ಕಾವ್ಯ ಕನ್ನಿಕೆ
ಸರಿತಾ ಮಧು ನನ್ನೊಳು ಕಾವ್ಯವೋ?ಕಾವ್ಯದೊಳಗೆ ನಾನೋ?ಅಭಿಮಾನದ ಆಲಿಂಗನವೋ?ಪದಪುಂಜಗಳ ಆರಾಧನೆಯೋ?ಶೃಂಗಾರದ ವರ್ಣನೆಯೋ?ಮನವ ಕಾಡುವ ಭಾವನೆಯೋ?ಅರಿಯದೇ ನನ್ನೊಳು ಬೆರೆತಕವಿ ಹೃದಯವೋ? ಮನದೊಳಡಗಿದ ಕಾವ್ಯಕನ್ನಿಕೆಯೋನಿನಗಾರಿದ್ದಾರು ಹೋಲಿಕೆ? ರತಿಸೌಂದರ್ಯ ಹೆಚ್ಚಿಸುವ ಲಾಲಿತ್ಯಸಹೃದಯ ಓದುಗನ ಮೆಚ್ಚಿಸುವ ಪಾಂಡಿತ್ಯಕರ್ಣಾನಂದ ನೀಡುವ ಸುಂದರ ಸಾಹಿತ್ಯನಿನಗಾರಿದ್ದಾರು ಹೋಲಿಕೆ? ಯತಿ, ಪ್ರಾಸ, ಅಲಂಕಾರಗಳನುತೊಟ್ಟಿರುವ ಆಭರಣ ಪ್ರಿಯೆನಿನಗಾರಿದ್ದಾರು ಹೋಲಿಕೆ? ಹರಿವ ಝರಿಯಂತೆ ನಿರಂತರಪ್ರವಹಿಸುವೆ ಪ್ರತಿ ಮನ್ವಂತರಕವಿ ಹೃದಯಗಳ ವಿರಾಜಿತೆನಿನಗಾರಿದ್ದಾರು ಹೋಲಿಕೆ? *********









