ಹುನ್ನಾರವೇನು?
ರಾಜೇಶ್ವರಿ ಭೋಗಯ್ಯ
ಹುನ್ನಾರವೇನು?
ಕವಿತೆ ನನ್ನ ಕವಿತೆ ಲಕ್ಷ್ಮೀದೇವಿ ಪತ್ತಾರ ಹರುಕು ಬಟ್ಟೆಮುರುಕು ಮನೆಯಲಿಅರೆ ಹೊಟ್ಟೆ ಊಟದಲ್ಲೂಹೆತ್ತ ಮಕ್ಕಳು ಕಲಿತುಮನೆಗೆ ಆಸ್ತಿ ಆಗುವರೆಂಬಹೆತ್ತವರ ಹೊಟ್ಟೆ ತುಂಬಾ ಕನಸುನನ್ನ ಕವಿತೆ ಭೂಮಿ ಹರಗಿ ಹದಗೊಳಿಸಿಗಟ್ಟಿ ಬೀಜವ ಬಿತ್ತಿಮಳೆ ಬರುವುದೆಂಬ ಭರವಸೆ ಹೊತ್ತರೈತನ ನಿರೀಕ್ಷೆ ನನ್ನ ಕವಿತೆ ಕೆಲಸವಿಲ್ಲವೆಂದು ಕೊರಗದೆಸಿಕ್ಕ ಕೆಲಸವನ್ನ ಚೊಕ್ಕನಾಗಿ ಮಾಡಿ ಹೊಟ್ಟೆಗೆ ಹಿಟ್ಟು ಗಿಟ್ಟಿಸಿಕೊಳ್ಳುವ ಗಟ್ಟಿಗರ ಇಚ್ಛಾಶಕ್ತಿನನ್ನ ಕವಿತೆ ಬಾಳ ಪಥದ ಏರಿಳಿತಗಳನ್ನು ಎದುರಿಸಿ ಸಂಸಾರ ರಥವನ್ನು ಸುಗಮವಾಗಿ ದಡ ಸೇರಿಸುವ ಸ್ತ್ರೀ ರತ್ನ ನನ್ನ ಕವಿತೆ ಗಾಳಿ ಮಳೆ ಬಿಸಿಲು ಲೆಕ್ಕಿಸದೆಕಾಮನೆಗಳನ್ನು ಕಡಿಗಣಿಸಿವೈರಿಪಡೆಯ ನಿರ್ಣಾಮದ ಪಣ ತೊಟ್ಟಯೋಧನ ದೇಶಭಕ್ತಿ ನನ್ನ ಕವಿತೆ ಪ್ರಕೃತಿ ಪ್ರಕೋಪ, ವಿಕೋಪಗಳ ಎದುರಿಸಿರೋಗರುಜಿನಗಳ ನಿಯಂತ್ರಿಸಿಒಳ್ಳೆಯ ದಿನಗಳ ಆಶೆ,ಭರವಸೆಸಾಕಾರಗಳಿಸುವ ನಾಡಿನ ಸರ್ದಾರನನ್ನ ಕವಿತೆ *******************************
ಕವಿತೆ ಅಹಮ್ಮಿನ ಕೋಟೆ ಚಂದ್ರಪ್ರಭ ಬಿ. ‘ಸೋತರೇ ಗೆಲುವು ಮಗಳೇ’ ಅವ್ವನ ಮೆಲು ನುಡಿ‘ಇಟ್ಟಾಂಗಿರಬೇಕ ಮಗಾ’ ಅಜ್ಜಿಯ ಚೆನ್ನುಡಿನಿನ್ನ ನಲ್ನುಡಿ ಎದುರು ಗಾಳಿಯೊಡನೆತೂರಿ ಹೋದುದು ಅರಿವಿಗೇ ಬರಲಿಲ್ಲಆಹಾ! ಏನದರ ಸೊಗಸು…ಖೋಡಿ ಮನಸ್ಸಿನ ಹತ್ತು ಹದಿನಾರು ಕನಸುಚಿತ್ತಾಕರ್ಷಕ ಸೆಳೆತ.. ಬಲು ಮತ್ತಿನ ಅಮಲು ಬಿಸಿಲೇರಿದಂತೆಲ್ಲ ನಿಚ್ಚಳ ಬೆಳಕುನಡು ಮಧ್ಯಾಹ್ನದ ನಿಗಿನಿಗಿ ಕೆಂಡಮಂಜು ಕರಗಿ ಒಳಹೊರಗೆಲ್ಲ ಕಡು