ಕಾವ್ಯಯಾನ
ಸಾಕು ಬಿಡು ಸಖಿ ಬಸವರಾಜ ಜಿ ಸಂಕನಗೌಡರ ಸೂರ್ಯ ಚಂದ್ರರಿಬ್ಬರನೂ ಮಧುಶಾಲೆಯಲೇ ಕಾಣುತ್ತಿರುವೆ ಸಾಕು ಬಿಡು ಸಖಿ . ನನ್ನೆದೆಯ ನೋವ ನೀ ಸುರಿಸೋ ಕಣ್ಣೀರು ತಣ್ಣಗಾಗಿಸಲಾರದು ಸಾಕು ಬಿಡು ಸಖಿ ಊರ ಮುಂದಿನ ಅಗಸಿ ಕಲ್ಲು ನೀ ಹೋದದ್ದಕ್ಕೆ ಸಾಕ್ಷಿ ಕೊಟ್ಟಿದೆ. ಮತ್ತೇಕೆ ಕನಸಲಿ ಕಾಡುವೆ ಸಾಕು ಬಿಡು ಸಖಿ. ನೀ ಬರುವ ಹಾದಿಗೆ ಬೇಲಿ ಬೆಳೆದಿದೆ. ನಾನೀಗ ಮಧುಶಾಲೆಯ ಖಾಯಂ ಗಿರಾಕಿ ಕಾಡಬೇಡ ಸಾಕು ಬಿಡು ಸಖಿ ಡೋಲಿಯಲಿ ಮಲಗಿದ ಹೆಣದ ಮೇಲೆ ನೀ ಒಂದು ಹೂ ಹಾಕಲಿಲ್ಲ ನನ್ನವರು ಮಣ್ಣು ಹಾಕಲಿ ಬಿಡು ಸಖಿ ಊರ ಬೀದಿಯಲಿ ಹೊರಟಿದೆ ಬಸವರಸನ ಹೆಣದ ಮೆರವಣಿಗೆ ಮತ್ತೇಕೆ ಕಣ್ಣೀರು ಕೊನೆಗೊಮ್ಮೆ ನಕ್ಕು ಬಿಡು ಸಖಿ ========









