ಮತ್ತೆ ಮತ್ತೆ ಹೇಗೆ ಹಾಡಲಿ
ಸಂತೆಬೆನ್ನೂರು ಫೈಜ್ನಟ್ರಾಜ್ ಹಾಡಿದ ಹಾಡನೆ ಮರಳಿ ನಾನುಮತ್ತೆ ಮತ್ತೆ ಹೇಗೆ ಹಾಡಲಿಕಡಲೊಳಗೆ ಬೆರೆತ ಆ ನದಿಯಯಾವ ಕಣ್ಣಿನಿಂದ ನಾನು ನೋಡಲಿ೧ ಬಂದವರು ಹೋದವರು ಇದನೆ ತಾನೆಹಾಡಿ ಹೋದರು ಬಿದಿರ ಸೀಳಿದಂತೆತೂತ ಕೊರೆದು ಎದೆಯ ತೆರೆದುಹಾಡಿದರೂ ನಾ ಹೋದರು ಕೇಳದಂತೆ೨ ಕಾಡ ಕರುಣೆ ಹೂವ ಪ್ರೀತಿಜೋಲಿಯ ಲಾಲಿ ಪಿಸ ಮಾತಿನೊಲುಮೆಒಲ್ಲೆನೆಂದರು ಮತ್ತೆ ಮನಕಿಳಿದುತಿದಿಯೊತ್ತೆ ರಾಗ ಚಿಮ್ಮಿ ಭಾವ ಕುಲುಮೆ೩ ನಮ್ಮವರು ನಿಮ್ಮವರು ಎಂದಿಗೂಹಾಡಿದುದನೆ ಹಾಡಿ ದಣಿದ ಕಥೆಯೂಹಾಡೊಂದೆ ಇಲ್ಲಿ ಭಾವ ಬೇರೆಇರಲಿ ಮನುಜ ಪ್ರೀತಿ ಬೇಡ ದುಗುಡ ವ್ಯಥೆಯೂ! **************
ಮತ್ತೆ ಮತ್ತೆ ಹೇಗೆ ಹಾಡಲಿ Read Post »








