ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ತಾಳು ಮನವೆ. ಚೈತ್ರಾ ಶಿವಯೋಗಿಮಠ ತಲ್ಲಣಿಸದಿರು ಮನವೆ! ದಟ್ಟೈಸುವ ಕಾರ್ಮೋಡಗಳ ಸುರಿದು ಹಗುರಾಗಿ ಮತ್ತೆ ಕಂಗೊಳಿಸದೆ ನೀಲ ನಭವು??? ತಲ್ಲಣಿಸದಿರು ಮನವೆ! ಕಗ್ಗತ್ತಲ ಒಡಲ ಹರಿದು ಪ್ರಖರವಾಗಿ ಇರುಳ ಗರ್ಭದಿ ಜನಿಸಿ ಬರುವನಲ್ಲವೆ ಇನನು?? ತಲ್ಲಣಿಸದಿರು ಮನವೆ! ಬೊಬ್ಬೆಯಿಟ್ಟು ಚಂಡಿಹಿಡಿದ ಕಂದನ ಹಾಲುಣಿಸಿ ಸಂತೈಸಲು ಬರಲಾರಳೇನು ಅಬ್ಬೆಯು?? ತಲ್ಲಣಿಸದಿರು ಮನವೆ! ಶೀತ ಹೇಮಂತನ ಕೊರೆತವ ಕರಗಿಸಿ ಬಿಸುಪ ಮುದ ನೀಡಲು ಬರುವಳಲವೆ ಗ್ರೀಷ್ಮಳು? ತಲ್ಲಣಿಸದಿರು ಮನವೆ! ಕಾಲಚಕ್ರವದು ನಿಲದೆ ತಿರುಗುವುದು ಅಹಿತವು ಅಳಿದು ಹಿತವು ನಿನಗಾಗಿ ಬಾರದೆ?? ತಲ್ಲಣಿಸದಿರು ಮನವೆ!! ಮಂದಸ್ಮಿತವು ವದನದೊಳಿರಲಿ!! ತಲ್ಲಣಿಸದೆ ಶಾಂತನಾಗು ಮನವೆ!! *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಸ್ಮಿತಾ ರಾಘವೇಂದ್ರ ಗಜಲ್ ಎಡ ಬಿಡದೇ ಸುಳಿದಾಡುವ ನೋವು ಹಿಂಸೆ ನೀಡುತ್ತದೆ. ಗವ್ ಎನ್ನುವ ತಣ್ಣಗಿನ ಮೌನ ಉಸಿರುಗಟ್ಟಿಸುತ್ತದೆ. ಗಾಳಿಯಲಿ ವಿಹರಿಸುವಾಗ ಭಾವಗಳು ಸದಾ ನಿರಾಳ/ ಬಣ್ಣದ ಚಿತ್ರಗಳ ಹಿಂದಿನ ಅಳಲು ಹೆಪ್ಪುಗಟ್ಟುತ್ತದೆ. ನೋಟಕ್ಕೆ ನಿಲುಕಿದ್ದೆಲ್ಲ ನಂಬಲರ್ಹವೇನು ಇಲ್ಲಿ/ ತಾಳ್ಮೆ ಕಳೆದುಕೊಂಡಾಗ ಸತ್ಯವೂ ಸುಳ್ಳೆನಿಸುತ್ತದೆ ತಡರಾತ್ರಿಯಲಿ ಬೆಚ್ಚಿ ಬೆವರೊಡೆದ ಒದ್ದೆ ನೆನಪು / ಕದ ಮುಚ್ಚುವಾಗ ಅಂತರಂಗ ತುಟಿ ಬಿರಿಯುತ್ತದೆ. ಆಡಿಕೊಂಬವರ ಅನುರಾಗವೋ ಭ್ರಮೆಯ ಮುಸುಕು/ ಆಪ್ತ”ಸ್ಮಿತ”ಕುಹಕವೆನಿಸಿದಾಗ ಎಲ್ಲವೂ ಸ್ತಬ್ಧವಾಗುತ್ತದೆ **************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಈ ದಾರಿಗಳಿಗೆ ಎಷ್ಟೊಂದು ಮುಖ ಸತ್ಯಮಂಗಲ ಮಹಾದೇವ ಬದುಕು ಒಂದು ಜೀವನ ನೂರು ಮೊಗ ಒಂದು ಮುಖವಾಡ ಹಲವು ಪದ್ಯ ಒಂದೇ ಅನೇಕ ಪದಗಳು ಜೀವ ಒಂದೇ ಜೀವಿಸುವ ದಾರಿ ನೂರು ಆಯ್ಕೆಗೊಂದು ಮುಖ ನಡೆಗೊಂದು ಮುಖ ನೋಟದ ದಾರಿಗೂ ಒಂದು ಮುಖ ಮುಖವಾಡದೊಳಗೆ ಉಸಿರುಕಟ್ಟುವಾಗ ಝಳ ಝಳನೆ ಉದುರುವ ನೀರು ಉಪ್ಪು ನದಿಯ ನೋಡಿ ಖುಷಿ ಇಟ್ಟೆ ಕಾಲು ಒಳಸೆಳೆತದ ದಾವಂತ ಬೊಗಸಯಲ್ಲೆ ಹಿಡಿದು ಕುಡಿದೆ ಜೀವ ಉಳಿಸಿಕೊಂಡೆ ಈಗ ಜೀವ ಆ ನೀರಿನ ಹೆಸರಲ್ಲಿದೆ ನದಿಗೂ ಮುಖವಾಡವಿತ್ತು ನನ್ನ ಉಸಿರಿಗೂ ಅದರ ಸೋಂಕಿದೆ ಕರೋನ ಬಂದಿದ್ದರೆ ಪರವಾಗಿಲ್ಲ ಅದು ನೆಗಡಿ ಮೂಗು ಇರುವವರೆಗೆ ತಪ್ಪದ ನೇಹ ಹೊರಗಡೆ ಹೆಜ್ಜೆ ತಗೆದರೆ ನನ್ನ ಹೆಜ್ಜೆ ಈ ನೀರ ಗುರುತು ನೆಲಕ್ಕೊಂದು ನನ್ನ ಹೆಜ್ಜೆಯ ಮುಖವಾಡ ಬಿಸಿಲಿಗೆ ಆವಿಯಾದ ಮುಖ ಕಾಲಲ್ಲೇ ಉಳಿದ ಇನ್ನೊಂದು ಮುಖ ನಡಿಗೆಯೊಳಗೊಂದು ನುಡಿಯೊಳಗೊಂದು ಪಾದರಕ್ಷೆಯೊಳಗೊಂದು ತನ್ನ ತುಂಬಿಕೊಂಡ ಕಾಲುಚೀಲದೊಳಗೆ ಈ ಎಲ್ಲಾ ವರ್ತಮಾನಗಳ ಕಂಡು ಬೆವೆತು ಬೆಂಡಾಗಿ ಮತ್ತೆ ಚಿಗುರುವ ಆಸೆ ಈ‌ ಆಸೆಗೊಂದು ಮುಚ್ಚಿದ ಮುಖ ಇತ್ತೀಚೆಗೆ ಈ ಹೃದಯವೂ ಹೇಳಿದ ಮಾತು ಕೇಳುವುದಿಲ್ಲ ಜೀವಕ್ಕೆ ನದಿಯ ಸೆಳವು ನದಿಗೆ ಮುಖವಾಡಗಳ ಸೆಳವು ಮುಖವಾಡಗಳ ಹೊರುವ ಊರದಾರಿಯ ತುಂಬಾ ಈಗ ಮುಖ ಪುಸ್ತಕಗಳ ಮಾಡಿದ್ದಾರೆ ಮುಖಪುಸ್ತಕಗಳ ಜಾತ್ರೆ. ಅವರದೇ ಮುಖ ಅವರೊಳಗೊಂದು ಮೊಗ ಮಾನಕ್ಕೊಂದು, ಸತ್ಯಕ್ಕೊಂದು ಸುಳ್ಳಿಗೊಂದು ಮಾನವತೆಗೂ ಒಂದು ರಾಕ್ಷಸತ್ವಕ್ಕೂ ಒಂದು ರೋಗಕ್ಕೂ ಒಂದು ಆರೋಗ್ಯಕ್ಕೂ ಒಂದು ನದಿಗೆ ಹಲವು ದಾರಿ ನದಿಗೆ ಹೊರಟವನಿಗೂ ಹಲವು ದಾರಿ ಹರಿಯುವ ನದಿಗೆ ಮೈಯೆಲ್ಲಾ ದಾರಿ ಈ ದಾರಿಯು ಹರಿಯುವಾಗ ಮುಖವೇ ಒಂದು ದಾರಿ ಮುಖವಾಡಗಳಿಗಂತೂ ಭಿನ್ನ ದಾರಿ. ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಮರಳಿ ಕಟ್ಟಬೇಕಲ್ಲವೇ ಸಂಮ್ಮೋದ ವಾಡಪ್ಪಿ ಹದವಾದ ಮಣ್ಣ ಅಡಿಯಿಂದ ತೇವವಾದ ಕಣ್ಣು, ನೋವುಂಡ ಒಡಲಿಂದ ಎದ್ದು‌‌ನಿಲ್ಲುತಿದೆ ಒಂದು ಮೊಳಕೆ ಚಿಗುರೊಡೆದು ಟಿಸಿಲಾಗಿ ಹರಡಿದೆ ಬೆಂದ‌ ಧರೆಗೆ ಆಗಸದ ಮುತ್ತು ಈ ಕೂಸಿಗಾಗಿಯೆ‌ ಮೇಲೇಳಲೆಂದು ಕೂಸು ನಗುನಗುತ ಉದರದಿ ಸರಿದು ಕಾಲಿಗೆ ಶಕ್ತಿ ಅಲ್ಪ, ಅಂಬೆಗಾಲಲಿ ಎದ್ದು ಹಗಲಿರುಳು ಓಟ ಕಲಿಸುತಿದೆ ಜೀವನ ಪಾಠ ತಾಯ ಸೆರಗಲಿ ಧೈರ್ಯ, ವಸುದೇವನ ಮೌಲ್ಯ ಎತ್ತರವಾಗುತಿದೆ ಬಾಳು, ಧ್ಯೇಯಗಳ ತುಂಬಿ ಕೌಶಲ್ಯಲ ಅತ್ತ ಇತ್ತ, ಕಲಿಕೆ ಅನುಭವಗಳು, ನವ್ಯ‌ಗ್ರಹಿಕೆ ನಡೆಯು ನುಡಿಯು,ಹೊಸ ಆಯಾಮಗಳು ಓಟದಿ‌ ಗೆಲುವಿನ‌ ರುಚಿ, ಹಸಿವು ಹೆಚ್ಚಾಯಿತು ಗೆಳೆತನ, ಪ್ರೀತಿ, ಹಗೆ, ಆಸೆ, ದುರಾಸೆ ಬಾಗದಂತೆ ಆಗಿದ್ದು ಹೆಮ್ಮರ, ನೆಲದಿ ಮಹಾ ಸಮರ ಮೇಲೆದ್ದು‌ ಕಾಣದೇ ಹೋಯಿತು ಕೆಳಗಿನ‌ ಬದುಕು ಮೌಲ್ಯ ಬಚ್ಚಿಟ್ಟು, ಕಾಂಚಾಣಕ್ಕೆ ಚೀಲ ಒಡ್ಡಿ ನಿಂತದ್ದು ಮಗುವೆ ಅರಿ, ತಿಳಿಯಾಗಿಸು‌ ಮನವ ಬಾಗು, ಬೀಗುವುದೇಕೆ? ಅಂತರಾತ್ಮದಿ‌ ಮಾತೆಯ ಸಂಸ್ಕಾರದ ಕೂಗು..‌ಪ್ರತಿದ್ವನಿ ಕತ್ತಲಲಿ ಜೋರಾದ ಓಟದಿ ಬಿದ್ದಾಗ, ಸುತ್ತಲೂ ಅಪಹಾಸ್ಯದ‌ ನಗುವಿನ‌ ದ್ವನಿ ಇರಲಿ, ತಾಳು ಸರಿ ತಪ್ಪುಗಳ ಶೋಧನೆಯಲಿ ಚಲನೆ ಓಡುವಾಗ ಕಲಿಯಲೇ ಬೇಕು‌‌‌ ಪಾಠಗಳ, ತತ್ವಗಳ ಬಿದ್ದ ನೋವಿಗೆ ಕುಗ್ಗದೆ,‌‌‌ ಭದ್ರವಾಗಿ ಹಿಡಿದ ಕೈಗಳ ಬಲವಿಹುದು ಕಟ್ಟಡಗಳು ಕುಸಿದು ಬೀಳಬಹುದು ಬದುಕಿನ ಬಿರುಗಾಳಿಯಲಿ ಆತ್ಮಬಲದ, ಸಂಕಲ್ಪದಲಿ‌ ಕಟ್ಟಲೇ‌ಬೇಕಲ್ಲವೇ ಎತ್ತರಕೆ ಏರಲು ಮರಳಿ ಮರಳಿ…. ******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಅವಳು ನಾಗರೇಖಾ ಗಾಂವಕರ ಅವಳು -1 