ಕಾವ್ಯಯಾನ
ಮಾಯಾ ಪೆಟ್ಟಿಗೆ ಮತ್ತು ಬಾಂಬರುಗಳು ನೂರುಲ್ಲಾ ತ್ಯಾಮಗೊಂಡ್ಲು ಅದೊ ಮಾಯಾ ಪೆಟ್ಟಿಗೆಯಿಂದವತರಿಸಿ ಧಗ್ಗನೆದ್ದು ಬಂದಿವೆ ಗೋದಿ ಗಾವಿಲರು, ಕೋತಿಗಳು ಅಥವ ಕಿಲಬುಕಾರರು ಅಂದು ಕುಂಪಣಿಯ ಛೇಲಗಳಂತಿವರು ಇಂದು ಈ ಹೊತ್ತಿಗೆ ಅಲ್ಲಾವುದ್ದೀನನ ಚಿರಾಗ್ ಬೆಳಕಲಿ ವಿಸ್ಮಯ ಲೋಕಕಂಡಿದ್ದ ಬಾಲ್ಯದಿನಗಳೇ ಚೆಂದ ಇಂದು ಈ ೨೪/7 ನ ಪೆಟ್ಟಿಗೆಯಿಂದ ಪೊಳ್ಳು ಅಥವ ಬೆಂಕಿ ಕೆಕ್ಕರಿಸುವ ದಿನಗಳು ಲೋಕವನ್ನೇ ಸುಡುತಿದೆ ಅದೊ ಅಲ್ಲಿ ರಂಜನೆ, ರಮ್ಯಕಾಮ, ವಿನೋದ ವೂ ಉಂಟಲ್ಲ ಎಂದವನಿಗೆ ದುರಿತ ಕಾಲದ ವಿವೇಚನೆವಿಲ್ಲವೆಂದು ಮೌನವಾದೆ ಗಡಿಗಳು ದೇಶಕೋಶಗಳಲಿ ವಿಷವೇ ವಾಹಿನಿಯಾಗಿ ಹರಿಯುತಿಹ ಈ ಹೊತ್ತಲಿ ಜನರ ಅಜ್ಞಾನಕ್ಕೆ ದೀವಿಗೆ ಹಿಡಿಯಲೂ ಬಾರದ ಬೂಟಾಟಿಕೆಯ ವ್ಯಂಜಕರಿಗೆ ಶಾಪ ನೆನ್ನೆ ವೇದಿಕೆಯಲಿ ಗೆಳೆಯರು ವಿಷ ಬಾಂಬುಗಳೆಸೆಯುವ ಮಾಯಾ ಪೆಟ್ಟಿಗೆ ಯ ಕಿಂಡಿಗಳೇ ಮುಚ್ಚಿ ಶಾಶ್ವತವಾಗಿ ಎಂದಾಗ ವಿಚಲಿತನಾದೆ ಎನ್ನ ಮನೆಗೆ ತಾಗದ ಬಾಂಬು ಪಕ್ಕದ ಮನೆಯವ ಬಚ್ಚಿಟ್ಟುಕೊಂಡರೆ ಒಂದು ದಿನ ನಾವುಗಳೇ ಸಿಡಿದು ಬೂದಿಯಾಗುವೆ -ವೆಂದು ಋಜುಮಾರ್ಗದ ಕಡೆ ಕಣ್ಹೊರಳಿಸಿ ನೋಡಿದೆ ; ಅಲ್ಲಿ ಬಾಂಬುರುಗಳನ್ನು ನಿಷ್ಕ್ರಿಯಿಸಲು ಒಂದು ನಿಷ್ಕ್ರಿಯ ಪಡೆಯಿದೆ – ಬಾ ಹೋಗೋಣ ಎಂದೆ ನಿರುಮ್ಮಳವಾಗಿ *********









