ನವನವೋನ್ಮೇಶಶಾಲಿನಿ !
ಕವಿತೆ ನವನವೋನ್ಮೇಶಶಾಲಿನಿ ! ಕಾತ್ಯಾಯಿನಿ ಕುಂಜಿಬೆಟ್ಟು ಕವನ ಹುಟ್ಟುತ್ತಿಲ್ಲನವಮಾಸ ಉರುಳಿದರೂಹೆರದೆ ಹೊಟ್ಟೆಯೇ ಮೈ ಆಗಿರುವ ತುಂಬುಬಸಿರಿಯ ಹಾಗೆ ಅಂಗಾತಏದುಸಿರಲಿ ಅವಡುಗಚ್ಚಿ ಕಾಯುತ್ತಿರುವೆ ನಾಳೆ ಮೋಡಗಳ ಗಭ೯ ಸೀಳಿಕೊಂಡುನೇಸರ ಹುಟ್ಟುತ್ತಾನೆಕಾಳುಗಳು ಕಣ್ತೆರೆದುಕವಿತೆಗಳನ್ನು ಹೆರುತ್ತವೆಕಿರಣಗಳು ಆಟಿಕೆಗಳಾಗುತ್ತವೆಸುರುಳಿ ಸುಳಿವ ಕೋಮಲ ಬೆರಳುಗಳಿಗೆಇರುಳಲಿ ಹೂವುಗಳು ಬಸಿರಲಿ ಕಾಯಿಬ್ರೂಣಗಳನ್ನು ಹೆರಲುಕಾಯುತ್ತವೆಎಲ್ಲ ನಾಮ೯ಲ್ ಡೆಲಿವರಿ ನಾಳೆಗಳು ನಗುತ್ತವೆ ಕಾಲದ ಧಾವಂತದ ನಡಿಗೆ ಕಂಡುಮುಸಿಮುಸಿ ಎಂತೆಂಥ ಭಾಸ ಭವಭೂತಿ ಬೋಜಕಾಳಿದಾಸರು ಕಾಳುಗಳಲ್ಲಿ ಕಣ್ತೆರೆದು ಹಾಲತೆನೆತೆನೆಗಳನ್ನು ಉಣಿಸಿ…ಭಾಸನು ಕಾಲಕ್ಕೆ ದಾಸನಾಗಿಭವಭೂತಿಯು ಕಾಲರುದ್ರನ ಹಣೆಯ ವಿಭೂತಿಯಾಗಿಕಾಲ ತಾನು ಹೆತ್ತದ್ದನ್ನೇ ತಾನೇ ತೆತ್ತು… ಕಾಳಿದಾಸನು ಕಾಲದಾಸನಾಗಿ… ಕಾವ್ಯ ಕಾಲ ಕಾಲಕ್ಕೂ ಹೊಸ ಹೊಸತಾಗಿ ಕಾಲಾತೀತವಾಗಿ… ನವನವೋನ್ಮೇಶಶಾಲಿನಿ ! ಓಹ್! ನಾನು ಈಗಷ್ಟೇ ಹೆತ್ತ ಕವಿತೆಒಂದು ಇರುವೆಯ ಹಾಗೆ ಒಂದು ಅಕ್ಕಿಕಾಳು ಹೊತ್ತು ನಡೆಯುತ್ತಲೇ ಇದೆಕಾಲನ ತುಟಿಯ ಸಂದಿಯಲ್ಲಿ *******************************************
ನವನವೋನ್ಮೇಶಶಾಲಿನಿ ! Read Post »









