ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಒಂದು ಕೊಂಕಣಿ ಬಾಷೆಯ ಕವಿತೆ ಜವಾಬ್ ಪಂಚ್‍ವೀಸ್ ವರ್ಸಾ ಉಪರಾಂತ ಪರತ ತಾಕ್ಕಾ ಭೇಟೂಚೊ ಅವಕಾಶ. ತಶಿ ಮಣೂನ ಆಯ್ಲಾ ತಾಗೆಲೆ ಸಂದೇಶ‌. ಮನ ಧಾಂವ್ಲೆ ಪಂಚ್‍ವೀಸ ವರಸಾ ಮಾಕ್ಷಿ. ಪತಂಗಾ ವರಿ ಉಬಲೆ ದೇವ ಸಾಕ್ಷಿ. ತಾಗೆಲೊ ಏಕ ಸವಾಲಾ ಚೊ ಝಾಪ್ ಮೆಗೆಲೆ ಭಿತ್ತರಿ ವರಲಾ. ತ್ಯಾ ವೇಳ ಉತ್ರಾಂನ ಮೆಗೆಲೆ ಸಾಥ್ ದಿಲಲೆ ನಾ. ಆಜ ಹಾಂವ ತಾಗೆಲೆ ಸಗ್ಳೇ ಸವಾಲಾಚೆ ಜವಾಬ ದಿತ್ತಲಿ ಮನಾಚೆ ಜಡಾವಣ ದೆವೊನು ಹಗೂರ ಜಾತ್ತಲಿ ಧಾಂವಲಿ ಹಾಂವ ಸಾನ ಚೆಲ್ಯೆಲ ವರಿ. ತೆದನಾ ಆಮ್ಮಿ ಮೆಳ್ಚೆ ಕೆದಳಾಚೆ ಜಾಗೇರಿ. ಹರ್ದೆ ಧಡಧಡು. ಪೊಟ್ಟಾಂತು ಭಂವರಾ ಗೊಂದೊಳು. ಆಯ್ಲೊ ತೊ.. ತಾಣೆ ಲಾಗ್ಗಿ ಯೆವ್ಚೆ ದಿಸಲೆ. ವಯ್ ಕೀ ನಯ್ ಮಳೆಲೆ ಸಂಶಯ ಆಯ್ಲೆ. ಮಾಸ್ಕ್ ಗಾಲ್ಲೆಲೆ ತೊಂಡಾನ ಹಾಂವ ಹಾಸ್ಲಿ ತೋ ಹಾಸ್ಲೊ ಕಿ ನಾ ಮಳೆಲೆ ಮಾಕ್ಕಾ ದಿಸನಿ ಬಸ್ಲಿಂಚಿ ಆಮ್ಮಿ ಏಕ ಮೀಟರ್ ದೂರ ರಾಕುಕ ಮೊಣು ಸಾಮಾಜಿಕ ಅಂತರ. ತೋ ಬಶಿಲೊ ಮೌನ ಆನಿ ಮೆಗೆಲೆ ಉತ್ರಂ ಭಾಯರ ಪಣಿ. ಚಡತಾ ಆಶಿಲಿ ವತ್ತಾ ಚಿ ಹುನಸಾಣಿ ಸಾಬಾರ ವೇಳಾನ ತಾಣೆ ಆಪಯ್ಲೆ ಮೆಗೆಲೆ ನಾಂವ. ಹೂಂ ಮಳ್ಳೆ ಶಿವಾಂಯ್ ವಿಂಗಡ ಉಲ್ಲಯ್ನಿ ಹಾಂವ. ತಾಣೆ ಸಾಂಗ್ಲಿ ತಾಗೆಲಿ ಘರ್ ಚಿ ಖಬರ. ಚೆರ್ಡುಂವಾಲಿ, ಬಾಯ್ಲೆಲಿ ಆನಿ ತಾಗೆಲೆ ಉದ್ಯೋಗಾ ಚಿ. ಹಾಂವೆ ಮೆಗೆಲೆ ಸಂಸಾರಾ ಚಿ. ತಾಗೆಲೆ ಡಯಾಬಿಟೀಸ್ ಆನಿ ಮೆಗೆಲೆ ಸೈನಸ್. ಇತುಲೇ ಚಿ ಆಮ್ಮಿ ಉಲ್ಲಯಿಲೆ ಸಗ್ಳೇ ದೀಸ್. ಸಾಂಜ್ ಜಾಲ್ಲಿ ಸೂರ್‍ಯು ಬುಡ್ಲೊ. ತಾಗೆಲೆ ಸವಾಲಾಚೊ ಜವಾಬ ಮೆಗೆಲೆ ಭಿತ್ತರೀ ವರಲೊ. ಹಾಂವ ಮೆಗೆಲೆ ಘರಾ ಆನಿ ತೋ ತಾಗೆಲೆ ಘರಾ ಚಮಕಲೊ. ಮನಾಚೊ ಭಾರು ಮನಾನ ಪರತ ವಾಂವಲೊ. ********** ಶೀಲಾ ಭಂಡಾರ್ಕರ್

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನಾಲಿಗೆ ಕತ್ತರಿಸಿ ನಡೆದವರು ಜಹಾನ್ ಆರಾ ದೂರ ವಿಮಾನದಿಂದ ಹಾರಿ ಬಂದವರು ತಂದ ಆಧುನಿಕತೆಯ ಭಾರವನ್ನು ಸಾವಿರಾರು ಮೈಲಿ ಹೊತ್ತು ನಡೆಯುತ್ತಿದ್ದೇವೆ ಈಗ ಕಾಲುಗಳು ಸೋತಿವೆ ತಲುಪುವ ಊರು ಇನ್ನೂ ಬಹು ದೂರ ದುಡಿದು ತಿಂದ ದೇಹ ದಾರಿಯುದ್ಧಕ್ಕೂ ಬೇರೆಯವರ ದಾನಕ್ಕಾಗಿ ಕೈ ಒಡ್ಡಿತು ಮೇಲೆ ಕುಳಿತವನು ಆಡಿಸಿದಂತೆ ದೀಪವು ಹಚ್ಚಿದ್ದೇವೆ ನಮ್ಮ ರಕುತ ಬಸೆದು ಜಾಗಟೆಯೂ ಬಾರಿಸಿದ್ದೇವೆ ಖಾಲಿ ಹೊಟ್ಟೆ ಬಡಿದು ಹಗಲು-ರಾತ್ರಿ ಬಿಸಿಲು ಹಸಿವು ಯಾರ ಮಾತು ಕಿವಿಗೆ ಬೀಳಲಿಲ್ಲ ನಿಮ್ಮ ಆಶಾದಾಯಕತೆಯ ಹೊರತು ಊರಿನಲ್ಲಿ ತನ್ನವರು ಸತ್ತರು ಜೊತೆಗೆ ನಡೆದವರು ಇಲ್ಲವಾದರು ಕರಾಳತೆಯ ಕರಳು ಯಾವ ವಯಸ್ಸಿಗೂ ಮಿಡಿಯಲಿಲ್ಲ ಪ್ರಸವ ಬೇಗೆಯು ಸಹಿಸಿದೆವು ಗರ್ಭವನ್ನು ಇಳಿಸಿ ನಡೆದೆವು ಬಿಟ್ಟು ಬಂದ ಗೂಡು ಸೇರಲು ಹಗಲಿರುಳು ನಡೆದೆವು ಸೌಲಭ್ಯವಿದೆಯಂತೆ ಮಾಗಿದ ಮಾವಿನಂತೆ ನಮಗೆ ಗೊಟ್ಟೆಯಾದರು ಸಿಕ್ಕಿದರೆ ಚೀಪಿ ನಾವು ತಿಂದಷ್ಟೇ ಸುಖಿಸುವೆವು ನಡೆನಡೆದು ಸೊರಗಿದ ಚಪ್ಪಲಿಗಳು ನಮ್ಮ ಮೇಲೆ ವಿರಸ ಹಾಡುವೆ ಇನ್ನೂ ಪಾದದ ಚರ್ಮಕ್ಕೆ ಹೊಲಿಗೆ ಹಾಕಿಕೊಂಡು ನಡೆಯುತ್ತಿದ್ದೇವೆ ನೀವು ತಂದ ಹುಳುಗಳು ನಮ್ಮ ಹೆಸರು ಹೇಳುತ್ತಿದೆ ಕೇಳಿ ವಲಸಿಗರಿಂದ ಕಾರ್ಮಿಕರಿಂದ ‘ನಾ ರಾರಾಜಿಸುವೆ ‘ಎನ್ನುತ್ತಿವೆ ನೋಡಿ ನೀವು ಬಾಯಿಮುಚ್ಚಿಕೊಂಡು ಇರಲು ಹೇಳಿದ್ದೀರಿ ನಾವು ನಾಲಿಗೆಯನ್ನು ಕತ್ತರಿಸಿ ನಡೆಯುತ್ತಿದ್ದೇವೆ ನೋಡಿ ಸ್ವಲ್ಪ ಕರುಣೆ ಇದ್ದರೆ ನಿಮಗೆ ರಸ್ತೆಗಳನ್ನು ಕತ್ತರಿಸಿ ಕಿರಿದಾಗಿಸಿ ನಾಲ್ಕೈದು ಹೆಜ್ಜೆಗಳಲ್ಲಿ ಮನೆ ಸೇರುವಂತೆ *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಜೀವನಕ್ಕೊಂದು ಕ್ಲಾಸ್ ಶೀಲಾ ಭಂಡಾರ್ಕರ್ ನಾನೊಂದು ಹೆಜ್ಜೆ ಇಡುವುದರಲ್ಲಿ..ಸಾಗುತ್ತದೆ. ನಾಲ್ಕು ಹೆಜ್ಜೆ ಮುಂದೆ ನನ್ನ ಜೀವನ. ಪುನಃ ನನ್ನ ಒಂದು ಹೆಜ್ಜೆಗೆ ಅದು ಮತ್ತೆ ನಾಲಕ್ಕು. ಆದರೂ ನಗುತ್ತಲೇ ಇದ್ದ ನನ್ನ ನೋಡಿ. ಕೇಳಿತೊಮ್ಮೆ ನನ್ನದೇ ಮನಸ್ಸು. ನಗುತ್ತಲೇ ಇರುವಿಯಲ್ಲ.. ಬದುಕೇ ನಿನ್ನಿಂದ ಬಲು ಮುಂದೆ ಸಾಗಿದ್ದರೂ..!! ನಾನಂದೆ.. ಎಷ್ಟು ವೇಗವಾಗಿ ಸಾಗಿದರೂ ಇದ್ದೇ ಇದೆಯಲ್ಲ ಮುಂದೆ ಗಡಿ.. ಅಲ್ಲಿಂದ ಇಡಲಾದೀತೆ ಒಂದೇ ಒಂದು ಅಡಿ. ಅಲ್ಲಿ ನಿಂತು ಕಾಯುತ್ತಿರಲಿ. ತಲುಪುತ್ತೇನೆ ನಾನು ನನ್ನದೇ ವೇಗದಲ್ಲಿ ನನ್ನದೇ ಗತಿಯಲ್ಲಿ ತಿರುಗಿ ನೋಡಿ ನಗುತ್ತೇನೆ. ಕಳೆದ ದಿನಗಳನ್ನೊಮ್ಮೆ. ಓಡುವ ಭರದಲ್ಲಿ ನಿಲ್ಲದೆ ಓಡಿದ ಜೀವನವನ್ನೊಮ್ಮೆ ಮಾತನಾಡಿಸಿ… ಜೀವಿಸುವುದು ಹೇಗೆಂದು ತಿಳಿಸಿಕೊಡುತ್ತೇನೆ.. *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ತೇಜಾವತಿ ಹೆಚ್.