ಬಿಂಬಕ್ಕೆ ಸರಿಯಾಗಿ ಪ್ರತಿಬಿಂಬ ಮೂಡಿಸುವ ಕನ್ನಡಿಯ ನಾಜೂಕಿನಿಂದಲೇ ಕಾಯ್ದಿರಿಸಿದ್ದಾಳೆ ಅವಳು ಕನ್ನಡಿ ಹೇಳುತ್ತಲೇ ಇರುವ ಬಿಂಬ ಪ್ರತಿಬಿಂಬದ ಸರಳ ಸೂತ್ರ ಆಕೆಗೇನೂ ಅರ್ಥವಾಗುವುದಿಲ್ಲ. ತಲ್ಲಣಗಳ ತಕ್ಕಡಿ ಹಿಡಿದೇ ಎದುರು ಬದುರಾಗುವ ಮುಖಗಳು ಬಿಂಬ ಪ್ರತಿಬಿಂಬವಾದರೂ ಒಂದನ್ನೊಂದು ಬೆಂಬಲಿಸುವುದೇ ಇಲ್ಲ ಬಿಂಬದ ಎಡಕೈ ಎತ್ತಿದರೆ ಕನ್ನಡಿಯಲ್ಲಿ ಏರುವ ಬಲಗೈ ಕನ್ನಡಿಯ ಬೆನ್ನಿಗಂಟಿದ ಪಾದರಸದ ಲೇಪನ ಅಲ್ಲಲ್ಲಿ ಕಿತ್ತು ಹೋಗಿದೆ ಈಗೀಗ ಬಿಂಬ ಪ್ರತಿಬಿಂಬ ಮೂಡಿಸುವುದು ಕನ್ನಡಿಗೂ ಕಷ್ಟವಾಗಿದೆ. ಆದರೂ ಆ ಕನ್ನಡಿಯಲ್ಲಿಯೇ ಮೂಡುವ ಮುಖವನ್ನು ದಶರ್ಿಸಿಕೊಳ್ಳುತ್ತ ಹಣೆಬೊಟ್ಟನ್ನು ನಿಧಾನಕ್ಕೆ ಬೆರಳಿಂದ ಒತ್ತಿ ಲೇಪಿಸಿಕೊಳ್ಳುತ್ತ ಮುಗುಳ್ನಗುತ್ತಾಳೆ ಅವಳು ಅವಳು- 2 ಅವನ ಬಿಂಬವನ್ನು ಪ್ರತಿಬಿಂಬವನ್ನು ಹಗಲೂ ಇರುಳು ಕೊರೆದು, ಕೆತ್ತಿ ತಿವಿದು ಮೊನೆದು ತನ್ನದನ್ನಾಗಿಸಿಕೊಂಡಿದ್ದಾಳೆ ಅವಳು ಬರೀ ಗದ್ದಲದ ನಡುವೆ ಕಳೆದುಹೋಗುತ್ತಿರುವ ಅವನನ್ನು ಮಾನಸ ಲೋಕದಲ್ಲೇ ಜಪಿಸಿ ಸಿದ್ದಿ ಮಾಡಿಕೊಂಡವಳ ಮರೆತು ಹೋಗುವ ಬಣ್ಣ ಬಣ್ಣದ ಸೆರಗ ಮರೆಯಲ್ಲಿ ಮುದುಡಿ ಬಿದ್ದವನ ನಿರಾಕರಣಕ್ಕೆ ಮುನಿಯುವುದಿಲ್ಲ ಅವಳು ಸ್ಪರ್ಷಕ್ಕೆ ಸಿಗದ ಮುತ್ತುಗಳು ಹವಳದ ದಂಡೆಗಳಂತೆ ಸಾಲಾಗಿ ಹೆಣೆದು ಕೂತಿವೆ ಮನದ ಮೂಲೆಯಲ್ಲಿ ನಿಯತ ಭೋರ್ಗರೆವ ಕಡಲಿನ ಆರ್ಭಟಕ್ಕೆ ಕಿವುಡಾದ ಅವನನ್ನು ಶಪಿಸುವುದಿಲ್ಲ ಅವಳು ದಹಿಸಬೇಕು ಒಳಗಿನ ಉರಿ ಉಕ್ಕಿ ಚೆಲ್ಲದಂತೆ ಸ್ಪೋಟಗೊಳ್ಳದಂತೆ, ಹದವಾಗಿ ಬೇಯಬೇಕು,ಕೆನೆಗಟ್ಟಬೇಕು ಪ್ರೀತಿ ಎನ್ನುವವನ ಧಿಕ್ಕರಿಸುವುದಿಲ್ಲ ಅವಳು ದೇಹವೊಂದು ಪದಾರ್ಥವಾಗದೇ ಕಲ್ಪಿತ ಭ್ರಮೆಗಳಲ್ಲಿ ಹುಟ್ಟುವ ಅವನನ್ನು ಆವಾಹಿಸಿಕೊಳ್ಳುತ್ತಾಳೆ ಆಘ್ರಾಣಿಸುತ್ತಾಳೆ, ಬಿಚ್ಚಿ ಹರಹಿದ ಹೆರಳುಗಳ ನಡುವೆ ಬಂಧಿಸುತ್ತಾಳೆ ಪರವಶಳಾಗುತ್ತಾಳೆ ಅವಳು ಅವನಿಲ್ಲದೇ ಅವಳ ದೇವರು ಇರುವುದಾದರೂ ಹೇಗೆ? ಆ ದೇವನಿಗಾಗಿ ಕಾಯುತ್ತಾಳೆ ಅವಳು ಕಾಯತ್ತಲೇ ಇರುತ್ತಾಳೆ ಅವಳು. **********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ವರ್ಕ್ ಫ್ರಂ ಹೋಂ ಸುಜಾತಾಗುಪ್ತ ವರ್ಕ್ ಫ್ರಂ ಹೋಂ ವರ್ಕ್ ಫ್ರಂ ಹೋಂ ಕೇಳಲು ಖುಷಿಯಾಯಿತು ಕರೋನ ಬಿಸಿಯಲು ಮನ ತಂಪಾಯ್ತು ಪತಿರಾಯನ ಸಾಂಗತ್ಯಕೆ ವಾರಾಂತ್ಯವೇ ಬೇಕಿಲ್ಲ ಅಹಾ..ಎನಿಸಿತು ಆ ಕ್ಷಣ. ಮನೆಯಲ್ಲೇ ಇದ್ದರೂ ಕಂಪ್ಯೂಟರ್ ಸಂಗ ಉಷೆ ಸಂಧ್ಯೆಯ ಸ್ವಾಗತಿಸೋತನಕ ತಪ್ಪದ ಬವಣೆ.. ಆಯ್ತು ಮನೆಯೇ ಕಛೇರಿ.. ಕರೋನ ಬೆನ್ನಲೆ ಬಂತು ಮಕ್ಕಳಿಗೆ ಬೇಸಿಗೆ ರಜೆ ಶಾಲೆಯು ಸ್ವೇಚ್ಛೆಯ ನೀಡಿತ್ತು ಕರೋನ ಅದ ನುಂಗಿತ್ತು ರಜೆಯ ಮಜದ ಮೂಡಲ್ಲಿದ್ದ ಮಕ್ಕಳಿಗೆ ಗೃಹ ಬಂಧನ… ಅದೆಂಥ ವಿಪರ್ಯಾಸ.. ಮೌನದೆ ಕೂರಲು ಗೊಂಬೆಗಳಲ್ಲ ಸ್ವಾಮಿ.. ಅವರು ಚಿನ್ನದಂತ ಚಿಣ್ಣರು ಆಡಿ ಕುಣಿದು ಕಿರುಚಾಡಿದರೆ ಪತಿರಾಯರಿಗೆ ಕಿರಿಕಿರಿ ಬಾಯ್ಮುಚ್ಚಿ ಕೂರಲು ಪುಟಾಣಿಗಳಿಗೆ ಕಸಿವಿಸಿ ಎಲ್ಲಿಯದು ಈ ಪರಿತಾಪ.. ಗಂಟೆಗೊಮ್ಮೆ ಬಿಸಿ ಕಾಫಿ- ಚಹ ಇಲ್ಲದಿರೆ ಪತಿಗೆ ತಲೆ ಬಿಸಿಯಂತೆ ಮಾಡು ತೊಳೆ ಮಾಡು ತೊಳೆ ನಂಗೆ ಮೈಯೆಲ್ಲಾ ಬಿಸಿ ಬಿಸಿ .. ಬೇಸರ ಕಳೆಯೆ ಅಪ್ಪಮಕ್ಕಳಿಗೆ ಕುರುಕುಲು ತಿಂಡಿ ಬೇಕಂತೆ ರೇಷನ್ನೇ ಮುಗಿದಿರೆ ನಾ ತರಲಿ ಎಲ್ಲಿಂದ ನೀವು ಹೇಳಿ ಸ್ವಾಮಿ.. ವರ್ಕ್ ಫ್ರಾಂ ಹೋಂ ಲಿ ನಾ ಅಡುಗೆ ಮನೆಯಲ್ಲಿ ಬಂಧಿ ಅಪ್ಪ ಮಕ್ಕಳನಡುವೆ ಬಡವಾದೆ ಟಿ.