ಕಾವ್ಯಯಾನ
ಮಾತು ಡಾ.ಗೋವಿಂದ ಹೆಗಡೆ ಮಾತು ಏನನ್ನಾದರೂ ಹೇಳುತ್ತಲೇ ಇರಬೇಕೆಂದು ಯಾರಾದರೂ ಏಕೆ ಒತ್ತಾಯಿಸಬೇಕು ಪಟ್ಟು ಹಿಡಿಯಬೇಕು ಮಾತು ಮಾತ್ರವಲ್ಲ ಮೌನ ಕೂಡ ಮಾತಿಗೂ ಇದ್ದೀತು ಬೇಸರ ಆಯಾಸ ಅಥವಾ ಬರೀ ಆಕಳಿಕೆ ಮತ್ತು ಮೌನ ಹೊದ್ದು ಉಸ್ಸೆನ್ನುವ ಕೇವಲ ಬಯಕೆ ಈ ಮಾತು ಕೂಡ ಎಷ್ಟು ಅಸಹಾಯ! ಕುಬ್ಜ ಹೆಳವ ಮತ್ತು ಚೂರು ಕಿವುಡ ಮತ್ತು ಉಬ್ಬಸ ಪಡುತ್ತ ಅದು ಹೇಳುವುದೇನನ್ನು? ಬಿಡು, ಕವಿತೆಯೆಂದರೆ ಬರಿ ಗೋಳಲ್ಲ ಎಲ್ಲ ಅಸಂಗತತೆಯಲ್ಲಿ ಏನೋ ಸೂತ್ರ ಅಥವಾ ವಿಪರೀತವೂ ಸರಿಯೇನು ಯಾರಿಗೆ ಗೊತ್ತು ಮೊನ್ನೆ ಅಷ್ಟೊಂದು ಮಾತಿನ ಲೋಕದಲ್ಲಿ ಮುಳುಗಿ ಎದ್ದು ಹೊರಟಾಗ ಊರಿಗೆ ಊರೇ ಮಾಗಿಯ ಸಂಜೆಗೆ ಮೈಯೊಡ್ಡುತ್ತ ಮಂಕು ಸೂರ್ಯನ ಮಾತಿಲ್ಲದೆ ಕಂತಿಸುತ್ತ ಹಿಂದಿನ ಸೀಟಿನಲ್ಲಿ ಅಮ್ಮನ ಕೈಯಲ್ಲಿ ಬೆಚ್ಚಗೆ ಮೊಲೆಗೂಸು ಥಟ್ಟನೆರಗಿ “ಉವ್ವೇ ಉವ್ವೇ” ರಚ್ಚೆ ಚಕಿತತೆಯಲ್ಲಿ ದಿಟ್ಟಿಸಿ ಮಾತಿಲ್ಲದೆ ಅದೊಂದು ದಿವ್ಯ ಆ ಮಗು ಆ ಸಂಜೆ ಆ ಪಯಣ- ಕ್ಕೆ ಪಕ್ಕಾದ ನನ್ನ ಪಕ್ಕ ಒರಲೆ ಹತ್ತಿದಂತೆ ಮಾತು ಸೋತಂತೆ ಆದರೂ ತಾನೇ ಮಾತಾದಂತೆ ಮುದುಕಿ ತಾಯಿ ಮಾತು ಮೌನದಲ್ಲಿ ರಮಿಸಿ ಮೌನ ಮಾತಿನಲ್ಲಿ ಕಲಸಿ ಮಾತಾದರೆ ‘ಆರಾಂ ಮಾಡು ಆಮೇಲೆ ಮಾತು’ ಸುಮ್ಮನಾದರೆ “ಅರೇ ಏನಾಯಿತು?” ಆತಂಕದಲ್ಲಿ ಮಾತು ಏನಾದರೂ ಹೇಳಲೆಂದು ಯಾರಾದರೂ ಯಾಕೆ ಒತ್ತಾಯಿಸುತ್ತಾರೆ… ===========









