ಕಾವ್ಯಯಾನ
ಮೂಕ ಭಾರತದ ನಾಯಕ ನಾಗರಾಜ ಹರಪನಹಳ್ಳಿ ಅಂಬೇಡ್ಕರ ಅಂಬೇಡ್ಕರ ದುಡಿವ ಜನಗಳ ಧ್ವನಿಯು ನೀನೋ || ಪಲ್ಲವಿ|| ನನ್ನ ಅವ್ವಂದಿರ ಅಕ್ಷರದ ಬೆಳಕು ನೀನೋ ಬಡ ಭಾರತದ ಬಾಬಾ ಸಾಹೇಬ ನೀನೋ ಜಾತಿವಾದಿಗಳ ಕೈಯ ಬೊಗಸೆ ಕೆಂಡ ನೀನೋ ಮನುಷ್ಯವಾದಿಗಳ ಬದುಕ ಬೆಳದಿಂಗಳೊ ನೀನೋ || ಅಂಬೇಡ್ಕರ ಅಂಬೇಡ್ಕರ ದುಡಿವ ಜನಗಳ ಧ್ವನಿಯು ನೀನೋ|| ಬಡವರ ಪಾಲಿನ ಬೆಳಕು ನೀನೋ ಬಹುತ್ವ ಭಾರತವನ್ನು ತಿಳಿದವ ನೀನೋ ಮನುವಾದಿಗಳ ಕಣ್ಣು ತೆರೆಸಿದವ ನೀನೋ ಬ್ರಿಟಿಷರ ಮನಮನ ಗೆದ್ದವ ನೀನೋ ಷಾಹು ರಾಜನ ಹೃದಯ ಆಳ್ದವ ನೀನೋ ಮೂಕ ಭಾರತದ ಮೂಕನಾಯಕ ನೀನೋ || ಅಂಬೇಡ್ಕರ ಅಂಬೇಡ್ಕರ ದುಡಿವ ಜನಗಳ ಧ್ವನಿಯು ನೀನೋ|| ಬಹಿಷ್ಕೃತ ಭಾರತದ ಕಣ್ಮಣಿ ನೀನೋ ಜನುಮ ಜನುಮಕೂ ನಾಯಕ ನೀನೋ || ಅಂಬೇಡ್ಕರ ಅಂಬೇಡ್ಕರ ದುಡಿವ ಜನಗಳ ಧ್ವನಿಯು ನೀನೋ|| *********




