ಕಾವ್ಯಯಾನ
ನದಿ ಈಗ ದಿಕ್ಕು ಬದಲಿಸಿದೆ ಸ್ಮಿತಾ ಅಮೃತರಾಜ್.ಸಂಪಾಜೆ. ಜುಳು ಜುಳೆಂದು ಹರಿಯುವನನ್ನೂರಿನ ತಿಳಿನೀರಿನ ನದಿಈಗ ಕೆನ್ನೀರ ಕಡಲು. ತಪ್ಪನ್ನೆಲ್ಲಾ ಒಪ್ಪಿಕೊಂಡಂತೆತೆಪ್ಪಗೆ ಹರಿಯುತ್ತಿದ್ದ ನದಿ.. ಒಣಗಿದೆದೆಯ ಮೇಲೆ ಮೊಗೆದುತಣಿಯುವಷ್ಟು ತೇವವನ್ನುನಮಗಾಗಿಯೇ ಕಾಪಿಡುತ್ತಿದ್ದ ನದಿ.. ಅಂಗಳದ ತುದಿಯವರೆಗೂ ಬಂದುಗಲಗಲಿಸಿ ನಕ್ಕು ನೇವರಿಸಿ ಹರಿಯುತ್ತಿದ್ದ ನದಿ.. ಹೌದು! ಇದುವೇ ನದಿಮೊನ್ನೆ ಹುಚ್ಚೆದ್ದು ಕೆರಳಿದ್ದಕ್ಕೆನೆಲದ ಎದೆಯೊಡೆದು ಸೆಲೆ ಸಿಡಿದುಸಾವಿರ ನದಿಯಾಗಿ ಒಸರಿ ಹರಿದವುರಕ್ತ ಕಣ್ಣೀರ ಕೋಡಿ. ದಿಕ್ಕಾಗಿದ್ದ ನದಿ ತಾನೇದಿಕ್ಕು ಬದಲಿಸಿ ಕೆಂಪಗೆ ಹರಿಯುವಾಗನಾನೋ ದಿಕ್ಕು ಕಾಣದೆ ದಿಕ್ಕೆಟ್ಟುನದಿ ಹರಿಯುವ ದಿಕ್ಕಿಗೆ ಮುಖ ಮಾಡುವುದನಿಲ್ಲಿಸಿದ್ದೇನೆ. ಈಗ ನದಿ ತಿಳಿಯಾಗಿದೆಮುಖ ನೋಡಿಕೊಳ್ಳಬಹುದು ಎನ್ನುತ್ತಾರೆಮುಖವಾಡ ಹಾಕಲು ನದಿಗೂ ಸಾಧ್ಯವಾ..?ನನಗೆ ದಿಗಿಲಾಗುತ್ತಿದೆ. ************************************









