ನೆನಪ ಕಟ್ಟೋಣ
ಕವಿತೆ ನೆನಪ ಕಟ್ಟೋಣ ಸುಧಾರಾಣಿ ನಾಯಕ್ ಹೇಗೂ ದೂರಾಗುವವರಿದ್ದೆವೆಬಾ..ಕಡಲದಂಡೆಯ ಗುಂಟಒಂದಿಷ್ಟು ಹೆಜ್ಜೆ ಹಾಕೋಣನಾಳೆಯ ಮಾತೇಕೆ,ಕವಲು,ಕವಲು,ನಿನ್ನೆಯದೇ ಬೇಕುನೆನೆದುಕೊಳ್ಳೊಣ ಸಾವಿರ ಸಾವಿರ ಆಣೆಗಳುಸವಕಲಾಗಿದೆ,ಚಲಾವಣೆಯಿಲ್ಲದಸಂದೂಕಿನ ನಾಣ್ಯಗಳಂತೆಯಾವ ವ್ಯಥೆಯಕಹಾನಿಯು ಬೇಡಒಂದಿಷ್ಟು ನೆನಪ ಕಟ್ಟೋಣ ಕಾಡಿ,ಬೇಡಿ,ಮೋಹಿಸಿಮುದ್ದಿಸಿದ್ದೆಲ್ಲ ನಕಾಶೆಯಗೆರೆಗಳಂತಿದೆ ಎದೆಯಲಿಮಾತು,ನಗು ಯಾವುದುಮುಗಿದಿಲ್ಲ,ಮುಗಿಯದಮಾತುಗಳ ಸೊಲ್ಲೇ ಬೇಡಒಂದಿಷ್ಟು ಜೊತೆ ಸಾಗೋಣ ಅರ್ಧರ್ಧ ಹೀರುವ ಚಹಾ,ತಾಸಿನ ಪರಿವೇ ಇಲ್ಲದೇವಿಷಯವೂ ಇರದೇಮಾತಾಡಿ,ಕಿತ್ತಾಡಿ ಕಳೆದದಿನಗಳೆಲ್ಲ ನಾಳೆಗೆಪಳೆಯುಳಿಕೆಯಾಗಬಹುದುಬಾ ,ಒಂದಿಷ್ಟುಒಪ್ಪವಾಗಿಸೋಣ ಅಲೆಅಲೆಯುಕೊಡುವ ಕಚಗುಳಿ,ಅಪ್ಪಿ ಗುಯ್ ಗುಡುವಆರ್ದ್ರ ಗಾಳಿ,ನದಿ ನೀರು ಸಹ ಉಪ್ಪಾಗುವಹುಚ್ಚು ಮೋಹದ ಪರಿ,ಎಲ್ಲವನೂ ನಾಳೆಗೆನಮ್ಮೊಲವಿಗೆ ಸಾಕ್ಷಿಯಾಗಿಸಬೇಕಿದೆನೀ ತೊರೆದಾಗಲೂ,ನೀನಿರುವ ಭ್ರಮೆಯಲಿನಾ ಬದುಕಬೇಕಿದೆ,ಬಾ..ಸುಳ್ಳಾದರೂ ಒಂದಿಷ್ಟುಕನಸ ಕಟ್ಟೋಣ ********************************************