ಡಿ. ನಿನ್ನ ಬಿಟ್ಟು ನಾನು ಬಹುದೂರ ಬಂದಿರುವೆನು ಗೆಳೆಯ ನೀನು ಅತ್ತು ಕೂಗಿದರೂ ಕೇಳಿಸದಾಗಿದೆ ನನಗೀಗ ಗೆಳೆಯ ಇಷ್ಟು ದಿನ ಪ್ರೀತಿಯ ಭ್ರಮಿಸಿ ಕನವರಿಸಿ ನಿತ್ರಾಣವಾಗಿರುವೆನು ನಾನು ಮನವೀಗ ಅರಸಿಬಂದರು ಮರುನೋಡದೆ ಒಪ್ಪಿಕೊಳ್ಳದಾಗಿದೆ ಗೆಳೆಯ ಬಿಸಿಲ್ಗುದುರೆಯೇರಿ ಮೋಹದ ಓಣಿಯ ಜೀವಜಲಕ್ಕಾಗಿ ಓಡಿದೆ ನಾನು ಹೆಜ್ಜೆಗಳು ಬಸವಳಿದು ಕಣ್ಣರಳಿಸಲಾರದೆ ಕಳೆಗುಂದಿದೆ ಗೆಳೆಯ ಘಮಭರಿತ ಸುಮವೀಗ ನಿರ್ವಾತಕ್ಕೆ ಸಿಲುಕಿ ಕಠಿಣ ಶಿಲೆಯಾಗಿ ಬದಲಾಗಿದೆ ಕ್ರಿಯೆಗೆ ಪ್ರತಿಕ್ರಿಯಿಸುವ ಸೂಕ್ಷ್ಮ ಸಂವೇದನೆಗಳ ಕಳೆದುಕೊಂಡಿದೆ ಗೆಳೆಯ ನೀನೀಗ ಒಲವ ಅಮೃತಧಾರೆಯನ್ನೇ ಸ್ಪುರಿಸಿದರೂ ಹಿತವಾಗುತ್ತಿಲ್ಲ ನನಗೆ ಗೋರ್ಕಲ್ಲ ಮೇಲೆ ಮಳೆ ಸುರಿದು ನಿಷ್ಪ್ರಯೋಜಕವಾಗಿದೆ ಗೆಳೆಯ ಐಹಿಕದ ಯಾವುದೂ ಬೇಡ ದೂರದ ಬೆಳಕೊಂದ ಅರಸಿ ಹೊರಟಿಹೆ ಈಗ ನನ್ನಷ್ಟಕ್ಕೆ ನನ್ನ ಬಿಟ್ಟುಬಿಡು ನನ್ನಿಷ್ಟದ ಬದುಕು ಸನಿಹವಾಗಿದೆ ಗೆಳೆಯ ಹೋಗಬೇಕೆಂದಿರುವೆ ಜಾತಿಮತ ಲಿಂಗಭೇದ ತೂರಿ ನೀತಿನಿಯಮಗಳಾಚೆ ಸ್ವಚ್ಛಂದವಾಗಿ ನಿತ್ಯ ತೇಜದಿ ಪ್ರಜ್ವಲಿಸುವ ತಾರೆಯಾಗುವ ಹಂಬಲವಾಗಿದೆ ಗೆಳೆಯ *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನಿರುಪದ್ರವಿ ವಸುಂಧರಾ ಕದಲೂರು ಗಿಡಗಂಟಿ ಬಳಿ ಹೂ ಕೊಯ್ಯಲು ಹೋದೆ; ಮೈ ಮೇಲೆ ಕಪ್ಪು ಇರುವೆ ಹತ್ತಿದೆ. ಅದು ಹಾದಿ ತಪ್ಪಿತೆ ಅಥವಾ ನಾನು ತಪ್ಪಿದೆನೆ ಬೆರಳ ಬೆಟ್ಟಗುಡ್ಡ ಏರಿಳಿದು, ಅಂಗೈ ರೇಖೆ ಅಳೆದು, ಸರಸರಾ ಸರಸರಾ ಸಂಚರಿಸಿತು