ಕಾವ್ಯಯಾನ
ನದಿಯಾಗು. ಶಾಲಿನಿ ಆರ್. ಶಾಲಿನಿ ಆರ್. ಆಸೆಗಳಿವೆ ನೂರಾರು ನೂರಾರು ಬಯಕೆ, ಎತ್ತಲಿಂದೆತ್ತಣಕೂ ನಿನ್ನ ಸೇರುವ ಹರಕೆ, ಹಸಿರುಲ್ಲಿನ ನಡುವೆ ಇಬ್ಬನಿ ಬನಿಯೊಳಗೆ ನಾನಿದಿದ್ದರೆ, ನಿನ್ನ ಪಾದ ಪ್ರಾತಃ ಸ್ಪರ್ಶಕೆ ನಾ ಸದಾ ಕಚಗುಳಿಯಿಡುತಿದ್ದೆ, ನಿನ್ನ ನೋಡುವ ಕನ್ನಡಿ ನಾನಾಗಿರೆ, ನಿನ್ನಂತರಂಗನರಿವ ಬೆರಗು ನಾನಾಗಿ ಬಳಿಯಿರುತಿದ್ದೆ, ನೀ ನಡೆವ ಹಾದಿಗೆ ಮರವು ನಾನಾದೊಡೆ, ನಿನ್ನ ದಣಿವಿಗೆ ನಾ ನೆರಳಾಗ ಬಯಸಿದ್ದೆ, ನೀ ನೋಡುವ ನೋಟದ ಕಣ್ಣು ನಾನಗಿದ್ದರೆ, ಭರವಸೆಯ ಬೆಳದಿಂಗಳ ಕಣ್ಗಿರಿಸಿ ತಣಿಯುತಿದ್ದೆ, ನಿನ್ನ ನಿಜ ಪ್ರೀತಿ ನಾನಾಗಿ ಹೃದಯಮಿಡಿವಂತಿದಿದ್ದರೆ, ಪ್ರತಿಬಡಿತದ ದನಿಗೆ ನಾ ಮೈ ಮರೆಯುತಿದ್ದೆ, ಆಸೆಗಳ ದಟ್ಟ ಕಾನನದಲಿ ಹೀಗೆ ನಡೆದು ಹೋಗಬೇಕು, ಘನಿಕರಿಸಿದೆಲ್ಲ ಅಮಲು ಭಾವಗಳಲಿ ಸುರಿದು ನದಿಯಾಗಬೇಕು. ********









