ಕ್ಷಮಿಸಿ,ಮುದ್ದಿಸಿ ಮುತ್ತಿನ ಮುದ್ರೆ ಹೊತ್ತಿ ಬೆಳಕಿಲ್ಲದೆ ದಾರಿಗೆ ಕೈ ಹಿಡಿದು ನಡೆಸಿಕೊಂಡೊದವರು ನೀನಲ್ಲವೇ ಕಿರು ಪರಿಚಯ: ಕನ್ನಡ ಉಪನ್ಯಾಸಕರು.’ಬಸವಮ ಕಾಲಿನ ಜೋಡಿ ಮೆಟ್ಟು’ಕವನಸಂಕಲನ

ಕಾವ್ಯಯಾನ Read Post »

ಕವಿತೆ ಕಾರ್ನರ್

ಕವಿತೆ ಕಾರ್ನರ್

ನೀನು ಮಾತ್ರವೇ! ನೀನೊಂದು ಬರೀ ರಕ್ತಮಾಂಸದಏರುಯೌವನದ ಜೀವಂತ ಹೆಣ್ಣು ಮಾತ್ರವಾಗಿದ್ದರೆ ಇಷ್ಟೊಂದು ಪ್ರೀತಿಸುತ್ತಿರಲಿಲ್ಲ ನಾನು! ನನ್ನಗಾಢ ವಿಷಾದದ ಬಟ್ಟಲೊಳಗಿನ ಮಧು ನೀನುನನ್ನ ಒಂಟಿತನದ ನಟ್ಟಿರುಳುಗಳ ಕನಸು ನೀನುನನ್ನ ಅನಾಥಅಲೆಮಾರಿ ಹಗಲುಗಳ ಹುಡುಕಾಟ ನೀನುನಾನು ಕಳೆದುಕೊಂಡ ಎಲ್ಲವನೂಮೊಗೆಮೊಗೆದು ಕೊಡಬಲ್ಲ ಸಾವಿರದ ನೋವಿರದ ದೇವತೆ ನೀನು. ನೀನೊಂದು ಭೂಮಿಯ ಹಾಗೆ ನಾನೋ ನಿನ್ನತ್ತಲೇ ಸರಿಯುವ ಸುತ್ತುವ ಕ್ಷುದ್ರ ಗ್ರಹನಿರಾಕರಿಸಿದಷ್ಟೂ ನಿನ್ನ ಕನವರಿಸುವಕಷ್ಟದ ದಿನಗಳಲ್ಲಿಯೂ ಸತ್ಯವ ನುಡಿದು ಸರಳುಗಳಹಿಂದೆ ನರಳುತಿಹ ಜೀವ ಮಾತ್ರ ನಾನುಇಷ್ಟು ಮಾತ್ರ ಹೇಳಬಲ್ಲೆ ನನ್ನೆಲ್ಲ ತಪ್ಪುಗಳ ಕ್ಷಮಿಸಿನನ್ನ ಈ ಕೆಸರಿನಿಂದೆತ್ತಿ ಮತ್ತೆ ಜಗದ ಮುಂದೆತಲೆಯೆತ್ತಿ ನಿಲ್ಲಿಸಬಹುದಾದದ್ದು ನೀನು ಮಾತ್ರ!========== ಕು.ಸ.ಮದುಸೂದನ

ಕವಿತೆ ಕಾರ್ನರ್ Read Post »

