ಗುಪ್ತಗಾಮಿನಿ
ಕವಿತೆ ಗುಪ್ತಗಾಮಿನಿ ಮಮತಾ ಶಂಕರ ಇಲ್ಲಿ ಹುಟ್ಟಿದ ಮೇಲೆನಾವು ಇಲ್ಲಿನ ಕೆಲವುಅಲಿಖಿತ ಆದೇಶಗಳ ಪಾಲಿಸಲೇಬೇಕಾಗುತ್ತದೆ ಯಾರೋ ಅಜ್ನಾತ ಕ್ರೂರಿಗಳ ಕೈಗೆ ಸಿಕ್ಕುನಾವು ನಲುಗಬಹುದೆಂಬ ಒಣ ಗುಮಾನಿಯಿಂದತಮ್ಮ ಕರುಣಾಳು ಕೈಯಿಂದ ನಮ್ಮನ್ನು ರಕ್ಷಿಸುತ್ತೇವೆಂದುಮುಸುಕಲ್ಲಿ ಮುಚ್ಚಿಟ್ಟು ಕಾಪಿಡುತ್ತಾರೆ….ಮತ್ತು ಪತಿ ಪಿತ ಸುತರಾದಿಯಾಗಿಅವರೆಲ್ಲಾ ನಮ್ಮನ್ನು ಪೊರೆಯುವವರೆಂದುಕರೆಯಲ್ಪಡುವವರಾಗಿ ನಮ್ಮನಡೆಯಲಾಗದ ನಿಶ್ಯಕ್ತ ಕಾಲುಗಳಾಗಿರುತ್ತಾರೆಹಾಗೆಯೇಇವರೆಲ್ಲಾ ಶೂರರೇ ಆಗಿರಬೇಕೆಂಬ ಕರಾರೇನಿರುವುದಿಲ್ಲ…. ಕೆಲವೊಮ್ಮೆ ನಾವುನಿರ್ವೀರ್ಯರ ನಿಷ್ಪಂದರ ಸುಪರ್ದಿಯಲ್ಲಿಸುಖಿಗಳೆಂದು ಜಗತ್ತಿಗೆ ತೋರಿಸುವಲ್ಲಿನೆಮ್ಮದಿಯ ಪಡೆದವರಾಗಿರುತ್ತೇವೆ…. ಹೇಗಿದೆ ನೋಡಿ….ಸುಳ್ಳಿನ ಪ್ರತಿಬಿಂಬವನ್ನು ಜಗತ್ತು ನಂಬುತ್ತದೆಅಷ್ಟೇಕೆ…..? ಪೋಷಿಸುತ್ತದೆ ಕೂಡ….. ಓ…… ಮಾಯೆ ಮುಸುಕಿದ ಜಗದ ಕಣ್ಣೇನಿನಗೆಂದೂ ಕಾಣದಸತ್ಯದ ಮುಖ ನಮ್ಮಂತರಂಗ…ಅಘೋಷಿತ ನಿಷೇಧಾಜ್ಞೆಗಳಲ್ಲಿಬದುಕುವ ನಾವುನಿಮ್ಮನ್ನು ದ್ವೇಷಿಸುತ್ತೇವೋ, ಪ್ರೀತಿಸುತ್ತೇವೋಅಥವಾ ಕ್ಷಮಾಕರಗಳಿಂದ ನಿಮ್ಮನ್ನಪ್ಪಿದೇವರಾಗಿರುತ್ತೇವೋ…….ನಮಗೇ ಗೊತ್ತು….ನೀವೇನ ಬಲ್ಲಿರಿ……..? ****************************************