ವಿ ಬಂದ್ ಆಯ್ತು ಮೊಬೈಲ್ ಪೂರ್ತಿ ಕಟ್ ಆಯ್ತು ಗೆಳತಿಯರ ಸಂಗ ಮರೆತೋಯ್ತು ವರ್ಕ್ ಫ್ರಂ ಹೋಂಸಾಕಾಯ್ತು.. ಶ್ರೀ ರಘುರಾಮ ನಿನಗೆ ಶರಣು ಮಹಾಮಾರಿಯ ಸಂಹರಿಸು ಜಗಕೆ ಆರೋಗ್ಯ ನೀಡು ಪತಿಯ ಕಛೇರಿಗೆ ಕಳುಹಿಸು ಮಕ್ಕಳ ಶಾಲೆಗೆ ಕಳುಹಿಸು ನಂಗೆ ನೆಮ್ಮದಿ ನೀಡೋ ಕರುಣಾಮಯಿ ಶ್ರೀ ರಾಮ.. **********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಪದ್ಯ ಸೌತೇಕಾಯಿ ಅಶ್ವಥ್ ಪದ್ಯ ಸೌತೇಕಾಯಿ ರಾಮನವಮಿಗೆಂದೇ ಪೋಷಿಸಿ ಪಾಲಿಸಿ ಬೆಳೆಯಿಸಿದ ಸೌತೇಬಳ್ಳಿ ನೀರುಣಿಸಿ ಹೂವರಳಿ, ಈಚು ಕಾಯಾಗಿ ಹೊರಳಿ ಮರಿ ಮುನ್ನೂರೆಣಿಸುವ ಉದ್ದ ಬಳ್ಳಿ ರುಚಿಯಲ್ಲೆಣೆಯಿಲ್ಲ ಹೋಲಿಕೆಯೆಲ್ಲಾ ಸಣ್ಣ ಹೇಳತೀರದ ಹೊಳಪು, ಕೆನೆಯಂಥಾ ಬಣ್ಣ ಬಾಯಿ ತಾಕಿದರಾಗ ಗರಿಗರಿಯಾದ ಸದ್ದು ನಾಲಗೆಯು ಬಾಚಿ ಮಾಡುವುದು ಮುದ್ದು ತಣ್ಣನೆಯ ಆ ಅನುಭವ ತರಿಸುವುದು ಮುಗುಳ್ನಗೆ ಹೊತ್ತ ಮುಖವನ್ನೊಂದು ಎಂಥಾ ಬದಲಾವಣೆ , ಮನ ಧಿಮ್ಮಗೆ ಸಾಧ್ಯವುಂಟೇ ಒಂದು ಸೌತೇಕಾಯಿಗೆ ನುಂಗಿಯಾದ ಮೇಲೆ ರುಚಿಯೆಲ್ಲ ಮಾಯ ಆದರೂ ಮುಗಿದೇ ಹೋಯಿತೆನ್ನುವ ಗಾಯ ಬಾಯಿರುಚಿಗೆ ಕಚ್ಚಿದ ಈ ಕಾಯಿಪಲ್ಯ ಇದಕೂ ಬೇಕೇ ಒಂದು ದಿಟವಾದ ಪದ್ಯ? ಎಲ್ಲ ಸರಿಯಿದ್ದರೆ ಆಗಬೇಕಿತ್ತು ಇಂದು ಹೆಸರುಬೇಳೆ ಜೊತೆಗೆ ಕೊತ್ತಂಬರಿ ತಂದು ಹಣ್ಣು ಹೊಳೆಸಿದ ಬಣ್ಣ ಕನಕಾಂಬರಿ ಪಾನಕದ ಜೊತೆಗೆ ಕೊಡುವ ಕೋಸಂಬರಿ! ಸೀತಾಪತಿ ಹೆಸರಲಿ ಎಂಥಾ ಯೋಜನೆಯಿತ್ತು ಕಿತಾಪತಿಯ ಜೊತೆ ಅಮಲು ಏರಿಸಲಿತ್ತು ರಾಮನವಮಿಗೆಂದೆಣಿಸಿದ್ದ ಕೋಸಂಬರಿ ಬುಸುಗುಡುತಲಾಯ್ತು ದುಷ್ಟ ಕಾದಂಬರಿ! ***********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಮಾರ್ಕೆಟ್ಟು, ಮಾತು ಮತ್ತು ಶಬರಿ ಅಂಜನಾ ಹೆಗಡೆ ಬ್ರ್ಯಾಂಡೆಡ್ ಶರ್ಟು ತೊಟ್ಟು ಸರ್ವಾಲಂಕೃತನಾದ ರಾಮ ಮಾರ್ಕೆಟ್ಟಿನಲ್ಲಿ… ಇದೇ ಮೊದಲಭೇಟಿ!! ಕಣ್ಣಗಲಿಸಿ “ಹೌ ಆರ್ ಯೂ” ಎಂದು ಕೈ ಕುಲುಕಿದೆ ಥಟ್ಟನೆ ಪ್ರತ್ಯಕ್ಷನಾಗಿದ್ದಕ್ಕೆ ಒಂದು ಪ್ರೀತಿಯ ಆಲಿಂಗನ… ಬಿಲ್ಲು ಬಾಣಗಳೆಲ್ಲಿ ಎಂದೆ… ಉತ್ತರವಿಲ್ಲ ಕಣ್ಣು ಮಿಟಕಿಸಿದ ಥೇಟು ಕಮರ್ಷಿಯಲ್ ಸಿನೆಮಾವೊಂದರ ನಾಯಕನಂತೆ… ಕಣ್ತಪ್ಪಿಸಿಕೊಂಡಿದ್ದ ಟೀನೇಜಿನ ಕನಸೊಂದು ವನವಾಸದಿಂದ ಮಾರ್ಕೆಟ್ಟಿಗೆ… ಮಿಟಕಿಸಿದ್ದು ಎಡಗಣ್ಣೋ ಬಲಗಡೆಯದೋ ಗೊಂದಲ… ಕೌಸಲ್ಯೆ ಸುಮಿತ್ರೆ ಅಹಲ್ಯೆ ಸೀತೆ…. ಎಲ್ಲರ ಪ್ರೀತಿಯ ರಾಮ ಅದ್ಯಾರ ಹಂಬಲಗಳ ಉತ್ಸವಮೂರ್ತಿ ಯಾರ ಕಳವಳಗಳ ಉತ್ತರ ಯಾವ ಯುಗಕ್ಕೆ ಯಾರು ಕೊಟ್ಟ ಜನ್ಮ… ದಪ್ಪಮೀಸೆಯ ದೇವಮಾನವ!! ನಾನಿವತ್ತು ಉದ್ದನೆಯ ಮೀಸೆಯ ಜಿರಲೆಯೊಂದನ್ನು ಬಾತ್ರೂಮಿನಲ್ಲಿ ಸಾಯಿಸಿಬಿಟ್ಟೆ “ನಡಿ ಕಾಫಿ ಕುಡಿಯೋಣ” ಎಂದವನ ಮಾತನ್ನೇ ಹಿಂಬಾಲಿಸಿದೆ ಮಾರ್ಕೆಟ್ಟಿನ ತುಂಬೆಲ್ಲ ಮಾತುಗಳು… ಕೊನೆಯಿಲ್ಲದ ಗುರಿಯೂ ಇಲ್ಲದ ಬರಿದೇ ಮಾತುಗಳ ವಿಧವಿಧ ಅವತಾರದ ಒಂದೊಂದು ಮುಖಕ್ಕೂ ಒಂದೊಂದು ರೂಪ… ಸುತ್ತ ಕಣ್ಣಾಡಿಸಿದೆ… ಮೌನಕ್ಕೆ ಶರಣಾಗಿ ನಿಂತಲ್ಲೇ ಶಬರಿಯಾದೆ!! **********

ಕಾವ್ಯಯಾನ Read Post »

ಕಾವ್ಯಯಾನ

ಗಝಲ್

ಗಝಲ್ ವಿನಿ ಬೆಂಗಳೂರು ಒಲವ ಬಂಧದಲಿ ಮನವು ಉಲ್ಲಾಸದಿ ತೇಲುತಿದೆಯಲ್ಲ ಗೆಳತಿ ಬಾಳ ಪಯಣದಲಿ ಸಂತಸವೆ ತುಂಬುತಿದೆಲ್ಲ ಗೆಳತಿ ಪ್ರಕೃತಿಗೆ ಮತ್ತೆ ಚೈತ್ರ ಮೂಡಿಸಿ ವಸಂತ ನಗುತಿದೆಯಲ್ಲ ನೋಡು ಕವಿ ಮನದಲಿ ಶೃಂಗಾರ ಕಾವ್ಯಕೆ ಮುನ್ನುಡಿ ಬರೆದಿದೆಯಲ್ಲ ಗೆಳತಿ ಮೊದಲ ಮಳೆಗೆ ಹೂಗಳರಲಿ ಸುಗಂಧವನು ಬಿರುತಿದೆಯಲ್ಲ ಇಲ್ಲಿ ಭೃಂಗವದು ಮಕರಂದ ಬಯಸಿ ಹೂಗಳಲಿ ಮಧುವ ಹೀರುತಿದೆಯಲ್ಲ ಗೆಳತಿ ಬೀಸುವ ಗಾಳಿಯಲಿ ಮಾಧುರ್ಯ ತುಂಬಿ ಸೆಳೆಯುತಿದೆಯಲ್ಲ ತಂಪಾದ ಮನದಲಿ ಹೊಸ ಕನಸುಗಳು ಮೂಡುತಿದೆಯಲ್ಲ ಗೆಳತಿ ಕಣ್ಗಳು ತುಂಬಿ ಬಯಕೆಗಳನು ಹೇಳಲಾರದೆ ತವಕದಲಿ ಕಾಯುತಿದೆಯಲ್ಲ ಇನಿಯನಾಗಮನವು ವಿಜಯಳ ಬಾಳಿಗೆ ಬೆಳಕಾಗಿ ಚಿಮ್ಮಿದೆಯಲ್ಲ ಗೆಳತಿ *********