ತಾಪಅಪಥ್ಯವಾಗುವ ಅವ್ವ ಅಜ್ಜಿಯ ಕಿವಿಮಾತುತುದಿ ಮೊದಲಿಲ್ಲದ ತಪ್ಪು ಒಪ್ಪುಗಳಗುಣಾಕಾರ ಭಾಗಾಕಾರ… ಮುಂಬರಿಯಲು ತವಕಿಸುವ ಹೃದಯನಿಂತೇ ಬಿಡುವ ಹಠಮಾರಿ ಹೆಜ್ಜೆಕ್ಷಮಿಸು ಗೆಳೆಯ, ನಿನ್ನಂತೆ ನಾನೂ ಬಂದಿಅಹಮ್ಮಿನ ಕೋಟೆಯಲಿ.. ****************************************
ಹಾಯ್ಕುಗಳು ಭಾರತಿ ರವೀಂದ್ರ 1) ಹೂಗಳು ಬಣ್ಣದ ಲೋಕ :ಹೂಗಳು ಹಲವಾರು,ದೃಷ್ಟಿ ಹೀನತೆ. 2) ವಿರಹ ವಿರಹ ತಾಪ :ಮೂಡಣದ ದೊರೆಗೆ,ಭುವಿ ಪ್ರೀತಿಗೆ. 3) ಕವಿ ಕವಿ ತಾಕತ್ತು :ರವಿ ಇಲ್ಲೆಡೆ ಎಲ್ಲಾಕರಾಮತ್ತು. 4) ಭೂರಮೆ ಭೂರಮೆ ಕಳೆ:ಹಸಿರುಟ್ಟ ಬೆಡಗಿ,ಕೋಗಿಲೆ ಗಾನ. 5) ಮೌನ ಮೌನದ ಭಾರ :ಮಾತುಗಳ ಕದನ,ಮುಕ್ತಾಯ ಗೀತೆ. 6) ಅಮ್ಮ ದಾರಿ ದೀವಿಗೆ :ಅಮ್ಮನ ನಗೆ ರೂಪ,ಬಾಳು ಸಂಭ್ರಮ. 7) ನಲ್ಲ ಅನುದಿನವೂಅನವರತ ನಗು,ನಲ್ಲನ ಮೊಗ. 8) ಕಾಣಿಕೆ ಮುಗಿಲ ಮಾಲೆ :ಭುವಿಯ ಕೊರಳಿಗೆ,ರವಿ ಕಾಣಿಕೆ. 9) ಬೆಳದಿಂಗಳು ವಿರಹ ತಾಪ :ಬೆಳದಿಂಗಳ ರಾತ್ರಿ,ಚಂದ್ರ ಗ್ರಹಣ. 10) ಸ್ವಪ್ನ ಸ್ವಪ್ನ ರಾಣಿಗೆ :ಜಾಗರಣೆ ಬಹಳ,ನನಸಾಗಲು. ************************************
ಕವಿತೆ ಅನಾಮಿಕಾ ಮೋಹನ್ ಗೌಡ ಹೆಗ್ರೆ. ಅವಳು ಮಲಗಿದ್ದಾಳೆಕಣ್ಣಿನಲ್ಲಿ ಕನಸಿನ ಹಸಿವ ತುಂಬಿಒಡಲಿನಲಿ ಮತ್ಯಾವುದೋ ಹಸಿವ ನುಂಗಿಅವಳ ದೇಹದೊಡನೆ ದುಡ್ಡು ಮಾತಾಡುವುದ ಕೇಳಿ… ಒಂದಾನೊಂದು ದಿನದಲ್ಲಿಅವಳು ಮಲಗಿರುವಾಗತೊಟ್ಟಿಲ ತೂಗಿದ ಕೈಗಳುಮಲಗಿದ ಮುದ್ದು ಮುಖಕ್ಕೆಮುತ್ತಿನ ಮಳೆಗೆರೆದ ಮನಸುಗಳುಹೊಸ ಬಟ್ಟೆಯ ಉಡಿಸಿ ಆನಂದಿಸಿದ ಕಣ್ಗಳುಅವಳಿಗೆ ನೆನಪಾಗುತಲೇ ಇಲ್ಲ… ವಿದ್ಯೆ ಬುದ್ದಿಗಳನ್ನು