ಸಾವಧಾನವೇ ಇಲ್ಲ ಸರಸರಾ ಸರಸರಾ.. ನೋಡುತಿದ್ದೆ ಕಂಗೆಟ್ಟದ್ದು ಯಾರು ಭುಜದ ಮೇಲೆ; ಹಣೆ, ಮೂಗು, ಕೆನ್ನೆ ಮೇಲೆಲ್ಲಾ ಹರಿದಾಡಿತು ಸರಸರಾ ಸರಾಸರಾ.. ಈ ಮೈ, ಈ ಜೀವವುಳ್ಳ ನನ್ನನ್ನು ಹೊತ್ತ ಮೈ ; ಬಲು ಬಂಜರೆನಿಸಿತೇನು ಎದೆಗಿಳಿಯಲಿಲ್ಲ; ಒಲವ ಪಸೆ ಕಾಣಲಿಲ್ಲ. ಹರವಾದ ಈ ದೇಹ ಒಂದು ಇರುವೆಗೂ ಆಗಿಬರದಷ್ಟು ದೊಡ್ಡದು; ಸತ್ತ ಮೇಲೆ ಬೂದಿಕಸ. ಸರಸರಾ ಸರಸರಾ.. ತಡಕಾಡಿತು ಬಿಡುಗಡೆಯ ಹಾದಿಗೆ ಸರಸರಾ ಸರಸರಾ.. ಸಿಕ್ಕಿತದೋ ಕಾಲ ಬುಡದಲ್ಲಿ ನೆಲ, ಹಸಿರು, ಬದುಕು, ಒಲವು.. ಸರಸರಾ ಸರಸರಾ.. ಒಮ್ಮೆಗೆಲೆ ಕಳಚಿತು. ಹೇಗೆ ಜಾರಿಕೊಂಡಿತೋ ತಿಳಿಯದು ಯಾರಿಲ್ಲಿ ಆ ನಿರುಪದ್ರವಿ ! ••••••••••••• —

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಅಯ್ಯೋ… ಸಂತೇಬೆನ್ನೂರು ಫೈಜ್ನಾಟ್ರಾಜ್ ಮುರಿದು ಬಿಟ್ಟಿರಾ…ಛೆ..ಬಿಟ್ಟಿದ್ದರೆ ನೆಲದ ಮೇಲೆ ಆಕಾಶ ನೋಡ್ತಾ ನಾಲ್ಕು ದಿನ ಹೇಗೋ ಬಾಳುತ್ತಿತ್ತು ಅಯ್ಯೋ ಹರಿದು ಹಾಕಿದಿರಾ…ಛೆ ಮನವರಳೋ ನಾಲ್ಕಕ್ಷರ ಬರೆದು ಹಾಕಿದ್ದರೆ ಸಾಕಿತ್ತು ಕಿತ್ತೇಕೆ ಎಸೆದಿರಿ…ಛೆ ಮಳೆ ಬಂದಿದ್ದರೆ ಮೈ ಮುರಿದು ಚಿಗುರುತ್ತಿತ್ತೇನೋ ಪಾಪ ಏನಂದಿರಿ….ಛೆ ತುಸು ಕಾದು ನೋಡಿದ್ದರೆ ನಿಮ್ಮಂತೆಯೇ ಇರುತ್ತಿದ್ದರೋ…ಏನೋ… ಮುಖ ತಿರುವಿ ಬಿಟ್ಟಿರಾ… ಛೆ ನಗ್ತಾ ಒಂದೆರಡು ಮಾತಾಡಿದ್ದರೆ ಹೂ ನಗೆ ಕೊಡುತ್ತಿದ್ದರೇನೋ….! ಬಾಗಿಲು ಹಾಕಿಯೇ ಬಿಟ್ಟಿರಾ…‌ಛೆ ಒಲವ ಒಲವಿಂದ ನೋಡದೇ ಹಳದಿ ಕಣ್ಣೇಕೆ ಬಿಟ್ಟಿರಿ ಪಾಪ ದೂರಾಗುತ್ತಿರಲಿಲ್ಲವೇನೋ! ಛೆ…ಬಿಡಿ, ನಾನೂ ಹಾಗೆಯೇ ಬದಲಾಗಿದ್ದರೆ…ನನಗೂ ಹೊಸ ನೋಟ ಕಾಣುತ್ತಿತ್ತೇನೋ!! *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಹಸಿರು ಕುದುರೆ ನೀ.ಶ್ರೀಶೈಲ ಹುಲ್ಲೂರು ಹಸಿರು ಕುದುರೆ ರಾಜನೊಂದು ಸಂಜೆ ತನ್ನ ರಾಜ ತೋಟದಲ್ಲಿ ಬರಲು ಮೋಜುಗರೆವ ಹಕ್ಕಿಯುಲಿಗೆ ಸೋತುಹೋದನು ಹಚ್ಚಹಸಿರು ಕಂಡ ತಾನು ಮೆಚ್ಚಿ ಹರುಷ ಸೂಸುತಿರಲು ಹುಚ್ಚು ಮನದಿ ಆಸೆಯೊಂದು ಹುಟ್ಟಿಕೊಂಡಿತು ಹಸಿರು ಸಿರಿಯ ನಡುವೆ ನಲಿದು ಹೊಸತನೊಂದ ಯೋಚಿಸುತಲಿ ಹಸಿರು ಕುದುರೆ ಏರೊ ಕನಸು ತುಂಬಿಕೊಂಡನು ಬೀರಬಲ್ಲನನ್ನು ಕರೆದು ಕೊರೆವ ಆಸೆ ಹೇಳಿಕೊಂಡು ವಾರದಲ್ಲಿ ಹಸಿರು ಕುದುರೆ ತರಲು ಹೇಳಿದ ಉಕ್ಕಿಬರುವ ನಗೆಯ ತಡೆದು ಅಕ್ಕರೆಯಲಿ ಒಪ್ಪಿಕೊಂಡು ಸಿಕ್ಕ ಸಿಕ್ಕ ಊರಿನಲ್ಲಿ ಸುಮ್ಮನಲೆಯತೊಡಗಿದ ಉಂಟೆ ಜಗದಿ ಹಸಿರು ಕುದುರೆ? ಕುಂಟು ನೆಪವ ಮಾಡಿ ರಾಜ ಗಂಟು ಬಿಡಿಸಲವಗೆ ಒಂದು ದಾಳ ಹಾಕಿದ ಏಳು ದಿನಕೆ ಸಭೆಗೆ ಬಂದು ಹೇಳಿಕೊಂಡ ಹಸಿರು ಕುದುರೆ ನಾಳೆಗೇನೆ ತರಲುಬಹುದು ಇಚ್ಛೆಪಟ್ಟರೆ ಕುದುರೆ ಒಡೆಯನೆರಡು ಮಾತು ಮುದದಿ ನೆರವೇರಿಸಲೆಬೇಕು ಅದನು ಕೇಳಿ ಮೊದಲು ನೀವು ಗಮನದಿಂದಲಿ ಮೊದಲ ಮಾತು ರಾಜನಷ್ಟೆ ಕುದುರೆ ತರಲು ಹೋಗಬೇಕು ಇದಕೆ ತಮ್ಮಭಿಮತವದೇನು ಹೇಳಿ ಈಗಲೆ ಒಪ್ಪಿಕೊಂಡ ರಾಜನದಕೆ ತಪ್ಪಿನಡೆಯೆ ಎನಲು ಅವಗೆ ಗಪ್ಪನೆಯೆ ಮತ್ತೊಂದು ಮಾತ ಹೇಳಿಬಿಟ್ಟನು ವಾರದೇಳು ದಿನವ ಬಿಟ್ಟು ಬರಲುಬೇಕು ನಿಮ್ಮ ರಾಜ ಕರೆದು