ಕಾವ್ಯಯಾನ
ಈ ಇರುಳು ನೂರುಲ್ಲಾ ತ್ಯಾಮಗೊಂಡ್ಲು ಈ ಇರುಳು ಕಣ್ಣುಗಳಲಿ ಸೂರ್ಯ ಉರಿಯುತಿದ್ದಾನೆ ಲಕ್ಷ ಲಕ್ಷ ನಕ್ಷತ್ರಗಳು ದನಿ ಕೂಡಿಸಿವೆ ನವ ಸ್ವಾತಂತ್ರ್ಯದ ಮೊಳಗಿನಲಿ ನಮ್ಮ ಯಾತನೆಗಳು ದಿಕ್ಕು ದಿಕ್ಕಿಗೂ ಒಯ್ಯುವ ಸಮೀರನೇ ನಿನಗೆ ವಂದನೆ ಅಸಮಾನತೆ ,ಶೋಷಣೆಯಲಿ ನಲುಗಿದೆ ಈ ಹೊತ್ತು ಈ ದೇಶ ನಮ್ಮ ಪಾಡಿನ ಕಿಚ್ಚು ಮೂಡಲಿ ಎಲ್ಲೆಡೆ ಬದುಕು ಶೂನ್ಯವಾಗಿದೆ ಹೆಪ್ಪುಗಟ್ಟಿದ ರಾತ್ರಿಯಲಿ ನೋವಿನ ಹಾಡು ಹೊರಡುತಿದೆ ಇದೊ! ಎದೆ ತಂತಿಯ ನರಳಿಕೆಯಲಿ ಕಣ್ಣ ಪೊರೆ ಮಂಜಾಗಿದೆ ನಾಳಿನ ಚಿಂತೆಯಲಿ ಈ ಸುದೀರ್ಘ ರಾತ್ರಿಯಲಿ ಕನಸುಗಳು ತೇಲುತಿವೆ ಉಲ್ಕೆಗಳಾಗಿ ತೆರೆದು ಮುಚ್ಚುವ ರೆಪ್ಪೆಗಳಲಿ ************









