ಎಂಥಾ ಮಳೆ
ಕವಿತೆ ವಸುಂಧರಾ ಕದಲೂರು ಅಬ್ಬಾ..ಎಂಥಾ ಮಳೆಸುರಿದೂ ಸುರಿದೂಸುರಿದೂ ಸುರಿದೂತಟಕ್ಕನೆ ನಿಂತರೂತೊಟಕ್ ತೊಟಕ್ ಎಂದುತೊಟ್ಟಿಕ್ಕುತಾಮಲೆ ಕಾಡು ಮನೆ ಮಾಡುಮರದ ನೆತ್ತಿ ಗಿಡದ ಬೇರುಎಲ್ಲಾ ನೆನೆಸಿತು ಅಬ್ಬಾ…ಎಂಥಾ ಮಳೆಸುರಿದೂ ಸುರಿದೂಸುರಿದೂ ಸುರಿದೂನದಿ ತೊರೆ ಕೆರೆ ಝರಿಹಳ್ಳ ಕೊರಲು ಕೊಳ್ಳತುಂಬಿಸಿ ಚೆಲ್ಲಿ ತುಳುಕಿಸಿಹರಿದು ಹರಿದು ಹಾರಿತುಅಬ್ಬಾ… ಎಂಥಾ ಮಳೆಅಂಚಲಿ ಕೊರೆದು ಕೊಚ್ಚಿಆಳಕೆ ಸುರಿದು ಚಚ್ಚಿಒಂದೇ ಸಮನೆ ಹೊಡೆದುಹಾಸಿ ಬೀಸಿ ಬೆಚ್ಚಿ ಬೀಳಿಸಿತು.ಅಬ್ಬಾ…ಎಂಥಾ ಮಳೆಅಳತೆ ಮೀರಿ ಸುರಿದುಎಲ್ಲೆ ತೂರಿ ಹರಿದುದಿಕ್ಕು ತಪ್ಪಿಸಿ ಲೆಕ್ಕ ಒಪ್ಪಿಸಿದಿಢೀರನೆ ಧಡಾರನೆಮಿಂಚು ಗುಡುಗುಸಿಡಿಲು ನಡುಗುಬಡಿದೆಬ್ಬಿಸಿ ಮಗ್ಗಲು ಮುರಿಸಿಒಳ್ಳೆ ಪಾಠ ಕಲಿಸಿತುಅಬ್ಬಾ… ಎಂಥಾ ಮಳೆಭುವಿಯ ಕೋಪ ತೋರಿತುಕಡಲ ಅಲೆಯ ಕಂಗೆಡಿಸಿತುಸುಖದ ಕನಸು ಕೆಡಿಸಿತುನಗರ ಬದುಕು ಗುಡಿಸಿತುಅಬ್ಬಾ…ಎಂಥಾ ಮರುಳು ಮಳೆ. *******************************************************









