ಸವಿ ಬೆಳದಿಂಗಳು
ಕವಿತೆ ಸವಿ ಬೆಳದಿಂಗಳು ರಾಘವೇಂದ್ರ ದೇಶಪಾಂಡೆ ಈ ಸಂಜೆ, ಈ ಒಂಟಿತನಸಾಕ್ಷಿಯಾಗುತಿದೆ ಆಕಾಶದಿನದ ವಿದಾಯಕೆಸಂಜೆ ಸಮೀಪಿಸುತ್ತಿದ್ದಂತೆನೆನಪಾದೆ ನೀ ನನ್ನಲಿ…ಗಾಳಿಯಲ್ಲಿ ತೇಲಿ ಬರುತಿದೆಸುವಾಸನೆಯೊಂದು ಅಪರಿಚಿತವಾಗಿಕೆಲವೊಮ್ಮೆ ಪರಿಚಿತವಾಗಿಯೂಹೇಳುವುದು ಕಥೆಯನ್ನು ಒಮ್ಮೊಮ್ಮೆಕೇಳಲು ಪ್ರಯತ್ನಿಸುವೆನೆನಪಾದೆ ನೀನಾಗಆಗಸದಿ ಚಂದ್ರ ಇಳಿದು ಬರುತಿರುವಾಗಹುಡುಕಿಕೊಂಡು ಬಂದನೇ ಚಂದ್ರಆಕಾಶದಲ್ಲಿ ಯಾರನ್ನಾದರೂ …! ತಿಳಿದುಕೊಳ್ಳಲು ಬಯಸುವೆನುಚಂದ್ರನ ಬಗ್ಗೆ ಯಾರಲ್ಲಾದರುನೆನಪಾದೆ ನೀನಾಗಪಸರಿಸುವ ಸುಗಂಧದಲ್ಲಿಆಸ್ವಾದಿಸುವೆ ತಂಗಾಳಿಯಲಿ ನಿನ್ನನು…ಕರೆಯುವರಾರೊ ಮೆದುಧ್ವನಿಯಲಿಬೆಳದಿಂಗಳ ಹೆಸರಿನಲಿನಿರ್ಮಿಸುತಿರುವೆ ಮೆಟ್ಟಿಲುಗಳಏರಿ ಬೆಳದಿಂಗಳ ಸವಿಯಲು.ಪ್ರಯತ್ನಿಸುತ್ತೇನೆ ಏರಲುನೆನಪಿಸಿಕೊಂಡು ನಿನ್ನನುಕೇವಲ ನಿನಗಾಗಿ ಮಾತ್ರವೇ …! *****************************************









