ಕಾವ್ಯಯಾನ
ಕೆಂಡ ಸಂಪಿಗೆ ರೇಮಾಸಂ ನೀರಾಡಿದೆ ಕಣ್ಣಲಿ ಮಂದಹಾಸೆ ಗಂಟಲುಬ್ಬಿದರು ನಸುನಗು ಮಾಸೆ ಸೆರಗಲಿ ಕೆಂಡವು ನಿಗಿನಿಗಿಸುತಿದೆ ಎದೆಯ ಕ್ಷೀರಧಾರೆ ಅಮೃತವಾಗಿದೆ/ ಭೇದಭಾವದ ನೊಗದಲಿ ಕಳೆದೆ ಬಾಲ್ಯ ಅಯ್ಯೋ ನೀನು ಮಹಿಳೆಯಂದು ಕೂಗಿದರು ರೆಕ್ಕೆಗಳನು ಕತ್ತರಿಸಿದ್ದು ಲಕ್ಷ್ಮಣರೇಖೆ ಹೊಸ್ತಿಲವು ಹೆಬ್ಬಾವಾಗಿದೆ/ ಧಾರೆಗೆ ಬಾಲ್ಯಕೆ ಮನೆಯರಡು ಬೆಳಗಿದರೂ ಅವಳು ಕೊರಡು ಜ್ಯೋತಿಯಾದರೂ ಚುಕ್ಕೆಯೆಂದರು ಅಡುಗೆ ಗಡುಗೆಗವಳನು ಮೀಸಲಿಟ್ಟರು/ ಹೊತ್ತು ಗರ್ಭದಿ ನವಮಾಸಗಳು ನೋವನುಂಗಿ ನಗುವ ಹರಡಿದಳು ಕುಲವಧುವಾಗಿ ಕುಲಜ್ಯೋತಿಯಾದಳು ಮರಣಶಯ್ಯೇನೇರುತ ಜೀವದಾನಿಯಾದಳು/ ಮೊಗ್ಗುಗಳು ಕಾಮಿಗಳ ಅಟ್ಟಹಾಸಕೆ ಬಲಿಯಾಗಿ ಹೊಸಕಿದ ಅನಾಗರಿಕ ನಡೆಯಲಿ ಭ್ರಾತೃತ್ವ ನಗ್ನವಾಗಿದೆ ಅಬಲೆ ನಡತೆಗೆ ಸಬಲೆ ಭಾಷಣಕ್ಕಾಗಿದೆ/ ನಿರ್ಭಯದಿ ಒಂಟಿ ನಡಿಗೆಯಲಿ ನಿರ್ಭಯಾಳಾಗುವಳು ಹತ್ಯೆಯಲಿ ಅಮಾನುಷ ಹಸಿವಿನ ಪುಂಗವರಲಿ ಮಾನವೀಯತೆ ಸತ್ತಿದೆ ಕಾಮಕೇಳಿಯಲಿ/ ಜನನಿ ಸ್ತನಪಾನ ಹರಿಸಿದ ಅವನಿ ಮಮತೆಯ ಮಡಿಲಲಿ ತೂಗಿದ ಜೀವನದಲಿ ಪ್ರತಿಕ್ಷಣ ಸಿಗುವ ಸಂಗಾತಿ ಮರೆಯದಿರಿ ಅವಳು ಬಹು ಪಾತ್ರಗಳ ಒಡತಿ / *******









