ಶೂನ್ಯದುಂಗುರ….
ಶಿವಲೀಲಾ ಹುಣಸಗಿ ಅರಿವಿಗೆ ಬಾರದ ಕ್ಷಣ ನೆನೆದುಭಯದ ನಡುವೆ ನಲುಗುತಿವೆಹಿಂಡಿ ಹಿಪ್ಪೆಯಾದ ಮನಗಳುಆದ್ರತೆಗೊಂದು ಭದ್ರತೆಯಿಲ್ಲದೆಅಂಜಿಕೆಯ ಹಿನ್ನೋಟ ತಲೆ ಕೆಳಗೆಬಿಂಬಗಳ ಮೆಲುಕಿನ ಶರಣಾಗತಿಗೊತ್ತು ಗುರಿಯಿಲ್ಲದ ಮೌನಕೆಕೊರಳೊಡ್ಡಿ ನೇಣಿಗೇರಿದವರೆಲ್ಲಥಟ್ಟನೆ ಪ್ರತ್ಯಕ್ಷವಾದ..ಪ್ರೇತಾತ್ಮದಂತೆನರಕಗಳು ಅಂತಸ್ತಿನ ಅರಮನೆಯಉತ್ಸವ ಮೂರ್ತಿಗಳಾಗುವಾಗೆಲ್ಲಬಿಕ್ಕಳಿಕೆಗಳು,ನೀರಿಳಿಯದಾ ಗಂಟಲಲ್ಲಿಉಸಿರ ಬಿಗಿದಾಟಕೆ ಹರಕೆಯ ಜಪತಪನೆತ್ತಿಗಾದ ಗಾಯಕೆ ಸುಣ್ಣದಾ ಶೂಚಿತ್ತದಲ್ಲಿ ಮೂಡಿದ ನಕ್ಷತ್ರಗಳೆಲ್ಲವೂಬಾನ ಹುಡುಕಿ ಹೊರಟಂತೆಮಾನಗಳೆಲ್ಲ ಬಿಕರಿಯಾಗಿಹವುಮಾರುಕಟ್ಟೆಗೂ ಲಗ್ಗೆಯಿಡದೆಸಂದಿಗೊಂದಿಗಳಲ್ಲಿ ಅಡಗಿರುವಗಿರಾಕಿಗಳಿಗೇನು ಕೊರತೆಯಿಲ್ಲಮಾಂಸದ ಮುದ್ದೆ ಯಾವುದಾರೇನುಹರೆಯದಲಿ ಮಾಗಿರಬೇಕು ಅಷ್ಟೇತುಟಿಕಚ್ಚಿ ನರಳುವಾಗೆಲ್ಲ ಟೊಂಕದಾಡಾಬು ಸಡಿಲವಾಗಿ ಕಳಚಿದಂತೆಮನಸಿಗೆ ರುಚಿಸದಿದ್ದರು ಲೋಭವಿಲ್ಲದೇಹದಂಗಗಳಿಗೆ ಮೋಹದ ಉಡುಗೊರೆಇಳೆಯ ಸೇರುವ ಕಾಯ ನಿರ್ಮೊಹಿಮಣ್ಣಾದವರ ಚರಿತ್ರೆ ಅರಹುವವರಿಲ್ಲಸಾವು…ಎಂದೆಂದಿಗೂ ಸಾವೇನಿರಾಂತಕ,ನಿರಾಕಾರಕ್ಕೆ ಮುನ್ನುಡಿದಿಕ್ಕುಗಳ ಒಗ್ಗೂಡಿಸಿ ಐಕ್ಯವಾದಂತೆಶೂನ್ಯದುಂಗುರವ ತೊಡಿಸಿದಂತೆ *******









