ಕಾವ್ಯಯಾನ
ನಾ ಮನುಷ್ಯಾ ಅದೀನಿ ಚಂರಾನನ ದು:ಖ ಆದಾಗ ಅತ್ತೇನಿ ಸಂತೋಷ ಆದಾಗ ನಕ್ಕೇನಿ ಯಾಕಂದ್ರ ನಾ ಮನಷ್ಯಾ ಅದೀನಿ….. ಮನಸ್ನ್ಯಾಗೊಂದು, ಮಾತ್ನ್ಯಾಗೊಂದು, ಕೆಲಸ್ದಾಗೊಂದು ಮಾಡಿಲ್ಲ ಯಾಕಂದ್ರ ನಾ ಮನಷ್ಯಾ ಅದೀನಿ…. ಮುಖವಾಡ ಇಟ್ಕೊಂಡ್ ನೋಡಿಲ್ಲ ಮುಖವಾಡ ಹಾಕ್ಕೊಂಡ್ ಆಡಿಲ್ಲ ಯಾಕಂದ್ರ ನಾ ಮನುಷ್ಯಾ ಅದೀನಿ….. ಇದ್ರ ಕೊಟ್ಟೀನಿ,ಇಲ್ಲಾಂದ್ರ ಬಿಟ್ಟೀನಿ ಮುಂದ್ ಹೊಗಳಿಲ್ಲ,ಹಿಂದ್ ಬೈದಿಲ್ಲ ಯಾಕಂದ್ರ ನಾ ಮನಷ್ಯಾ ಅದೀನಿ….. ಕಷ್ಟ ಅಂದ್ರ ಕರಗೀನಿ,ಇಷ್ಟ ಅಂದ್ರ ಹಿಗ್ಗೀನಿ ಏನೂ ಇಲ್ಲಾಂದ್ರ ಸುಮ್ಮನದೀನಿ ಯಾಕಂದ್ರ ನಾ ಮನಷ್ಯಾ ಅದೀನಿ…… ಬದಕಾಕ ರೊಕ್ಕ ಬೇಕ,ರೊಕ್ಕಕ ಬದಕಿಲ್ಲ ಇದ್ದಾಗ ಉಂಡೇನಿ,ಇಲ್ಲದಾಗ ನೊಂದೇನಿ ಯಾಕಂದ್ರ ನಾ ಮನಷ್ಯಾ ಅದೀನಿ….. ===========================