ಕಲ್ಲು ಕಟ್ಟಿ ಮುಳುಗಿಸಿದ್ದಾಳೆಕೆಲವೊಮ್ಮೆ ಇವಳೂ ಏಳದ ಹಾಗೇಮನಸು ಬಯಸದ ಶೃಂಗಾರಕೆ ನಿತ್ಯ ಅಣಿಯಾಗುತಾಳೆಎಲ್ಲೂ ಬೆವರದವರು ಇವಳಲ್ಲಿ ಬಂದು ಬೆವರುವಷ್ಟೂ ಕ್ರೂರತನವಸಹಿಸಿಕೊಂಡು ಅದೊಂದು ವೃತ್ತಿಯೇ ಎನಿಸುವಷ್ಟುಬಲಿತ ಮಾಂಸ ಖಂಡಗಳೇಉಬ್ಬು ತಗ್ಗುಗಳೇ ಅವಳ ಪದೋನ್ನತಿಸ್ವಯಂ ನಿವೃತ್ತಿ ಪಡೆದರೂಉಳಿತಾಯವಾಗಲಿ, ಪಿಂಚಣಿಯಾಗಲಿ ಅವಳ ಪಾಲಿಗಿಲ್ಲ…. ಅನುಕಂಪ, ಬಂಡಾಯ, ಭದ್ರತೆಎಲ್ಲವನ್ನೂ ಮರೆತಿದ್ದಾಳೆ ಅವಳುತನ್ನ ಮೈಯ ಒತ್ತೆಯಿಟ್ಟು ಎಷ್ಟೋ ಅತ್ಯಾಚಾರಗಳ ತಪ್ಪಿಸಿದಾಕೆಸಮಾಜದ ಯಾವುದೋ ಸರಪಳಿಯಅನ್ವರ್ಥಕ ದೇವತೆಯೇ ಅವಳುಗೊತ್ತಿಲ್ಲ ನನಗೆ ಇಂದಿಗೂ ಅವಳ ಹೆಸರೇನೆಂದು….. **************************************
ಕವಿತೆ ನಿನಗಿಂತ ದೊಡ್ಡವರು….. ಯಮುನಾ.ಕಂಬಾರ ತುಟಿ ಬಿಚ್ಚದೇ ಬಾಯ್ಮುಚ್ಚಿಕೊಂಡುತೆಪ್ಪಗೆ ಮೌನದಲಿ,ಒಮ್ಮೆ ದುಃಖ ಒಮ್ಮೆ ಸುಖ ಅಟ್ಟಿಸಿಕೊಂಡುಕಾಲ ಹಾಕುವ ಕಾರಣಿಕಳೇ….!!. ಕ್ರೌರ್ಯ , ಕೋಪ ತಾಪಗಳಗರ್ಭದಲ್ಲಿ ಅಡಗಿ ಕುದಿಗೊಂಡರೂಮತ್ತೆ ಮತ್ತೆ ಅದೇ ಮೌನಅದೇ ಶಾಂತಿ ,ಅದೇ ಆ ಸುರಿಯುವ ಕಾಂತಿ !! ನಿನ್ನ ಸಹನೆಗೆ ತಾಳ್ಮೆಗೆಇಲ್ಲ – ಸಾಟಿಇತಿಹಾಸದ ಕತ್ತಲಲ್ಲಿ – ಕರಗಿವೆಸಾವಿರ ಸಾವಿರ ಮರೆಯದ ಮಾಣಿಕ್ಯದ ದೀಪ್ತಿ !! ಆಗಲೂ ಈಗಲೂ ಧುಮ್ಮಿಕ್ಕಿ ಪುಟಿಯುತಿವೆ – ಸಾಯದ ಅಮರ ಅಕ್ಷರಗಳು:” ದುರಾಸೆ ದುಃಖಕ್ಕೆ ಮೂಲಅಹಿಂಸೆ ಬದುಕಿನಸೂತ್ರಕಾಯಕವೇ ಕೈಲಾಸ “. !! ನಿನ್ನ ಕಣ ಕಣದ ಕಣ್ಣಲ್ಲೂಮಿಂಚುವ ದೀಪ್ತಿಗೆನನ್ನ ಮೈ ಮನ ಶರಣಾದ ಹೊತ್ತುಸವಿಯುತ್ತಿರುವೆ – ನಿನ್ನೆದೆಯ ಸಿರಿಯಲಿಒಂದಾಗಿ ಒಂದಾಗಿ – ಹಗಲು ರಾತ್ರಿಗಳ ಮರೆತು !! ನಿನ್ನ ವಿನಹ ಗತಿ ಇಲ್ಲಹೆತ್ತ ಒಡಲುಹೊತ್ತ ಉದರ – ಒಂದೇ ಒಂದೇನಿನಗಿಂತ ದೊಡ್ಡವರು – ಇಲ್ಲ ಇಲ್ಲ ಇಲ್ಲ…!! ******************************
