ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ನದಿಯಾಗು. ಶಾಲಿನಿ ಆರ್. ಶಾಲಿನಿ ಆರ್. ಆಸೆಗಳಿವೆ ನೂರಾರು ನೂರಾರು ಬಯಕೆ, ಎತ್ತಲಿಂದೆತ್ತಣಕೂ ನಿನ್ನ ಸೇರುವ ಹರಕೆ, ಹಸಿರುಲ್ಲಿನ ನಡುವೆ ಇಬ್ಬನಿ ಬನಿಯೊಳಗೆ ನಾನಿದಿದ್ದರೆ, ನಿನ್ನ ಪಾದ ಪ್ರಾತಃ ಸ್ಪರ್ಶಕೆ ನಾ ಸದಾ ಕಚಗುಳಿಯಿಡುತಿದ್ದೆ, ನಿನ್ನ ನೋಡುವ ಕನ್ನಡಿ ನಾನಾಗಿರೆ, ನಿನ್ನಂತರಂಗನರಿವ ಬೆರಗು ನಾನಾಗಿ ಬಳಿಯಿರುತಿದ್ದೆ, ನೀ ನಡೆವ ಹಾದಿಗೆ ಮರವು ನಾನಾದೊಡೆ, ನಿನ್ನ ದಣಿವಿಗೆ ನಾ ನೆರಳಾಗ ಬಯಸಿದ್ದೆ, ನೀ ನೋಡುವ ನೋಟದ ಕಣ್ಣು ನಾನಗಿದ್ದರೆ, ಭರವಸೆಯ ಬೆಳದಿಂಗಳ ಕಣ್ಗಿರಿಸಿ ತಣಿಯುತಿದ್ದೆ, ನಿನ್ನ ನಿಜ ಪ್ರೀತಿ ನಾನಾಗಿ ಹೃದಯಮಿಡಿವಂತಿದಿದ್ದರೆ, ಪ್ರತಿಬಡಿತದ ದನಿಗೆ ನಾ ಮೈ ಮರೆಯುತಿದ್ದೆ, ಆಸೆಗಳ ದಟ್ಟ ಕಾನನದಲಿ ಹೀಗೆ ನಡೆದು ಹೋಗಬೇಕು, ಘನಿಕರಿಸಿದೆಲ್ಲ ಅಮಲು ಭಾವಗಳಲಿ ಸುರಿದು ನದಿಯಾಗಬೇಕು. ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಬಸವರಾಜ ಕಾಸೆ ಹೊತ್ತಲ್ಲದ ಹೊತ್ತಲ್ಲಿ ಪದೇ ಪದೇ ಗುನುಗುನಿಸುವ ಹಾಡೊಂದು ನೀನು/ ತನ್ನಷ್ಟಕ್ಕೇ ತಾ ಪುಟಿದೇಳುವ ಉತ್ಸಾಹಕ್ಕೆ ಗೊತ್ತಿರದ ಸ್ಪೂರ್ತಿಯೊಂದು ನೀನು// ಆ ರೆಪ್ಪೆ ಮಿಟುಕಿದಷ್ಟು ಬಾರಿ ಕ್ಷಣಕ್ಕೊಮ್ಮೆ ಕಾಣೆಯಾಗಿ ವಾಪಸ್ಸಾಗುವ ನಾನು/ ಮೆದು ಕುಣಿತದ ಕಣ್ಣ ಹುಬ್ಬು ಹುಟ್ಟು ಹಾಕುವ ಅನುಭವವೊಂದು ನೀನು// ಸರಸರನೆ ಸೆಳೆದೆಳೆದು ಸಾಗರ ಒಳಗೆಳೆದುಕೊಂಡಂತೆ ಸಂಜೆ ಸೂರ್ಯನನ್ನು/ ಮರಳು ದಡದ ಮೇಲೆ ಮೆಲ್ಲಗೆ ಮೆಲುಕುವ ಮಲ್ಲಿಗೆ ದಂಡೆಯೊಂದು ನೀನು// ನೀ ಬರುವ ಸಮಯಕ್ಕೆ ಕಾಯುವ ಭಾವಗಳು ಹರಿಯುವವು ಮಳೆಗಾಲದ ಹೊಳೆಯಾಗಿ/ ಹೋಗಿ ಮೈಯೊಡ್ಡಿ ನೆನೆಯುವ ಗುಂಗಿಗೆ ರಂಗೇರಿಸುವ ಮಳೆಬಿಲ್ಲೊಂದು ನೀನು// ಕಂಡು ಹಿಡಿಯಬೇಕು ಹೊಸ ಸೂತ್ರ ನೀ ಕೊಟ್ಟ ಕನಸುಗಳ ಕಚಗುಳಿ ಲೆಕ್ಕ ಹಾಕಲು/ ಆ ಮೂಗಿನ ನತ್ತು ಪ್ರತಿ ರಾತ್ರಿಗಳ ಮತ್ತು ಜೀವ ತಳೆಯುವ ಜಾಗರಣೆಯೊಂದು ನೀನು// ಮಟಮಟ ಮಧ್ಯಾಹ್ನ ಕಪ್ಪು ಬಿಳಿ ಮೋಡಗಳ ಪಯಣ ಧರೆಗಿಳಿಯಲು ಅನುರಾಗ/ ಕಳೆದೋಗುವ ಮುನ್ನ ವ್ಯರ್ಥವಾಗಿ ಚಳಿಗಾಲ ಹಿಡಿದಪ್ಪಿದ ಎಳೆಬಿಸಿಲೊಂದು ನೀನು// ಇಲ್ಲದೊಂದು ಕವಿತೆಯದು ಕಾಡುವಂತಹ ಒನಪು ಹೊದ್ದುಕೊಂಡು ಬಿಸುಪು/ ಸುಮ್ಮಸುಮ್ಮ ನಗುವ ಸದ್ದಿರದ ಸಂಗತಿಗಳಿಗೆ ಸುದ್ದಿಯಾಗುವ ನೆಪವೊಂದು ನೀನು// ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನನಗಷ್ಟೆ ಗೊತ್ತು! ಲೋಕೇಶ್ ಅಷ್ಟು ಸುಲಭವಲ್ಲ ನಿನ್ನ ಉಳಿಸಿಕೊಳ್ಳುವುದು ಅಷ್ಟು ಸಲೀಸು ಅಲ್ಲ ನಿನ್ನ ಕಳೆದುಕೊಳ್ಳುವುದು ನೀನೆಂದು ಉನ್ಮಾದ ರುಚಿಗೆ ತಾಕೀದೊಡನೇ ನೀ ಕರೆದೊಯ್ಯುವ ಜಗತ್ತು ನನಗಷ್ಟೇ ಗೊತ್ತು! ನೀನೆಂದು ಭಾವನ್ಮೊದಾ ಮನಕ್ಕೆ ನೆನಪದೊಡನೇ ನೀ ಆವರಿಸಿಕೊಳ್ಳುವ ನಿಯತ್ತು ನನಗಷ್ಟೇ ಗೊತ್ತು! ನೀನೆಂದು ಸವಿ ವಿನೋದ ಮಾತಿಗೆ ಜೊತೆಯಾದೊಡನೇ ನೀ ಆಪ್ತವಾಗುವ ಅವಲತ್ತು ನನಗಷ್ಟೇ ಗೊತ್ತು! ನೀನೆಂದು ಉಸಿರ ನಾದ ಏರಿ ಇಳಿದೊಡನೇ ನನ್ನ ಎದೆಯಲ್ಲೆಳೆವ ಹೆಸರಂತು ನನಗಷ್ಟೇ ಗೊತ್ತು *************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಯುಗಾದಿಯ ಆ ದಿನ ನೀ.