ಕಾವ್ಯಯಾನ
ಅಸ್ತಿತ್ವ ಮೇಗರವಳ್ಳಿ ರಮೇಶ್ ನಾನೊಬ್ಬ ಸಾಧಾರಣ ಮನುಷ್ಯ!ಬರೀ ಮನುಷ್ಯನಲ್ಲತನ್ನನ್ನು ಜನ ಗುರುತಿಸ ಬೇಕೆಂಬ ಹಂಬಲದಒಬ್ಬ ಕವಿಯೂ ಇದ್ದಾನೆ ನನ್ನೊಳಗೆ! ಹಾಗೆ ನೋಡಿದರೆ ನಾನೂ ಬರೆದಿದ್ದೇನೆಹಲವಾರು ವರ್ಷಗಳಿಂದ ನೂರಾರು ಕವಿತೆಗಳನ್ನ.ಪತ್ರಿಕೆಗಳಲ್ಲೂ ಬೆಳಕು ಕಂಡಿವೆ ಹಲವಾರು ಕವಿತೆಗಳು.ನನ್ನದೊಂದು ಕವಿತಾ ಸಂಕಲನವೂ ಹೊರಬಂದಿದೆ!ಆದರೂ ನಾನು ಗುರುತಿಸಲ್ಪಡುವುದಿಲ್ಲ!ಎದುರು ಬಂದವರು ಸುಮ್ಮನೇ ನಕ್ಕು ಮುಂದೆ ಸಾಗಿ ಬಿಡುತ್ತಾರೆನಾನು ಏನೂ ಅಲ್ಲವೆಂಬಂತೆ!ಸಾಹಿತ್ಯ ದಿಗ್ಗಜರ ಕಣ್ಣಲ್ಲಂತೂನಾನೊಬ್ಬ ನಗಣ್ಯ ಕವಿ! ಮೊನ್ನೆ ಮೇಗರವಳ್ಳಿಗೆ ಹೋದವನುಬೆಳಗಿನ ವಾಕಿಂಗ್ ಮಾಡುತ್ತಾ ಸಾಗಿದ್ದೆನಿಃಶಬ್ದ, ಪ್ರಶಾಂತ ಪರಿಸರದ ನಡುವೆ ಸಾಗುವ ಹಾದಿ ಗುಂಟ!ಥಟ್ಟನೇ ಕಾಣಿಸಿತಾಗ ರಸ್ತೆಯ ಮಧ್ಯ ಬಿದ್ದಿದ್ದಒಂದು ನವಿಲು ಗರಿ. ಮೇಲೆತ್ತಿಕೊಂಡೆ.ಚಿತ್ತಾರದ ನುಣುಪು ರೇಶ್ಮೆ ಯಂಥ ಅದನ್ನು ಕೆನ್ನೆಗೆ ಸವರಿಕೊಂಡೆ.ಆ ಗರಿಯ ಯಜಮಾನ ನವಿಲು ಇಲ್ಲೇ ಎಲ್ಲೋ ಇರಬೇಕೆಂದೆನಿಸಿಗರಿ ಬಿಚ್ಚಿ ಕುಣಿವ ಅದರ ವೈಭವವನ್ನು ಕಣ್ತುಂಬಿ ಕೊಳ್ಳುವ ಹಂಬಲದಲ್ಲಿಸುತ್ತಲೂ ಕಣ್ಣು ಹಾಯಿಸಿದೆ.ಅದೋ, ತುಸು ದೂರದಲ್ಲಿ ಕೇಕೆ ಹಾಕುತ್ತಾಗರಿ ಬಿಚ್ಚಿ ನರ್ತಿಸುತ್ತಿತ್ತು ನವಿಲು ತಾನೇ ತಾನಾಗಿ!ನೋಡುತ್ತಾ ಮೈಮರೆತೆ. ರಸ್ತೆಯ ನಡುವೆ ಬಿದ್ದಿದ್ದ ಆ ಒಂದು ನವಿಲು ಗರಿಅದರ ಅಸ್ತಿತ್ವವನ್ನು ಸಾರಿಅದನ್ನು ಕಾಣಬೇಕೆಂಬ ಹಂಬಲವನ್ನು ನನ್ನೊಳಗೆ ಮೂಡಿಸಿತಲ್ಲ,ಎಂಥ ಅಚ್ಚರಿ! ಇನ್ನು ಮೇಲೆ ಬರೆದರೆಆ ನವಿಲು ಗರಿಯಂಥ ಕವಿತೆಗಳನ್ನೇಬರೆಯ ಬೇಕು ಅಂದು ಕೊಂಡೆ! ********









