ಎದೆಯ ಬೆಂಕಿ
ಕವಿತೆ ವೀಣಾ ನಿರಂಜನ ನನ್ನ ಎದೆಯೊಳಗೆ ಬೆಂಕಿಯಿದೆಈ ಬೆಂಕಿಯೇನನ್ನ ಸುಡದಂತೆ ಎಚ್ಚರದಿಂದದಾಟಬೇಕಿದೆ ಹೊರಗೆನಿರೂಪಾಯಳಾದ ನನಗೆನಿರುಪದ್ರವಿ ಕವಿತೆಯೇಉತ್ತರ ಹೇಳಬೇಕುಅಕ್ಷರಗಳು ಬೇಯದಂತೆಶಬ್ದಗಳು ಬೂದಿಯಾಗದಂತೆಈ ಬೆಂಕಿಯಿಂದಲೇಬೆಳಕ ಹೊತ್ತಿಸ ಬೇಕಿದೆ ಕತ್ತಲು ಮಗ್ಗುಲು ಬದಲಾಯಿಸಿನಾಳೆ –ಬೆಳಗಾಗುವುದು ಮತ್ತೆಸುಡುವ ಸೂರ್ಯ ಹೊತ್ತು ತರುತ್ತಾನೆಬೆಳಕಿನ ಪುಂಜ ಎಂದಿನಂತೆ ಎದೆಯ ಬೆಂಕಿಗೆ ನೆರಳಿಲ್ಲ ಎಂದಾದರೆಕವಿತೆ –ನೀನೇಕೆ ಮರವಾಗಿ ನಿಲ್ಲ ಬಾರದುಸುಡುವಾಗ್ನಿ ತಣ್ಣಗಾದೀತುನಿನ್ನ ತಂಗಾಳಿಯ ಸ್ಪರ್ಶದಿಂದಗಾಳಿ, ಬೆಳಕು ಮತ್ತು ಕವಿತೆಈ ಬೆಂಕಿಯೆದುರುಎದೆ ಸೆಟೆಸಿ ನಿಲ್ಲುವುದಾದರೆಪುಟಗೊಂಡ ಆತ್ಮ ಪರಿಶುದ್ಧವಾಗುತ್ತದೆಮತ್ತುಸತ್ಯವಾಗಿಯೂ ಅಲ್ಲಿ ಹೊಸತೊಂದುಕವಿತೆ ಬದುಕನ್ನು ಚುಂಬಿಸುತ್ತದೆಬದುಕಿಗಾಗಿ ಹಂಬಲಿಸುತ್ತದೆ. **********************