ಬೇಗ ತರಹೋಗೆಂದು ನನಗೆ ಹೇಳಿದ ಇದನು ಕೇಳಿ ಬೆಚ್ಚಿ ರಾಜ ವದನ ಮುಚ್ಚಿ ನಾಚಿಕೊಂಡು ಸದನದೆದುರು ತನ್ನ ಸೋಲನೊಪ್ಪಿಕೊಂಡನು ಬೀರಬಲ್ಲ ನಿನ್ನ ಜಾಣ್ಮೆ ಮೀರಬಲ್ಲ ಮನುಜರಿಲ್ಲ ಅರಸನ ಕೊಹಿನೂರ ವಜ್ರ ನೀನು ಎಂದನು ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನನ್ನೂರಲಿ ಏನಿದೆ….? ರೇಖಾವಿ.ಕಂಪ್ಲಿ ನನ್ನೂರಲಿ ಏನಿದೆ….? (ನನ್ನದು ಪ್ರಾಸವಿಲ್ಲದ ಹಾಡು) ನಾಲ್ಕಾರು ಪುಡಿಗಾಸು ಮಾಡಿಕೊಳ್ಳುವ ನನ್ನೂರಲಿ ಏನಿದೆ ಎಂದೆನುತ ಊರಕೇರಿ ಬಿಟ್ಟು ದೂರದೂರಿಗೆ ಪಯಣ ಬೆಳಸಿದರು ನನ್ನನ್ವ ನನ್ನಪ್ಪ ತಮ್ಮನೊಂದಿಗೆ……… ಮಹಾನಗರದಲಿ ಅಲ್ಲೊಂದು ಮೇಲ್ಚಾವಣಿ ಇಲ್ಲದ ಗುಡಾರದಲ್ಲಿ ಬೀದಿ ಬದಿಯ ಒಲೆಯಲಿ ರೊಟ್ಟಿ ತಟ್ಟಿ ನನ್ನನ್ವ ಪುಡಿಗಾಸು ದುಡಿದು ಬರುವ ನನ್ನಪ್ಪನಿಗಾಗಿ ಕಾದು ಕುಳಿತಳು ತಮ್ಮನೊಂದಿಗೆ… ಅದಾವ ಮಸಣದ ಕರೆಯೊ ತಿಳಿಯೆ ನನ್ನಪ್ಪನ ಕೂಗಿ ಕರೆಯಿತು ಬಾರದೂರಿಗೆ ಕರೋನಾ ಎನ್ನುವ ರೋಗದ ರೂಪದಲಿ ತಪ್ಪಿತಸ್ಥನಂತು ಖಂಡಿತ ಅಲ್ಲ ನನ್ನಪ್ಪ…… ಮಾಯೆಗೆ ಕಣ್ಣ ರೆಪ್ಪೆ ಮುಚ್ಚಿಬಿಟ್ಟ ನನ್ನಪ್ಪ ನನ್ನನ್ವನ ಗೋಳು ಕೇಳುವ ಕಿವಿಗಳಿಲ್ಲ ಪುಡಿಗಾಸು ದುಡಿವವನ ಕಳೆದುಕೊಂಡು ಬಿಡಿಗಾಸು ಇಲ್ಲದೆ ಮತ್ತೆ ನಮ್ಮೂರಿನತ್ತ ಪಯಣ… ಬರಿಗಾಲಿನಲಿ ಬಿಸಿಲ ಧಗೆಯಲಿ ತಮ್ಮನೊತ್ತು ಕಣ್ಣ ಹನಿ ನುಂಗಿಕೊಂಡು ಕಾದ ಹೊಟ್ಟೆಗೆ ಬಟ್ಟೆ ಕಟ್ಟಿ ದುಃಖದ ಬುಟ್ಟಿ ಹೊತ್ತು ಬರುವ ದಾರಿಯಲಿ ಬೇಡಿ ತಿನ್ನುತಾ…… ಮುಳ್ಳು ಕಲ್ಲುಗಳ ತುಳಿಯುತಾ ಧೂಳು ದುಮ್ಮು ವರಸಿಕೊಳ್ಳುತಾ ಬೇವರ ಹನಿ ಸೆರಗಲಿ ವರಸಿ ಹೊತ್ತ ತಮ್ಮನ ಸರಸಿಕೊಳ್ಳುತಾ ರಕ್ತಗಾಲಲಿ ಬಂದು ಸೇರಿದಳು ನನ್ನನ್ವ ನನ್ನೂರನು.. ********

