ಗಜಲ್
ಗಜಲ್ ಸಿದ್ದರಾಮ ಹೊನ್ಕಲ್ ನಿನ್ನ ನೋಟ ಬಲು ಹಿತ ನೀಡಿದೆ ನೀ ಕಾಡಿಸುತ್ತ ಕೂಡಬೇಡದಿನಗಳು ದೀರ್ಘವಾಗಿಹವು ಆ ಮಾತನೇ ನೀ ಮುತ್ತಾಗಿಸಬೇಡ ನನ್ನ ಕಣ್ಣ ರೆಪ್ಪೆಗಳು ಕಣ್ಢೀರ ಬಿಸಿಗೆ ಕಣ್ಣೀರು ಮಿಡಿದಿವೆಕಲ್ಲು ಹೃದಯವಲ್ಲ ನಿನ್ನದು ಇಷ್ಟು ಕಠೋರ ನಟನೆಬೇಡ ಬೀಸುವ ತಂಗಾಳಿ ಸೂರ್ಯಚಂದ್ರರ ಸಹಜತೆ ಬೇಡವೆಜಗಕೆ ಬಂದವರಿಗೆಲ್ಲ ಒಂದೊಂದು ಬವಣೆ ನೀ ಚಿಂತಿಸಬೇಡ ನಾನೊಂದು ತೀರ ನೀನೊಂದು ತೀರವೆಂದು ನೊಂದೆಯಲ್ಲಾಮಧ್ಯೆ ಹರಿವ ಪ್ರೇಮದ ಹರಿವು ತಿಳಿಯದೇ ನೀ ಇರಬೇಡ ಇಂದಲ್ಲಾ ನಾಳೆ ವಜ್ರಲೇಪಿತ ಕುಸುಮ ಸುಖದಿ ಅರಳಿತುಕಳವಳಿಸದಿರು ಏಲೇ ಮನವೇ ಹತಾಶದಿ ನೀ ಸೋಲಬೇಡ ಮಧುರ ಪ್ರೇಮವಿಲ್ಲದೇ ಈ ಜೀವಕೆ ಜೀವನ ಬೇಕೆ ಸಾಕಿಹೊನ್ನು’ಲಕ್ಷ ಭಾವತುಂಬಿ ಪ್ರೀತಿ ದಕ್ಕದ ಫಕೀರ ಆಗಿಸಬೇಡ **********************************