ಕಾವ್ಯಯಾನ

ಕಾವ್ಯಯಾನ

ಗಜಲ್ ಸಿದ್ಧರಾಮ ಹೊನ್ಕಲ್ ಇಂಥವರ ನೆನಪಾದಾಗಲೆಲ್ಲ ನಿಟ್ಟುಸಿರೊಂದು ತಾನೇ ತಾನಾಗಿ ಹೊರಬರುತ್ತದೆ ಸಾಕಿ ಕಂಡಾಗಲೆಲ್ಲ ಗಂಟಲು ಕಟ್ಟಿ ಮಾತೆ ಮಥಿಸಿ ಮೌನ ಹೆಪ್ಪುಗಟ್ಟುತ್ತದೆ ಸಾಕಿ ಯಾರ ತಪ್ಪಿಗೆ ಯಾರ ಆಯುಷ್ಯಕ್ಕೆ ಯಾರು ಹೊಣೆ ಪಾಪ!ವವರು ಸಾಕಿ ಕುಂಕುಮ ಹೂ ಬಳೆ ಕೊನೆಗೆ ನಸು ನಗೆಯು ಮರೀಚಿಕೆಯಾಗುತ್ತದೆ ಸಾಕಿ ಸಂತೆಯೊಳಗೊಂದು ಮನೆಯ ಮಾಡಿ ಸುಮ್ಮನೆ ಶಬ್ದಕ್ಕೂ ಹೆದರಿ ಬಾಳುವದು ಇದೆಯಲ್ಲ ಅದು ಕಡುಕಷ್ಟ ಸಾಕಿ ಹದಿ ಬದೆಯ ಬಯಕೆಗಳ ತುಳಿದು ಹಸಿರುಟ್ಟು ಸಹ ಬರಡು ಮರದಂತೆ ಬದುಕಾಗುತ್ತದೆ ಸಾಕಿ ಫಲ ಪುಷ್ಪ ಹೂ ಬಿಡುವ ಹಸಿರು ಮರವು ಸಹ ಕಂಬನಿಗೆ ಕಾರಣವಾಗುತ್ತದೆ ಸಾಕಿ ಅಮಾಯಕರಿಗೆ ಬದುಕೇಕೆ ಇಷ್ಟು ಕ್ರೂರವಾಗಿ ಪರೀಕ್ಷೆಗೊಡ್ಡುತ್ತದೆ ಸಾಕಿ “ಹೊನ್ನಸಿರಿ” ಅಕ್ಕ-ಮೀರಾಳಂತೆ ಬದುಕು ಅಂತ ಹೇಳುವದು ಬಹು ಸುಲಭ ಸಾಕಿ ಬಯಕೆಗಳ ನುಂಗಿ ಬರೀದೇ ಬಾನಂಗಳದಲಿ ಚುಕ್ಕಿ ನೋಡುತ್ತಾ ಜಟಕಾಬಂಡಿಯಾಗುವದು ಕಡುಕಷ್ಟವಾಗುತ್ತದೆ ಸಾಕಿ. ಕಿರುಪರಿವಯ: ಪ್ರಕಟಿತ ಕೃತಿಗಳು- ಒಟ್ಟು 40 ಕೃತಿಗಳು.ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ-1996.ಪಂಚನದಿಗಳ ನಾಡಿನಲ್ಲಿ ಪ್ರವಾಸ ಕೃತಿಗೆ.ಗುಲ್ಬರ್ಗಾ ವಿವಿ ಚಿನ್ನದ ಪದಕ ಕಥೆಗಳಿಗೆ-1991,ರಾಜ್ಯೋತ್ಸವ ಪುರಸ್ಕಾರ,ಗುಲ್ಬರ್ಗ ವಿವಿ—2002 ಮತ್ತು 2006, ಕನ್ಯಾಕುಮಾರಿಯಿಂದ ಹಿಮಾಲಯದವರೆಗೆ ಕೃತಿ. ನೆಲದ ಮರೆಯ ನಿಧಾನ ಕಥಾ ಸಂಕಲನಕ್ಕೆ ಸಂಕ್ರಮಣ ಸಾಹಿತ್ಯ ಪುರಸ್ಕಾರ-ಕಾವ್ಯ ಹಾಗೂ ಲಲಿತ ಪ್ರಬಂಧಕ್ಕೆ ಶ್ರೀ ವಿಜಯ ಪುರಸ್ಕಾರ, ಅತ್ತಿಮಬ್ಬೆ ಪುರಸ್ಕಾರ-ಗಾಂಧೀಯ ನಾಡಿನಲ್ಲಿ ಪ್ರವಾಸ ಕೃತಿಗೆ.ಹೀಗೆ ಅನೇಕ ಪುರಸ್ಕಾರ.

ಕಾವ್ಯಯಾನ Read Post »

ಅಂಕಣ ಸಂಗಾತಿ

ನಾನು ಕಂಡ ಹಿರಿಯರು

ಕೋಟ ಶಿವರಾಮ ಕಾರಂತ್ ಡಾ.ಗೋವಿಂದ ಹೆಗಡೆ “ವಿದ್ಯಾಸಾಗರ’ ಕಾರಂತರು (೧೯೦೨-೧೯೯೭) ಅದು ೧೯೭೭ರ ಬೇಸಿಗೆಯಿದ್ದಿರಬಹುದು. ತುರ್ತುಸ್ಥಿತಿಯನ್ನು ಹಿಂತೆಗೆದುಕೊಂಡು ಚುನಾವಣೆಯನ್ನು ಘೋಷಿಸಲಾಗಿತ್ತು. (ಇವೆಲ್ಲ ತಿಳಿದಿದ್ದು ನಂತರ,ಆಗ ಅಲ್ಲ.) ನಮ್ಮ ಊರಿನ ಬಳಿಯ ಉಮಚಗಿಯಲ್ಲಿ ಒಂದು ಕಾರ್ಯಕ್ರಮ. ಹತ್ತು ಹನ್ನೊಂದರ ಹುಡುಗ ನಾನು ಅಲ್ಲಿದ್ದೆ. ಎತ್ತರದ, ಗೌರವರ್ಣದ, ನೀಳ ಕೇಶದ ಪಂಚೆಯುಟ್ಟ ಹಿರಿಯರು ಮಾತನಾಡಿದರು. ಮುಂದೆ ಕುಳಿತಿದ್ದ ನಾವು ನಾಲ್ಕಾರು ಮಕ್ಕಳು ಕೆಲಹೊತ್ತು ಅವರ ಮಾತು ಕೇಳಿದೆವು ಏನೂ ತಿಳಿಯಲಿಲ್ಲ ; ಬೇಸರ ಬಂತು. ಗುಸುಗುಸು ಪಿಸುಮಾತು ಕೊನೆಗೆ ಜೋರಾಯಿತು. ಅವರು ನಮ್ಮನ್ನು ಗದರಿ ಮಾತು ಮುಂದುವರಿಸಿದರು. ಕೋಟ ಶಿವರಾಮ ಕಾರಂತರನ್ನು ನಾನು ಮೊದಲು ನೋಡಿದ್ದು ಹೀಗೆ. ಮುಂದೆ ಕಾಲೇಜು ದಿನಗಳಲ್ಲಿ ಅವರ ಅನೇಕ ಬರಹಗಳನ್ನು, ಹುಚ್ಚು ಮನಸ್ಸಿನ ಹತ್ತು ಮುಖಗಳನ್ನು ಓದಿದಾಗ ಕಾರಂತರ ಕಿರು ಪರಿಚಯವಾದದ್ದು. ೧೯೮೫ರಲ್ಲಿ ಮೈಸೂರಿನಲ್ಲಿ ನಡೆದ ಪ್ರಥಮ ವಿಶ್ವ ಕನ್ನಡ ಸಮ್ಮೇಳನ ನೆನಪಿನಲ್ಲಿ ಹಸಿರಾಗಿದೆ. ಉದ್ಘಾಟನೆಯಲ್ಲಿ ಅತಿಥಿ ಯಾಗಿದ್ದ ಕಾರಂತರು”ಬರದ ಕಾರಣ ಸಮ್ಮೇಳನ ನಡೆಯಕೂಡದು “ಎಂಬ ತಾರಕಕ್ಕೇರಿದ್ದ ವಿವಾದವನ್ನು ತಮ್ಮ ಮಾತಿನ ಆರಂಭದಲ್ಲೇ ಪ್ರಸ್ತಾಪಿಸಿದರು. ‘ ಬರ ದ ಕಾರಣಕ್ಕೆ ಮಸಾಲೆದೋಸೆ ತಿನ್ನುವುದನ್ನು ಬಿಟ್ಟಿದ್ದೇವಾ?’ ಎಂಬ ಅವರ ಮಾತು ಇನ್ನೊಂದು ವಿವಾದವನ್ನೇ ಸೃಷ್ಟಿಸಿತ್ತು. ೧೯೯೫/೯೬ ರ ಸುಮಾರಿಗೆ ಶಿರಸಿಯಲಿ ನಡೆದ ‘ಬಿ ಎಚ್ ಶ್ರೀಧರ ಸಾಹಿತ್ಯ ಪ್ರಶಸ್ತಿ’ ಸಮಾರಂಭದಲ್ಲಿ ಕಾರಂತರು ಮುಖ್ಯ ಅತಿಥಿ. ಪ್ರಶಸ್ತಿ ಪುರಸ್ಕೃತರು ದು ನಿಂ ಬೆಳಗಲಿ. ‘ಸ್ನೇಹಿತರೇ’ಎಂದು ಆರಂಭಿಸಿ ಇಪ್ಪತ್ತೈದು ಮೂವತ್ತು ನಿಮಿಷಗಳ ಕಾಲ ಮಾತನಾಡಿದ ಕಾರಂತರ ಒಂದು ಗುಡುಗು ಈಗಲೂ ನೆನಪಿನಲ್ಲಿದೆ. ಶಿರಸಿಯ ಬಳಿಯ ಯಾಣ ಒಂದು ಪ್ರಾಕೃತಿಕ ವಿಸ್ಮಯ. ಅಲ್ಲಿ ಬತ್ತಲೇಶ್ವರ ಎಂಬ ಕವಿ ಇದ್ದನಂತೆ. ಅವನ ಬತ್ತಲೇಶ್ವರ ರಾಮಾಯಣ ಕೃತಿ ಈಗ ಸಿಗುತ್ತಿಲ್ಲ ಎಂದು ವಿಷಾದಿಸಿದ ಕಾರಂತರು ಮರುಗಳಿಗೆಯಲ್ಲಿ ನಮ್ಮ ಜಡ ನಡತೆಯ ಮೇಲೆ ಕೆಂಡವನ್ನೇ ಕಾರಿದರು! “ಇಷ್ಟು ಜನ ಮೇಷ್ಟ್ರುಗಳಿದ್ದೀರಿ,ಕನ್ನಡದ ಹೆಸರಿನಲ್ಲಿ ಅನ್ನ ತಿನ್ನುತ್ತೀರಿ. ಅಂಥದೊಂದು ಪುಸ್ತಕವನ್ನು ಈ ನೆಲದ ಕೊಡುಗೆಯನ್ನು ಪುನರ್ಮುದ್ರಣ ಮಾಡುವ ಯೋಗ್ಯತೆ ಇಲ್ಲವೆ ನಿಮಗೆ?” ಎಂದರು… ಕಾರ್ಯಕ್ರಮದ ಕೊನೆಯಲ್ಲಿ ಮುದ್ದಾದ ಮಗುವನ್ನು ಯಾರೋ ಅವರ ಬಳಿ ತಂದರು. ಮಗುವಿನ ಗಲ್ಲ ನೇವರಿಸಿದ ಕಾರಂತರ ಹೊಳಪುಗಣ್ಣು ಕಲಾವಿದ, ಛಾಯಾಚಿತ್ರಗ್ರಾಹಕ ಜಿ ಎಂ ಹೆಗಡೆ ತಾರಗೋಡ ಅವರ ಕ್ಯಾಮರಾದಲ್ಲಿ ಸೆರೆಯಾದಂತೆ ನೆನಪು. ೧೦-೨-೧೯೦೨ ರಂದು ದಕ್ಷಿಣಕನ್ನಡದ ಕೋಟದಲ್ಲಿ ಜನಿಸಿದ ಕಾರಂತರು ಗಾಂಧೀಜಿಯವರ ಪ್ರಭಾವಕ್ಕೊಳಗಾಗಿ ಕಾಲೇಜು ಶಿಕ್ಷಣವನ್ನು ತ್ಯಜಿಸಿ ಸ್ವಾತಂತ್ರ್ಯ ಚಳುವಳಿಯಲ್ಲಿ, ಸಮಾಜ ಸುಧಾರಣೆಯಲ್ಲಿ ಸ್ವದೇಶಿ ಆಂದೋಲನದಲ್ಲಿ, ತೊಡಗಿಸಿಕೊಂಡವರು.. ಅವರು