ಕಾವ್ಯಯಾನ
ನಾನಲ್ಲ ದೇವದಾಸಿ ನಿರ್ಮಲಾ ನನ್ನ ಬದುಕಿದು ನನ್ನ ಸ್ವತ್ತು ಬಲವಂತವಾಗಿ ಕಟ್ಟಿಸಿದಿರಿ ನನಗೆ ಮುತ್ತು ಬೆಲೆ ಇಲ್ಲವೇ ನನ್ನಾವ ಆಸೆಗೆ ಬಲಿಯಾದೆ ಕಾಮಪಿಶಾಚಿಗಳ ಲಾಲಸೆಗೆ ಭಗವಂತನ ಸೇವೆಗೆಂದೇ ಮಾಡಿದಿರಿ ನನ್ನ ದಾಸಿ ಆದರೆ ವೇಶ್ಯೆಯೆಂದೆ ನಾನಾದೆ ಹೆಸರುವಾಸಿ ಶಾಸ್ತ್ರ ಹೇಳಿತು ದೇವನಿಗೆ ಸಂಗೀತ, ನೃತ್ಯ ಪ್ರಿಯ ದೇವನ ಹೆಸರಲಿ ಸಮಾಜ ಮಾಡಿತು ನನ್ನ ಬದುಕು ಹೇಯ ಮಾಡಿದಿರಿ ನನಗೆ ಗೆಜ್ಜೆ ಪೂಜೆ ನನ್ನಾವ ತಪ್ಪಿಗಾಗಿ ಈ ಸಜೆ ನಾನಾಗ ಬೇಕಿತ್ತಲ್ಲವೇ ಸಂಸಾರಿ ಅದೇಕೆ ಮಾಡಿದಿರಿ ನನ್ನ ವ್ಯಭಿಚಾರಿ ಹುಟ್ಟುತಾ ನಾನಲ್ಲ ದೇವದಾಸಿ ಬದುಕ ಕತ್ತಲಾಗಿಸಿದಿರಲ್ಲ ನನ್ನ ಶೋಷಿಸಿ ನನ್ನ ಬದುಕು ಬಲಿಕೊಟ್ಟು ಧರ್ಮವ ಬೆಳೆಸಿದಿರಿ ನನ್ನ ರಕ್ತವ ಬಸಿದು ನಿಮ್ಮ ಭಕ್ತಿಯ ತೋರಿಸಿದಿರಿ ಧರ್ಮದ ಹೆಸರಲಿ ನಿಮ್ಮ ಭಕ್ತಿಯ ಭಾವುಟ ಆಕಾಶಕ್ಕೆ ಹಾರಿಸಿದಿರಿ ನನ್ನ ಪಾತಾಳಕ್ಕೆ ತುಳಿದಿರಿ ವಾಕರಿಕೆಯಾಗಿದೆ ಬದುಕು ಹೇ ದೇವ ಮತ್ತೆ ಹುಟ್ಟಿ ಬರಲೊಲ್ಲೆ ನಾ ಈ ಮಾನವ ಜನುಮವ. ==========