ಶ್ರೀಶೈಲ ಹುಲ್ಲೂರು ಹೆದ್ದಾರಿಗಂಟೇ ಇರುವ ನನ್ನ ಮನೆ ಮಹಲಿನ ಮಹಡಿಯ ಬಾಲ್ಕನಿಯಲಿ ಬಂದು ನಿಂತೆ ಬಿಕೋ ಎನ್ನುವ ಸತ್ತುಬಿದ್ದ ರಸ್ತೆ! ಅಲ್ಲೊಂದು ಇಲ್ಲೊಂದು ಆಗೊಂದು ಈಗೊಂದು ಕಂಡು ಕಣ್ಮರೆಯಾಗುವ ಬೀದಿ ನಾಯಿ ಗಳು ತಮ್ಮ ವಿಸರ್ಜನಾ ವ್ಯೂಹ ದ ಕೊನೆಯ ಅಂಗದ ಅಂತಿಮ ಚಪಲವ ಲೈಟಿನ ಕಂಬಕೆ ಕಾಲೆತ್ತಿ ನೆಲಕೆ ತಳವೊತ್ತಿ ತೀರಿಸಿ ಕೊಂಡು ಕಂಬಿ ಕಿತ್ತವು! ಪ್ರಾಸಕ್ಕಂಟಿದ ‘ಕವಿತೆ ಸಾಲು’ ಇಂದು ನನ್ನನ್ನು ಪರದೇಶಿಯಾಗಿಸಿ ಕ್ರಾಸ್ ಕಂಟ್ರಿ ಓಟಕ್ಕಿಳಿದವು. ಸರಿ,ಬಂದಂತೆ ಬರೆದಿಡುವೆ ಬೈದವರಿಗೊಂದು ಸಲಾಂ ಹೇಳಿ! ಇಲ್ಲಿ ಹರಿದೋಡುತಿರುವ ಸಾಲುಗಳಂತೆಯೇ ಹರಕು-ಪರಕು ಚೆಲ್ಲಾಪಿಲ್ಲಿ ಮನದ ಕವಲು! ತುಂಬಿಕೊಂಡಿರುವುದೇನು ಒಳಗೆ? ಎಲ್ಲ ಖಾಲಿ ಖಾಲಿ ಮೋಡ ವಿಲ್ಲದ ಬಾನು ! ಸ್ವಾತಂತ್ರ್ಯ ದ ಹೋರಾಟದಲ್ಲಿ ನಾವಿರಲಿಲ್ಲ ,ಅವರೇಕೆ ಆ ಪರಿ ಹೋರಾಡಿದರು?ಎಂಬುದನು ಓದಿ ತಿಳಿದುದಕಿಂತ‌ ಇಂದಿನ ದಿಗ್ಬಂಧನವೇ ಎಮ್ಮೆ ಬಡಿವ ಬಾಲ್ಯ ನೆನಪಿಸಿತು! ಖಾರ ತಿಂದವನ ಒದ್ದಾಟ! ಒಳಗೊಳಗೇ ಗುದ್ದಾಟ! ನಂಮೀ ಸಂಕಟ ತೊಳಲಾಟಕೆ ಪ್ರಧಾನಿಯೇ ಕಾರಣ ಎಂದು ಫೂತ್ಕರಿಸಿದೆ! ಅಲ್ಲಿ ನಮ್ಮ ಓಣಿಯಾಚೆಯ ಆಸ್ಪತ್ರೆ ಪಕ್ಕ ಜನರ ಗೌಜು ಗದ್ದಲದ ನಡುವೆ ಬಾಯಿ ಬಿರಿವಂತೆ ಗಹಗಹಿಸಿ ನಗುತ್ತಿತ್ತು ಕರೋನಾ! *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಡಾ.ಗೋವಿಂದ ಹೆಗಡೆ ನಮ್ಮ ಪೇಲವ ನಗುವ ಕಂಡು ನಗುತಿರುವನೇ ದಿನಕರ ನಿಸ್ತೇಜ ಬದುಕನು ಕಂಡು ಮರುಗಿರುವನೇ ದಿನಕರ ವಸಂತ ಬಂದಿದ್ದಾನೆ ನಿಜ, ಎಂದಿನಂತಿಲ್ಲ ದಿನ ನಮ್ಮ ಗೋಳನು ಕಂಡು ಕರಗಿರುವನೇ ದಿನಕರ ಅವನೋ ಧಗಧಗಿಸಿದ್ದಾನೆ ಎಂದಿನ ಉಗ್ರತೆಯಲ್ಲಿ ಹೂಕರಗಳಿಂದ ಎತ್ತಿ ನಮ್ಮ ಮುದ್ದಿಸುವನೇ ದಿನಕರ ಅವನಿಂದಲೇ ನಳನಳಿಸಿದೆ ಇಳೆ, ಎಲ್ಲರ ಬಾಳು ಬಂದಿರುವ ಸಂಕಟಕೆ ಮದ್ದರೆಯುವನೇ ದಿನಕರ ಹೆಣ ಬಣಬೆ ಬಿದ್ದಿದೆ ಜಗದ ಬೀದಿಬೀದಿಗಳಲ್ಲಿ ಭರವಸೆಯ ಕಿರಣ ಸುರಿದು ಪೊರೆಯುವನೇ ದಿನಕರ ಕತ್ತಲು ಸರಿದು ಬೆಳಕು, ಲೋಕದ ನಡೆ ‘ಜಂಗಮ’ ಆಪದಗಳ ಕಳೆದು ನಲವ ಎರೆಯುವನೇ ದಿನಕರ ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನಾವೆಲ್ಲರೂ ಮನೆಯಲ್ಲೇ ಇದ್ದೇವೆ ರೇಖಾಭಟ್ ನಾವೆಲ್ಲರೂ ಮನೆಯಲ್ಲೇ ಇದ್ದೇವೆ ಒಂದೊಂದು ಖುರ್ಚಿಗೆ ಒಬ್ಬೊಬ್ಬರಂತೆ ಅಡುಗೆಮನೆ ಈಗ ಕೇಂದ್ರ ಸ್ಥಾನ ಟಿ.ವಿ ಹಾಲ್ ನಮ್ಮ ಆಸ್ಥಾನ ಬೀದಿಗಂತೂ ಹೋಗೋದಿಲ್ಲ ಅದಂತೂ ಈಗ – ಖಬರಸ್ಥಾನ! ಮಾವನ ವಾಕಿಂಗ್ ಸ್ಟಿಕ್ ಗೋಡೆ ಮೂಲೆಯಲ್ಲೆ ನಿದ್ರೆಗೆ ಜಾರಿದೆ! ಅತ್ತೆಯ ಹೂವಿನ ಚೊಬ್ಬೆ ದೇವಸ್ಥಾನ ಮರೆತು ಬೊರಲು ಬಿದ್ದಿದೆ! ಪುಟ್ಟ ಪಿಂಕ್ ಸೈಕಲ್ ಮರದ ಬುಡದಲಿ ಒರಗಿ ನಿಂತು ಇಷ್ಟಿಷ್ಟೇ ಬಣ್ಣವ ಕಳೆದುಕೊಳ್ಳುತ್ತಿದೆ! ಕೊರೊನಾ ಬೂತದ ಚಿತ್ರ ಬಿಡಿಸಿ ಅದಕ್ಕೆ ಕ್ರಾಸ್ ಮಾರ್ಕ್ ಹಾಕಿ ಆಗಾಗ ಕಿಟಕಿಯಲ್ಲಿ ಹಣಕುವ ಮಗಳ ಕಣ್ಣೊಳಗಿನ ಬಣ್ಣವೂ ತುಸು ಕಡಿಮೆಯೇ ಆಗಿದೆ ಕಂಪ್ಯೂಟರೊಳಗೆ ಹೊಕ್ಕು ಇ ಪೇಪರ್ ಓದುತ್ತ ಆಗಾಗ ಕೊರಾನಾ ಅಂಕಿ ಅಂಶ ವರದಿ ಮಾಡುವ ಅವಳಪ್ಪನೋ ಬಂಧಿತ- ಕಾಲು ಸುಟ್ಟ ಬೆಕ್ಕು- ಆದರೂ ಹೊತ್ತು ಸರಿಯುತ್ತಿದೆ ಅದಕೆ ಕಾರಣ ಇಂಟರ್ ನೆಟ್ಟು!! ಒಮ್ಮೆ ಗ್ರೀನ್ ಟೀ ಮತ್ತೊಮ್ಮೆ ಕಷಾಯ ತುಸು ಹೊತ್ತಿಗೆ ಚಹಾ ಬಿಸಿಲೇರಲು ಮಜ್ಜಿಗೆ ಬೆಲ್ಲ ಈ ದಾಹ ಹೆಚ್ಚುತ್ತಿರುವುದು ಬಿಸಿಲಿಗೊ, ಆತಂಕಕ್ಕೊ ಅರ್ಥವಾಗುತ್ತಿಲ್ಲ ಮನೆಯೊಳಗಿನ ಬಿಸಿಯ ಹೊರಹಾಕಲು ಫ್ಯಾನ್ ಇಪ್ಪತ್ತ್ನಾಲ್ಕು ಗಂಟೆ ತಿರುಗುತ್ತಿದೆ ಒಳಗುದಿಯ ಹೊರಹಾಕಲಾರದ ನಾನು ಯಾವ ಕವಿತೆಯನ್ನು ಪೂರ್ತಿ ಬರೆಯಲಾಗದೇ ಪೂರ್ಣವಿರಾಮ ಇಡುತ್ತಿದ್ದೇನೆ! *******************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಡಾ.ಗೋವಿಂದ ಹೆಗಡೆ ನೆರಳ ಕಂಡೂ ಬೆಚ್ಚ ಬೇಕಾಗಿದೆ ಜೀವ ತಲ್ಲಣಿಸಿದೆ ಮುಂದೇನು ಕಾದಿದೆ ತಿಳಿಯದೆ ಜೀವ ತಲ್ಲಣಿಸಿದೆ ಗೋಡೆ ನಾಲ್ಕರ ನಡುವೆ ಬಂದಿಯಾಗಿದೆ ಬದುಕು ಹೊರ ದಾರಿಗಳೇ ಕಾಣದೆ ಜೀವ ತಲ್ಲಣಿಸಿದೆ ಹತ್ತಾರು ತಾಸಿನ ಬಂದ್ ಈಗ ವಾರಗಳ ಲೆಕ್ಕ ಭಯ ಕತ್ತು ಹಿಸುಕುತಿದೆ ಜೀವ ತಲ್ಲಣಿಸಿದೆ ಮೂಗು ಕಣ್ಣುಗಳನ್ನೇ ಮುಟ್ಟುವಂತಿಲ್ಲ ಈಗ ಕೈ ತೊಳೆದಿದ್ದನ್ನೇ ತೊಳೆದಿದೆ ಜೀವ ತಲ್ಲಣಿಸಿದೆ ಕಾಣದ ಕ್ರಿಮಿಯ ದಾಳಿಗೆ ಆಹುತಿಯಾದವರೆಷ್ಟು ಕೊನೆಯೆಲ್ಲಿ ಯಾವಾಗ ಅರಿಯದೆ ಜೀವ ತಲ್ಲಣಿಸಿದೆ ಎಲ್ಲಿಂದಲೂ ಎಷ್ಟು ಹೊತ್ತಿಗೂ ಎರಗೀತು ವಿಪತ್ತು