ಕಲಿತಿದ್ದು ಜಗದ ಶಿಕ್ಷಣ ಶಾಲೆಯಲ್ಲಿ. ಪತ್ರಿಕೆಯ ಸಂಪಾದಕ,ಪ್ರಕಾಶಕ ಮುದ್ರಣಾಲಯ ಸ್ಥಾಪಕ, ಮುದ್ರಕ, ಕಾದಂಬರಿಕಾರ, ಪ್ರಾಥಮಿಕ ಶಿಕ್ಷಣದಲ್ಲಿ ಪ್ರಯೋಗ ನಿರತ, ಮಕ್ಕಳಿಗಾಗಿ ಬಾಲಪ್ರಪಂಚ ವಿಜ್ಞಾನ ಪ್ರಪಂಚ ಹೀಗೆ ವಿಶ್ವಕೋಶಗಳನ್ನು ಬರೆದಾತ, ಯಕ್ಷಗಾನ ಕಲಿಕೆ ಕಲಿಸುವಿಕೆ ,ಅದರಲ್ಲಿ ಸಂಶೋಧನೆ ಮತ್ತು ಬರಹ, ಸಿನಿಮಾ ನಿರ್ದೇಶನ, ನಿಘಂಟು ಬರಹ, ಪರಿಸರ ಚಳುವಳಿ, ಪ್ರವಾಸ,ಫೋಟೋಗ್ರಫಿ ಹೀಗೆ ಕಾರಂತರ ವ್ಯಕ್ತಿತ್ವಕ್ಕೆ ಹಲವು ಮುಖಗಳು! ೪೩ ಕಾದಂಬರಿಗಳು, ಕವನಸಂಕಲನಗಳು, ಕಥಾಸಂಕಲನ, ಜ್ಞಾನ ವಿಜ್ಞಾನದ ಹಲವು ಶಾಖೆಗಳಲ್ಲಿ ಬರಹ…ಕಾರಂತರ ಬಗ್ಗೆ, ಅವರ ಬರಹಗಳ ಬಗ್ಗೆ ಬರೆದಷ್ಟೂ ಕಡಿಮೆಯೇ. ‘ವಿದ್ಯಾಸಾಗರ ಕಾರಂತರು’.. ಈ ಮಾತು ನನ್ನದಲ್ಲ. ದೇಜಗೌ ಅವರದು. ಪದ್ಮಭೂಷಣ ಪುರಸ್ಕಾರ,ಜ್ಞಾನಪೀಠ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ, ಹಲವಾರು ಗೌರವ ಡಾಕ್ಟರೇಟ್ ಗಳು, ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಹೀಗೆ ಅವರನ್ನು ಅಲಂಕರಿಸಿದ ಪ್ರಶಸ್ತಿ-ಪುರಸ್ಕಾರ, ಗೌರವಗಳು ಹಲವು. ತೊಂಬತ್ತೈದು ವರ್ಷಗಳ ತುಂಬು ಜೀವನ ನಡೆಸಿ ೯-೧೨-೧೯೯೭ರಂದು ನಿಧನರಾದರು ಈ ಕಡಲತಡಿಯ ಭಾರ್ಗವ. ಕನ್ನಡದ ಬದುಕನ್ನು ಹತ್ತು ಹಲವು ರೀತಿಗಳಲ್ಲಿ ಕಟ್ಟಿದ ಕಾರಂತರಿಗೆ ಅವರೇ ಸಾಟಿ. ಅವರ ಮಾತುಗಳನ್ನು ಕೇಳಿದ್ದೆ ಎಂಬುದು ನನ್ನ ಭಾಗ್ಯಗಳಲ್ಲಿ ಒಂದು. ಕೃತಿಗಳು ಕಾದಂಬರಿಗಳು-ಮೂಜನ್ಮ, ಯಾರು ಲಕ್ಷಿಸುವರು?,ಸರಸಮ್ಮನ ಸಮಾಧಿ, ಇದ್ದರೂ ಚಿಂತೆ, ಒಂಟಿ ದನಿ,ಮೈಮನಗಳ ಸುಳಿಯಲ್ಲಿ,ಮರಳಿ ಮಣ್ಣಿಗೆ,ಮೂಕಜ್ಜಿಯ ಕನಸುಗಳು, ಚಿಗುರಿದ ಕನಸು, ಚೋಮನದುಡಿ, ಗೊಂಡಾರಣ್ಯ, ಇಳೆಯೆಂಬ.., ಸ್ವಪ್ನದ ಹೊಳೆ, ಕುಡಿಯರ ಕೂಸು, ಬೆಟ್ಟದ ಜೀವ, ಔದಾರ್ಯದ ಉರುಳಲ್ಲಿ, ಮೊಗ ಪಡೆದ ಮನ, ಉಕ್ಕಿದ ನೊರೆ,ಆಳ ನಿರಾಳ, ಅದೇ ಊರು ಅದೇ ಮರ ,ಇನ್ನೊಂದೇ ದಾರಿ, ಜಗದೋದ್ಧಾರ ನಾ,ಬತ್ತದ ತೊರೆ,ಅಂಟಿದ ಅಪರಂಜಿ, ಗೆದ್ದ ದೊಡ್ಡಸ್ತಿಕೆ, ನಾವು ಕಟ್ಟಿದ ಸ್ವರ್ಗ, ಶನೀಶ್ವರನ ನೆರಳಿನಲ್ಲಿ, ನಂಬಿದವರ ನಾಕ-ನರಕ,ಮುಗಿದ ಯುದ್ಧ,ಧರ್ಮರಾಯನ ಸಂಸಾರ ಇತರ- ಬಾಲ ಪ್ರಪಂಚ, ವಿಜ್ಞಾನ ಪ್ರಪಂಚ, ಯಕ್ಷಗಾನ ಬಯಲಾಟ, ಪ್ರವಾಸ ಸಾಹಿತ್ಯ- ಅಬುವಿನಿಂದ ಬರಾಮಕ್ಕೆ, ಅಪೂರ್ವ ಪಶ್ಚಿಮ,ಅರಸಿಕರಲ್ಲ, ಪಾತಾಳಕ್ಕೆ ಪಯಣ ಆತ್ಮಕಥೆ- ಹುಚ್ಚು ಮನಸ್ಸಿನ ಹತ್ತು ಮುಖಗಳು ಸ್ಮೃತಿಪಟಲದಿಂದ (ಮೂರು ಭಾಗಗಳು) ಮಕ್ಕಳ ಸಾಹಿತ್ಯ- ಓದುವ ಆಟ-ಸಿರಿಗನ್ನಡ ಪಾಠ ಮಾಲಿಕೆ ಹುಲಿರಾಯ ಮೈಲಿಗಲ್ಲಿನೊಂದಿಗೆ ಮಾತುಕತೆಗಳು ನಚಿಕೇತ ಮರಿಯಪ್ಪನ ಸಾಹಸಗಳು ವಿಜ್ಞಾನ ಪ್ರಪಂಚ ಬಾಲ ಪ್ರಪಂಚ ಜೀವನ ಚರಿತ್ರೆ- ಪಂಜೆ ಮಂಗೇಶರಾಯರು ಶ್ರೀ ರಾಮಕೃಷ್ಣ ಪರಮಹಂಸರ ಜೀವನ ಚರಿತ್ರೆ ಕಲೆ ಶಿಲ್ಪಕಲೆ ಇತ್ಯಾದಿ- ಕಲಾದರ್ಶನ ಕಲಾಪ್ರಪಂಚ ಚಾಲುಕ್ಯರ ಶಿಲ್ಪಕಲೆ ಭಾರತೀಯ ಚಿತ್ರಕಲೆ ಅರಿವಿನ ಆನಂದ ಜ್ಞಾನ

ನಾನು ಕಂಡ ಹಿರಿಯರು Read Post »

You cannot copy content of this page

Scroll to Top