ಕಂಸ…!
ಕವಿತೆ ಕಂಸ…! ಡಾ. ಅರಕಲಗೂಡು ನೀಲಕಂಠ ಮೂರ್ತಿ ಪ್ರಸ್ತಾವನೆ: ಒಬ್ಬ ದುರಾತ್ಮನ ಕ್ರೂರ ಮನಸ್ಸಿಗೆ ಅತ್ಯಂತ ಹೇಯವಾಗಿ ಬಲಿಯಾದ ಆ ಎಳೆಯ ಕಂದಮ್ಮನ ಆತ್ಮಕ್ಕೆ ಶಾಂತಿ ಕೋರಿ…ಈ ಕವನ ನನ್ನ ನಮನ! ಹಸುಳೆಯೊಂದು ಅಸುನೀಗಿದೆಒಂದು ಪೊದೆಯೊಳಗೆಅನಾಥಬೆತ್ತಲೆ –ಬೀಭತ್ಸ ಕೊಲೆಗೆ…!ಒಂದೇ ಒಂದು ದಿನವೋಒಂದು ವಾರವೋವಯಸು ಎಷ್ಟಾದರೇನು ಪಾತಕಕ್ಕೆ! ಅಚಾನಕ್ಕಾಗಿ ತಾನೆ ಅಂಬೆಗಾಲಿನಲಿನಡೆದಿರಬಹುದೇ ಪೊದೆಯೆಡೆಗೆಆ ಹಸುಳೆ?ಅಥವಾ…?ಪೊದೆಯೇನು ಬಯಲೇನುಏನಾದರೇನು ಅಸುರರೋಷಕ್ಕೆ! ಬಹುಶಃವಿಷದ ಹಾವೂ ಕೂಡ ಮರುಗಿಮುಟ್ಟದೆಭುಸುಗುಡದೆಹರಿದು ಹೋಗಿರಬಹುದು ಸುಮ್ಮನೆನಿಶಬ್ದ! ಆದರೀತ ಹಾಗಿರಲಿಲ್ಲ…ಕುದಿವ ಎಣ್ಣೆಯ ಕೊಪ್ಪರಿಗೆಯಿಂದಲೇ ನೇರಎದ್ದು ಬಂದಿದ್ದವನು!ಆ ಆಯುಧವೋ –ಒಂದೇ ಒಂದು ತುಕ್ಕಾದಪುಟ್ಟ ಸ್ಕ್ರೂಡ್ರೈವರ್ –ಅದೂ ಕೂಡ ಹೆಚ್ಚುಎನಿಸುವಂಥ ಹಸುಗೂಸು!ಒಂದೇ ಎರಡೇ…ನೂರು ಬಾರಿನೂರಾರು ಬಾರಿಚುಚ್ಚಿ ಚುಚ್ಚಿ ಮೆರೆದಿದ್ದಾನೆಹೊಸದೊಂದು ಪ್ರಯೋಗ…! ಎಂಥ ಪ್ರಾಚೀನಲಿಪಿಯೋ ಏನೋಇನ್ನೂ ಅಳಿಸಲಾಗದಹೆಣ್ಣ ಹಣೆಬರೆಹ! ಅಳಲೂ ಆಗದಆಗತಾನೆ ಕಣ್ಣು ತೆರೆದ ಹಸುಳೆಆ ಹೆಣ್ಣು!ಹೇಗೆಲ್ಲ ಕೂಗಿ ಕೂಗಿ ಚೀರಿರಬಹುದುತನಗೆ ಆಗಿನ್ನೂ ಅರಿವಿರದಆ ಹೊಚ್ಚ ಹೊಸ ನೋವಿಗೆಆ ಭಯಾನಕ ಬಾಣ ಬತ್ತಳಿಕೆ…ಗಳಿಗೆ! ***********************









