ಕಾವ್ಯಯಾನ
‘ಒಲವ ವಿಜ್ಞಾಪನೆ ವಸುಂಧರಾ ಕದಲೂರು ಹೀಗೆ…ಮಾತು ಮಾತಿಗೂ ಮಾರುತ್ತರ ಬೇಡಎನ್ನವೆಯಲ್ಲಾ ನನ್ನ ಸೋಗೆಮಾತೇ ಆಡದಲೆ ನಾ ನಿನಗೆಅರ್ಥ ಮಾಡಿಸುವುದು ಹೇಗೆ ಚೆಂದದಲಿ ಮಾತನಾಡದೆಬಿಮ್ಮನೆ ಬಿಗುಮಾನದಲಿನೀ ನಿನ್ನ ಪಾಡಿಗೆ, ನಾ ನನ್ನಷ್ಟಕೆಇರಲೇನು ಸೊಗಸು ಹೇಳು ಮುನಿಸು ಮೋಡ ಕರಗಿಸೋನೆ ಸುರಿದು ಕುದಿ ಮನಸುತಂಪಾಗಿ, ಹಸಿರು ಚಿಗುರಿತೆನೆ ತುಂಬಿ ಬಾಗುದಿರಲೇನು ಚೆಂದ ಮೌನಕ್ಕೂ ಬೇಸರ ಬಂತೀಗಮನಸು ಸೋಲುತಿದೆ ಬಾ ಬೇಗಈ ಬಾಳಿನಾಚೆ ಇನ್ನೇನಿದೆನಾನಿನಗೆ ನೀನನಗೆಂದು ಒಲವಾಗಿದೆ *****