ನಿನಗಿಂತ ದೊಡ್ಡವರು….. Read Post »
ಕವಿತೆ ಬೆಳಗಬೇಕಾದರೆ..! ಸುಮನಸ್ವಿನಿ. ಎಂ ನೋವ ನುಂಗಲು ಹಿಂಜರಿಯದೇಘರ್ಷಿಸಿಕೊಳ್ಳಬೇಕುಬೆಳಕ ಹೊತ್ತಿಸಬೇಕಾದರೆ… ಸುಟ್ಟುಕೊಳ್ಳುವ ಅಂಜಿಕೆಯಿಲ್ಲದೇನಿರ್ಭಯ ಗೀರಿಕೊಳ್ಳಬೇಕುಬೆಳಗಬೇಕಾದರೆ… ಕರಗಿಹೋಗಲು ಕಳವಳಗೊಳದೇಪ್ರಾಂಜಲ ದಹಿಸಬೇಕುಪ್ರಜ್ವಲಿಸಬೇಕಾದರೆ… ಬೂದಿಯಾಗಲು ಹೆದರದೇಹೊತ್ತಿ ಉರಿಯಬೇಕುಬೆಳಕಾಗಬೇಕಾದರೆ… ಮಾಯವಾಗೋ ಭಯವ ಮೀರಿನಿರಂತರ ಧಗಧಗಿಸಬೇಕುಶಾಶ್ವತ ಮಿನಗುತಿರಬೇಕಾದರೆ… ******************************************
ಕವಿತೆ ಮಾರುವೇಷ ಪ್ರೊ. ಚಂದ್ರಶೇಖರ ಹೆಗಡೆ ಪಾತಾಳದಿಂದೆದ್ದು ಭೋಂಕನೆಬೇಟೆಯಾಡುವ ವಿಧಿಯೇಶ್ವಾನದಲ್ಲಡಗಿ ಹೊಟ್ಟೆ ಹೊರೆವಹಂಗಿನರಮನೆಯ ವಾಸವೇಕೆ ?ವಾಹನದೊಳಗಿಳಿದು ಬಲಿ ಬೇಡುವಭಿಕ್ಷಾಟನೆಯ ಡಾಂಭಿಕತೆಯೇಕೆ ?ಹೃದಯದೊಳಪೊಕ್ಕು ನಿಲ್ಲಿಸುವಮೋಸದ ಮಾರುವೇಷವೇಕೆ ? ಹೊರಬಂದು ಎದುರಾಗಿಬಿಡು ಒಮ್ಮೆನಿಜರೂಪ ಸತ್ಯ ನಾಮವ ತಳೆದುಕಣ್ತುಂಬಿಕೊಳ್ಳಲಿ ಜಗವು ಮೊರೆದುಪ್ರಾರ್ಥಿಸಿದಣಿವಿಲ್ಲದ ಕಾಯಕಕೆ ಶರಣುಶರಣೆಂದೆನುತ!ಎದೆಯೊಳಗಿನ ದಯೆ ಕರುಣೆಗಳಹುಡುಕಿ ಕೊರಗುತ ಯಾರಿಗೂ ಜಗ್ಗದ ಭೀಮಬಲವೆಲ್ಲಿಯದು ?ವಶ ಮಾಡಿಕೊಳ್ಳುವ ಅವಲೋಕಿನಿಯೆಲ್ಲಿಯದು ?