ಕಾವ್ಯಯಾನ
ನಮ್ಮೂರ ಮಣ್ಣಿನಲಿ ವಿನುತಾ ಹಂಚಿನಮನಿ ನಮ್ಮೂರ ಬೀಸು ಗಾಳಿಯಲಿಮಾಸದ ಸಂಸ್ಕೃತಿಯ ಸುಗಂಧನನ್ನ ಉಸಿರ ಪರಿಮಳದಲಿಇಂದಿಗೂ ಸೂಸತಾವ ಘಮಘಮ ನಮ್ಮೂರ ಕಾಡ ಹಾದಿಯಲಿನಾ ಮೂಡಿಸಿದ ಹೆಜ್ಜೆ ಗುರುತುನಡೆದ ದಾರಿಯ ತೋರಿಸುತಲಿಇಂದಿಗೂ ಬೆನ್ಹತ್ತತಾವ ಎಡಬಲ ನಮ್ಮೂರ ಕೆರೆಯ ನೀರಿನಲಿನಾ ಒಗೆದ ಕಲ್ಲು ಹರಳುಅಲೆಗಳ ಮಾಲೆ ಹೆಣೆಯುತಲಿಇಂದಿಗೂ ನಗತಾವ ಕಿಲಕಿಲ ನಮ್ಮೂರ ನಿಷ್ಠ ಮಣ್ಣಿನಲಿಕಷ್ಟ ಎದುರಿಸುವ ಕೆಚ್ಚುಕನಸಿಗೆ ಎಣ್ಣಿ ಹೊಯ್ಯತಲಿಇಂದಿಗೂ ಮಿನಗತಾವ ಮಿಣಮಿಣ ********** ನಮ್ಮೂರ ಚಿಕ್ಕ ಆಗಸದಲಿಅಕ್ಕರೆಯ ಚೊಕ್ಕ ಚುಕ್ಕೆಗಳುಸಕ್ಕರೆಯ ಕಥೆ ಹೇಳುತಲಿಇಂದಿಗೂ ನೀತಿ ಹೇಳತಾವ ಚಕಚಕ ನಮ್ಮೂರ ಜನರ ಮನಸಿನಲಿಕರುಣೆಯ ಮಹಾಪೂರಸವಿ ನೆನಪುಗಳ ಸುರಿಯುತಲಿಇಂದಿಗೂ ಹರಸತಾವ ಭರಪೂರ