ಗಝಲ್ Read Post »

ಕಾವ್ಯಯಾನ

ಕಾವ್ಯಯಾನ

ಬರಿಗಾಲಿನ ಭಾರತ ಶಿವಶಂಕರ ಸೀಗೆಹಟ್ಟಿ. ಹಸಿವು ಇವರ ಹೊಟ್ಟೆಗಿದೆ ಬಟ್ಟೆ ಜೋಳಿಗೆಗಳು ಇವರ ಹೆಗಲಿಗಿವೆ ಅರಸಿ ಹೊರಟಿದ್ದಾರೆ ಊರ ಹಾದಿ ದಾರಿ ಸಾಗುತ್ತಿಲ್ಲ ದಿನವೂ ಮೂರು ಮೈಲಿ ಕಾಲಿಗೂ ಕಾಲಕ್ಕು ಹೊಂದಾಣಿಕೆ ತಪ್ಪಿ ಹೋಗಿದೆ ನಡೆಯುವವರ ಕಾಲುಗಳು ಬಿಗಿಯುತ ರಕ್ತ ಸುರಿಸುತ್ತಿವೆ ಅಲ್ಲಲ್ಲಿ ಕಂಡು ಕೇಳುವ ಬೂಟುಗಾಲಿನ ಸದ್ದುಗಳು ಗಾಬರಿ ಹುಟ್ಟಿಸುತ್ತಿವೆ ಹಸಿವು ಕಾಣದವರು ಆಹಾರದ ಉಸ್ತುವಾರಿಗಳಾಗಿದ್ದಾರೆ ದೂರದೂರಿಗೆ ಹೊಟ್ಟೆ ಹೊರೆಯಲು ಬಂದವರು ಒಟ್ಟಿಗೆ ನಡೆಯುತ್ತಿದ್ದಾರೆ ಹೊತ್ತು ಹೊತ್ತಿಗೂ ಇಲ್ಲಿ ಹೊಟ್ಟೆ ಸಾಕದವರು ಈಗ ನಿಟ್ಟುಸಿರು ಬಿಟ್ಟಿದ್ದಾರೆ ನಡೆಯುವರಿಗೆ ಕಾಲು ಸೋತು ದೇವರ ಕರೆಯುತ್ತಿದ್ದಾರೆ ಹಿಟ್ಟು ಇರದೆ ಹೊರಟ ಜನ ಹಟ್ಟಿ ಕಡೆಗೆ ಹೊರಟಿದ್ದಾರೆ ಕಟ್ಟಿದ ಕಟ್ಟಡಗಳೆಲ್ಲ ಇವರನ್ನೆ ನೋಡುತಿವೆ ಹಾಕಿದ ಟಾರು ಮಾಡಿದ ರೋಡುಗಳಲ್ಲ ಇವರಿಗಾಗಿ ಕಾಯುತ್ತಿವೆ ಬೀದಿ ಬದಿಯ ಜನರು ಕರಗಿ ಬಡಕಲಾಗಿದ್ದಾರೆ ಬದುಕಿನ ಏರು ಪೇರುಗಳು ಇವರ ಲೆಕ್ಕಕ್ಕೆ ಸಿಗುತಿಲ್ಲ ಹೊಟ್ಟೆ ತುಂಬಿದವರು ಕೂಸಿಗೆ ಕುಲಾಯಿ ಹೊಲಿಸುವ ತಯಾರಿಯಲ್ಲಿದ್ದಾರೆ ಸಾವು ನೋವುಗಳ ನಗಾರಿ ತನ್ನನ್ನೆ ಬಡಿದುಕೊಳ್ಳುತ್ತಿದೆ ಬದುಕಿರುವ ಮನುಷ್ಯರೀಗ ಭೂಮಿಗಿಳಿದ್ದಿದ್ದಾರೆ ಎಲ್ಲಾ ಸಾಂತ್ವನದ ಕೂಗುಗಳು ಮೂಕವಾಗಿವೆ ಇದು ಬರಿಗಾಲಿನ ಭಾರತ ಇಲ್ಲಿ ಬವಣೆಗಳು ಸದಾ ಶಾಶ್ವತ. *********

ಕಾವ್ಯಯಾನ Read Post »

You cannot copy content of this page

Scroll to Top