ಬಿಡುವ ಬಾಣದ ತುದಿಗೆಎಂದೂ ನೀಗದ ಹಸಿವಿನೊಡಲುಎಲ್ಲಿ ಬರಿದಾಗುವುದೋ ಇಂದುಯಾವ ತಾಯಿಯ ಮಡಿಲು ಪಯಣ ಹೊರಟವರ ಮನದಲ್ಲೊಂದುನಿತ್ಯ ಅಳುಕುಯಾರಿಗೆ ಗೊತ್ತು ನಿನ್ನೊಳಗಿನವಂಚನೆಯ ಹುಳುಕುಕಾಣದ ಲೋಕದೊಳಗೇಕೆ ಬಯಲಾಟತೊರೆದುಬಿಡಬಾರದೇ ಹೇಗಾದರೂಕೊಂಡೊಯ್ಯುವೆನೆಂಬ ಹಠ ಜೀವನ ಪ್ರೀತಿಯೊಂದಿಗೆ ನಿನ್ನದೆಂದಿಗೂ ವ್ಯರ್ಥ ಕದನಅಸುರರೆಂಬುವರಿಲ್ಲ; ಕಾಣುವುದೆಲ್ಲೆಡೆಗೆನಿನ್ನದೇ ಅಟ್ಟಹಾಸದ ವದನಲೋಕವೆಲ್ಲವೂ ವಿರೋಧಿ ಬಣಹೀಗಳೆಯಬಾರದೆಂದರೂ ನಿನ್ನಬಿಡದು ಹೆಣೆದ ಚಕ್ರವ್ಯೂಹದ ದರ್ಶನ ************************
ಕವಿತೆ ನೀವು ಎದೆಗೆ ಗುಂಡು ಹೊಡೆದರೆ ಅಲ್ಲಾಗಿರಿರಾಜ್ ಕನಕಗಿರಿ ನೀವು ಜಲ ಫಿರಂಗಿಸಿಡಿಸಬಹುದು ನಮ್ಮ ಮೈ ಮೇಲೆ.ನಾವು ಮುಂಗಾರು ಮಳೆಯ ಆರ್ಭಟವೆಂದು ಭಾವಿಸುತ್ತೇವೆ.ಏಕೆಂದರೆ ನೀರು ನಮ್ಮ ವೈರಿಯಲ್ಲ. ನೀವು ಲಾಠಿ ಬೂಟುಗಳಿಂದದಾಳಿ ಮಾಡಬಹುದು ನಮ್ಮ ಮೈ ಮೇಲೆ.ನಾವು ನಮ್ಮ ಅನ್ನ ಉಂಡ ಮಕ್ಕಳ ಸಲಿಗೆ,ಪ್ರೀತಿಯೆಂದು ಭಾವಿಸುತ್ತೇವೆ.ಏಕೆಂದರೆ ಮಕ್ಕಳು ನಮ್ಮ ವೈರಿಗಳಲ್ಲ. ನೀವು ಅಶ್ರುವಾಯು ಸಿಡಿಸಿಕಣ್ಣು ಕತ್ತಲು ಮಾಡಬಹುದು ನಮ್ಮ ಕನಸುಗಳ ಮೇಲೆ.ನಾವು ಮಂಜುಕವಿದ ವಾತಾವರಣವೆಂದು ಭಾವಿಸುತ್ತೇವೆ.ಏಕೆಂದರೆ ಪ್ರಕೃತಿ ಎಂದೂ ನಮ್ಮ ವೈರಿಯಲ್ಲ. ಆದರೆ….. ಆದರೆನೀವು ದಲ್ಲಾಳಿಗಳ ಮಾತು ಕೇಳಿ, ಎದೆಗೆ ಗುಂಡು ಒಡೆದರೆನೆತ್ತರು ಕುಡಿದ ನೆಲ, ಬೆಳೆದು ನಿಂತ ಬೆಳೆಹೋರಾಟದ ಹಾಡು ಬರೆಯುತ್ತವೆ ಮರೆಯಬೇಡಿ. ಏಕೆಂದರೆ…….‘ಸರಕಾರ ರೊಕ್ಕ ಮುದ್ರಿಸಬಹುದೆ ಹೊರತುತುಂಡು ರೊಟ್ಟಿಯನ್ನಲ್ಲ ನೆನಪಿರಲಿ’. ******************************************
ನೀವು ಎದೆಗೆ ಗುಂಡು ಹೊಡೆದರೆ. Read Post »
You cannot copy content of this page