ಕಾವ್ಯಯಾನ Read Post »

ಕಾವ್ಯಯಾನ

ಗಝಲ್

ಗಝಲ್ ರತ್ನರಾಯಮಲ್ಲ ಧ್ಯಾನ ಮಾಡಲು ಜಾಗ ಹುಡುಕುತಿರುವೆ ಶರಣ ನನ್ನ ಹೃದಯವನ್ನೇ ಸ್ವಚ್ಛ ಮಾಡುತಿರುವೆ ಶರಣ ಪಡೆದುಕೊಳ್ಳಲು ಹತ್ತು ಹಲವಾರು ದಾರಿಗಳಿವೆ ಇಲ್ಲಿ ಕಳೆದುಕೊಳ್ಳಲು ದಾರಿಯನ್ನು ಅರಸುತಿರುವೆ ಶರಣ ಬದುಕುತಿದ್ದೇವೆ ಬಣ್ಣ ಬಣ್ಣದ ಮನಸ್ಸುಗಳೊಂದಿಗೆ ಕನಸುಗಳೊಂದಿಗೆ ಸಾಗಲು ಹೆಣಗುತಿರುವೆ ಶರಣ ಭೋಗದ ಗರ್ಭಗುಡಿ ಚಂಚಲಗೊಳಿಸುವುದೇ ಹೆಚ್ಚು ಕಾನನದ ಗುಹೆಗಳಿಂದ ಹಿಂತಿರುಗುತಿರುವೆ ಶರಣ ಸಂಸಾರದಿ ಓಡಿ ಹೋಗವುದು ಸಾಧನೆಯಲ್ಲ ‘ಮಲ್ಲಿ’ ಜೀವನದ ರಂಗಭೂಮಿಯಲ್ಲಿ ನಟಿಸುತಿರುವೆ ಶರಣ

ಗಝಲ್ Read Post »

ಕಾವ್ಯಯಾನ

ಕಾವ್ಯಯಾನ

ತೋರಣ ಕಟ್ಟುವೆವು ಸುಜಾತ ಗುಪ್ತ ಜಗನ್ನಾಥನು ಜೊತೆ ನಿವಸಿಸಿ ನಮ್ಮನ್ನು ಕಾಯಲು ಅನವರತ ಹೃದಯದ ಭಾವಕೆ ಮಾನವತಾ ತೋರಣ ಕಟ್ಟುವೆವು.. ಜಗದಂಬೆಯ ಮನ ಒಲಿಸಿ ಹಸನ್ಮುಖಿಯಾಗಿರಿಸಲು ಮನದ ದ್ವಾರಕೆ ನೀತಿಯ ತೋರಣ ಕಟ್ಟುವೆವು… ಬಾಳಲಿ ಹಿನ್ನಡೆಸುವ ಸೋಲಿನ ಸಾಲಿಗೆ ನಾವ್ ಚೇತನಾಪ್ರದ ಗೆವುವಿನ ತೋರಣ ಕಟ್ಟುವೆವು. ಕಂದನ ಖುಷಿಯ ಸಿರಿಗೆ ಹರಸುತ ಹರುಷದೆ ಮುತ್ತಂತ ತ್ಯಾಗದ ತೋರಣ ಕಟ್ಟುವಳಮ್ಮ ********

ಕಾವ್ಯಯಾನ Read Post »

You cannot copy content of this page

Scroll to Top