ಮೋಹದ ಕಡಲಲ್ಲಿ…
ಕವಿತೆ ಮೋಹದ ಕಡಲಲ್ಲಿ… ಜಯಲಕ್ಷ್ಮೀ ಎನ್ ಎಸ್ ಕೋಳಗುಂದ ಅಂಗ ಸಂಗವ ಜರೆದುಅರಿವೆ ಹಂಗನು ತೊರೆದುಬೆತ್ತಲಾದ ಅಕ್ಕಯ್ಯನಿಗೂಆತ್ಮ ಸಂಗಾತದ ಮೋಹ..! ಮಾಯೆಯ ಜಗದೊಳಗೆಈಸಿ ಗೆದ್ದ ಅಲ್ಲಮನಿಗೂಲಿಂಗದಾಲಿಂಗನದ ಮೋಹ…! ಕಾನನದ ಕಾರ್ಪಣ್ಯಗಳಅರಿವಿದ್ದೂ ಸೀತೆಯ ಬಿಡದಬಂಗಾರದ ಮೋಹ…! ಬಸುರಿ ಹೆಂಡತಿಯಕಾಡಿಗಟ್ಟಿದ ಪುರುಷೋತ್ತಮನಜನಪದದ ಮೋಹ..! ಮಡದಿಯ ಅಡವಿಟ್ಟೂಮಾತುತಪ್ಪದ ಹರೀಶ್ಚಂದ್ರನಸತ್ಯನಿಷ್ಠೆಯ ಮೋಹ..! ಗೆದ್ದ ರಾಜ್ಯವ ಒದ್ದುತಪೋನಿರತನಾದವನಿಗೂಜಿತನಾಗುವ ಮೋಹ…! ಸಾವಿನ ಬಾಗಿಲಿನಲಿ ನಿಂತಅರಿವಿದ್ದೂ ಫಣಿಕೇತನನಿಗೆಛಲಮೆರೆವ ಮೋಹ..! ತುಂಡು ಅರಿವೆಯ ಮಂಡಿಯ ಮೇಲೆಸುತ್ತಿಕೊಂಡ ಫಕೀರನಿಗೆಮುಕ್ತಿ ಕೊಡಿಸುವ ಮೋಹ…! ಮೋಹವ ಗೆದ್ದೂ ಗೆಲ್ಲದನಿರ್ಮೋಹಿಗಳೂಮೋಹದ ಕಡಲೊಳಗಿನಆಣಿಮುತ್ತುಗಳಾದರು….!! **************************************