ರಕ್ಷಣೆಯ ಉಪಾಯಗಳಿಲ್ಲದೆ ಜೀವ ತಲ್ಲಣಿಸಿದೆ ಒಬ್ಬರಿಗೊಬ್ಬರ ಸಾಂಗತ್ಯವಿರದೇ ಬದುಕು ಹೇಗೆ ‘ಜಂಗಮ’ ವಿಧಿಯ ದೂರಿದೆ ಜೀವ ತಲ್ಲಣಿಸಿದೆ **************************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಸಮಯ ಕಳೆಯಲು ರೇಖಾ ವಿ.ಕಂಪ್ಲಿ ಅಂದೋ ನಮ್ಮಿರಿಯರು ಕಾಲ ಕಳೆಯಲು ಅರಳಿ ಕಟ್ಟೆ ಬೇವಿನ ಕಟ್ಟೆ ನೆರಳಡಿಯಲಿ ಕೂತು ಹರಟೆ ಮಾತುಗಳನಾಡುತ ತೂಕಡಿಸಿ ಆಕಳಿಸಿ ಒಂದು ನಿದ್ದೆ ಹೊಡಿಯುತ್ತಿದ್ದರು………….. ಅಂದೋ ನಮ್ಮೆಂಗಸರು ಓಣಿಗಳಲಿ ಅವರೀವರ ಮನೆ ವಿಚಾರಗಳನು ಗುಸುಗುಸು ಪಿಸುಪಿಸು ಎಂದು ಪುಸುಪುಸು ಮಾತಾಡಿಬಿಡುತ್ತಿದ್ದರು ಮರಡಬ್ಬಾಕಿಕೊಂಡು ಜಗಳವಾಡಿ…….. ಅಂದೋ ನಮ್ಕಿರಿಯರು ಸಡಿಲ ವಸ್ತ್ರಗಳ ಏರಿಸಿಕೊಳ್ಳುತಾ ಮಣ್ಣು ಮಸಿಗಳ ಬಳಿದುಕೊಂಡು ಮಳೆಯ ನೀರಿನಲಿ ಜಿಗಿದು ಚಳಿಯ ಬೆಂಕಿ ಮುಂಜಾವಿನಲಿ ಕಾಸಿ ಚಿನ್ನಿದಾಂಡು ಗೋಲಿ, ಮರಕೋತಿ ಆಡುತಾ… . ಇಂದೋ ನಾವುಗಳೆಲ್ಲಾ ಟಿವಿ, ಮೊಬೈಲ್, ಕಂಪ್ಯೂಟರ್ ಗಳಿಗೆ ಜೊತುಬಿದ್ದು ಕೂತಲ್ಲಿಯೇ ಕೂತು ಬಿಡುತ್ತಿದ್ದೇವೆ ಭಾರವಾದ ದೇಹಗಳನು ಹೊತ್ತು, ತುತ್ತು ಅನ್ನ ಮಾಡಲಾಗದೇ ಹೊರಗಿನಿಂದ ತಂದುಕೊಂಡು…… ಹೀಗೆ ಅಂದು ಇಂದು ಸಮಯ ಕಳೆಯಲು ವ್ಯತ್ಯಾಸದ ಹಾದಿ ಬದಲಿಸಿಹೆವು………. ***********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಕರೋನಾದ ಮುಂದೆ ಯುಗಾದಿ ಬಿದಲೋಟಿ ರಂಗನಾಥ್ ಹೊಸ್ತಿಲ ಮುಂದೆ ಲಕ್ಷ್ಮಣರೇಖೆ ಒಳಗೆ ಕರಳರಚುವ ಸದ್ದು ಉಗಾದಿಯ ಬೆನ್ನಿಗೂ ಬಿತ್ತು ಕಲ್ಲು ಇರುವ ಪುಡಿಕಾಸಿನಲಿ ಹೋಳಿಗೆ ತಟ್ಟಿದರೆ,ಹೊಸಬಟ್ಟೆ ತಂದರೇ… ಇಪ್ಪತ್ತೊಂದು ದಿನಗಳ ಹಾಲಿಗಿಲ್ಲ ಕಾಸು ಊರಿನ ಬಸ್ಸಿಗಿಲ್ಲ ಬಾಗಿಲು,ಟೈರು ಇದ್ದರು ಭಯದ ಪಂಕ್ಚರ್ರು ಬಿರು ಬಿಸಿಲ ಬೇಗೆಯಲಿ ಸುಡುವ ತಾಯ ಕರುಳು ಅಪ್ಪನ ವಾತ್ಸಲ್ಯದ ಮನಸು ಕಾಯುತ್ತಿವೆ…ಹಬ್ಬದ ನೆವದಲ್ಲಿ ಯಾರೋ ಮಾಡಿದ ತಪ್ಪಿಗೆ ದೇಶದ ಜನ ನರಳುತ್ತಾ ನಲುಗುವ ಕ್ಷಣ ಕ್ಷಣಕ್ಕೂ ಭಯದ ಭುಗಿಲು ಹೆಗಲೇರಿ ಜೈಲಲ್ಲದ ಒಂಥರಾ ಜೈಲಲ್ಲಿ ಕೊಳೆಯುವಂತೆ ದೂಡಿ ದುಡಿಯುವ ಕೈಗಳನ್ನು ಕಟ್ಟಿ ಹಾಕಿ ಅವರವರದೇ ಸಾವಿನ ಚಿತ್ರ ಬರೆಸುತ್ತಿದೆ ಕೊರೋನ ಕಣ್ಣಿಗೆ ಕಾಣಲ್ಲ ಅಂಟಿದರೆ ಬಿಡಲ್ಲ ಇದೇನು ಜನರು ಮಾಡಿದ ಪಾಪಕರ್ಮವೋ ಹಿಟ್ಟುಬಟ್ಟೆ ಇಲ್ಲದೆ ಅಪ್ಪ ಅಮ್ಮಂದಿರು ಅಯ್ಯೋ ಅಂದಿದ್ದರ ಫಲವೋ ವಕ್ಕರಿಸಿದೆ ಹಿರಿಮಾರಿ ಎಲ್ಲಾ ಕಾಣುವ ಜಗತ್ತನ್ನೇ ಕಾಣದೇ ನುಂಗುತ್ತಾ ,ಹೆದರಿಸುತ್ತಾ ಬಾರುಕಾಲಾಕುತ್ತಿದೆ ಹತ್ತಿರ ನಿಂತು ಉಸಿರು ಬಿಡುವುದರಿಂದ, ಮುಟ್ಟುವುದರಿಂದ, ಇವನು ಮುಟ್ಟಿ ಹೋದ ವಸ್ತು ಅವನ್ಯಾರೋ ಮುಟ್ಟುವುದರಿಂದ, ಕೈ ಕುಲುಕುವುದರಿಂದ ಮನುಷ್ಯನ ಶ್ವಾಸಕೋಶದ ಮೇಲೆ. ಸ್ಪರ್ಶನೂ ಇಲ್ಲಿ ಅಸ್ಪೃಶ್ಯ ! ಅಘೋಚರ ವೈರಾಣುವಿನ ಹಸಿವಿನ ತುತ್ತು ತತ್ತರಿಸುವ ಜೀವಗಳು ಹಿಂಡು ಹಿಂಡು ಗುಂಪಿದ್ದರಂತೂ ಕರೋನಕ್ಕೆ ಹಸಿವೇ ಹೆಚ್ಚು ಕಾಲ ಕುರುಡಾಗಿ ತಟ್ಟಾಡುತ್ತಿದೆ ಜಗದ ಬೆಳಕು ಮಂಕಾಗಿ ಮಂಜಾಗಿವೆ ಕಣ್ಣುಗಳು ಮನೆಯ ದೀಪಕ್ಕೆ ಎಣ್ಣೆ ಇಲ್ಲ ಹಿಟ್ಟಿನ ಮಡಿಕೆಯ ತಳಕ್ಕೆ ಬೆಂಕಿ ತಾಕಿಲ್ಲ ಹೊಸ್ತಿಲು ದಾಟಲು ಬಾಗಿಲ ಬಳಿ ಲಕ್ಷ್ಮಣ ರೇಖೆ ಎಳೆದ ದೊರೆಗೂ ಹಸಿವಿನ ಸಂಕಟ ಗೊತ್ತಿಲ್ಲ ಬದುಕೆಂದರೆ ಹೇಗೆ ಬದುಕುವುದು ಹಾಗಂತ ಹೊರಗೆ ಹೋಗುವಂತೆಯೂ ಇಲ್ಲ ! ಇನ್ನು ಬಿಕ್ಷೆ ಎತ್ತುವ ರೇಷನ್ ಕಾರ್ಡೂ ಇಲ್ಲದ ಗೋಡೆ ಹೊಸ್ತಿಲುಗಳಿಲ್ಲದ ಮುರುಕು ಸಿಲ್ವಾರ್ ತಟ್ಟೆಗಳಿಗೆ ಯಾವ ಲಕ್ಷ್ಮಣ ರೇಖೆಗಳನ್ನು ಹಾಕುತ್ತೀರಿ ದೊರೆ.! **********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಕರೋನ ದಿನಗಳು ರೇಶ್ಮಾ ಗುಳೇದಗುಡ್ಡಾಕರ್ ಕರೋನ ದಿನಗಳು ತಿರುಗಾಟ ತಪ್ಪಿಸಿದೆ ಮನೆಯಮಂತ್ರಾಲಯ ಮಾಡಿದೆಊರೆಲ್ಲಾ ಲಾಕ್ ಡೌನ್ ಮಾಡಿದೆಪ್ರಾಣಿ ಪಕ್ಷಿಗಳ ಸ್ವಂತಂತ್ರ ಹೆಚ್ಚಿಸಿದೆ ಮೌನಕ್ಕೊಂದು ಅರ್ಥ ವಿದೆ ಎಂಬಮಾತು ನಿಜವೆನ್ನಿಸಿದೆಜನಜಂಗುಳಿಯಿಂದ ದೊರವಾಗಿಅಂತರಂಗ ತೆರೆಯಲು ಅನುವು ಮಾಡಿದೆ ಸಮಯದೊಂದಿಗೆ ಓಡುವ ನಮ್ಮನ್ನುಪ್ರೀತಿ ಪಾತ್ರರೊಡನೆ ಕಳೆಯಲು ಬಿಟ್ಟೆನಮ್ಮಗಳ ಪರಿಚಯ ಮತ್ತೆ ನಮಗೆಮಾಡಿಸಿದೆ ನೋವಿನಲ್ಲೊ ನಗುವಿದೆಆತಂಕದ ನೆರಳಿನಲ್ಲಿಯೂ ಬಲುರೋಮಾಚಕ ತಿರುವಿದೆ ಈ ಬದುಕಿನಪಾಠ ಶಾಲೆ ಪ್ರತಿಯೊಬ್ಬರಿಗೊ ಉಚಿತವಿದೆ ನಿನ್ನ ದೂರ ಮಾಡಲು ಹೋಗಿನಮ್ಮವರಿಗೆ ಹತ್ತಿರವಾದೆವುಮೊಗೆದಷ್ಟು ನೆನಪುಗಳು ಗರಿ ಬಿಚ್ಚಿನರ್ತಿಸಿದವು ವರ್ತಮಾನದಕಟು ಸತ್ಯದ ಮುಂದೆ  ************

ಕಾವ್ಯಯಾನ Read Post »

You cannot copy content of this page

Scroll to Top